ಕೇರಳದಲ್ಲಿ ಹಿಂದುತ್ವನಿಷ್ಠ ನಾಯಕರ ಹತ್ಯೆ ಹಿಂದೆ ಜಿಹಾದಿ ಉಗ್ರರ ಕೈವಾಡ ! - ಕಿಶೋರಕುಮಾರ, ಹಿಂದೂ ಮುನ್ನಾನಿ

ಕೋಝಿಕೋಡ್ (ಕೇರಳ) : ಸೆಪ್ಟೆಂಬರ್ ೨೨ ರಂದು ಹಿಂದೂ ಮುನ್ನಾನಿ (ಹಿಂದೂ ಚಳುವಳಿಯ) ವಕ್ತಾರರಾದ ಸಿ. ಶಶಿಕುಮಾರ ಇವರ ಹತ್ಯೆ, ಹಾಗೆಯೇ ಹಿಂದೂ ಮುನ್ನಾನಿಯ ವೆಲ್ಲಯಾಪನ್, ಭಾಜಪದ ಅರವಿಂದ್ ರೆಡ್ಡಿ ಮತ್ತು ಲೇಖಕ ವಿ. ರಮೇಶ ಇವರ ಹತ್ಯೆಗಾಗಿ ಉಪಯೋಗಿಸಿದ ಮಾರಣಾಂತಿಕ ಶಸ್ತ್ರಗಳು ಮತ್ತು ಅವರ ಹತ್ಯೆಯ ಭೀಕರ ಸ್ವರೂಪವನ್ನು ಅವಲೋಕಿಸಿದಾಗ ಈ ಹತ್ಯೆಯ ಹಿಂದೆ ಜಿಹಾದಿ ಉಗ್ರರ ಕೈವಾಡ ಇರುವುದು ತಿಳಿಯುತ್ತದೆ, ಎಂಬುದಾಗಿ ಹಿಂದೂ ಮುನ್ನಾನಿಯ ರಾಜ್ಯ ಕಾರ್ಯದರ್ಶಿ ಶ್ರೀ. ಜೆ.ಎಸ್. ಕಿಶೋರಕುಮಾರ ಪ್ರತಿಪಾದಿಸಿದ್ದಾರೆ.
ರಾಜ್ಯದಲ್ಲಿ ಐಸಿಸ್‌ನ ಓರ್ವ ಬೆಂಬಲಿಗನನ್ನು ಇತ್ತೀಚೆಗೆ ಬಂಧಿಸಲಾಗಿದೆ, ಇದರಿಂದ ರಾಜ್ಯದಲ್ಲಿ ಜಿಹಾದಿ ಭಯೋತ್ಪಾದನೆಯ ಪ್ರಭಾವವು ಹೆಚ್ಚುತ್ತಿದೆ, ಎಂಬುದು ಗಮನಕ್ಕೆ ಬರುತ್ತದೆ. ಅನಂತಚತುರ್ದಶಿ ಯನ್ನು ಆಚರಿಸುವಾಗ ಹಿಂದೂಗಳಲ್ಲಿ ಒಗ್ಗಟ್ಟಿನ ಪ್ರದರ್ಶನ ಮೂಡಿಬಂದಿತು, ಇದರಿಂದ ಮತಾಂಧರು ಬೆಚ್ಚಿಬಿದ್ದರು. ಇದರಿಂದಲೇ ಹಿಂದೂ ನಾಯಕರ ಹತ್ಯೆಗಳಿಗೆ ಪ್ರಾರಂಭವಾಗಿದೆ, ಎಂದು ಶ್ರೀ. ಜೆ. ಎಸ್. ಕಿಶೋರಕುಮಾರ ಹೇಳಿದ್ದಾರೆ.
ಈ ಜಿಹಾದಿ ಉಗ್ರರಿಗೆ ಪಾಕ್ ಮತ್ತು ಬಾಂಗ್ಲಾದೇಶ ಗಳಿಂದ ನೆರವು ಸಿಗುತ್ತಿದೆ. ರಾಜ್ಯದ ಗುಪ್ತಚರ ಇಲಾಖೆಗೆ ಈ ಹತ್ಯಾಕಾಂಡಗಳ ಮುನ್ಸೂಚನೆ ಸಿಗದಿರುವುದರಿಂದ ಗುಪ್ತಚರ ಇಲಾಖೆಯ ವೈಫಲ್ಯವಾಗಿದೆ. ಈ ಬಗ್ಗೆ ಕೇಂದ್ರಸರಕಾರ ರಾಜ್ಯಸರಕಾರದಿಂದ ಸ್ಪಷ್ಟೀಕರಣ ಕೇಳಬೇಕೆಂದು ಹಿಂದೂ ಮುನ್ನಾನಿ ಸಂಘಟನೆ ಆಗ್ರಹಿಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕೇರಳದಲ್ಲಿ ಹಿಂದುತ್ವನಿಷ್ಠ ನಾಯಕರ ಹತ್ಯೆ ಹಿಂದೆ ಜಿಹಾದಿ ಉಗ್ರರ ಕೈವಾಡ ! - ಕಿಶೋರಕುಮಾರ, ಹಿಂದೂ ಮುನ್ನಾನಿ