ಸಾಧಕರೇ, ಸಾಧನೆಯಲ್ಲಿ ಸಾತತ್ಯವು ಇರುವುದಿಲ್ಲವೆಂದು, ಚಿಂತಿಸಬೇಡಿ !

ಕೆಲವು ಸಾಧಕರಿಗೆ ಸ್ವಭಾವದೋಷ ಮತ್ತು ಅಹಂ  ನಿರ್ಮೂಲನೆಯ ಪ್ರಕ್ರಿಯೆಯಲ್ಲಿ ಸಾತತ್ಯ ಇರುವುದಿಲ್ಲವೆಂದು ನಿರಾಶೆಯಾಗುತ್ತದೆ. ಸಾಧನೆಯನ್ನು ಹೆಚ್ಚಿಸುವ ಮಹತ್ವವು ತಿಳಿದಿದ್ದರೂ ಅವರಿಂದ ಪ್ರಯತ್ನಗಳಾಗದಿರುವುದರಿಂದ ಅವರ ಸ್ಥಿತಿ; ಕಣ್ಣಿದ್ದು ಕುರುಡನಂತಾಗುತ್ತದೆ. ಆದುದರಿಂದ ಅವರಿಗೆ ತಮ್ಮ ಆಧ್ಯಾತ್ಮಿಕ ಸಾಧನೆಯ ಬಗ್ಗೆ ಚಿಂತೆಯಾಗುತ್ತದೆ.
ಸಾಧನೆಯಲ್ಲಿ ಪ್ರಗತಿಯಾಗುತ್ತ್ತಾ ಹೋದಂತೆ, ಸ್ಥಿರತೆ ಬರತೊಡಗುತ್ತದೆ. ಸಾಧಕನು ಸಾಧನೆಯಲ್ಲಿ ಸ್ಥಿರವಾದರೆ, ಅವನ ಪ್ರಯತ್ನದಲ್ಲಿ ತನ್ನಿಂದತಾನೇ ಸಾತತ್ಯ ಬರುತ್ತದೆ. ಶೇ. ೬೦ ಮಟ್ಟ ತಲುಪುವ ವರೆಗೆ ಮಾಯೆಯ ಸೆಳೆತವು ಅಧಿಕವಿರುವುದರಿಂದ ಈ ಪ್ರಯತ್ನವನ್ನು ಶ್ರಮಪಟ್ಟು ಮಾಡಬೇಕಾಗುತ್ತದೆ. ಆದುದರಿಂದ ಸಾಧಕರು ನಿರಾಶೆಗೊಳಗಾಗದೇ ಸದ್ಯ ಮಾಡುತ್ತಿರುವ ಸಾಧನೆಯ ಪ್ರಯತ್ನವು ಕಡಿಮೆ ಯಾಗದಂತೆ ನೋಡಿಕೊಳ್ಳಬೇಕು ಮತ್ತು ಅದನ್ನು ಪ್ರತಿದಿನ ಹೆಚ್ಚಿಸುತ್ತ್ತಾ ಹೋಗುವುದು ಅಪೇಕ್ಷಿತವಿದೆ !
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫. .೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರೇ, ಸಾಧನೆಯಲ್ಲಿ ಸಾತತ್ಯವು ಇರುವುದಿಲ್ಲವೆಂದು, ಚಿಂತಿಸಬೇಡಿ !