ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಜಿಹಾದಿಗಳ ವಶವಾಗುವ ಸಾಧ್ಯತೆ ! - ಹಿಲರಿ ಕ್ಲಿಂಟನ್‌

ಪಾಕಿಸ್ತಾನದಲ್ಲಿರುವ ಜಿಹಾದಿಗಳಿಗೆ ಅಣುಬಾಂಬ್ ದೊರೆತು
ಅದನ್ನು ಭಾರತದ ಮೇಲೆ ಹಾಕಿದರೆ ಅದನ್ನು ಎದುರಿಸುವ ಕ್ಷಮತೆ ಭಾರತಕ್ಕಿದೆಯೇ ?
ವಾಶಿಂಗ್ಟನ್ : ಅಮೇರಿಕಾದ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿರುವ ಡೆಮೊಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಇವರು ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಜಿಹಾದಿಗಳ ವಶವಾಗುವ ಸಾಧ್ಯತೆಗಳಿವೆ ಮತ್ತು ಇದರಿಂದ ಭೀಕರ ಪರಿಸ್ಥಿತಿ ಉದ್ಭವಿಸಬಹುದೆಂದು ಭಯ ವ್ಯಕ್ತಪಡಿಸಿದ್ದಾರೆ.
ಹಿಲರಿ ಕ್ಲಿಂಟನ್ ಇವರು ವರ್ಜಿನಿಯಾದಲ್ಲಿ ಚುನಾವಣೆಯ ನಿಧಿ ಸಂಗ್ರಹಕ್ಕಾಗಿ ಏರ್ಪಡಿಸಿದ್ದ ಖಾಸಗಿ ಸಭೆಯಲ್ಲಿ ಮಾತನಾಡುವಾಗ, ಭಾರತದೊಂದಿಗೆ ವೈರತ್ವವನ್ನು ಸಾಧಿಸಿರುವ ಪಾಕಿಸ್ತಾನವು ಅಣ್ವಸ್ತ್ರಗಳ ನಿರ್ಮಾಣ ಕಾರ್ಯಕ್ಕೆ ತೀವ್ರ ಚಾಲನೆ ನೀಡಿದೆ. ಪಾಕಿಸ್ತಾನದಲ್ಲಿ ಬಂಡಾಯವೇಳುವ ಸಾಧ್ಯತೆಗಳಿವೆ. ಜಿಹಾದಿ ಭಯೋತ್ಪಾದಕರು ಅಧಿಕಾರಕ್ಕೇರಿ ಅಣ್ವಸ್ತ್ರಗಳ ಮೇಲೆ ನಿಯಂತ್ರಣ ಪಡೆಯುವ ಸಾಧ್ಯತೆ ಇದೆ. ಈ ಕಾರಣದಿಂದ ಅಣ್ವಸ್ತ್ರಗಳು ಜಿಹಾದಿಗಳ ವಶವಾದರೆ ಇಡೀ ಜಗತ್ತಿಗೆ ಅಪಾಯ ಕಾದಿದೆ, ಎಂದಿದ್ದಾರೆ. (ಪಾಕಿಸ್ತಾನದೊಂದಿಗೆ ಉತ್ತಮ ಸಂಬಂಧವಿರುವ ಅಮೇರಿಕಾ ಪಾಕಿಸ್ತಾನದ ಅಣ್ವಸ್ತ್ರಗಳ ಮೇಲೆ ಹತೋಟಿ ಯನ್ನು ಪಡೆಯಲು ಪ್ರಯತ್ನಿಸಬೇಕು ಎನ್ನುವುದು ಜನತೆಯ ಅಪೇಕ್ಷೆಯಾಗಿದೆ ! - ಸಂಪಾದಕರು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾಕಿಸ್ತಾನದಲ್ಲಿರುವ ಅಣ್ವಸ್ತ್ರಗಳು ಜಿಹಾದಿಗಳ ವಶವಾಗುವ ಸಾಧ್ಯತೆ ! - ಹಿಲರಿ ಕ್ಲಿಂಟನ್‌