ನಮ್ಮ ದಿನಚರಿ ಹೇಗಿರಬೇಕು ?

ಧರ್ಮಶಿಕ್ಷಣ ನೀಡುವ ಮಾಲಿಕೆ !
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇ ಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
ಆ. ಹಲ್ಲುಜ್ಜುವಾಗ ಯಾವ  ಬೆರಳನ್ನು ಉಪಯೋಗಿಸಬೇಕು ?
೧. ‘ಆಚಾರೇಂದು’ ಗ್ರಂಥದಲ್ಲಿ ಹೇಳಿರುವ ಪದ್ಧತಿ ಅನಾಮಾಂಗುಷ್ಠಾವುತ್ತವೌ ಕನಿಷ್ಠಿಕಾಯಾಶ್ಚ ವಿಹಿತಪ್ರತಿಷಿದ್ಧತ್ವಾದ್ ವಿಕಲ್ಪಃ ತರ್ಜನಿ ತು ಸರ್ವಮತೆ ನಿಂದ್ಯಾ   - ಆಚಾರೇಂದು
ಅರ್ಥ : ದಂತಮಂಜನವನ್ನು ಅನಾಮಿಕಾ ಮತ್ತು ಹೆಬ್ಬೆರಳಿನಿಂದ ಹಚ್ಚುವುದು ಯೋಗ್ಯವಾಗಿದೆ. ಮಧ್ಯಮಾ ಮತು ಕನಿಷ್ಠಿಕಾ ಇವುಗಳನ್ನು ಕೆಲವೆಡೆ ನಿಷೇಧಿಸಿರುವುದರಿಂದ ಅವುಗಳನ್ನು ಭಿನ್ನಾಭಿಪ್ರಾಯದಿಂದ ಉಪಯೋಗಿಸಬಹುದು. ತರ್ಜನಿಯು ಮಾತ್ರ ಎಲ್ಲರ ಅಭಿಪ್ರಾಯಕ್ಕನುಸಾರ ನಿಂದ್ಯವಾಗಿರುವುದ ರಿಂದ ಅದನ್ನು ಉಪಯೋಗಿಸಬಾರದು.
ಹೆಚ್ಚಿನ ವಿಶ್ಲೇಷಣೆ -
ಅ. ಹಲ್ಲುಗಳನ್ನು ಮೇಲಿನಿಂದ ಉಜ್ಜುವಾಗ ಅನಾಮಿಕೆಯನ್ನು ಉಪಯೋಗಿಸಬೇಕು. ಕಾರಣಾಂತರದಿಂದ ಅನಾಮಿಕೆಯನ್ನು ಉಪಯೋಗಿಸಲು ಸಾಧ್ಯವಿಲ್ಲದಿದ್ದರೆ ಮಧ್ಯಮಾ ಅಥವಾ ಕನಿಷ್ಠಿಕೆಯನ್ನು ಉಪ ಯೋಗಿಸಬಹುದು.
ಆ. ಹಲ್ಲುಗಳನ್ನು ಒಳಗಿನಿಂದ ಉಜ್ಜುವಾಗ ಹೆಬ್ಬೆರ ಳನ್ನು ಉಪಯೋಗಿಸಬೇಕು.
 ೨.  ಓರ್ವ ವಿದ್ವಾಂಸರು ಹೇಳಿದ ಪದ್ಧತಿ - ಮಧ್ಯದ ಬೆರಳಿನಿಂದ ಪ್ರಕ್ಷೇಪಿತವಾಗುವ ತೇಜತತ್ತ್ವದಿಂದ ಒಸಡು ಮತ್ತು ಹಲ್ಲುಗಳ ಟೊಳ್ಳುಗಳಲ್ಲಿರುವ ರಜ-ತಮಯುಕ್ತ ಕಣಗಳು ವಿಘಟನೆಯಾಗುತ್ತವೆ : ಆಯುರ್ವೇದಿಕ ಚೂರ್ಣದಿಂದ ಕೈಗಳ ಮಧ್ಯದ ಬೆರಳಿನಿಂದ ಹೊರಗಿನ ದಿಕ್ಕಿನಲ್ಲಿ ಹಲ್ಲುಗಳನ್ನು ಉಜ್ಜುವಾಗ ಮಧ್ಯದ ಬೆರಳಿನಿಂದ ಪ್ರಕ್ಷೇಪಿತವಾಗುವ ತೇಜತತ್ತ್ವದ ಬಲದಿಂದ ಒಸಡು ಮತ್ತು ಹಲ್ಲುಗಳ ಟೊಳ್ಳುಗಳಲ್ಲಿನ ರಜ-ತಮ ಯುಕ್ತ ಕಣಗಳ ಘರ್ಷಣೆಯಿಂದ ನಿರ್ಮಾಣವಾದ ತೇಜದಿಂದ ಅಲ್ಲಿಯೇ ವಿಘಟನೆಯಾಗುತ್ತವೆ. - ಓರ್ವ ವಿದ್ವಾಂಸರು (ಸೌ. ಅಂಜಲಿ ಗಾಡಗೀಳರು ಓರ್ವ ವಿದ್ವಾಂಸ ಅಂಕಿತನಾಮದಿಂದ ಲೇಖನ ಬರೆಯುತ್ತಾರೆ, ೨೯.೧೦.೨೦೦೭, ಬೆಳಗ್ಗೆ ೯.೪೬)
ಇ.  ಹಲ್ಲುಗಳನ್ನು ಉಜ್ಜಿದ ನಂತರದ ಕೃತಿಗಳು
ಇ ೧.  ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿದ ನಂತರ ಆ ಕಡ್ಡಿಯನ್ನು ನೈಋತ್ಯ ದಿಕ್ಕಿಗೆ ಎಸೆಯಬೇಕು.
ಅ. ಶಾಸ್ತ್ರ : ಹಲ್ಲುಜ್ಜಿದ ನಂತರ ರಜ-ತಮಾತ್ಮಕ ವಾಯು ಮತ್ತು ಲಹರಿಗಳಿಂದ ತುಂಬಿದ ಕಡ್ಡಿಯನ್ನು ನೈಋತ್ಯ ದಿಕ್ಕಿಗೆ ಎಸೆಯುವುದರಿಂದ ಕಡ್ಡಿಯಲ್ಲಿರುವ ರಜ-ತಮಾತ್ಮಕ ಧಾರಣೆಗೆ ನೈಋತ್ಯ ದಿಕ್ಕಿನಲ್ಲಿರುವ ಲಯಕಾರಿ ಧಾರಣೆಯಲ್ಲಿ ಲಯವಾಗಲು ಮತ್ತು ವಾಯುಮಂಡಲವನ್ನು ಪ್ರದೂಷಣಮುಕ್ತವಾಗಿಡಲು ಸಹಾಯವಾಗುವುದು :
ನೈಋತ್ಯದಲ್ಲಿ ಕ್ರಿಯೆಯ ಪ್ರಾಬಲ್ಯದ ಮೇಲೆ ಲಯಕಾರಕ ಧಾರಣೆಯು ವಾಸಿಸುತ್ತದೆ. ಈ ದಿಕ್ಕಿನಲ್ಲಿ ಜ್ಞಾನ ಮತ್ತು ಕ್ರಿಯೆ ಈ ಶಕ್ತಿಸ್ತರದ ಲಹರಿಗಳು ಘನೀಕೃತವಾಗಿರುವುದರಿಂದ ಈ ದಿಕ್ಕಿನಲ್ಲಿ ಕ್ರಿಯೆಯ ಸಹಾಯದಿಂದ ವೇಗವಾಗಿ ಜ್ಞಾನಧಾರಣೆಯ ಸ್ತರದಲ್ಲಿ ಲಯಕಾರಿ ಪ್ರಕ್ರಿಯೆಯು ನಡೆಯುತ್ತಿರುತ್ತದೆ. ಹಲ್ಲುಜ್ಜಿದ ನಂತರ ಅಶುದ್ಧ ಅಂದರೆ ರಜ-ತಮಾತ್ಮಕ ವಾಯುವಿನಿಂದ ಮತ್ತು ಲಹರಿಗಳಿಂದ ತುಂಬಿರುವ ಕಡ್ಡಿಯನ್ನು ನೈಋತ್ಯ ದಿಕ್ಕಿಗೆ ಎಸೆಯುವುದರಿಂದ ಕಡ್ಡಿಯಲ್ಲಿರುವ ರಜ-ತಮಾತ್ಮಕ ಧಾರಣೆಗೆ ನೈಋತ್ಯದಲ್ಲಿರುವ ಲಯಕಾರಿ ಧಾರಣೆಯಲ್ಲಿ ಲಯವಾಗಲು ಮತ್ತು ವಾಯುಮಂಡಲವು ಪ್ರದೂಷಣ ಮುಕ್ತವಾಗಲು ಸಹಾಯವಾಗುತ್ತದೆ. - ಓರ್ವ ವಿದ್ವಾಂಸರು (ಸೌ.  ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೧೨.೨೦೦೭, ಮಧ್ಯಾಹ್ನ ೩.೨೦)
ಇ ೨. ಬಾಯಿಯನ್ನು ಮುಕ್ಕಳಿಸಬೇಕು ನಂತರ ಆಚಮನ ಮಾಡಬೇಕು ಆಚಮನವನ್ನು ಮಾಡುವ ಕೃತಿ : ಆಚಮನ ಮಾಡುವುದೆಂದರೆ ಶ್ರೀವಿಷ್ಣುವಿನ ೨೪ ಹೆಸರುಗಳನ್ನು ಉಚ್ಚರಿಸುವುದು. ಆಚಮನಕ್ಕಾಗಿ ನೀರಿನಿಂದ ತುಂಬಿದ ಕಲಶ, ಪಂಚಪಾತ್ರೆ, ಉದ್ಧರಣೆ (ಚಮಚ) ಮತ್ತು ನೀರು ಬಿಡಲು ಹರಿವಾಣವನ್ನು ತೆಗೆದುಕೊಳ್ಳಬೇಕು. ಕಲಶದಲ್ಲಿರುವ ಸ್ವಲ್ಪ ನೀರನ್ನು ಪಂಚಪಾತ್ರೆಯಲ್ಲಿ ತೆಗೆದು ಕೊಳ್ಳಬೇಕು. ಎಡಗೈಯಿಂದ ಪಂಚಪಾತ್ರೆಯಲ್ಲಿನ ನೀರನ್ನು ಉದ್ಧರಣೆಯಿಂದ ಬಲಗೈ ಅಂಗೈಯಲ್ಲಿ ತೆಗೆದುಕೊಂಡು ‘ಓಂ ಶ್ರೀ ಕೇಶವಾಯ ನಮಃ ’ ಎಂದು ಹೇಳಿ ಪ್ರಾಶನ ಮಾಡಬೇಕು. ಅನಂತರ ಪುನಃ ಅಂಗೈಯಲ್ಲಿ ನೀರನ್ನು ತೆಗೆದುಕೊಂಡು ‘ಓಂ ನಾರಾಯಣಾಯ ನಮಃ ’ ಎಂದು ಹೇಳಿ ಪ್ರಾಶನ ಮಾಡಬೇಕು. ಅನಂತರ ಪುನಃ ನೀರನ್ನು ತೆಗೆದುಕೊಂಡು ‘ಓಂ ಮಾಧವಾಯ ನಮಃ ’ ಎಂದು ಹೇಳಿ ಪ್ರಾಶನ ಮಾಡಬೇಕು. ಕೊನೆಯಲ್ಲಿ ಅಂಗೈಯಲ್ಲಿ ನೀರನ್ನು ತೆಗೆದುಕೊಂಡು ‘ಓಂ ಗೋವಿಂದಾಯ ನಮಃ  ’ ಎಂದು ಹೇಳಿ ಅದನ್ನು ಹರಿವಾಣದಲ್ಲಿ ಬಿಡಬೇಕು. ಉಳಿದ ೨೦ ಹೆಸರುಗಳ ಸಮಯದಲ್ಲಿ ಶರೀರದ ವಿಶಿಷ್ಟ ಭಾಗಕ್ಕೆ ಕೈತಗಲಿಸಿ ನ್ಯಾಸ ಮಾಡಬೇಕು. (ಆಚಮನ ಮಾಡುವುದರ ಕುರಿತು ಹೆಚ್ಚಿನ ಜ್ಞಾನವನ್ನು ಸನಾತನದ ‘ದೇವರ ಪೂಜೆಯ ಪೂರ್ವಸಿದ್ಧತೆ (ಶಾಸ್ತ್ರಸಹಿತ)’ ಎಂಬ ಗ್ರಂಥದಲ್ಲಿ ಕೊಡಲಾಗಿದೆ.) (ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಮ್ಮ ದಿನಚರಿ ಹೇಗಿರಬೇಕು ?