ಗಣೇಶೋತ್ಸವದಂದೇ ಎಸ್‌ಐಟಿಯಿಂದ ಸನಾತನದ ದೇವದ್ ಆಶ್ರಮಕ್ಕೆ ಬಂದು ತಪಾಸಣೆ

ಮುಂಬಯಿಯ ರಝಾ ಅಕಾಡೆಮಿಯು ಆಝಾದ್ ಮೈದಾನದಲ್ಲಿ
ಗಲಭೆ ನಡೆಸಿದ ಪ್ರಕರಣದಲ್ಲಿ ಮತಾಂಧರ ವಿರುದ್ಧ ರಂಝಾನ್ ಹಬ್ಬದ
ಸಮಯದಲ್ಲಿ ಕ್ರಮತೆಗೆದುಕೊಳ್ಳಲು ಹಿಂಜರಿಯುವ ಪೊಲೀಸರು ನಿರಪರಾಧಿ
ಹಿಂದುತ್ವನಿಷ್ಠರ ವಿರುದ್ಧ ಮಾತ್ರ ಅವರ ಹಬ್ಬದ ಸಮಯದಲ್ಲಿಯೇ ಕ್ರಮತೆಗೆದುಕೊಳ್ಳುತ್ತಾರೆ !
ದೇವದ್ (ಪನವೇಲ್) : ಕಾ. ಪಾನ್ಸರೆ ಹತ್ಯೆ ಪ್ರಕರಣದ ತನಿಖೆ ಮಾಡುವ ವಿಶೇಷ ತನಿಖಾ ದಳದವರು (‘ಎಸ್‌ಐಟಿ’) ಸೆಪ್ಟೆಂಬರ್ ೫ ರಂದು ಇಲ್ಲಿನ ಸನಾತನದ ಆಶ್ರಮಕ್ಕೆ ಬಂದು ತನಿಖೆ ಮಾಡಿದರು. ಈ ಸಮಯದಲ್ಲಿ ಅವರೊಂದಿಗೆ ಕೊಲ್ಹಾಪುರದ ಸ್ಥಳೀಯ ಪೊಲೀಸರು ಮತ್ತು ಪನವೇಲ್‌ನ ಸ್ಥಳೀಯ ಪೊಲೀಸರಿದ್ದರು. ೩-೪ ವಾಹನಗಳಲ್ಲಿ ೪೦ ರಿಂದ ೫೦ ಪೊಲೀಸರು ಬಂದಿದ್ದರು. ಈ ಸಮಯದಲ್ಲಿ ಅವರು ಆಶ್ರಮದಲ್ಲಿ ಸುತ್ತಾಡಿ ಎಲ್ಲ ವಿಭಾಗಗಳನ್ನು ವೀಕ್ಷಿಸಿ ಚಿತ್ರೀಕರಣ ಮಾಡಿದರು ಹಾಗೂ ಛಾಯಾಚಿತ್ರ ಗಳನ್ನೂ ತೆಗೆದರು.
ಈ ಸಂದರ್ಭದಲ್ಲಿ ಅವರು ಡಾ. ತಾವಡೆ ಯವರನ್ನೂ ಜೊತೆಗೆ ಕರೆದುಕೊಂಡು ಬಂದಿದ್ದರು. ಪೊಲೀಸರು ಆಶ್ರಮದ ವೈದ್ಯಕೀಯ ವಿಭಾಗ ಮತ್ತು ವಾಹನ ವಿಭಾಗದ ತಪಾಸಣೆ ಮಾಡಿ ದರು. ಒಬ್ಬ ಸಾಧಕನ ವಿಚಾರಣೆ ಸಹ ಮಾಡಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಗಣೇಶೋತ್ಸವದಂದೇ ಎಸ್‌ಐಟಿಯಿಂದ ಸನಾತನದ ದೇವದ್ ಆಶ್ರಮಕ್ಕೆ ಬಂದು ತಪಾಸಣೆ