ಸನಾತನ ಸಂಸ್ಥೆ ಮತ್ತು ಸಾಧಕರ ವಿಚಾರಣೆಯ ವಿಷಯದಲ್ಲಿ ಅವರು ನಿರಪರಾಧಿಗಳೆಂದು ಸಿದ್ಧಗೊಳಿಸುವ ಸತ್ಯ !

೧. ಇದು ವರೆಗೆ ಎಟಿಎಸ್, ಎನ್‌ಐಎ, ಎಸ್‌ಐಟಿ ಮತ್ತು ಸಿಬಿಐ ಈ ತನಿಖಾ ವ್ಯವಸ್ಥೆಗಳಿಂದ ಸನಾತನದ ೮೦೦ ಕ್ಕೂ ಹೆಚ್ಚು ಸಾಧಕರ ವಿಚಾರಣೆ ಮಾಡಲಾಯಿತು. ಅದರಿಂದ ಯಾವುದೇ ರೀತಿಯ ನಿಷ್ಕರ್ಷ ಬರಲಿಲ್ಲ.
೨. ಗಡಕರಿ ಸ್ಫೋಟ ಪ್ರಕರಣದಲ್ಲಿ ೬ ಸಾಧಕರಲ್ಲಿ ೪ ಸಾಧಕರು ನಿರಪರಾಧಿಗಳೆಂದು ಮುಕ್ತರಾದರು ಮತ್ತು ಇಬ್ಬರು ಸಾಧಕರಿಗೆ ಜಾಮೀನು ಸಿಕ್ಕಿತು. ಈ ನ್ಯಾಯದಾನದ ಸಮಯದಲ್ಲಿ ನ್ಯಾಯಾಧೀಶರು ತಮ್ಮ ಆದೇಶದಲ್ಲಿ, ‘ಆರೋಪಿಗಳಿಗೆ ಯಾರಿಗೂ ಹತ್ಯೆಗೈಯ್ಯುವ ಉದ್ದೇಶವಿರಲಿಲ್ಲ’, ಎಂದು ಹೇಳಿದ್ದಾರೆ.
೩. ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನದ ೬ ಸಾಧಕರನ್ನು ನಿರಪರಾಧಿಗಳೆಂದು ಮುಕ್ತಗೊಳಿಸಲಾಗಿದೆ. ಆ ಸಮಯದಲ್ಲಿ ನ್ಯಾಯದಾನ ನೀಡುವಾಗ ನ್ಯಾಯಾಧೀಶರು, ‘ಈ ಪ್ರಥಮ ಮಾಹಿತಿ ವರದಿಯೇ ಸಂದೇಹದ ಸುಳಿಯಲ್ಲಿದೆ ಮತ್ತು ಸನಾತನ ಸಂಸ್ಥೆಯನ್ನು ಸಿಲುಕಿಸುವುದಕ್ಕಾಗಿಯೇ ಇದನ್ನು ತಿರುಚಲಾಗಿದೆ (ಮ್ಯಾನಿಪ್ಯುಲೇಟ್)’, ಎಂದು ಹೇಳಿದ್ದಾರೆ.
೪. ಸಮೀರ ಗಾಯಕವಾಡ್ ಇವರನ್ನು ೧೬ ಸೆಪ್ಟೆಂಬರ್ ೨೦೧೫ ರಂದು ಪಾನ್ಸರೆ ಪ್ರಕರಣದಲ್ಲಿ ಬಂಧಿಸಲಾಯಿತು. ಅವರನ್ನು ಬಂಧಿಸಿ ೮ ತಿಂಗಳಾದರೂ ಯಾವುದೇ ನಿರ್ದಿಷ್ಟವಾದ ಪುರಾವೆಗಳು ಸಿಕ್ಕಿಲ್ಲ. ‘ಕಾ. ಪಾನ್ಸರೆ ಕೊಲೆಯ ಪ್ರಕರಣದಲ್ಲಿ ನಿಜವಾದ ಕೊಲೆಗಾರ ರನ್ನು ಹುಡುಕುವುದೇ ಬೇಡವಾಗಿದೆ ಎಂದೆನಿಸುತ್ತದೆ’, ಎಂದು ಮುಂಬಯಿ ಉಚ್ಚ ನ್ಯಾಯಾಲಯವು ೮ ಅಕ್ಟೋಬರ್ ೨೦೧೫ ರಂದು ಚಾಟಿ ಬೀಸಿದೆ.


No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆ ಮತ್ತು ಸಾಧಕರ ವಿಚಾರಣೆಯ ವಿಷಯದಲ್ಲಿ ಅವರು ನಿರಪರಾಧಿಗಳೆಂದು ಸಿದ್ಧಗೊಳಿಸುವ ಸತ್ಯ !