ಬಂಗಾಲದ ಮದರಸಾದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ !

ಇಂಟರ್‌ನೆಟ್ ಮೂಲಕ ಹೇಗೆ ಮಾಹಿತಿ ಪಡೆಯುವುದು,
ಎಂಬ ವಿಷಯದಲ್ಲಿ ಶಿಕ್ಷಣ ನೀಡುತ್ತಿರುವುದರ ಪರಿಣಾಮ !
ಭಾರತದಲ್ಲಿ ಮತಾಂಧ ಯುವಕರು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ಐಸಿಸ್ ಸಂಪರ್ಕದಲ್ಲಿದ್ದರು.
ಮದರಸಾದ ಈ ವಿದ್ಯಾರ್ಥಿಗಳು ಸಹ ಆಧುನಿಕ ತಂತ್ರಜ್ಞಾನವನ್ನು ಇದೇ ರೀತಿಯಲ್ಲಿ ಉಪಯೋಗಿಸಲಿಕ್ಕಿಲ್ಲವೆಂದು
ಯಾರು ಆಶ್ವಾಸನೆ ನೀಡುವರು ?, ಎಂಬ ಪ್ರಶ್ನೆ ಜನರ ಮನಸ್ಸಿನಲ್ಲಿ ಉತ್ಪನ್ನವಾದರೆ, ಅದು ಹೇಗೆ ತಪ್ಪಾಗಬಹುದು ?
ಸೀತಾಪುರ (ಬಂಗಾಲ) : ಬಂಗಾಲದ ಮದರಸಾ ಗಳು ತಂತ್ರಜ್ಞಾನವನ್ನು ಉಪಯೋಗಿಸುವ ವಿಷಯದಲ್ಲಿ ೨೦೧೪ ರಲ್ಲಿ ಅನ್ವಯಗೊಳಿಸಿದ ಶೈಕ್ಷಣಿಕ ಧೋರಣೆಯನ್ನು ಸ್ವೀಕರಿಸಿದವು. ಅನಂತರ ವಿದ್ಯಾರ್ಥಿಗಳ ಸಂಖ್ಯೆ ದುಪ್ಪಟ್ಟಾಗಿದೆ. ಹಿಂದೆ ಇದೇ ಮದರಸಾದ ಅನೇಕ ವಿದ್ಯಾರ್ಥಿಗಳು ನಡುವೆಯೇ ಶಿಕ್ಷಣ ಬಿಟ್ಟಿದ್ದರು ಅಥವಾ ಅವರು ಪುನಃ ಬರಲೇ ಇಲ್ಲ; ಆದರೆ ಈಗ ಪುಸ್ತಕದ ಜ್ಞಾನದ ಹೊರತು ಇಂಟರ್‌ನೆಟ್ ಮೂಲಕ ಹೇಗೆ ಮಾಹಿತಿ ಪಡೆಯಬಹುದು, ಎಂಬ ವಿಷಯದಲ್ಲಿ ಶಿಕ್ಷಣ ನೀಡು ತ್ತಿರುವುದರಿಂದ ವಿದ್ಯಾರ್ಥಿಗಳ ಒಲವು ಹೆಚ್ಚಾಗುತ್ತಿದೆ. ವಿದ್ಯಾರ್ಥಿಗಳು ಇಂಟರ್‌ನೆಟ್‌ನ ಮೂಲಕ ಮಾಹಿತಿ ಪಡೆಯುವುದು ಕಂಡುಬರುತ್ತಿದೆ. ಟಾಟಾ ಟ್ರಸ್ಟ್‌ನ ಅಮಿನಾ ಚರನಿಯಾ ಇವರು ಹೀಗೆಂದರು, ದೀನೀ ತಾಲೀಮ್ (ಧಾರ್ಮಿಕ) ಹಾಗೂ ದುನಿಯಾವೀ ತಾಲೀಮ್ (ಜಾಗತಿಕ ಶಿಕ್ಷಣ) ಈ ಶಿಕ್ಷಣ ಆಧುನಿಕ ತಂತ್ರಜ್ಞಾನದಿಂದ ನೀಡಲಾಗುತ್ತಿದ್ದು ಅದರಲ್ಲಿ ಈಗ ವಿದ್ಯಾರ್ಥಿಗಳಿಗೆ ಆಸಕ್ತಿ ಹೆಚ್ಚುತ್ತಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಂಗಾಲದ ಮದರಸಾದಲ್ಲಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಳ !