ಬ್ರಾಹ್ಮತೇಜವನ್ನು ಪ್ರದಾನಿಸುವ ಸೇವೆಯಲ್ಲಿ ಪಾಲ್ಗೊಳ್ಳಲು ಎಲ್ಲೆಡೆಯ ಪುರೋಹಿತರಿಗೆ ಸುವರ್ಣಾವಕಾಶ !


ಸೂಕ್ತ ದಕ್ಷಿಣೆ ಪಡೆದು ಅಥವಾ ದಕ್ಷಿಣೆ ಪಡೆಯದೆ ಶಾಸ್ತ್ರೋಕ್ತ ಪದ್ಧತಿಯಲ್ಲಿ ಧಾರ್ಮಿಕ
ವಿಧಿಗಳನ್ನು ಮಾಡಲು ಇಚ್ಛಿಸುವ ಪುರೋಹಿತರು ಪೌರೋಹಿತ್ಯದ ಸೇವೆಯಲ್ಲಿ ಪಾಲ್ಗೊಳ್ಳಬಹುದು !
೧. ಯಜ್ಞವು ಒಂದು ವರದಾನವೇ ಆಗಿದೆ !
ಶ್ರೀಮದ್ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಯಜ್ಞಕ್ಕೆ ‘ಕಾಮಧೇನು’ ಎಂದು ಹೇಳಿದ್ದಾನೆ. ಪುರೋಹಿತರು ಏಕಾಗ್ರತೆಯಿಂದ ಮಾಡಿದ ಶಾಸ್ತ್ರೋಕ್ತವಾದ ಮಂತ್ರಪಠಣದಿಂದ ವಾಯುಮಂಡಲದ ಶುದ್ಧೀಕರಣವಂತೂ ಆಗುತ್ತದೆ; ಅದರೊಂದಿಗೆ ವ್ಯಕ್ತಿ, ಸಮಾಜ ಮತ್ತು ರಾಷ್ಟ್ರ ಇವೆಲ್ಲದಕ್ಕೂ ಆ ಮಂತ್ರಶಕ್ತಿಯ ಲಾಭವಾಗುತ್ತದೆ. ಕ್ಷಾಮವನ್ನುಂಟು ಮಾಡುವ ನೈಸರ್ಗಿಕ ಪ್ರಕೋಪಗಳನ್ನು ತಡೆದು ಪರ್ಜನ್ಯವೃಷ್ಟಿ ಮಾಡುವ ಸಾಮರ್ಥ್ಯ ಯಜ್ಞಯಾಗಗಳಲ್ಲಿದೆ. ಯಜ್ಞವು ಭಾರತೀಯ ಸಂಸ್ಕೃತಿಗೆ ಲಭಿಸಿದ ಬಹುದೊಡ್ಡ ವರದಾನವಾಗಿದೆ.

೨. ‘ಸನಾತನ ಸಾಧಕ-ಪುರೋಹಿತ ಪಾಠಶಾಲೆ’ ಸ್ಥಾಪನೆಯ ವ್ಯಾಪಕ ಉದ್ದೇಶ !
ಯಜ್ಞಸಾಧನೆಯ ಅಸಾಧಾರಣ ಮಹತ್ವವನ್ನು ಗಮನದಲ್ಲಿಟ್ಟು ಸನಾತನ ಸಂಸ್ಥೆಯು ೨೦೦೯ ರಲ್ಲಿ ‘ಸನಾತನ ಸಾಧಕ-ಪುರೋಹಿತ ಪಾಠಶಾಲೆ’ಯನ್ನು ಸ್ಥಾಪಿಸಿತು. ವಿವಿಧ ವಿಧಿಗಳ ಮೂಲಕ ಸಮಾಜವನ್ನು ಸಾಧನೆಯ ಕಡೆಗೆ ಹೊರಳಿಸುವುದು ಹಾಗೂ ಆದರ್ಶ ಹಾಗೂ ಸಾತ್ತ್ವಿಕ ಪುರೋಹಿರನ್ನು ನಿರ್ಮಿಸಿ ಅವರನ್ನು ಸಂತತ್ವದ ಕಡೆಗೆ ಒಯ್ಯುವುದೇ ಇದರ ಸ್ಥಾಪನೆಯ ಹಿಂದಿನ ಉದ್ದೇಶವಾಗಿತ್ತು.
೩. ಮಹರ್ಷಿಗಳು ಮತ್ತು ಸಂತರ ಮಾರ್ಗದರ್ಶನಕ್ಕನುಸಾರ ಜಪ, ಅನುಷ್ಠಾನ ಮತ್ತು ಧಾರ್ಮಿಕ ವಿಧಿಗಳನ್ನು ಸೇವಾಭಾವದಿಂದ ಹಾಗೂ ಉಚಿತವಾಗಿ ಮಾಡುವ ಸಾಧಕ-ಪುರೋಹಿತರು !
ಸನಾತನದ ವೇದಪಾಠಶಾಲೆಯಲ್ಲಿ ಸಾಧಕ-ಪುರೋಹಿತರಿಗೆ ಶುದ್ಧ ಹಾಗೂ ಸ್ಪಷ್ಟ ಮಂತ್ರೋಚ್ಚಾರಣೆ ಮಾಡಲು ಕಲಿಸಲಾಗುತ್ತದೆ. ಅದರಿಂದ ಅವರ ವಾಣಿಯಲ್ಲಿ ಚೈತನ್ಯ ಮತ್ತು ಮಂತ್ರದಲ್ಲಿ ಸಾಮರ್ಥ್ಯ ನಿರ್ಮಾಣವಾಗಿದೆ. ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿನ ಅಡಚಣೆಗಳು ದೂರವಾಗಬೇಕೆಂದು ಸಂತರ ಮಾರ್ಗದರ್ಶನಕ್ಕನುಸಾರ ಎಲ್ಲ ಸಾಧಕ-ಪುರೋಹಿತರು ಪ್ರತಿದಿನ ಜಪ-ಅನುಷ್ಠಾನಗಳನ್ನು ಮಾಡುತ್ತಿದ್ದಾರೆ. ವಿವಿಧ ನಾಡಿಪಟ್ಟಿಗಳ ಮೂಲಕ ಮಹರ್ಷಿಗಳು ಮಾಡುತ್ತಿರುವ ಆದೇಶಕ್ಕನುಸಾರ ಅವರು ಬ್ರಹ್ಮಾಸ್ತ್ರಯಾಗ, ರುದ್ರಯಾಗ, ಸುದರ್ಶನಯಾಗ ಇತ್ಯಾದಿ ಧಾರ್ಮಿಕ ವಿಧಿಗಳನ್ನು ಮಾಡಿದ್ದಾರೆ, ಇನ್ನೂ ಮಾಡುತ್ತಿದ್ದಾರೆ. ಸನಾತನ ಸಂಸ್ಥೆಯ ಮಾರ್ಗದರ್ಶನಕ್ಕನುಸಾರ ಪೂರ್ಣವೇಳೆ ಸಾಧನೆ ಮಾಡುವ ಸಾಧಕರಿಗಾಗಿ ಅವರು ಶಾಂತಿವಿಧಿ, ಉಪನಯನಾದಿ ಸಂಸ್ಕಾರಗಳನ್ನು ಉಚಿತವಾಗಿ ಮಾಡುತ್ತಿದ್ದಾರೆ.
೪. ಯೋಗ್ಯ ದಕ್ಷಿಣೆ ಪಡೆದು ಅಥವಾ ದಕ್ಷಿಣೆ ಪಡೆಯದೆ ಧಾರ್ಮಿಕ ವಿಧಿಗಳನ್ನು ಮಾಡಿ ಪೌರೋಹಿತ್ಯದ ಸೇವೆಯಲ್ಲಿ ಭಾಗವಹಿಸಬೇಕೆಂದು ವೇದಶಾಸ್ತ್ರಸಂಪನ್ನ ಪುರೋಹಿತರಿಗೆ ವಿನಂತಿ !
ಬಹಳಷ್ಟು ಪುರೋಹಿತರು ಪೌರೋಹಿತ್ಯವನ್ನು ಮಾಡಿ ಧರ್ಮಕಾರ್ಯ ದಲ್ಲಿ ಅಳಿಲು ಸೇವೆ ಮಾಡುತ್ತಲೇ ಇದ್ದಾರೆ. ಸಾಧನೆಯೆಂದು ಪೌರೋಹಿತ್ಯ ಮತ್ತು ವೇದಗಳ ಪಠಣ ಮಾಡುವ ಪೀಳಿಗೆಯನ್ನು ನಿರ್ಮಿಸುವ ಉದ್ದೇಶದಿಂದ ಕಾರ್ಯನಿರತವಾಗಿರುವ ವೇದಪಾಠಶಾಲೆಗೆ ಸಹಾಯ ಮಾಡುವ ಅವಕಾಶ ಅವರ ಮುಂದಿದೆ. ಮಹರ್ಷಿಗಳು ಮತ್ತು ಸಂತರು ವಿವಿಧ ಪ್ರಕಾರದ ಧಾರ್ಮಿಕ ವಿಧಿ, ಜಪ-ಅನುಷ್ಠಾನಗಳನ್ನು ಮಾಡಲು ಹೇಳುತ್ತಿದ್ದು ಅದಕ್ಕಾಗಿ ಸಾಧಕ-ಪುರೋಹಿತರ ಸಂಖ್ಯೆ ಕಡಿಮೆಯಾಗುತ್ತಿದೆ.
ಪೌರೋಹಿತ್ಯ ಮಾಡುವ ವಾಚಕರು, ಹಿತಚಿಂತಕರು ಮತ್ತು ಧರ್ಮ ಪ್ರೇಮಿಗಳು ಸೂಕ್ತ ದಕ್ಷಿಣೆ ಪಡೆದು ಅಥವಾ ದಕ್ಷಿಣೆ ಪಡೆಯದೆ ಶಾಸ್ತ್ರೋಕ್ತ ವಾಗಿ ಧಾರ್ಮಿಕ ವಿಧಿ ಮಾಡಲು ಇಚ್ಛಿಸುವವರು ವೇದಮೂರ್ತಿ ಕೇತನ್ ಶಹಾಣೆರನ್ನು ketan.shahane@gmail.com ಈ ವಿಳಾಸದಲ್ಲಿ ಅಥವಾ
೯೪೦೩೬೮೭೨೭೭ ಈ ಕ್ರಮಾಂಕದಲ್ಲಿ ಮಾಹಿತಿ ನೀಡಬಹುದು. ಮನೆ ಯಲ್ಲಿದ್ದು ವಿಧಿ ಮಾಡಲಿಚ್ಛಿಸುವವರು ಹಾಗೆ ತಿಳಿಸಬೇಕು.’ - (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ ಗೋವಾ.

ಅಧ್ಯಾತ್ಮ ವಿಶ್ವವಿದ್ಯಾಲಯದಲ್ಲಿ ‘ವೇದವಿದ್ಯೆ’ ಕಲಿಸುವ ವೇದಪಾಠಶಾಲೆಗೆ ಮಹತ್ವಪೂರ್ಣ ಭೂಮಿಕೆ ಇರುವುದು !
ಭವಿಷ್ಯದಲ್ಲಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಮೂಲಕ ಸಂಪೂರ್ಣ ವಿಶ್ವದ ಜಿಜ್ಞಾಸುಗಳಿಗೆ ಆಧಾರಸ್ತಂಭವಾಗಿರುವ ಈ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗೆ ೧೪ ವಿದ್ಯೆ ಮತ್ತು ೬೪ ಕಲೆಗಳ ಶಿಕ್ಷಣ ನೀಡಲಾಗುವುದು. ೧೪ ವಿದ್ಯೆಗಳಲ್ಲಿ ಎಲ್ಲಕ್ಕಿಂತ ಮಹತ್ವದ್ದಾಗಿರುವ ‘ವೇದವಿದ್ಯೆ’ಯ ಅಧ್ಯಾಪನ ಮಾಡಿ ಆದರ್ಶ ಹಾಗೂ ಸಾತ್ತ್ವಿಕ ಪುರೋಹಿತರನ್ನು ನಿರ್ಮಿಸಲು ಯತ್ನಿಸಲಾಗುವುದು. ಅದರಿಂದ ವೇದಸಂಪನ್ನರಾದ ಪುರೋಹಿತರು ಯಜ್ಞಯಾಗಗಳಿಗಾಗಿ ಸಂಪೂರ್ಣ ವಿಶ್ವದಲ್ಲಿ ಸಂಚರಿಸುವರು ಹಾಗೂ ಮಹಾನ್ ಭಾರತೀಯ ಸಂಸ್ಕೃತಿಯನ್ನು ಅಭಿಮಾನದಿಂದ ಪ್ರಸಾರ ಮಾಡುವರು !
ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲಿ ಮಹತ್ವಪೂರ್ಣ ಭೂಮಿಕೆ ಇರುವ ವೇದಪಾಠಶಾಲೆಯು ವಿಶ್ವವಿದ್ಯಾಲಯದ ಅಂಶಾತ್ಮಕ ರೂಪವೇ ಆಗಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬ್ರಾಹ್ಮತೇಜವನ್ನು ಪ್ರದಾನಿಸುವ ಸೇವೆಯಲ್ಲಿ ಪಾಲ್ಗೊಳ್ಳಲು ಎಲ್ಲೆಡೆಯ ಪುರೋಹಿತರಿಗೆ ಸುವರ್ಣಾವಕಾಶ !