‘ಹಿಂದೂಗಳೇ ಏಳಿ, ಜಾಗೃತರಾಗಿ, ತಮ್ಮ ರಾಜ್ಯವನ್ನು ಸ್ಥಾಪಿಸಿ’ - ಶ್ರೀ. ವೆಂಕಟರಮಣ ನಾಯ್ಕ್, ಹಿಂದೂ ಜನಜಾಗೃತಿ ಸಮಿತಿ

ಶಿಗ್ಲಿಯಲ್ಲಿ ಹಿಂದೂ ಧರ್ಮಜಾಗೃತಿ ಸಭೆ
(ಎಡದಿಂದ) ಸೌ. ವಿದುಲಾ ಹಳದೀಪುರ,
ಶ್ರೀ. ಕೆ.ಎಸ್. ಕಲ್ಲನಗೌಡರ್, ದೀಪಪ್ರಜ್ವಲನೆ ಮಾಡುತ್ತಿರುವ
ಶ್ರೀ. ಗಿರೀಶ ಅಗಡಿ ಮತ್ತು ಶ್ರಿ. ವೆಂಕಟರಮಣ ನಾಯ್ಕ್
ಶಿಗ್ಲಿ (ಗದಗ) : ೨.೧೦.೨೦೧೬ ರಂದು ಇಲ್ಲಿನ ಗ್ರಾಮ ಪಂಚಾಯತ್ ಸಭಾಭವನದ ಸಮುದಾಯ ಭವನದಲ್ಲಿ ಹಿಂದೂ ಧರ್ಮಜಾಗೃತಿ ಸಭೆಯು ನಡೆಯಿತು. ಧರ್ಮಾಭಿಮಾನಿಗಳಾದ ಶ್ರೀ. ಗಿರೀಶ ಅಗಡಿಯವರು ಕಾರ್ಯಕ್ರಮದ ದೀಪಪ್ರಜ್ವಲನೆಯನ್ನು ಮಾಡಿದರು. ವೇದಮಂತ್ರ ಪಠಣದ ಮೂಲಕ ಆರಂಭವಾದ ಈ ಕಾರ್ಯಕ್ರಮದ ವ್ಯಾಸಪೀಠದಲ್ಲಿ ಸನಾತನ ಸಂಸ್ಥೆಯ ಶ್ರೀ. ಕೆ.ಎಸ್. ಕಲ್ಲನಗೌಡರ್, ಹಿಂದೂ ಜನಜಾಗೃತಿ ಸಮಿತಿಯ ಶ್ರಿ. ವೆಂಕಟರಮಣ ನಾಯ್ಕ್, ರಣರಾಗಿಣಿ ಶಾಖೆಯ ಸೌ. ವಿದುಲಾ ಹಳದೀಪುರರವರು ಉಪಸ್ಥಿತರಿದ್ದರು.

ನಿಯಮಿತವಾಗಿ ಧರ್ಮಾಚರಣೆ ಮತ್ತು ಸಾಧನೆಯನ್ನು ಮಾಡಿರಿ ! - ಶ್ರೀ. ಕೆ.ಎಸ್. ಕಲ್ಲನಗೌಡರ್
ಇಂದು ನಾವು ಧರ್ಮಾಚರಣೆಗಾಗಿ ಕೆಲವೊಂದು ಕೃತಿಗಳನ್ನು ಅವಶ್ಯವಾಗಿ ಮಾಡಬೇಕು. ಗೋಲಾಕಾರದ ಟೊಪ್ಪಿ ಧರಿಸಿ ಓಡಾಡುವವರಿಗೆ ನಾಚಿಕೆಯ ಪ್ರಶ್ನೆ ಬರುವುದಿಲ್ಲ, ಆದರೆ ಹಣೆಯಲ್ಲಿ ತಿಲಕವನ್ನಿಡಲು ನಮಗೆ ನಾಚಿಕೆಯೆನಿಸುತ್ತದೆ. ವಿವಾಹಿತ ಸ್ತ್ರೀಯರು ಸಹ ಕುಂಕುಮ ಹಚ್ಚುವುದಿಲ್ಲ. ‘ಇಂದಿನಿಂದ ಮಹಿಳೆಯರು ಪ್ರತಿದಿನ ಕುಂಕುಮ ಮತ್ತು ಪುರುಷರು ತಿಲಕವನ್ನು ಹಚ್ಚಿಯೇ ಮನೆಯಿಂದ ಹೊರಡೋಣ. ಪಾಶ್ಚಾತ್ತೀಕರಣದ ಪ್ರಭಾವದಿಂದಾಗಿ ನಾವು ಈ ಕೃತಿಗಳನ್ನು ಮರೆತು ಬಿಟ್ಟಿದ್ದೇವೆ. ಈಗ ಮತ್ತೊಮ್ಮೆ ನಮ್ಮ ಜೀವನದಲ್ಲಿ ಅದನ್ನು ಆಚರಣೆಯಲ್ಲಿ ತರಲು ಪ್ರಯತ್ನಿಸೋಣ’ ಎಂದು ಶ್ರೀ. ಕಲ್ಲನಗೌಡರ್ ಕರೆ ನೀಡಿದರು.
ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಸಮಾಜದಲ್ಲಿ ಅನ್ಯಾಯದ ವಿರುದ್ಧ ಜಾಗೃತಿ ಮೂಡಿಸಿ ! - ಶ್ರೀ. ವೆಂಕಟರಮಣ ನಾಯ್ಕ
‘ಹಿಂದೂಗಳೇ ಏಳಿ, ಜಾಗೃತರಾಗಿ, ತಮ್ಮ ರಾಜ್ಯವನ್ನು ಸ್ಥಾಪಿಸಿರಿ’ ಎಂಬ ಮೂಲಮಂತ್ರವನ್ನು ನೀಡುವುದಕ್ಕಾಗಿಯೇ ಈ ಹಿಂದೂ ಧರ್ಮಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ. ‘ಹಿಂದೂ ರಾಷ್ಟ್ರ’ ಅಂದರೆ ರಾಮರಾಜ್ಯದಂತೆ ಆದರ್ಶ ರಾಜ್ಯ ! ಕೇವಲ ಸಂವಿಧಾನದಲ್ಲಿ ‘ಹಿಂದೂ ರಾಷ್ಟ್ರ’ ಎಂಬ ಶಬ್ದ ಬಂದು ಅಥವಾ ಅಧಿಕಾರದಲ್ಲಿ ಪರಿವರ್ತನೆ ಯಾದರೆ ರಾಮರಾಜ್ಯದ ಅನುಭೂತಿ ಬರುವುದಿಲ್ಲ. ಅದಕ್ಕಾಗಿ ರಾಜಕಾರಣಿಗಳು ಹಾಗೂ ಪ್ರಜೆಗಳಿಬ್ಬರೂ ಪ್ರಭು ಶ್ರೀರಾಮನಂತೆ ಸಾತ್ತ್ವಿಕ ಹಾಗೂ ಪ್ರಾಮಾಣಿಕವಾಗಿರುವುದು ಅಪೇಕ್ಷಿತವಿದೆ. ಅದಕ್ಕಾಗಿ ಮೊದಲು ಆಡಳಿತದಲ್ಲಿ ಮನೆ ಮಾಡಿರುವ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿರುವ ದುಷ್ಪ್ರವೃತ್ತಿಗಳ ವಿರುದ್ಧ ಜಾಗೃತರಾಗುವುದು ಆವಶ್ಯಕವಾಗಿದೆ.
ಈ ಸಮಯದಲ್ಲಿ ರಣರಾಗಿಣಿ ಶಾಖೆಯ ಸೌ. ವಿದುಲಾ ಹಳದೀಪುರರವರು, ‘ಇಂದು ಕೇವಲ ಜಮ್ಮುಕಾಶ್ಮೀರದಲ್ಲಿ ಮಾತ್ರವಲ್ಲ, ಭಾರತದ ಇತರ ರಾಜ್ಯಗಳಲ್ಲಿಯೂ ಕಾಶ್ಮೀರದ ಪರಿಸ್ಥಿತಿ ನಿರ್ಮಾಣವಾಗಿದೆ, ಹಿಂದೂಗಳು ಮನೆಮಠ ಬಿಟ್ಟು ನಿರಾಶ್ರಿತರಾಗುವ ಪರಿಸ್ಥಿತಿ ಬಂದಿದೆ. ಇವೆಲ್ಲವುಗಳ ವಿರುದ್ಧ ಹೋರಾಡಲು ಹಿಂದೂಗಳು ಸ್ತ್ರೀ-ಪುರುಷರೆಂಬ ಭೇದಭಾವನೆಯಿಲ್ಲದೆ ಎಲ್ಲರೂ ಸ್ವರಕ್ಷಣ ತರಬೇತಿ ವರ್ಗ ಪಡೆಯುವ ಅವಶ್ಯಕತೆ ಇದೆ’ ಎಂದರು. 
ಈ ಸಮಯದಲ್ಲಿ ಧರ್ಮಾಭಿಮಾನಿ ಶ್ರೀ. ಗಿರೀಶ್ ಅಗಡಿಯವರು ಮಾತನಾಡುತ್ತಾ, ‘ಭಗವದ್ಗೀತೆಯನ್ನು ಓದಿದರೇ ಇತರ ಧರ್ಮೀಯರು ಸಹ ಹಿಂದೂ ಧರ್ಮವನ್ನು ಸ್ವೀಕರಿಸುತ್ತಾರೆ. ಆದರೆ ಇಂದು ಧರ್ಮದ ಪರವಾಗಿ ಮಾತನಾಡುವವರನ್ನು ಜೈಲಿಗೆ ಕಳುಹಿಸಲಾಗುತ್ತದೆ. ಹಿಂದೂ ಜನಜಾಗೃತಿ ಸಮಿತಿಯು ನಮಗೆ ಉತ್ತಮ ರೀತಿಯಲ್ಲಿ ಧರ್ಮಶಿಕ್ಷಣ ನೀಡುತ್ತಿದೆ ಮತ್ತು ಇದರಿಂದ ಮನಸ್ಸಿಗೆ ಶಾಂತಿ ಸಿಗುತ್ತಿದೆ. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ. ನಾವು ಧರ್ಮದ ರಕ್ಷಣೆ ಮಾಡಿದರೆ ಮಾತ್ರ ನಮ್ಮ ಮತ್ತು ಸಮಾಜದ ರಕ್ಷಣೆಯಾಗುತ್ತದೆ’ ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಹಿಂದೂಗಳೇ ಏಳಿ, ಜಾಗೃತರಾಗಿ, ತಮ್ಮ ರಾಜ್ಯವನ್ನು ಸ್ಥಾಪಿಸಿ’ - ಶ್ರೀ. ವೆಂಕಟರಮಣ ನಾಯ್ಕ್, ಹಿಂದೂ ಜನಜಾಗೃತಿ ಸಮಿತಿ