ಶ್ರೀ ರಾಮ ಸೇನೆಯ ‘ದುರ್ಗಾ ದೌಡ’ ಕಾರ್ಯಕ್ರಮದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಸಹಭಾಗ

ಕಾರ್ಯಕ್ರಮದಲ್ಲಿ ಮಾತನಾಡುತ್ತಿರುವ
ರಣರಾಗಿಣಿ ಶಾಖೆಯ ಕು. ಸ್ಪೂರ್ತಿ ಬೆನಕನವಾರಿ
ಹುಬ್ಬಳ್ಳಿ : ನವರಾತ್ರಿಯ ನಿಮಿತ್ತ ಶ್ರೀ ರಾಮ ಸೇನೆಯ ವತಿಯಿಂದ ಅಕ್ಟೋಬರ್ ೨ ರಂದು ‘ದುರ್ಗಾ ದೌಡ’ ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿ ಈ ‘ದುರ್ಗಾ ದೌಡ’ಗೆ, ಹುಬ್ಬಳ್ಳಿ-ಧಾರವಾಡ ಉಪಮೇಯರ್ ಸೌ.ಲಕ್ಷ್ಮೀ ಉಪ್ಪಾರ ಇವರು ಚಾಲನೆ ನೀಡಿದರು. ಈ ಸಮಯದಲ್ಲಿ ಶ್ರೀ ರಾಮ ಸೇನೆಯ ಬೆಳಗಾವಿ ಜಿಲ್ಲಾ ಸಂಘಟಕರಾದ ಶ್ರೀ. ರಮಾಕಾಂತ ಕೊಂಡೊಸ್ಕರ್, ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಕು. ಸ್ಪೂರ್ತಿ ಬೆನಕನವಾರಿ, ಗೋಕುಲ ಗ್ರಾಮದ ಗುರುಸ್ವಾಮಿಗಳಾದ ಶ್ರೀ. ಮೋಹನ ಗುರುಸ್ವಾಮಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲು ವಕ್ತಾರರನ್ನು ತೆರೆದ ಜೀಪ್‌ನಲ್ಲಿ ಮೆರವಣಿಗೆ ಮೂಲಕ ಕರೆದುಕೊಂಡು ಸಭಾಸ್ಥಳಕ್ಕೆ ಕರೆ ತರಲಾಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ರಣರಾಗಿಣಿಯ ಕು. ಸ್ಪೂರ್ತಿಯವರು ಮಾತನಾಡುತ್ತಾ, ನವರಾತ್ರಿ ಹಬ್ಬದ ಮಹತ್ವ, ನವರಾತ್ರಿಯಲ್ಲಿ ‘ಶ್ರೀ ದುರ್ಗಾ ದೇವ್ಯೈ ನಮಃ’ ಈ ನಾಮಜಪವನ್ನು ಮಾಡುವುದರಿಂದಾಗುವ ಲಾಭ, ಇಂದಿನ ಸಮಾಜದಲ್ಲಿ ಧರ್ಮಶಿಕ್ಷಣದ ಆವಶ್ಯಕತೆ, ಧರ್ಮಾಂಧರು ಲವ್ ಜಿಹಾದ್ ಮೂಲಕ ಮಾಡುತ್ತಿರುವ ಮತಾಂತರ, ಮಹಿಳೆಯರ ಮೇಲೆ ಬಲಾತ್ಕಾರ, ಅತ್ಯಾಚಾರ ಮುಂತಾದ ಪ್ರಸಂಗಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇಂತಹ ಸ್ಥಿತಿಯನ್ನು ಬದಲಾಯಿಸಲು ಧರ್ಮಾಭಿಮಾನವನ್ನು ಹೆಚ್ಚಿಸಿ, ಸಂಘಟಿತರಾಗಿ ಕಾರ್ಯ ಮಾಡುವ ಅವಶ್ಯಕತೆಯ ಬಗ್ಗೆ ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ರಾಮ ಸೇನೆಯ ‘ದುರ್ಗಾ ದೌಡ’ ಕಾರ್ಯಕ್ರಮದಲ್ಲಿ, ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಶಾಖೆ ರಣರಾಗಿಣಿಯ ಸಹಭಾಗ