ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !

ಸ್ವಾತಂತ್ರ್ಯವೀರ ಸಾವರಕರರ ಜೀವನವನ್ನು ನೆನಪಿಸುವ ಲೇಖನಮಾಲೆ !
ಮಡಗಾವ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು ಬಿಡುಗಡೆಯಾದ
ಸನಾತನದ ಸಾಧಕರ ಹಾಗೂ ಅವರ ಕುಟುಂಬದವರ ಭೀಕರ ಅನುಭವ !
೨೦೦೯ ರಲ್ಲಿ ಮಡಗಾಂವ್‌ನಲ್ಲಿ ಒಂದು ವಾಹನದಲ್ಲಿ ಸ್ಫೋಟವಾಗಿ ಅದರಲ್ಲಿ ಸನಾತನ ಸಂಸ್ಥೆಯ ಇಬ್ಬರು ಸಾಧಕರು ಮೃತಪಟ್ಟರು. ಹೀಗಿದ್ದರೂ ಸನಾತನ ಸಂಸ್ಥೆಯ ಅಪಕೀರ್ತಿಯನ್ನು ಮಾಡಲು ಕಾಂಗ್ರೆಸ್ಸಿನ ತಾಳಕ್ಕನುಸಾರ ಕುಣಿಯುವ ಸೂತ್ರದ ಗೊಂಬೆಗಳಂತೆ ಆರಕ್ಷಕರು ಮತ್ತು ಪ್ರಸಾರಮಾಧ್ಯಮಗಳು ಯಾವುದೇ ಮುನ್ಸೂಚನೆಯನ್ನು ನೀಡದೇ ಸನಾತನದ ಸಾಧಕರನ್ನು ಬಂಧಿಸುವುದು, ಅವರ ಮೇಲೆ ಹೇರಿದ ಅನೇಕ ತೊಂದರೆದಾಯಕ ಕಲಂಗಳು, ಸುಳ್ಳು ಸಾಕ್ಷಿದಾರರು ಹಾಗೂ ಸುಳ್ಳು ಪುರಾವೆಗಳು, ಸಾಧಕರಿಗೆ ನೀಡಿದ ಅಸಹನೀಯ ಶಾರೀರಿಕ ಹಾಗೂ ಮಾನಸಿಕ ಹಿಂಸೆ, ಸಾಧಕರ ಕುಟುಂಬದವರಿಗೆ ನೀಡಿದ ಕಿರುಕುಳ ಮುಂತಾದ ಯಾತನೆಗಳ ಮಾಲಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಸಂಕಲನಕಾರರು : ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ

ಸೆರೆಮೆನೆಯೆಂದರೆ ಭೂಲೋಕದಲ್ಲಿರುವ ನರಕ !
  ೮. ಸೆರೆಮನೆಯ ಭ್ರಷ್ಟಾಚಾರಿ ಕಾವಲುಗಾರರು
೮ ಅ. ಶ್ರೀ. ಧನಂಜಯ ಅಷ್ಟೇಕರ್
೮ ಅ ೧. ಕಾವಲುಗಾರರು ಮದ್ಯಪಾನ ಮಾಡಿ ಕೆಲಸಕ್ಕೆ ಬರುವುದ ರಿಂದ ಅವರ ವರ್ತನೆ ಅಯೋಗ್ಯವಿರುವುದು : ಪ್ರತಿಯೊಂದು ಮಹಡಿಗೆ ಒಬ್ಬ ಕಾವಲುಗಾರನಿರುತ್ತಿದ್ದನು. ಅವರೆಲ್ಲ ಮದ್ಯಪಾನ ಮಾಡದೇ ಕೆಲಸಕ್ಕೆ ಬರುವ ದಿನವೇ ಇರಲಿಲ್ಲ. ಅಮಲಿನಲ್ಲಿರುವುದರಿಂದ ಅವರ ವರ್ತನೆಯೇ ಅಯೋಗ್ಯವಿರುತ್ತಿತ್ತು. ಅವರಿಗಾಗಿ ಸೆರೆಮನೆಯಲ್ಲಿ ಬೇರೆ ಶೌಚಾಲಯವಿದ್ದರೂ ಕುಡಿತದ ಅಮಲಿನಲ್ಲಿ ಬೇರೆ ಎಲ್ಲಿಯಾದರೂ ಮೂತ್ರವಿಸರ್ಜನೆ ಮಾಡುವ ಅಯೋಗ್ಯ ಕೃತಿ ಅವರಿಂದ ಆಗುತ್ತಿತ್ತು. ಅವರು ಕೈದಿಗಳಿಗಿಂತ ಕೆಟ್ಟದಾಗಿ ವರ್ತಿಸುತ್ತಿದ್ದರು.
೮ ಆ. ಶ್ರೀ. ದಿಲೀಪ ಮಾಣಗಾವಕರ್
೮ ಆ ೧. ಕಾವಲುಗಾರರು ಕೈದಿಗಳಿಂದ ಹಣ ಪಡೆದುಕೊಂಡು ಅವರಿಗೆ ಮಾದಕ ಪದಾರ್ಥವನ್ನು ಪೂರೈಸುವುದು : ಮೂರನೇ ವಿಷಯವೆಂದರೆ ಕಾವಲುಗಾರನಿಗೆ ಹಣ ನೀಡಿದ ನಂತರ ಅವನು ಅವರಿಗೆ ಮಾದಕ ವಸ್ತುವನ್ನು ತಂದುಕೊಡುತ್ತಾನೆ. ಏನು ತರಬೇಕು ಎಂಬುದು ಮೊದಲೇ ಅವರೊಳಗೆ ಒಪ್ಪಂದವಾಗಿರುತ್ತದೆ. ಅದರಲ್ಲಿ ಅವರಿಗೆ ದಲಾಲಿ ಸಿಗುತ್ತದೆ. ಕೆಲವು ಕೈದಿಗಳ ಸಂಬಂಧಿಕರಿಗೆ ಕಾವಲುಗಾರರೊಂದಿಗೆ ಒಪ್ಪಂದವಾಗಿರುತ್ತದೆ. ಅವರು ಹೊರಗೆ ಕಾವಲುಗಾರರನ್ನು ಭೇಟಿಯಾಗಿ ಅವರಿಗೆ ಹಣವನ್ನು ನೀಡಿ ವಸ್ತುವನ್ನು ಯಾರಿಗೆ ನೀಡಬೇಕು ಎಂಬುದನ್ನು ಹೇಳುತ್ತಾರೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ಮಾದಕ ಪದಾರ್ಥಗಳು ಒಳಗಡೆಗೆ ಬರುತ್ತವೆ.
೮ ಇ. ಶ್ರೀ. ವಿನಯ ತಳೇಕರ್
೮ ಇ ೧. ಕಾನೂನುಬಾಹಿರ ವಸ್ತುಗಳನ್ನು ಕಾವಲುಗಾರರಿಂದ  ಸೆರೆಮನೆಗೆ ತರಿಸುವುದು :
ಬಹಳಷ್ಟು ಕಾನೂನುಬಾಹಿರ ವಸ್ತುಗಳು ಸೆರೆಮನೆಗೆ ಬರುತ್ತವೆ. ಉದಾ. ಗೋಮಾಂಸ, ಹಂದಿ ಮಾಂಸ, ಮೀನು ಮುಂತಾದವುಗಳು, ಹಾಗೆಯೇ ಹಣವೂ ಬರುತ್ತದೆ. ಕೈದಿಗಳಿಗೆ ಸಂಚಾರಿವಾಣಿ ಉಪಕರಣವನ್ನೂ ಕೊಡಲಾಗುತ್ತದೆ. ಅದರ ದರವನ್ನು ನಿಶ್ಚಯಿಸಲಾಗಿರುತ್ತದೆ.
೮ ಇ ೨. ಸೆರೆಮನೆಯ ಕಾವಲುಗಾರರು ಕೈದಿಗಳಿಗೆ ಬೀಡಿ, ಸಿಗರೇಟ್, ಚರಸ್, ಗಾಂಜಾಗಳಂತಹ ಮಾದಕ ಪದಾರ್ಥಗಳನ್ನು ದುಪ್ಪಟ್ಟು ಹಣ ವನ್ನು ತೆಗೆದುಕೊಂಡು ಪೂರೈಸುವುದು : ಧನಂಜಯಣ್ಣನವರು ಹೇಳಿದ ರೀತಿಯಲ್ಲಿ ಸೆರೆಮನೆಯಲ್ಲಿ ತಂಬಾಕು, ಸಿಗರೇಟ್‌ಗಳಂತಹ ವಸ್ತುಗಳಿಗೆ ನಿರ್ಬಂಧವಿದೆ. ಗೋವಾ ಸರಕಾರದ ನಿಯಮಕ್ಕನುಸಾರ ಇವುಗಳ ಮೇಲೆ ನಿರ್ಬಂಧವಿದೆ;  ಏಕೆಂದರೆ ಸೆರೆಮನೆಯು ಒಂದು ಸಾರ್ವಜನಿಕ ಸ್ಥಳವಾಗಿದೆ. ಹೊರಗಡೆ ೨ ರೂಪಾಯಿಗಳ ತಂಬಾಕುವಿನ ಪೊಟ್ಟಣ, ೧೨ ರೂಪಾಯಿಗಳ ಬೀಡಿಯ ಪೊಟ್ಟಣ ಮತ್ತು ೫೦ ರೂಪಾಯಿಗಳವರೆಗೆ ಸಿಗರೇಟ್ ಪಾಕೀಟ್ ಸಿಗುತ್ತದೆ. ಆದರೆ ಸೆರೆಮನೆಯಲ್ಲಿ ೧೦೦ ರೂಪಾಯಿಗಳಿಗೆ ೪ ತಂಬಾಕುಗಳ ಪೊಟ್ಟಣ ಮತ್ತು ೧೦೦ ರೂಪಾಯಿಗಳಿಗೆ ಸಿಗರೇಟ್ ಹಾಗೂ ಬೀಡಿಗಳ ಪಾಕೀಟು ಸಿಗುತ್ತವೆ. ಅಲ್ಲಿ ಕೆಲವು ನಿಗದಿತ ಕಾವಲುಗಾರರು ಈ ಎಲ್ಲ ಸಾಮಾನುಗಳನ್ನು ತಂದು ಕೊಡುತ್ತಾರೆ. ಕೈದಿಗಳಲ್ಲಿಯೂ ಕೆಲವು ನಿಗದಿತ ಮಾರಾಟಗಾರರಿರುತ್ತಾರೆ.
ಕೈದಿಗಳು ೫೦೦ ರೂಪಾಯಿಗಳನ್ನು ಕೊಟ್ಟ ನಂತರ, ಕಾವಲುಗಾರನು ಅವರಿಗೆ ಬೀಡಿಯ ೨೦ ಪಾಕೀಟುಗಳನ್ನು ತಂದು ಕೊಡುತ್ತಾನೆ ಮತ್ತು ಒಳಗಿರುವ ಕೈದಿಗೆ ಪ್ರತಿಯೊಂದು ಪಾಕೀಟನ್ನು ೧೦೦ ರೂಪಾಯಿಗಳಿಗೆ ಮಾರುತ್ತಾನೆ. ಸೆರೆಮನೆಯಲ್ಲಿ ಚರಸ್ ಮತ್ತು ಗಾಂಜಾವನ್ನೂ ಪೂರೈಸಲಾಗುತ್ತದೆ. ಸಮಾಜದಲ್ಲಿರುವಾಗ ನಾವು ಚರಸ್ ಮತ್ತು ಗಾಂಜಾದ ಬಗ್ಗೆ ಎಂದೂ ಕೇಳಿರಲಿಲ್ಲ; ಆದರೆ ೪ ವರ್ಷಗಳ ಸೆರೆಮನೆವಾಸದಲ್ಲಿ ನಮಗೆ ಈ ಬಗ್ಗೆ ಮಾಹಿತಿ ಸಿಕ್ಕಿತು. ಹೊರಗಡೆ ೫೦೦ ರೂಪಾಯಿಗಳಿಗೆ ಸಿಗುವ ೧ ತೊಲ ಚರಸ್‌ಅನ್ನು ಸೆರಮನೆಯಲ್ಲಿ ಒಂದೂವರೆ ಸಾವಿರ ರೂಪಾಯಿಗಳಿಗೆ ಕೊಡಲಾಗುತ್ತದೆ. ಗಾಂಜಾದ ಪಾಕೀಟು ಹೊರಗಡೆ ೭೦ ರೂಪಾಯಿಗಳಿಗೆ ಸಿಗುತ್ತದೆ. ಸೆರೆಮನೆಯಲ್ಲಿ ಅದೇ ಪಾಕೀಟನ್ನು ಎರಡು ಭಾಗ ಮಾಡಿ ಒಂದೊಂದನ್ನು ೫೦೦ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತದೆ.
೯. ಮೈಗಳ್ಳ ಹಾಗೂ ಭ್ರಷ್ಟ ಪೊಲೀಸರು !
೯ ಅ. ಶ್ರೀ. ಪ್ರಶಾಂತ ಜುವೇಕರ್
೯ ಅ ೧. ಭ್ರಷ್ಟ ಪೊಲೀಸ್ ಅಧಿಕಾರಿಗಳು :
ನಮ್ಮನ್ನು ಬಿಟ್ಟು ಎಷ್ಟೋ ಹೊಸ ಕೈದಿಗಳಿಂದ ಹಣ ತೆಗೆದುಕೊಳ್ಳುತ್ತಿರುವ ಪೊಲೀಸರನ್ನು ನಾವು ನೋಡಿದ್ದೇವೆ. ಅದರಲ್ಲಿನ ಸ್ವಲ್ಪ ಹಣ (ಕಮೀಶನ್) ಅಧಿಕಾರಿಗಳಿಗೆ ಸಿಗುತ್ತದೆ. ಆದ್ದರಿಂದ ಅವರು ಸಹ ಕಬಳಿಸುವ ಕೈದಿಗಳಿಗೆ ಸಹಾಯ ಮಾಡುತ್ತಾರೆ.
೯ ಅ ೨.  ಕೆಲಸದ ಬಗ್ಗೆ ಗಾಂಭೀರ್ಯತೆ ಇಲ್ಲದಿರುವುದು : ಒಂದೆಂದರೆ ಇವರೆಲ್ಲರಿಗೂ ಕೆಲಸದ ಬಗ್ಗೆ ಒಲವಿರುವುದು ಕಂಡುಬರುವುದಿಲ್ಲ. ಎಷ್ಟೋ ಪೊಲೀಸರು ಯುವಕರಾಗಿದ್ದರು. ಅವರಿಗೆ ಯಾವುದೇ ರೀತಿಯಲ್ಲಿ ಬುದ್ಧಿಯ ಕೆಲಸವಿಲ್ಲ. ಕೇವಲ ಕೈದಿಗಳನ್ನು ಇಲ್ಲಿಂದ ಅಲ್ಲಿಗೆ ಕರೆದುಕೊಂಡೊಯ್ಯುವುದಷ್ಟೇ ಅವರ ಕೆಲಸವಾಗಿರುತ್ತದೆ ! ಅವರಿಗೆ ಕೆಲಸದ ಬಗ್ಗೆ ಗಾಂಭೀರ್ಯತೆಯೇ ಇಲ್ಲ.
೯ ಅ ೩. ಜವಾಬ್ದಾರಿಯ ಬಗ್ಗೆ ಅರಿವಿರುವುದಿಲ್ಲ : ೧೨ ರಿಂದ ೧೫ ಕೈದಿಗಳನ್ನು ನ್ಯಾಯಾಲಯಕ್ಕೆ ಕರೆದೊಯ್ಯಬೇಕೆಂದರೆ ಅವರೊಂದಿಗೆ ೩೦ ಜನ ಪೊಲೀಸರಿರುತ್ತಿದ್ದರು; ಆದರೆ ಬರುವಾಗ ಅದರಲ್ಲಿನ ಅರ್ಧದಷ್ಟು ಪೊಲೀಸರು ಮಧ್ಯೆ ಇಳಿದು ಮನೆಗೆ ಹೋಗುತ್ತಿರುವುದನ್ನು ನಾವು ಎಷ್ಟೋ ಬಾರಿ ನೋಡಿದ್ದೇವೆ. ಅವರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಅರಿವಿರುವುದಿಲ್ಲ.
೯ ಅ ೪.  ಹೊರಗೆ ಹೋಗುವಾಗ ಅವರಿಗೆ ಬೇಕಾದ ಸಾಮಾನುಗಳಿಗೆ ಪೊಲೀಸರ ಬಳಿ ಬೇಡಿಕೆ ನೀಡುವ ಕೈದಿಗಳು ಹಾಗೂ ಅವರ ಬೇಡಿಕೆಯನ್ನು ಪೂರೈಸುವ ಭ್ರಷ್ಟ ಪೊಲೀಸರು ! : ಕೆಲವು ಕೈದಿಗಳಿಗೆ ಮದ್ಯ ಸೇವಿಸುವ ಹಾಗೂ ಸಿಗರೇಟ್ ಸೇದುವ ಕೆಟ್ಟ ಚಟವಿರುತ್ತದೆ. ಅವರು ಪೊಲೀಸರು ಹೊರಗೆ ಹೋಗುವಾಗ ಅವರಲ್ಲಿ ಹಣ ನೀಡಿ ಅವರ ಬೇಡಿಕೆ ನೀಡುತ್ತಿದ್ದರು. ನಾವು ಸೆರೆಮನೆಯಲ್ಲಿರುವಾಗ, ಓರ್ವ ಕೈದಿಯನ್ನು ಸಾಯಂಕಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಲಿಕ್ಕಿತ್ತು. ಕೈದಿಯ ಬೇಡಿಕೆಯಂತೆ ಅವನನ್ನು ಐಸ್‌ಕ್ರೀಂ ತಿನ್ನಲು ಕರೆದುಕೊಂಡು ಹೋದರು. ಆಗ ಓರ್ವ ಪತ್ರಕರ್ತರು ಅವರ ಛಾಯಾಚಿತ್ರ ತೆಗೆದು ಮರುದಿನದ ವಾರ್ತಾಪತ್ರಿಕೆಯಲ್ಲಿ ಮುದ್ರಿಸಿದರು. ಇದರಿಂದ ಆ ಇಬ್ಬರು ಪೊಲೀಸರನ್ನು ಕೆಲಸದಿಂದ ವಜಾಗೊಳಿಸಲಾಯಿತು.
೧೦. ಅಮಲು ಪದಾರ್ಥಗಳ ವ್ಯವಹಾರದಲ್ಲಿ ಸಿಲುಕಿಕೊಂಡಿರುವ ಭ್ರಷ್ಟ ಪೊಲೀಸರು !
೧೦ ಅ. ಶ್ರೀ. ಧನಂಜಯ ಅಷ್ಟೇಕರ್
೧೦ ಅ ೧. ಆರೋಪಿಯನ್ನು ಬಂಧಿಸಿದಾಗ ಅವನ ಬಳಿ ಸಿಕ್ಕಿದ ಅಮಲು ಪದಾರ್ಥವನ್ನು ಪೊಲೀಸರು ಕೂಡಲೇ ಮಾಯ ಮಾಡುವುದು :  ನಾನು ಸೆರೆಮನೆಯಲ್ಲಿರುವಾಗ ಒಂದು ದಿನ ಓರ್ವ ನೇಪಾಳಿ ಹುಡುಗನನ್ನು ಹಿಡಿದು ಸೆರೆಮನೆಯಲ್ಲಿ ಬಂಧಿಸಲಾಯಿತು. ಅವನು ಹಾಗೂ ಅವನ ಇಬ್ಬರು ಸ್ನೇಹಿತರು ಮತ್ತು ಅವರ ಪತ್ನಿಯರು ಹೀಗೆ ೬ ಜನರು ಚರಸ್ ಮಾರಾಟ ಮಾಡಲು ನೇಪಾಳದಿಂದ ಬಂದಿದ್ದರು. ಅವರಿಗೆ ದೊಡ್ಡ ವ್ಯಾಪಾರವಾಗುತ್ತಿತ್ತು.  ಅವರು ಒಂದೇ ಸಮಯದಲ್ಲಿ ೩೦, ೫೦, ೧೦೦ ಕೆಜಿ ಚರಸ್ ತಂದು ಮಾರಾಟ ಮಾಡುತ್ತಿದ್ದರು. ಭಾರತದಲ್ಲಿ ಚರಸ್ ಮಾರಾಟ ಮಾಡುವ ಒಬ್ಬನು ಒಂದು ದಿನ ಪೊಲೀಸರಿಗೆ ಚರಸ್ ಮಾರಾಟ ಮಾಡುವ ಜನರು ಬರಲಿದ್ದಾರೆ, ಅವರನ್ನು ಹಿಡಿಯಿರಿ ಎಂದು ತಿಳಿಸಿದನು. ಇದರಿಂದ ಆ ವ್ಯಕ್ತಿಗೆ ಅವನದ್ದೇನಾದರೂ ಬೇರೆ ವ್ಯಾಪಾರ ಮಾಡಲು ಸುಲಭವಾಗುತ್ತದೆ. ಅದಕ್ಕಾಗಿ ಆ ವ್ಯಕ್ತಿ ಅಮಲು ಪದಾರ್ಥ ಮಾರಾಟ ಮಾಡುವ ಸಣ್ಣ ವ್ಯಾಪಾರಿಗಳನ್ನು ಪೊಲೀಸರಿಗೆ ಹಿಡಿದು ಕೊಡುತ್ತಾರೆ.
ಪೊಲೀಸರು ಅವನನ್ನು ಹಿಡಿದಾಗ ಅವನ ಬಳಿ ೩೦ ಕಿಲೋ ಚರಸ್ ಸಿಕ್ಕಿತ್ತು. ಅವನು ಸೆರೆಮನೆಗೆ ಬಂದ ನಂತರ ಅವನ ಮೇಲೆ ಅಪರಾಧ ನೋಂದಾಯಿಸಿಕೊಳ್ಳಲಾಯಿತು. ಆಗ ನಾನೇ ಸ್ವತಃ ಆರೋಪಪತ್ರವನ್ನು ಓದಿದೆನು. ಅದರಲ್ಲಿ ಕೇವಲ ೩ ಕಿಲೋ ಚರಸ್ ಎಂದು ಬರೆಯಲಾಗಿತ್ತು. ಹಾಗಾದರೆ ಉಳಿದ ೨೭ ಕಿಲೋ ಚರಸ್ ಎಲ್ಲಿ ಹೋಯಿತು ? ಅದನ್ನು ಆ ಮಧ್ಯೆ ಪೊಲೀಸರು ಏನೋ ಮಾಡಿದ್ದರು. ಆ ನೇಪಾಳಿ ಕೈದಿಯು, ನಾನು ೩೦ ಕಿಲೋ ಚರಸ್ ತಂದಿದ್ದೆನು. ಪ್ರತೀ ತಿಂಗಳು ೩೦ ಕಿಲೋ ಚರಸ್ ತಂದು ನಾನು ಅದನ್ನು ಮಾರುತ್ತೇನೆ. ಈ ಸಲವೂ ನಾನು ೩೦ ಕಿಲೋ ಚರಸ್ ತಂದಿದ್ದ್; ಆದರೆ ಆರೋಪಪತ್ರದಲ್ಲಿ ಕೇವಲ ೩ ಕಿಲೋ ಎಂದು ಬರೆಯಲಾಗಿದೆ. ಉಳಿದ ೨೭ ಕಿಲೋ ಎಲ್ಲಿ ಹೋಯಿತು ?, ಎಂಬ ಪ್ರಶ್ನೆ ಮೂಡುತ್ತಿದೆ, ಎಂದು ಸ್ವತಃ ಹೇಳುತ್ತಿದ್ದನು. ಪೊಲೀಸರು ಸಹ ಇದರಲ್ಲಿ ಸೇರಿದ್ದಾರೆ. ಈ ರೀತಿ ಅವರು ತಮ್ಮ ವ್ಯಾಪಾರ ನಡೆಸುತ್ತಾರೆ. ಅವರಾದರೆ ಹೊರಗಿನವರಾಗಿದ್ದಾರೆ; ಆದರೆ ಸೆರೆಮನೆಯಲ್ಲಿರುವ ಅಧಿಕಾರಿಗಳು ಸಹ ಇದರಲ್ಲಿ ಸೇರಿಕೊಂಡಿರುತ್ತಾರೆ.
ಅವರದ್ದು ಒಂದು ಬೇರೆ ರೀತಿಯ ಕಾರುಬಾರಿರುತ್ತದೆ. ಈ ಅಧಿಕಾರಿಗಳು ಸ್ಥಳೀಯ ಮಾಫಿಯಾದವರಿಂದ ಕಡಿಮೆ ದರದಲ್ಲಿ ಅಮಲು ಪದಾರ್ಥಗಳನ್ನು ಕೊಂಡುಕೊಳ್ಳುತ್ತಾರೆ ಹಾಗೂ ಸೆರೆಮನೆಯಲ್ಲಿ ಹೆಚ್ಚು ಬೆಲೆಗೆ ಮಾರುತ್ತಾರೆ. ಇದು ಪ್ರತಿನಿತ್ಯ ನಡೆಯುತ್ತಿರುತ್ತದೆ.
೧೦ ಅ ೧.  ಆರೋಪಿಗಳಿಂದ ದೊರೆತ ಅಮಲು ಪದಾರ್ಥಗಳನ್ನು ನಾಶ ಮಾಡುವ ಸುಳ್ಳು ವರದಿಯನ್ನು ತಯಾರಿಸಿ ಅವರೊಂದಿಗೆ ವ್ಯಾಪಾರ ಮಾಡುವ ಪೊಲೀಸರು ! : ಸಾಮಾನು ನಾಶ ಮಾಡಲು ಅಥವಾ ಅದನ್ನು ಉರಿಸಲು ಹೊರಗೆ ತೆಗೆಯುತ್ತಾರೆ ಮತ್ತು ಸ್ವತಃ ಅದರ ವ್ಯಾಪಾರ ಮಾಡಲು ಪ್ರಾರಂಭಿಸುತ್ತಾರೆ; ಆದರೆ ವರದಿ ತಯಾರಿಸುವಾಗ ನಿರ್ದಿಷ್ಟ ವ್ಯಕ್ತಿಯ ಎದುರಲ್ಲಿ ನಾವು ಈ ವಸ್ತುವನ್ನು ನಾಶ ಮಾಡಿದೆವು, ಎಂದು ಬರೆಯುತ್ತಾರೆ.
೧೦ ಆ. ಶ್ರೀ. ಪ್ರಶಾಂತ ಅಷ್ಟೇಕರ್
೧೦ ಆ ೧. ಆರೋಪಿಯನ್ನು ಹಿಡಿಯುವಾಗ ಅವರಿಂದ ಸಿಕ್ಕಿದ ಅಮಲು ಪದಾರ್ಥವನ್ನು ಪೊಲೀಸರು ಮಾರಾಟ ಮಾಡುವುದು : ಆರೋಪಿಯನ್ನು ಹಿಡಿದ ಬಳಿಕ ಅವರ ಬಳಿ ಸಿಕ್ಕಿದ ಅಮಲು ಪದಾರ್ಥದ ಮೇಲೆ ಸೀಲ್ ಮಾಡಿ ಬೀಗಹಾಕಲಾಗುತ್ತದೆ. ಆರೋಪಪತ್ರದಲ್ಲಿ ಬರೆದಿರುವಂತೆ ಆ ವಸ್ತುವಿನ ತೂಕವನ್ನು ತೋರಿಸಬೇಕಾಗುತ್ತದೆ. ನ್ಯಾಯಾಲಯದಲ್ಲಿ ಆರೋಪಿಯಿಂದ ವಶಪಡಿಸಿಕೊಳ್ಳಲಾದ ಎಲ್ಲ ವಸ್ತುಗಳನ್ನು ಇಡಲು ಒಂದು ಕೋಣೆಯಿರುತ್ತದೆ. ನಂತರ ಆಯಾ ಪ್ರಕರಣದಲ್ಲಿ ತೀರ್ಪು ಬಂದ ಬಳಿಕ ನ್ಯಾಯಾಲಯವು ಅವರಿಗೆ ಸಿಕ್ಕಿದ ಅಮಲು ಪದಾರ್ಥವನ್ನು ಸುಟ್ಟು ಹಾಕಲು ಆದೇಶ ನೀಡುತ್ತದೆ. ಕೆಲವು ಪೊಲೀಸರು ಆ ವಸ್ತುವನ್ನು ಕೋಣೆಯಿಂದ ಹೊರೆಗೆ ತೆಗೆದು ಸುಟ್ಟು ಹಾಕುವ ಬದಲು ಅದನ್ನು ಮಾರಾಟ ಮಾಡುತ್ತಾರೆ. ಇಂತಹ ಕಾನೂನುಬಾಹಿರ ಕೆಲಸವನ್ನು ಪೊಲೀಸರು ಮಾಡುತ್ತಾರೆ. ಈ ರೀತಿಯ ಕಾನೂನುಬಾಹಿರ ಕೆಲಸವನ್ನು ಮಾಡುತ್ತಿದ್ದ ೨-೩ ಪೊಲೀಸ್ ಅಧಿಕಾರಿಗಳನ್ನು ಕೆಲಸದಿಂದ ಅಮಾನತುಗೊಳಿಸಲಾಯಿತು.
೧೦ ಆ ೨. ಕಳ್ಳಸಾಗಾಣಿಕೆ ಮಾಡುವ ಕೆಲಸವು ಸುಗಮವಾಗಿ ನಡೆಯುವ ಹಿಂದೆ ಮಂತ್ರಿಯ ಮಗನ ಕೈವಾಡವಿರುವುದು ಗಮನಕ್ಕೆ ಬರುವುದು : ಇದರಲ್ಲಿ ಕಳ್ಳಸಾಗಾಣಿಕೆ ಮಾಡುವ ಪ್ರಮುಖನು ಹೊರಗೇ ಇರುತ್ತಾನೆ. ಇದರ ಹಿಂದೆ ಕೇವಲ ಸ್ಥಳೀಯ ಪೊಲೀಸರ ಕೈವಾಡವಿರುವುದಲ್ಲ ಜೊತೆಗೆ ಮಂತ್ರಿಗಳ ಮಕ್ಕಳ ಕೈವಾಡವೂ ಇರುತ್ತದೆ. ಇದು ಸಹ ನಮಗೆ ಆ ಕಳ್ಳಸಾಗಾಣಿಕೆ ಮಾಡುವವರೊಂದಿಗೆ ಚರ್ಚಿಸುವಾಗ ತಿಳಿಯಿತು.                      (ಮುಂದುವರಿಯುವುದು)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !