ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಭಾಜಪ ಕಛೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ !

 ಕೇಂದ್ರ ಸರಕಾರವು ತಮಿಳುನಾಡಿನಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಸುಧಾರಿಸಲು
ರಾಜ್ಯ ಸರಕಾರಕ್ಕೆ ಕೃತಿ ಮಾಡಲು ಪ್ರವೃತ್ತಗೊಳಿಸಬೇಕು, ಎಂಬುದೇ ಹಿಂದೂಗಳ ಅಪೇಕ್ಷೆಯಾಗಿದೆ !
ಮಧುರೈ : ಅಜ್ಞಾತರು ಸೆಪ್ಟೆಂಬರ್ ೨೬ ರಂದು ಬೆಳಗ್ಗೆ ೪ ಗಂಟೆಗೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ದಿಂಡಿಗಲ್-ಕರೂರ ರಸ್ತೆ ಮೇಲಿರುವ ವಝಿವಿಡುಮ್ ವಿನಾಯಕ ದೇವಾಲಯದ ಸಮೀಪ ದಲ್ಲಿರುವ ಭಾಜಪದ ಕಛೇರಿ ಮೇಲೆ ಪೆಟ್ರೋಲ್ ಬಾಂಬನ್ನು ಎಸೆದರು; ಆದರೆ ಈ ದಾಳಿಯಲ್ಲಿ ಕಛೇರಿಗೆ ಹೆಚ್ಚು ಹಾನಿಯಾಗಲಿಲ್ಲ. ಅದೇ ರೀತಿ ಬೇರೊಂದು ಘಟನೆಯಲ್ಲಿ ಪ್ರದೇಶ ಕಾರ್ಯ ಕಾರಣಿಯ ಸದಸ್ಯನ ಚತುಶ್ಚಕ್ರ ವಾಹನಕ್ಕೆ ಅಜ್ಞಾತರು ಬೆಂಕಿಹಚ್ಚಿದರು. ಕಛೇರಿ ಮೇಲಿನ ದಾಳಿ ಸುದ್ದಿ ತಿಳಿಯುತ್ತಿದ್ದಂತೆ ಭಾಜಪದ ಕಾರ್ಯಕರ್ತರು ಘಟನಾ ಸ್ಥಳಕ್ಕೆ ಧಾವಿಸಿದರು. ಘಟನಾಸ್ಥಳದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದರಿಂದ ದೊಡ್ಡ ಪ್ರಮಾಣದಲ್ಲಿ ಪೊಲೀಸರನ್ನು ನೇಮಿಸಿರುವುದಾಗಿ  ಪೊಲೀಸ್ ಮೂಲಗಳು ತಿಳಿಸಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ಭಾಜಪ ಕಛೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ !