ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದಂತೆ ಹಿಂದೂ ರಾಷ್ಟ್ರ ಸ್ಥಾಪನೆ ಖಂಡಿತ ಆಗಲಿಕ್ಕಿದೆ ! - ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ

ಮಂಗಳೂರಿನ ಅಡ್ಯಾರ್ ಪದವಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆ
(ಎಡದಿಂದ) ಸೌ. ಮಂಜುಳಾ ಗೌಡ, ದೀಪಪ್ರಜ್ವಲನೆ
ಮಾಡುತ್ತಿರುವ ಸೌ. ಲಕ್ಷ್ಮೀ ಪೈ ಮತ್ತು ಶ್ರೀ. ಗುರುಪ್ರಸಾದ
ಮಂಗಳೂರು : ವಿಶ್ವದಲ್ಲಿ ಭಾರತವನ್ನು ಮಾತ್ರ ‘ಮಾತೆ’ ಎಂದು ಕರೆಯುತ್ತಾರೆ. ಆದರೆ ಜಗತ್ತಿನಲ್ಲಿ ಒಂದೇಒಂದು ಹಿಂದೂ ರಾಷ್ಟ್ರ ಇಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತುಂಬಿದೆ. ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದಂತೆ ಹಿಂದೂ ರಾಷ್ಟ್ರ ಸ್ಥಾಪನೆ ಖಂಡಿತ ಆಗಲಿಕ್ಕಿದೆ. ‘ನಮ್ಮ ಶ್ರೇಷ್ಠ ಧರ್ಮವನ್ನು ಉಳಿಸಲು ಕೈ ಜೋಡಿಸೋಣ; ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡಲು ಒಟ್ಟಾಗೋಣ’ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದರವರು ಹಿಂದೂಗಳಿಗೆ ಕರೆ ನೀಡುತ್ತಾ, ವಿಶ್ವದಲ್ಲಿ ಭಾರತವನ್ನು ಮಾತ್ರ ‘ಮಾತೆ’ ಎಂದು ಕರೆಯುತ್ತಾರೆ.
ಆದರೆ ಜಗತ್ತಿನಲ್ಲಿ ಒಂದೇಒಂದು ಹಿಂದೂ ರಾಷ್ಟ್ರ ಇಲ್ಲ. ಎಲ್ಲ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತುಂಬಿದೆ. ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದಂತೆ ಹಿಂದೂ ರಾಷ್ಟ್ರ ಸ್ಥಾಪನೆ ಖಂಡಿತ ಆಗಲಿಕ್ಕಿದೆ. ‘ನಮ್ಮ ಶ್ರೇಷ್ಠ ಧರ್ಮವನ್ನು ಉಳಿಸಲು ಕೈ ಜೋಡಿಸೋಣ; ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡಲು ಒಟ್ಟಾಗೋಣ’ ಎಂದು ಹೇಳಿದರು. ಇವರು ಇಲ್ಲಿನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ಅಕ್ಟೋಬರ್ ೨ ರಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಡೆದ ಹಿಂದೂ ಧರ್ಮಜಾಗೃತಿ ಸಭೆಯಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಸನಾತನ ಸಂಸ್ಥೆಯ ಸೌ. ಮಂಜುಳಾ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಸೌ. ಲಕ್ಷ್ಮೀ ಪೈ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಮಂಜುಳಾ ಗೌಡರವರು, ‘ಸುಖದ ಮೂಲ ಧರ್ಮಾಚರಣೆಯಲ್ಲಿದೆ. ನಾವು ಮಾಡುವ ಪ್ರತಿಯೊಂದು ಕೃತಿಯು ಭಗವಂತನ ಶಕ್ತಿಯನ್ನು ಆಕರ್ಷಿಸುತ್ತದೆ ಹಾಗೂ ಈಶ್ವರನ ಸಮೀಪ ಹೋಗಲು ಸಹಾಯ ಮಾಡುತ್ತದೆ. ಸನಾತನ ಸಂಸ್ಥೆಯ ಸಾಧಕರ ಮೇಲೆ ಎಷ್ಟೇ ಹಲ್ಲೆ, ಸಂಸ್ಥೆಯ ಮೇಲೆ ಆರೋಪ ಹಾಕಿದರು ಸಹ ಕೊನೆಗೆ ‘ಸತ್ಯಕ್ಕೇ ವಿಜಯವಾಗುವುದು’ ಎಂಬುದನ್ನು ಗಮನದಲ್ಲಿಟ್ಟು ಸಂಸ್ಥೆಯು ಹೋರಾಟ ಮಾಡುತ್ತಿದೆ. ಸನಾತನ ಸಂಸ್ಥೆಯು ೨೫ ವರ್ಷಗಳಿಂದ ಧರ್ಮಪ್ರಸಾರ ಮತ್ತು ಧರ್ಮದ ಏಳಿಗೆಗಾಗಿ ಹಗಲು-ರಾತ್ರಿ ಕಾರ್ಯ ಮಾಡುತ್ತಿದೆ. ಪರಮೇಶ್ವರನ ಆಶೀರ್ವಾದದ ಬಲದಿಂದಲೇ ಇದರಲ್ಲಿ ವಿಜಯಿಯಾಗಬಹುದು ಮತ್ತು ಅದಕ್ಕಾಗಿ ಸಾಧನೆಯನ್ನು ಪ್ರಾರಂಭಿಸಿ’ ಎಂದು ಕರೆ ನೀಡಿದರು.
ಮಂಗಳೂರಿನ ಉದ್ಯಮಿಯಾದ ಶ್ರೀ. ದಿನೇಶ್ ಎಂ.ಪಿ.ಯವರು ಮನುಷ್ಯ ಜನ್ಮದ ಉದ್ದೇಶವನ್ನು ನೆರೆದವರಿಗೆ ತಿಳಿಸಿದರು. ಈ ಸಮಯದಲ್ಲಿ ಅವರು ಧರ್ಮಪ್ರಸಾರದಲ್ಲಿ ತಮ್ಮ ಸಹಭಾಗದ ಅನುಭವವನ್ನು ಹಂಚಿ ಕೊಂಡರು.
ಈ ಸಮಯದಲ್ಲಿ ಮಾತನಾಡಿದ ರಣರಾಗಿಣಿ ಶಾಖೆಯ ಸೌ. ಲಕ್ಷ್ಮೀ ಪೈ, ‘ಸ್ತ್ರೀಯರು ಅಬಲೆಯರಲ್ಲ, ಸಬಲೆಯರಾಗಿದ್ದಾರೆ. ನವರಾತ್ರಿಯಲ್ಲಿ ಶಕ್ತಿಸ್ವರೂಪಿಣಿಯಾದ ದೇವಿಯನ್ನು ಪೂಜಿಸುತ್ತೇವೆ. ಆದರೆ ಅದೇ ಶಕ್ತಿಸ್ವರೂಪಿಣಿಯಾದ ಸ್ತ್ರೀಯ ಮೇಲೆ ಭಾರತದಲ್ಲಿ ಆತ್ಯಾಚಾರವಾಗುವುದು ಅಯೋಗ್ಯವಾಗಿದೆ. ಕಾಲಾನುಸಾರ ಸ್ತ್ರೀಯರಿಗೆ ಸ್ವಸಂರಕ್ಷಣೆಯ ಆವಶ್ಯಕತೆಯಿದೆ. ರಣರಾಗಿಣಿ ಶಾಖೆಯ ‘ಕನ್ಯಾ ಶೌರ್ಯ ಅಭಿಯಾನ’ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ‘ಯುವ ಶೌರ್ಯ ಅಭಿಯಾನ’ದಲ್ಲಿ ಪಾಲ್ಗೊಳ್ಳಬೇಕು, ಎಂದು ಕರೆ ಕೊಟ್ಟರು.

ಧರ್ಮಾಭಿಮಾನಿಗಳಿಂದ ಪ್ರತಿಜ್ಞೆ
ಈ ಕಾರ್ಯಕ್ರಮದಲ್ಲಿ ‘ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಪ್ರಾಣವನ್ನು ಪಣಕಿಟ್ಟು ಮಾಡುವೆವು’ ಎಂದು ಎಲ್ಲ ಹಿಂದೂಗಳು ಪ್ರತಿಜ್ಞೆ ಮಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶಿವಾಜಿ ಮಹಾರಾಜರು ಸ್ವರಾಜ್ಯ ಸ್ಥಾಪನೆ ಮಾಡಿದಂತೆ ಹಿಂದೂ ರಾಷ್ಟ್ರ ಸ್ಥಾಪನೆ ಖಂಡಿತ ಆಗಲಿಕ್ಕಿದೆ ! - ಶ್ರೀ. ಗುರುಪ್ರಸಾದ, ಹಿಂದೂ ಜನಜಾಗೃತಿ ಸಮಿತಿ