ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ವಿವಿಧ ಶಬ್ದಗಳ ಮಹತ್ವವನ್ನು ಗುರುತಿಸಿ ಅವುಗಳನ್ನು ಅಯೋಗ್ಯ ಕಡೆಗಳಲ್ಲಿ ಉಪಯೋಗಿಸದೆ ಆ ಶಬ್ದಗಳನ್ನು ಗೌರವಿಸಿ!

ಸಾಧಕರಿಗೆ ಮಹತ್ವದ ಸೂಚನೆ !
ಸದ್ಗುರು  ಬಿಂದಾ ಸಿಂಗಬಾಳ
ಭಾವ, ತಳಮಳ, ಸಂತರು, ಗುರುಗಳು, ಪರೇಚ್ಛೆ, ಈಶ್ವರೇಚ್ಛೆ ಹೀಗೆ ಸಾಧನೆಯಲ್ಲಿನ ಶಬ್ದಗಳನ್ನು ಎಲ್ಲ ಸಾಧಕರು ಪ್ರತಿದಿನ ಉಪಯೋಗಿಸುತ್ತಾರೆ. ಅಯೋಗ್ಯ ಸ್ಥಳಗಳಲ್ಲಿ ಅವುಗಳನ್ನು ಉಪಯೋಗಿಸುವಂತಹ ಕೆಲವು ಅಕ್ಷಮ್ಯ ತಪ್ಪುಗಳು ಗಮನಕ್ಕೆ ಬಂದಿವೆ. ಎಲ್ಲರಿಗೂ ತಪ್ಪುಗಳಿಂದ ಕಲಿಯಲು ಸಿಗಬೇಕೆಂದು ಹಾಗೂ ಹೀಗೆ ಬೇರೆಯವರಿಂದಲೂ ಆಗುತ್ತಿದ್ದರೆ, ಅದನ್ನು ಸುಧಾರಿಸಿಕೊಳ್ಳಬೇಕೆಂದು ಆ ತಪ್ಪು ಗಳನ್ನು ಇಲ್ಲಿ ಕೊಡುತ್ತಿದ್ದೇನೆ.

೧. ಶಿಷ್ಯ ಎಂಬ ಅಧ್ಯಾತ್ಮದ ಶಬ್ದವನ್ನು ವಿವಾಹದಂತಹ ಮಾಯೆವಿಷಯದೊಂದಿಗೆ ಸಂಬಂಧ ಜೋಡಿಸುವುದು
ಒಬ್ಬ ಸಾಧಕನ ವಿವಾಹ ನಿಶ್ಚಯವಾದಾಗ ಆ ಬಗ್ಗೆ ಮಾತುಕತೆ ನಡೆಯುತ್ತಿರುವಾಗ ಒಬ್ಬ ಕಾರ್ಯಕರ್ತನು ಆ ಸಾಧಕನ ಬಗ್ಗೆ ಬೇರೊಬ್ಬ ಸಾಧಕನಲ್ಲಿ, ‘ಶಿಷ್ಯ ಮುಂದೆ ಹೋದನು’ ಎಂದು ಹೇಳಿದನು. (ಹಿರಿಯ ವಯಸ್ಸಿನ ಸಾಧಕನಿಗಿಂತ ಮೊದಲು ಕಿರಿಯ ವಯಸ್ಸಿನ ಸಾಧಕನು ವಿವಾಹವಾಗಲು ನಿರ್ಧರಿಸಿದನು,) ಈ ಗಂಭೀರ ತಪ್ಪನ್ನು ಇನ್ನೊಬ್ಬ ಸಾಧಕನು ಆ ಕಾರ್ಯಕರ್ತನಿಗೆ ಅರಿವು ಮಾಡಿಕೊಟ್ಟನು.
ಅಧ್ಯಾತ್ಮದಲ್ಲಿ ‘ಗುರು ಮತ್ತು ಶಿಷ್ಯ’ ಈ ಶಬ್ದವು ಎಲ್ಲಕ್ಕಿಂತ ವಂದನೀಯ ಶಬ್ದವಾಗಿದೆ. ಅವುಗಳ ಬಗ್ಗೆ ಹೀಗೆ ಪ್ರತಿಕ್ರಿಯೆ ವ್ಯಕ್ತಪಡಿಸುವುದೆಂದರೆ ಆ ಶಬ್ದಗಳಿಗೆ ಅವಮಾನ ಮಾಡಿದಂತಾಗುತ್ತದೆ.
೨. ಸಾಧಕರ ಏಳಿಗೆಗಾಗಿ ಗುರುದೇವರು ನೀಡಿದ ಸ್ವಭಾವದೋಷ 
ನಿರ್ಮೂಲನಾ ಪ್ರಕ್ರಿಯೆಯ ಬಗ್ಗೆ ಕೃತಜ್ಞತಾಭಾವ ಇಲ್ಲದಿರುವುದನ್ನು ತೋರಿಸುವ ಪ್ರತಿಕ್ರಿಯೆ !
ಕೆಲವು ದಿನಗಳ ಹಿಂದೆ ಒಬ್ಬ ಕಾರ್ಯಕರ್ತನು ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಗಾಗಿ ಒಂದು ಆಶ್ರಮಕ್ಕೆ ಬಂದಿದ್ದನು. ಅವನು ಸಹಸಾಧಕರೊಂದಿಗೆ ಉಪಾಹಾರಕ್ಕಾಗಿ ಕುಳಿತಿದ್ದಾಗ, ‘ಇದು ನಮ್ಮ ಪ್ರಕ್ರಿಯೆಯಲ್ಲಿರುವವರ (ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಗಾಗಿ ಆಶ್ರಮಕ್ಕೆ ಹೋಗಿರುವ ಸಾಧಕರ) ಕಟ್ಟೆಯಾಗಿದೆ’ ಎಂದನು. ಈ ಮಾತು ಅಯೋಗ್ಯವಾಗಿದೆಯೆಂದು ಒಬ್ಬ ಸಾಧಕನು ಅರಿವು ಮಾಡಿಕೊಟ್ಟಾಗ ಅವನಿಗೆ ತನ್ನ ತಪ್ಪಿನ ಅರಿವಾಯಿತು.
ಸ್ವಭಾವದೋಷ ಮತ್ತು ಅಹಂ ನಿರ್ಮೂಲನಾ ಪ್ರಕ್ರಿಯೆಯಲ್ಲಿ ಸಾಧಕರ ಅಂತಃಕರಣ ಶುದ್ಧಿಯಾಗಲು ಆರಂಭವಾಗುತ್ತದೆ.    ಈಶ್ವರನ  ಚರಣಗಳಲ್ಲಿ ಶೀಘ್ರಗತಿಯಲ್ಲಿ ಸಮರ್ಪಿಸಿಕೊಳ್ಳಲು ಸಹಾಯ ಮಾಡುವ ಈ ಪ್ರಕ್ರಿಯೆಯ ಬಗ್ಗೆ ಎಷ್ಟು ಕೃತಜ್ಞತೆ ಯನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ !
೩. ಶೇಕಡಾ ೬೦ ಮಟ್ಟದ ಬಗ್ಗೆ ಚೇಷ್ಟೆ ಮಾಡುವುದು
ಒಬ್ಬ ಕಾರ್ಯಕರ್ತನು ಒಂದು ಸಾಹಿತ್ಯವನ್ನು ಕೊರಿಯರ್  ಮಾಡಲು ಸಹಸಾಧಕನಿಗೆ ನೀಡುತ್ತಾ ‘ನೀನು ಶೇ. ೬೦ ಆಧ್ಯಾತ್ಮಿಕ ಮಟ್ಟವನ್ನು ತಲುಪಿದ್ದಕ್ಕಾಗಿ ಇದು ಉಡುಗೊರೆಯಾಗಿದೆ’ ಎಂದನು. ಶೇ. ೬೦ ಮಟ್ಟವನ್ನು ತಲುಪದಿರುವ ಸಾಧಕರಿಗೆ ಇಂತಹ ಮಾತಿನಿಂದ ಬೇಸರವಾಗುವ ಸಾಧ್ಯತೆಯಿದೆ.
೪. ಪರೇಚ್ಛೆಯ ಬಗ್ಗೆ ತಮಾಷೆ ಮಾಡುವುದು
ಒಂದು ಸೇವಾಕೇಂದ್ರದ ಕಾರ್ಯಕರ್ತರು ಪರೇಚ್ಛೆ ಎಂಬ ಆಧ್ಯಾತ್ಮಿಕ ಶಬ್ದವನ್ನು ಚೇಷ್ಟೆ-ತಮಾಷೆ ಮಾಡಲು ಉಪಯೋಗಿಸುತ್ತಾರೆ, ಎಂದು ಅರಿವಾಯಿತು.
೫. ಆಧ್ಯಾತ್ಮಿಕ ಶಬ್ದಗಳನ್ನು ಅಯೋಗ್ಯ ಕಡೆಗಳಲ್ಲಿ ಉಪಯೋಗಿಸುವುದಕ್ಕೆ ಸಂಬಂಧಿಸಿದ ಇತರ ತಪ್ಪುಗಳು
ಈ ತಪ್ಪುಗಳಂತೆಯೇ ಪ್ರಸಾರದ ಹಾಗೂ ಆಶ್ರಮದ ಅನೇಕ ಕಾರ್ಯಕರ್ತರು ಆಧ್ಯಾತ್ಮಿಕ ಶಬ್ದಗಳನ್ನು ಈ ಮುಂದಿನಂತೆ ಅಯೋಗ್ಯ ರೀತಿಯಲ್ಲಿ ಉಪಯೋಗಿಸುವುದು ಕಂಡುಬಂದಿದೆ.
೫ ಅ. ಗಂಭೀರವಾದ ತಪ್ಪು
೧. ಇಂದು ನಮ್ಮಲ್ಲಿ ಮಹಾಭಾರತ ಘಟಿಸಿತು, ಎಂದು ಹೇಳುವುದು
೨. ಇಷ್ಟು ರಾಮಾಯಣ ನಡೆದರೂ ರಾಮನ ಸೀತೆ ಯಾರು, ಎಂದು ಏಕೆ ವಿಚಾರಿಸುತ್ತೀರಿ ? ಎಂದು ಹೇಳುವುದು
೩. ಹೆಚ್ಚು ಸಮಯ ಮಲಗುವ ಸಾಧಕನಿಗೆ, ನೀನು ನಿದ್ರಾದೇವತೆ ಯನ್ನು ಪ್ರಸನ್ನಗೊಳಿಸಿಕೊಂಡಿದ್ದಿ, ಎಂದು ಹೇಳುವುದು
೪. ಕೂದಲು ಅವ್ಯವಸ್ಥಿತವಾಗಿರುವವರಿಗೆ, ಇಂದು ನಿನ್ನ ಕೂದಲಿನ ಅವತಾರವಾಗಿದೆ, ಎಂದು ಹೇಳುವುದು
೫. ಇಂದು ... ಇವರು ರೌದ್ರ ರೂಪ ತಾಳಿದ್ದಾರೆ, ಎಂದು ಹೇಳುವುದು
೬. ... ಇವರು ನನ್ನ ತಪ್ಪುಗಳನ್ನು ಹೇಳಿ, ನನ್ನ ದೋಷವನ್ನು ತೋರಿಸಿ ನನ್ನ ಉದ್ಧಾರವನ್ನು ಮಾಡಿದರು, ಎಂದು ಹೇಳುವುದು
೭. ಎಲ್ಲ ಕಡೆ ನಿಮ್ಮ ಸಂಚಾರವಿರುತ್ತದೆ, ಎಂದು ಇತರ ಸಾಧಕರಿಗೆ ಹೇಳುವುದು
೫ ಆ. ಇತರ ತಪ್ಪುಗಳು
೧. ಬಹಳ ದಿನಗಳ ನಂತರ ಯಾವುದಾದರೂ ಸಾಧಕನ ಭೇಟಿ ಯಾದರೆ ಅವನಿಗೆ, ನಿನ್ನ ದರ್ಶನ ದುರ್ಲಭವಾಗಿದೆ, ಎಂದು ಹೇಳುವುದು
೨. ಪರಸ್ಪರ ಮಾತನಾಡುವಾಗ, ನಿಮ್ಮ ಕೃಪೆಯಿಂದಲೇ ಆಯಿತು, ಎಂದು ಚೇಷ್ಟೆಯಿಂದ ಹೇಳುವುದು
೩. ಅನಾವಶ್ಯಕ ಮಾತನಾಡುವವನಿಗೆ, ಏನು ಪುರಾಣ ಹೇಳುತ್ತಿದ್ದೀರಿ? ಎಂದು ಹೇಳುವುದು
೪. ಕೋಪಗೊಂಡಿರುವ ವ್ಯಕ್ತಿಗೆ, ತಾಂಡವ ಮಾಡಬೇಡಿ, ಎಂದು ಹೇಳುವುದು
ಈ ರೀತಿಯಲ್ಲಿ ಅಯೋಗ್ಯವಾಗಿ ಮಾತನಾಡುವುದರಿಂದ ಕಾರ್ಯ ಕರ್ತರಿಗೆ ಬೃಹತ್ಪ್ರಮಾಣದಲ್ಲಿ ಪಾಪ ತಗಲಬಹುದು.
೬. ಕಾರ್ಯಕರ್ತರೇ, ಭಗವಂತನು ಸತತ ನನ್ನತ್ತ ನೋಡುತ್ತಿದ್ದಾನೆ, ಎಂಬ
ಭಾವವನ್ನಿಟ್ಟು ಬಹಿರ್ಮುಖ ವರ್ತನೆ ಯಿಂದಾಗುವ ತನ್ನ ಸಾಧನೆಯ ಹಾನಿಯನ್ನು ತಡೆಗಟ್ಟಿರಿ !
ಸಪ್ತರ್ಷಿಗಳು ಆಕಾಶದಲ್ಲಿನ ನವಗ್ರಹಗಳ ಕಣ್ಣುಗಳಿಂದ ಸಿ.ಸಿ.ಟಿ.ವಿ.ಯಂತೆ ಮನುಷ್ಯರ ಕರ್ಮಗತಿಯ ಮೇಲೆ ಗಮನವನ್ನಿಡುತ್ತಾರೆ; ಆದರೆ ಮನುಷ್ಯರಿಗೆ ಅದರತ್ತ ಗಮನವಿಲ್ಲ, ಎಂದು ಮಹರ್ಷಿಗಳು ಹೇಳಿದ್ದಾರೆ. ಪ್ರತಿಕ್ಷಣ ನಾವು ಒಳ್ಳೆಯ ಕರ್ಮ ಮಾಡುತ್ತಿದ್ದೇವೆಯೇ, ಎಂಬುದರ ಬಗ್ಗೆ ಎಳ್ಳಷ್ಟೂ ಅರಿವಿಲ್ಲದ್ದರಿಂದ ಕಾರ್ಯಕರ್ತರು ಹೀಗೆ ಮಾನಸಿಕ ಸ್ತರದಲ್ಲಿ ವರ್ತಿಸುತ್ತಿದ್ದಾರೆ. ತನ್ನಲ್ಲಿನ ಹಾಗೂ ವಾತಾವರಣದಲ್ಲಿನ ರಜ-ತಮ ಹೆಚ್ಚಿಸುವ ಇಂತಹ ತಪ್ಪುಗಳನ್ನು ತಪ್ಪಿಸಲು ಕಾರ್ಯಕರ್ತರು ಭಗವಂತನು ಸತತ ನನ್ನತ್ತ ನೋಡುತ್ತಿದ್ದಾನೆ ಹಾಗೂ ನನ್ನ ಪ್ರತಿಯೊಂದು ಅಯೋಗ್ಯ ಕೃತಿಯನ್ನು, ಮಾತನ್ನು ತನ್ನಲ್ಲಿ ಬರೆದಿಟ್ಟುಕೊಳ್ಳುತ್ತಾನೆ ಹಾಗೂ ಅದರಿಂದ ನನ್ನ ಪಾಪ ಹೆಚ್ಚಾಗುತ್ತಿದೆ, ಎಂಬ ಅರಿವನ್ನಿಟ್ಟುಕೊಂಡು ಪ್ರಯತ್ನಿಸಬೇಕು. ಆಗ ಅವರಿಂದ ದೇವರಿಗೆ ಇಷ್ಟವಾಗುವ ಕೃತಿ ಹಾಗೂ ಮಾತುಗಳು ಹೊರ ಬರುವವು !
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ. (೨೬.೭.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಉಚ್ಚ ಆಧ್ಯಾತ್ಮಿಕ ಮಟ್ಟವಿರುವ ವಿವಿಧ ಶಬ್ದಗಳ ಮಹತ್ವವನ್ನು ಗುರುತಿಸಿ ಅವುಗಳನ್ನು ಅಯೋಗ್ಯ ಕಡೆಗಳಲ್ಲಿ ಉಪಯೋಗಿಸದೆ ಆ ಶಬ್ದಗಳನ್ನು ಗೌರವಿಸಿ!