ಹರಿಯಾಣಾ ಜಿಲ್ಲೆಯ ಕಾಲ್ಕಾದಲ್ಲಿರುವ ಭೃಗು ಸಂಹಿತೆವಾಚಕರಾದ ಶ್ರೀ. ಅಮರದಾಸಜಿ ಮಹಾರಾಜರ ಆಜ್ಞೆಯಂತೆ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ನಾಲ್ಕು ಧ್ವಜಗಳ ಸ್ಥಾಪನೆ !

ಧ್ವಜಗಳ ಪೂಜೆ ಮಾಡುತ್ತಿರುವ
ಸಾಧಕ- ಪುರೋಹಿತ ಪಾಠಶಾಲೆಯ  ಪುರೋಹಿತರು
ರಾಮನಾಥಿ : ಶ್ರೀ ಚತುರ್ಭುಜ ಬಾಲಾಜಿ ಹನುಮಾನ ದೇವಸ್ಥಾನ, ತ್ರಿಮೂರ್ತಿಧಾಮ, ಕಾಲ್ಕಾ, ಹರಿಯಾಣದ ಭೃಗು ಸಂಹಿತೆ ವಾಚಕರಾದ ಶ್ರೀ. ಅಮರದಾಸಜಿ ಮಹಾರಾಜರ ಆಜ್ಞೆಯಂತೆ ಗೋವಾದ ರಾಮನಾಥಿಯಲ್ಲಿರುವ ಸನಾತನದ ಆಶ್ರಮದಲ್ಲಿ ೪ ವೈಶಿಷ್ಟ್ಯಪೂರ್ಣ ಧ್ವಜಗಳನ್ನು ಇತ್ತೀಚೆಗೆ ಸ್ಥಾಪಿಸಲಾಯಿತು. ಇದರಿಂದ ಅನೇಕ ಜನರು ಸಂಸ್ಥೆಯೊಂದಿಗೆ ಜೋಡಿಸಲ್ಪಡುವರು ಅಲ್ಲದೇ, ಮಹರ್ಷಿಗಳ ಕೃಪಾದೃಷ್ಟಿ ಇರುವುದು ಮತ್ತು ಸಂಕಷ್ಟಗಳ ನಿವಾರಣೆಯಾಗುವುದೆಂದು, ಸಂಹಿತೆಯ ಮೂಲಕ ಭೃಗುಮಹರ್ಷಿ ಗಳು ತಿಳಿಸಿದ್ದಾರೆ.

ಧ್ವಜಗಳ ಸ್ಥಾನ
ಆಶ್ರಮದ ಪ್ರವೇಶದ್ವಾರದ ಒಂದು ಬದಿಯಲ್ಲಿ ಆನೆಯ ಚಿತ್ರ ವಿರುವ ಗಜಧ್ವಜ ಮತ್ತು ಇನ್ನೊಂದು ಬದಿಯಲ್ಲಿ ಸಿಂಹದ ಚಿತ್ರವಿರುವ ಶಾರ್ದೂಲಧ್ವಜ, ಹಾಗೆಯೇ ಆಶ್ರಮದ ಕಟ್ಟಡದ ಮೇಲೆ ಹನುಮಂತನ ಚಿತ್ರವಿರುವ ಹನುಮಾನ ಧ್ವಜ ಹಾಗೂ ಎಲ್ಲಕ್ಕಿಂತ ಮೇಲೆ ಮಧ್ಯಭಾಗದಲ್ಲಿ ವೃಷಭ (ಎತ್ತಿನ) ಚಿಹ್ನೆಯಿರುವ ವೃಷಭಧ್ವಜಗಳನ್ನು ಸ್ಥಾಪಿಸಲಾಯಿತು.
ಸೆಪ್ಟೆಂಬರ್ ೧೬ ರಂದು ಸನಾತನದ ಸಾಧಕ-ಪುರೋಹಿತ ಪಾಠಶಾಲೆಯ ಪುರೋಹಿತರು ಈ ಧ್ವಜಗಳನ್ನು ವಿಧಿಯುಕ್ತವಾಗಿ ಪೂಜಿಸಿದ ಬಳಿಕ ಧ್ವಜಗಳನ್ನು ಸ್ಥಾಪಿಸಲಾಯಿತು. ಈ ಸಮಯದಲ್ಲಿ ಸದ್ಗುರು (ಸೌ.) ಬಿಂದಾ ಸಿಂಗಬಾಳರವರ ವಂದನೀಯ ಉಪಸ್ಥಿತಿ ಲಭಿಸಿತು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಹರಿಯಾಣಾ ಜಿಲ್ಲೆಯ ಕಾಲ್ಕಾದಲ್ಲಿರುವ ಭೃಗು ಸಂಹಿತೆವಾಚಕರಾದ ಶ್ರೀ. ಅಮರದಾಸಜಿ ಮಹಾರಾಜರ ಆಜ್ಞೆಯಂತೆ ಗೋವಾದ ರಾಮನಾಥಿಯಲ್ಲಿನ ಸನಾತನ ಆಶ್ರಮದಲ್ಲಿ ನಾಲ್ಕು ಧ್ವಜಗಳ ಸ್ಥಾಪನೆ !