ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !

ಸೂಚನೆ : ಈ ಮಾಹಿತಿಯನ್ನು ತಮ್ಮ ಸ್ಥಳೀಯ ಪರಿಸ್ಥಿತಿಗನುಸಾರ ತಾರತಮ್ಯದಿಂದ ಬರೆಯಬೇಕು.
ಫಲಕ ಪ್ರಸಿದ್ಧಿಗಾಗಿ
೧. ಪಾಕಿಸ್ತಾನವನ್ನು ಬೆಂಬಲಿಸುವ ಕಾಂಗ್ರೆಸ್‌ನಿಂದ  ಮತ್ತೊಂದು ದೇಶದ್ರೋಹಿ ಕೃತ್ಯ !
ಉತ್ತರಪ್ರದೇಶದ ಮುರಾದಾಬಾದಿನ ಠಾಕೂರದ್ವಾರಾ ಪೊಲೀಸ್ ಠಾಣೆಯಲ್ಲಿ ‘ಪಾಕಿಸ್ತಾನ ಜಿಂದಾಬಾದ್’ ಎಂಬ ಘೋಷಣೆ ನೀಡುವ  ೨೦೦ ಕಾಂಗ್ರೆಸ್ಸಿಗರ ವಿರುದ್ಧ ದೇಶದ್ರೋಹದ ಆರೋಪವನ್ನು ದಾಖಲಿಸಲಾಗಿದೆ. ಸೆಪ್ಟೆಂಬರ್ ೨೪ ರಂದು ಕಾರ್ಯಕರ್ತರು ಈ ಘೋಷಣೆಗಳನ್ನು ಕೂಗಿದ್ದರು.
೨. ಸರಕಾರವು ಹಿಂದೂಗಳ ಹಿತಕ್ಕಾಗಿಯೂ ಯೋಜನೆಯನ್ನು ಸಿದ್ಧಪಡಿಸಬೇಕು, ಎಂಬುದು ಅಪೇಕ್ಷೆಯಾಗಿದೆ !
ಪ್ರಧಾನಿ ಮೋದಿಯವರು ಮುಸಲ್ಮಾನರ ಪ್ರಗತಿಗಾಗಿ ಮತ್ತು ಅವರನ್ನು ಅಭಿವೃದ್ಧಿಯ ಮುಖ್ಯವಾಹಿನಿಯಲ್ಲಿ ತರಲು ‘ಪ್ರಗತಿಶೀಲ ಪಂಚಾಯತ್’ ಹೆಸರಿನಲ್ಲಿ ದೇಶದಾದ್ಯಂತ ಪಂಚಾಯತಿಯ ಆಯೋಜನೆ ಮಾಡಲು ನಿರ್ಧರಿಸಿದ್ದಾರೆ. ಆದುದರಿಂದ ಮುಸಲ್ಮಾನರ ಸಮಸ್ಯೆಗಳನ್ನು ಹುಡುಕಿ ಅವುಗಳನ್ನು ಬಗೆಹರಿಸಲು ತಕ್ಷಣ ಪ್ರಯತ್ನಿಸಬಹುದು.
೩. ಪಾಕಿಸ್ತಾನವನ್ನು ಜಗತ್ತಿನ  ನಕಾಶೆಯಿಂದ ನಾಶಗೊಳಿಸಿಯೇ ಯುದ್ಧ ಕೊನೆಯಾಗಬೇಕು  !
ಭಾರತೀಯ ಸೈನಿಕರು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ‘ಸರ್ಜಿಕಲ್ ಸ್ಟ್ರೈಕ್’ ಮೂಲಕ  ಪ್ರತ್ಯಕ್ಷ ನಿಯಂತ್ರಣ ರೇಖೆಯ ಸಮೀಪದ ೬ ರಿಂದ ೮ ಉಗ್ರರ  ತರಬೇತಿ  ಕೇಂದ್ರಗಳನ್ನು  ನಾಶಗೊಳಿಸಿದರು. ಈ  ಕಾರ್ಯಾಚರಣೆಯನ್ನು ಸೆಪ್ಟೆಂಬರ್ ೨೮ ರಂದು ಮಧ್ಯರಾತ್ರಿ ಮಾಡ ಲಾಯಿತು. ಇದರಲ್ಲಿ  ೩೮  ಉಗ್ರರು ಮೃತಪಟ್ಟರು.
೪. ಜಿಹಾದಿ ಯಾಕೂಬ್ ಮೆಮನ್‌ನ ಬೆಂಬಲಿಗರಿಂದ ಇದಕ್ಕಿಂತ ಬೇರೇನನ್ನು ಅಪೇಕ್ಷಿಸಬಹುದು  ?
ಭಾರತವು  ಕೈಗೊಂಡ  ಸೈನ್ಯದ ಕಾರ್ಯಾಚರಣೆ ಯೋಗ್ಯವಾಗಿದೆ ;  ಆದರೆ  ಪಾಕ್‌ನಿಂದ  ಬಂದಿರುವ  ಕಲಾವಿದರು ಮಾತ್ರ  ಉಗ್ರರಲ್ಲ.  ಅವರು  ಎಲ್ಲ  ಪ್ರಕ್ರಿಯೆಯನ್ನು  ಪೂರ್ತಿಗೊಳಿಸಿಯೇ  ಭಾರತಕ್ಕೆ  ಬಂದಿರುತ್ತಾರೆ.  ಅವರಿಗೆ  ಭಾರತದಲ್ಲಿ  ಕೆಲಸ  ಮಾಡಲು  ನಿರ್ಬಂಧ  ಹೇರುವುದು   ಅಯೋಗ್ಯವಾಗಿದೆ,  ಎಂದು ನಟ  ಸಲ್ಮಾನ್ ಖಾನ್‌ರವರು  ಹೇಳಿಕೆ ನೀಡಿದರು. 
೫. ಸಲ್ಮಾನ್ ಖಾನ್‌ನ ಸಾಲಿನಲ್ಲಿರುವ ಪಾಕ್ ನಟ ಫವಾದ್ ಖಾನ್ !
ಚಲನಚಿತ್ರ ನಿರ್ಮಾಪಕರ ಸಂಘಟನೆಯಾದ ‘ಇಂಡಿಯನ್  ಮೋಶನ್ ಪಿಕ್ಚರ್ಸ್ ಅಸೋಸಿಯೇಶನ್’ (IMPA) ಪಾಕ್‌ನ ಕಲಾವಿದರ ಮೇಲೆ ನಿಷೇಧ ಹೇರಿದೆ. ಇದರ ವಿರುದ್ಧ ಪಾಕ್ ನಟ ಫವಾದ್ ಖಾನ್ ‘ಬಾಲಿವುಡ್ ಇದು ಯಾರ ಅಪ್ಪನದ್ದೂ ಅಲ್ಲ’ ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾನೆ. ಇದಕ್ಕೆ IMPA ವು ತೀವ್ರ ವಿಷಾದ ವ್ಯಕ್ತಪಡಿಸಿದೆ.
೬. ಪಾಕ್‌ನ ನಾಗರಿಕರಿಗೆ ಭಾರತಕ್ಕೆ ಬರಲು ಏಕೆ ನಿರ್ಬಂಧ ಹಾಕಬಾರದು ?
ಉತ್ತರಪ್ರದೇಶದಲ್ಲಿ ಸುಮಾರು ೩೫೦ ಪಾಕಿಸ್ತಾನದ ನಾಗರಿಕರು ನಾಪತ್ತೆಯಾಗಿದ್ದಾರೆ. ಈ ನಾಗರಿಕರು ನಿಯಮಕ್ಕನುಸಾರ ‘ವೀಸಾ’ ಪಡೆದು ಭಾರತಕ್ಕೆ ಬಂದನಂತರ ಇಲ್ಲಿಂದ ನಾಪತ್ತೆಯಾಗಿದ್ದಾರೆ. ಇವರಲ್ಲಿ ಕೆಲವರು ಉಗ್ರರ ಸಹಾಯಕರೂ ಇರಬಹುದು, ಎಂದು ಗುಪ್ತಚರ ದಳಕ್ಕೆ ಸಂದೇಹವಿದೆ.
೭. ಕೇವಲ ಒಂದೇ ‘ಸರ್ಜಿಕಲ್ ಸ್ಟ್ರೈಕ್’ನಿಂದ ಏನೂ ಆಗುವುದಿಲ್ಲ !
ಉಗ್ರರು ಅಕ್ಟೋಬರ್ ೨ ರಂದು ಕಾಶ್ಮೀರದ ಬಾರಾಮುಲ್ಲಾದಲ್ಲಿನ ರಾಷ್ಟ್ರೀಯ ರೈಫಲ್ಸ್‌ನ ಛಾವಣಿಯ ಮೇಲೆ ಆತ್ಮಘಾತಕ ದಾಳಿ ಮಾಡಿದರು. ಈ ಸಮಯದಲ್ಲಿ ೨ ಉಗ್ರರ ಹತ್ಯೆ ಮಾಡಲಾಯಿತು ಮತ್ತು ಓರ್ವ ಸೈನಿಕನು ಹುತಾತ್ಮನಾದನು. ಅಕ್ಟೋಬರ್  ೩ ರಂದು ಕಾಶ್ಮೀರ ಮತ್ತು ಪಂಜಾಬಿನಲ್ಲಿ ಪಾಕಿಸ್ತಾನವು  ಗುಂಡು ಹಾರಿಸಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಫಲಕಗಳ ಮೂಲಕ ರಾಷ್ಟ್ರ ಮತ್ತು ಧರ್ಮಜಾಗೃತಿ ಮಾಡಲು ಅಮೂಲ್ಯ ಅವಕಾಶ !