ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನದಿಂದ ಪ್ರಯಾಣಕ್ಕೆ ಹೊರಡುವ ಮೊದಲು ವಾಹನದಲ್ಲಿ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳನ್ನು ಹಚ್ಚಿರುವ ಬಗ್ಗೆ ಖಚಿತಪಡಿಸಿರಿ ಮತ್ತು ವಾಹನವನ್ನು ಶುದ್ಧಿಗೊಳಿಸಿರಿ !

ಸಾಧಕರಿಗೆ ಸೂಚನೆ !
ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನದಲ್ಲಿ ಪ್ರಯಾಣಕ್ಕೆ ಹೊರಡುವ ಮೊದಲು ವಾಹನವನ್ನು ಗೋಮೂತ್ರ ಅಥವಾ ಸಾತ್ತ್ವಿಕ ವಿಭೂತಿ ಹಾಕಿದ ನೀರಿನಿಂದ ಶುದ್ಧಿಗೊಳಿಸಬೇಕು. ಹಾಗೆ ಮಾಡಲು ಸಾಧ್ಯವಾಗದಿದ್ದರೆ ಖಾಲಿ ಕಾಗದದಲ್ಲಿ ಸ್ವಲ್ಪ ಸಾತ್ತ್ವಿಕ ವಿಭೂತಿಯನ್ನು ತೆಗೆದುಕೊಂಡು ಅದನ್ನು ತಮ್ಮ ವಾಹನದೊಳಗೆ ಅಥವಾ ವಾಹನದ ಸುತ್ತಲೂ ಊದಬೇಕು. ನಂತರ ಸನಾತನದ ವಾಹನ ಶುದ್ಧಿಯ ಸಂದರ್ಭದಲ್ಲಿನ ಕರಪತ್ರದಲ್ಲಿ ನೀಡಿರುವಂತೆ ದೇವತೆಗಳ ನಾಮಜಪದ ಪಟ್ಟಿಗಳನ್ನು ವಾಹನದೊಳಗೆ ಆಯಾ ಸ್ಥಳದಲ್ಲಿ ಹಚ್ಚಿರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು. ವಾಹನದಲ್ಲಿ ನಾಮಪಟ್ಟಿಗಳನ್ನು ಹಚ್ಚದಿದ್ದರೆ ವಾಹನಶುದ್ಧಿ ಕರಪತ್ರದಲ್ಲಿ ನೀಡಿದಂತೆ ಮೊದಲು ಅದನ್ನು ಹಚ್ಚಬೇಕು ನಂತರ ಅವುಗಳನ್ನು ಭಕ್ತಿಭಾವದಿಂದ ಬಟ್ಟೆಯಿಂದ ಒರೆಸಬೇಕು. ಇದರಿಂದ ನಮ್ಮ ವಾಹನದ ಸುತ್ತಲೂ ದೇವತೆಗಳ ಚೈತನ್ಯದಿಂದ ಸಂರಕ್ಷಣಾ ಕವಚವು ನಿರ್ಮಾಣವಾಗುತ್ತದೆ ಮತ್ತು ಅನಿಷ್ಟ ಶಕ್ತಿಗಳ ಆಕ್ರಮಣದಿಂದ ನಮ್ಮ ಸಂರಕ್ಷಣೆಯಾಗುತ್ತದೆ. ಮೇಲೆ ಹೇಳಿದಂತೆ ವಾಹನ ಶುದ್ಧಿಯಾದ ನಂತರವೇ ವಾಹನದಲ್ಲಿ ಪ್ರಯಾಣಿಸಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನದಿಂದ ಪ್ರಯಾಣಕ್ಕೆ ಹೊರಡುವ ಮೊದಲು ವಾಹನದಲ್ಲಿ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳನ್ನು ಹಚ್ಚಿರುವ ಬಗ್ಗೆ ಖಚಿತಪಡಿಸಿರಿ ಮತ್ತು ವಾಹನವನ್ನು ಶುದ್ಧಿಗೊಳಿಸಿರಿ !