ನಾಮಜಪಕ್ಕೆ ಕುಳಿತುಕೊಳ್ಳುವ ಮೊದಲು ಆ ಸ್ಥಳವನ್ನು ಅಥವಾ ಸತ್ಸಂಗದ ಸ್ಥಳವನ್ನು ಶುದ್ಧಿಗೊಳಿಸಿರಿ !

ಪೂ. ಡಾ. ಮುಕುಲ ಗಾಡಗೀಳ
ಕೆಲವು ಸಾಧಕರಿಗೆ ಕುಳಿತುಕೊಂಡು ಏಕಾಗ್ರತೆಯಿಂದ ನಾಮಜಪ ಮಾಡಲು ಸಾಧ್ಯವಾಗುವುದಿಲ್ಲ, ಮತ್ತು ಕೆಲವು ಸಲ ಸಾಧಕರಿಗೆ ಹೊಸ ಸ್ಥಳದಲ್ಲಿ ಸತ್ಸಂಗವನ್ನು ತೆಗೆದುಕೊಳ್ಳುವಾಗ ಒತ್ತಡದ ಅರಿವಾಗುತ್ತದೆ. ಸಾಧನೆಗೆ ಅಥವಾ ಸತ್ಸಂಗಕ್ಕೆ ಕುಳಿತುಕೊಳ್ಳುವ ಮೊದಲು ಆ ವಾಸ್ತುವನ್ನು ಶುದ್ಧಿ ಗೊಳಿಸಬೇಕು.
. ವಾಸ್ತುವಿನ ಶುದ್ಧಿಯನ್ನು ಏಕೆ ಮಾಡಬೇಕು ?
. ವಾಸ್ತುವಿನ ರಚನೆ ವಾಸ್ತುಶಾಸ್ತ್ರಕ್ಕನುಸಾರ ಇಲ್ಲದಿದ್ದರೆ ಆ ವಾಸ್ತುವಿನಲ್ಲಿ ದೋಷವಿರುತ್ತದೆ. ಸ್ಥಳದ ಅಭಾವದಿಂದ ಅಥವಾ ಇತರ ಕಾರಣಗಳಿಂದಾಗಿ ವಾಸ್ತುಶಾಸ್ತ್ರಕ್ಕನುಸಾರ ವಾಸ್ತು ನಿರ್ಮಿಸಲು ಮಿತಿಯುಂಟಾಗುತ್ತದೆ. ಆ ಕಾರಣಗಳಿಂದಲೂ ವಾಸ್ತುದೋಷ ನಿರ್ಮಾಣವಾಗುತ್ತದೆ.

. ವಾಸ್ತುವಿನಲ್ಲಿ ವಾಸಿಸುವ ವ್ಯಕ್ತಿಯ ಸ್ಪಂದನಗಳು ಆ ವಾಸ್ತುವಿನಲ್ಲಿರುತ್ತವೆ. ವಾಸ್ತುವಿನಲ್ಲಿ ವಾಸಿಸುವವರಲ್ಲಿ ಅನೇಕ ಸ್ವಭಾವದೋಷಗಳಿರುತ್ತವೆ. ಆ ಕಾರಣದಿಂದಲೂ ವಾಸ್ತು ಅಶುದ್ಧ ಅಥವಾ ದೂಷಿತಗೊಳ್ಳುತ್ತದೆ.
. ವಾಸ್ತು ಅಸ್ವಚ್ಛವಾಗಿರುವುದು, ವಾಸ್ತುವಿನಲ್ಲಿ ಟಿ.ವಿ, ರೇಡಿಯೋ ದೊಡ್ಡ ಧ್ವನಿಯಲ್ಲಿ ಹಾಕುವುದರಿಂದಲೂ ವಾಸ್ತುವಿನಲ್ಲಿ ತೊಂದರೆದಾಯಕ ಸ್ಪಂದನಗಳು ನಿರ್ಮಾಣಗೊಳ್ಳುತ್ತವೆ.
ಇಂತಹ ದೋಷಯುಕ್ತ ವಾಸ್ತುವಿನಲ್ಲಿ ಒತ್ತಡವು ಹೆಚ್ಚಾಗಿ, ಅದು ಅಲ್ಲಿ ವಾಸಿಸುವ ವ್ಯಕ್ತಿಯ ಶಾರೀರಿಕ, ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹಾಗೂ ಅವನಿಗೆ ಆಧ್ಯಾತ್ಮಿಕ ತೊಂದರೆಗಳೂ ಹೆಚ್ಚಾಗುತ್ತವೆ. ಆದುದರಿಂದ ವಾಸ್ತುವನ್ನು ನಿಯಮಿತವಾಗಿ ಶುದ್ಧಿಗೊಳಿಸಬೇಕಾಗುತ್ತದೆ.
. ವಾಸ್ತುಶುದ್ಧಿಯನ್ನು ಹೇಗೆ ಮಾಡಬೇಕು ?
ವಾಸ್ತುಶುದ್ಧಿ ಮಾಡುವ ಮೊದಲು, ‘ಹೇ ದೇವತೇ, ನಿನ್ನ ಕೃಪೆಯಿಂದ ನನ್ನ ಸುತ್ತಲೂ (ತಮ್ಮ ಹೆಸರನ್ನು ಉಚ್ಛರಿಸಬೇಕು) ರಕ್ಷಣಾ-ಕವಚವು ನಿರ್ಮಾಣವಾಗಲಿ ಮತ್ತು ಈ ವಾಸ್ತುವಿನಲ್ಲಿರುವ ಕೆಟ್ಟ ಸ್ಪಂದನಗಳು ನಷ್ಟವಾಗಲಿ’ ಎಂದು ಪ್ರಾರ್ಥನೆಯನ್ನು ಮಾಡಬೇಕು.
. ವಾಸ್ತುವಿನಲ್ಲಿ ವಿಭೂತಿಯನ್ನು ಊದಬೇಕು.
. ವಾಸ್ತುವಿನಲ್ಲಿ ಧೂಪ ಅಥವಾ ಸಾತ್ತ್ವಿಕ ಊದುಬತ್ತಿಯನ್ನು ಹಚ್ಚಬೇಕು ಅಥವಾ ಕಹಿಬೇವಿನ ಎಲೆಗಳ ಹೊಗೆ ತೋರಿಸಬೇಕು.
. ವಾಸ್ತುವಿನಲ್ಲಿ ಗೊಮೂತ್ರ ಸಿಂಪಡಿಸಬೇಕು. ಗೋಮೂತ್ರ ದೊರೆಯದಿದ್ದರೆ ನೀರಿಗೆ ಊದುಬತ್ತಿಯ ವಿಭೂತಿಯನ್ನು ಹಾಕಿ ಆ ನೀರನ್ನು ಸಿಂಪಡಿಸಬೇಕು. ಗೋಮೂತ್ರ ಅಥವಾ ವಿಭೂತಿಯ ನೀರು ಸಿಂಪಡಿಸುವಾಗ ಅದನ್ನು ಪ್ರದಕ್ಷಿಣೆಯ ವಿರುದ್ಧ ದಿಕ್ಕಿನಲ್ಲಿ ಸಿಂಪಡಿಸಬೇಕು.
. ಸನಾತನ ಸಂಸ್ಥೆಯ ಪ್ರೇರಣಾಸ್ಥಾನ ಪ.ಪೂ. ಭಕ್ತರಾಜ ಮಹಾರಾಜರು ಹಾಡಿರುವ ಭಜನೆಗಳು ಅಥವಾ ಅದು ದೊರೆಯದೇ ಇದ್ದಲ್ಲಿ ಇತರ ಸಂತರು ಹಾಡಿರುವ ಭಜನೆಗಳನ್ನು ಹಾಕಬೇಕು.
. ವಾಸ್ತುವಿನಲ್ಲಿ ಶಾಸ್ತ್ರಶುದ್ಧ ಪದ್ಧತಿಯಿಂದ ಹೇಳಿದ ನಾಮಜಪವನ್ನು ಹಾಕಿಡಬೇಕು.
. ವಾಸ್ತುವಿನ ನಾಲ್ಕು ಮೂಲೆಗಳಲ್ಲಿ ಖಾಲಿ ಪೆಟ್ಟಿಗೆಗಳನ್ನು ಇಡಬೇಕು. ಪೆಟ್ಟಿಗೆಗಳ ಟೊಳ್ಳು ಭಾಗವನ್ನು ಗೋಡೆಗೆ ಮುಖ ಮಾಡಿಡದೇ ಮನೆಯೊಳಗೆ ಮುಖ ಮಾಡಿಡಬೇಕು.
. ಮನೆಯಲ್ಲಿ ವಾಸ್ತುಶಾಸ್ತ್ರಕ್ಕನುಸಾರ ನಾಮಜಪದ ಪಟ್ಟಿಗಳನ್ನು ಹಚ್ಚಬೇಕು.
. ವಾಸ್ತುಶುದ್ಧಿಯ ಪರಿಣಾಮ
ಈ ರೀತಿ ನಿಯಮಿತ ವಾಸ್ತುಶುದ್ಧಿ ಮಾಡುವುದರಿಂದ ವಾಸ್ತುವಿನಲ್ಲಿರುವ ತೊಂದರೆದಾಯಕ ಸ್ಪಂದನಗಳು ದೂರವಾಗಿ ಒಳ್ಳೆಯ ಸ್ಪಂದನಗಳು ನಿರ್ಮಾಣವಾಗುತ್ತವೆ. ಇಂತಹ ವಾಸ್ತುವಿನಲ್ಲಿ ಸಾಧಕರ ನಾಮಜಪ, ಪ್ರಾರ್ಥನೆಯು ಒಳ್ಳೆಯ ರೀತಿಯಲ್ಲಿ ಆಗುತ್ತದೆ.
ಈ ರೀತಿಯಾಗಿ ವಾಸ್ತುವಿನ ಶುದ್ಧಿ ಮಾಡಿದ ನಂತರವೂ ಸತ್ಸಂಗದಲ್ಲಿ ಅಥವಾ ನಾಮಜಪಕ್ಕೆ ಕುಳಿತಾಗ ಒತ್ತಡದ ಅರಿವಾದರೆ ಪ್ರಾರ್ಥನೆಯನ್ನು ಮಾಡಿ ಉದುಬತ್ತಿಯನ್ನು ಹಚ್ಚಬೇಕು. ಇದರಿಂದ ವಾತಾವರಣದಲ್ಲಿರುವ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ.
- (ಪೂ.) ಡಾ. ಮುಕುಲ ಗಾಡಗೀಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೧೩..೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ನಾಮಜಪಕ್ಕೆ ಕುಳಿತುಕೊಳ್ಳುವ ಮೊದಲು ಆ ಸ್ಥಳವನ್ನು ಅಥವಾ ಸತ್ಸಂಗದ ಸ್ಥಳವನ್ನು ಶುದ್ಧಿಗೊಳಿಸಿರಿ !