‘ಸನಾತನ ಪ್ರಭಾತ’ದ ಸಾತಾರಾದ ವರದಿಗಾರ ಶ್ರೀ. ರಾಹುಲ ಕೊಲ್ಹಾಪುರೆಯವರಿಗೆ ಮತ್ತು ಅವರ ಕುಟುಂಬದವರಿಗೆ ಮಾನಸಿಕ ಕಿರುಕುಳ ನೀಡುವುದು !

ಶ್ರೀ. ರಾಹುಲ ಕೊಲ್ಹಾಪುರೆ
ಮಹಾರಾಷ್ಟ್ರ ಅಂಧಶ್ರದ್ಧಾ ನಿರ್ಮೂಲನ ಸಮಿತಿಯ ಕಾರ್ಯಾಧ್ಯಕ್ಷ ಡಾ. ನರೇಂದ್ರ ದಾಭೋಲಕರ ಅವರ ಹತ್ಯೆ ಪ್ರಕರಣದಲ್ಲಿ ಸಾತಾರಾದ ದೈನಿಕ ‘ಸನಾತನ ಪ್ರಭಾತ’ನ ಸುದ್ದಿಗಾರರಾದ ಶ್ರೀ. ರಾಹುಲ ಕೊಲ್ಹಾಪುರೆ ಅವರನ್ನು ಪೊಲೀಸರು ಆಗಸ್ಟ್ ೨೦ ರಿಂದ ೨೮ ಆಗಸ್ಟ್ ೨೦೧೩ ಈ ಅವಧಿಯಲ್ಲಿ ಪ್ರತಿನಿತ್ಯ ವಿಚಾರಣೆ ಮಾಡಿದರು. ಅಲ್ಲದೇ ಪೊಲೀಸರು ಶ್ರೀ. ಕೊಲ್ಹಾಪುರೆ ಯವರ ಸಹೋದರ, ಪತಿ, ತಾಯಿ-ತಂದೆಯವರನ್ನೂ ಪುನಃ ಪುನಃ ವಿಚಾರಣೆ ಮಾಡಿ ಅವರಿಗೂ ಮಾನಸಿಕ ಕಿರುಕುಳ ನೀಡಿದರು.
ಆಗಸ್ಟ್ ೨೦ ರಂದು ಬೆಳಗ್ಗೆ ೭.೩೦ ಕ್ಕೆ ಡಾ. ದಾಭೋಲಕರ್‌ರವರ ಹತ್ಯೆಯಾಯಿತು. ಅನಂತರ ಬೆಳಗ್ಗೆ ೧೧.೩೦ ಕ್ಕೆ ಪೊಲೀಸರು ಸಾತಾರಾದಲ್ಲಿ ಶ್ರೀ. ರಾಹುಲ ಕೊಲ್ಹಾಪುರೆಯವರ ಮನೆಗೆ ಬಂದರು. ಆಗ ಶ್ರೀ. ಕೊಲ್ಹಾಪುರೆಯವರು ಮನೆಯಲ್ಲಿರಲಿಲ್ಲ. ಪೊಲೀಸರು ಶ್ರೀ. ಕೊಲ್ಹಾಪುರೆಯವರ ಸಹೋದರ ನಿಂದ ಮನೆಯ ಕಾಗದಪತ್ರಗಳನ್ನು ಮತ್ತು ಸಹೋದರನ ವಾಹನ ಲೈಸನ್ಸ್ ಇವುಗಳ ಝೆರಾಕ್ಸ್ ಪ್ರತಿಗಳನ್ನು ಬಲವಂತವಾಗಿ ತೆಗೆದುಕೊಂಡರು. ಅನಂತರ ಶ್ರೀ. ಕೊಲ್ಹಾಪುರೆಯವರನ್ನು ಸಂಚಾರಿವಾಣಿಯ ಮೂಲಕ ಸಂಪರ್ಕಿಸಿದರು ಮತ್ತು ಅವರನ್ನು ಸಮೀಪದ ಒಂದು ಸ್ಥಳದಲ್ಲಿ ಭೇಟಿಯಾಗಲು ಕರೆದರು. ಶ್ರೀ. ಕೊಲ್ಹಾಪುರೆಯವರು ಅಲ್ಲಿ ಹೋದ ನಂತರ ತಮ್ಮ ವ್ಯವಸಾಯದ ಸ್ಥಳದ ಮಾಹಿತಿ, ಅವರು ಎಲ್ಲಿ ಕೆಲಸ ಮಾಡುತ್ತಾರೆ ? ಅವರ ಸಂಪತ್ತು ಎಷ್ಟಿದೆ ? ಹಿಂದೂ ಜನಜಾಗೃತಿ ಸಮಿತಿಯು ಯಾವ ಕಾರ್ಯ ಮಾಡು ತ್ತದೆ ? ಮುಂತಾದವುಗಳ ಕುರಿತು ಮಾಹಿತಿಯನ್ನು ಕೇಳಲಾಯಿತು.

ಆಗಸ್ಟ್ ೧೮ ರಂದು ಡಾ. ದಾಭೋಲಕರ ಇವರ ಒಂದು ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದ ಸ್ಥಳಕ್ಕೆ ವಾರ್ತೆಸಂಕಲನ ಮಾಡಲು ಶ್ರೀ. ಕೊಲ್ಹಾಪುರೆಯವರು ಹೋಗಿದ್ದರು. ‘ಡಾ. ದಾಭೋಲಕರರವರ ಹತ್ಯೆಗೆ ಈ ಕಾರ್ಯಕ್ರಮದ ಸಂಬಂಧವಿದೆಯೇ ?’, ಎಂದು ತನಿಖೆ ಮಾಡಲು ಪೊಲೀಸರು ಶ್ರೀ. ಕೊಲ್ಹಾಪುರೆಯವರಿಗೆ ಎಲ್ಲ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ಸಂದರ್ಭದಲ್ಲಿ ೪-೫ ಸಲ ವಿವಿಧ ರೀತಿಯ ಪ್ರಶ್ನೆಗಳನ್ನು ಕೇಳಿದರೂ ಶ್ರೀ. ಕೊಲ್ಹಾಪುರೆಯವರು ಕೊಟ್ಟ ಮಾಹಿತಿಯಿಂದ ವಿಶೇಷವೇನೂ ಸಿಗಲಿಲ್ಲವೆಂದು ಪೊಲೀಸರು ಕೊನೆಗೆ ಶಾಂತರೀತಿಯಲ್ಲಿ ಪ್ರಶ್ನೆಗಳನ್ನು ಕೇಳತೊಡಗಿದರು.
ಆಗಸ್ಟ್ ೨೦ ರಂದು ಮಧ್ಯಾಹ್ನ ವಿಚಾರಣೆ ಮುಗಿದ ನಂತರ ಶ್ರೀ. ಕೊಲ್ಹಾಪುರೆಯವರು ಮನೆಗೆ ಹೋದರು. ಅನಂತರ ಅವರು ಊಟ ಮಾಡುತ್ತಿದ್ದಾಗ ಪೊಲೀಸರು ಅವರನ್ನು ಸಂಪರ್ಕಿಸಿದರು. ಆಗ ಸಂಚಾರಿವಾಣಿಯ ‘ಬ್ಯಾಟರಿ’ ಮುಗಿದಿದ್ದರಿಂದ ಸಂಚಾರಿವಾಣಿಯು ಬಂದ್ ಆಯಿತು; ಆದರೆ ಪೊಲೀಸರಿಗೆ, ‘ಶ್ರೀ. ಕೊಲ್ಹಾಪುರೆಯವರು ಉದ್ದೇಶ ಪೂರ್ವಕವಾಗಿ ಸಂಚಾರಿವಾಣಿಯನ್ನು ಬಂದ್ ಮಾಡಿದರು ಎಂದೆನಿಸಿತು. ಇದರಿಂದಾಗಿ ಪುನಃ ಗುಪ್ತಚರ ಇಲಾಖೆಯ ೫ ಮಂದಿ ಪೊಲೀಸರು ಮನೆಗೆ ಬಂದರು ಮತ್ತು ಅವರು ಶ್ರೀ. ಕೊಲ್ಹಾಪುರೆಯವರಿಗೆ ಬೆಳಗ್ಗೆ ಕೇಳಿದ ಮಾಹಿತಿಯನ್ನೇ ಪುನಃ ಕೇಳಿದರು. ಅನಂತರ ಶ್ರೀ. ಕೊಲ್ಹಾಪುರೆ ಯವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು ಮತ್ತು ಅಲ್ಲಿ ೪ ಗಂಟೆಗಳ ವರೆಗೆ ಅವರ ವಿಚಾರಣೆ ನಡೆಸಲಾಯಿತು. ಈ ಸಮಯದಲ್ಲಿ ೫ ಪೊಲೀಸ್ ಅಧಿಕಾರಿಗಳು ಶ್ರೀ. ಕೊಲ್ಹಾಪುರೆಯವರ ಮೇಲೆ ಪ್ರಶ್ನೆಗಳ ಸುರಿಮಳೆ ಸುರಿಸುತ್ತಿದ್ದರು. ಮೊದಲ ಅಧಿಕಾರಿಯು ಆತ್ಮೀಯತೆ ಯಿಂದ ಮಾತನಾಡುತ್ತಿದ್ದರು, ಎರಡನೇಯವರು ಸಿಟ್ಟಿನಿಂದ, ಮೂರನೇಯವರು ಸನಾತನದ ಬಗ್ಗೆ ಚುಚ್ಚಿ ಮಾತನಾಡುತ್ತಿದ್ದರು, ನಾಲ್ಕನೇಯವರು ಹಿಂದೂ ಜನಜಾಗೃತಿ ಸಮಿತಿಯ ಬಗ್ಗೆ ಕೇಳುತ್ತಿದ್ದರು ಮತ್ತು ಐದನೇ ಅಧಿಕಾರಿಯು ಶ್ರೀ. ಕೊಲ್ಹಾಪುರೆ ಯವರ ನಿರೀಕ್ಷಣೆ ಮಾಡುತ್ತಿದ್ದರು. ಈ ಸಮಯದಲ್ಲಿ ಪೊಲೀಸರು ಶ್ರೀ. ಕೊಲ್ಹಾಪುರೆಯವರಿಗೆ ಭಯಾನಕ ಮಾನಸಿಕ ತೊಂದರೆ ನೀಡುವ ಪ್ರಯತ್ನ ಮಾಡುತ್ತಿದ್ದರು. ವಿಚಾರಣೆ ಮುಗಿದ ನಂತರವೂ ಶ್ರೀ. ಕೊಲ್ಹಾಪುರೆಯವರನ್ನು ಪೊಲೀಸರು ವಿನಾಕಾರಣ ೪೫ ನಿಮಿಷ ಪೊಲೀಸ್ ಠಾಣೆಯಲ್ಲಿ ಕೂಡಿಟ್ಟರು.
ಕುಟುಂಬದವರಿಗೆ ನೀಡಿದ ಮಾನಸಿಕ ಕಿರುಕುಳ !
೨೧ ಆಗಸ್ಟ್ ೨೦೧೩ ರಂದು ಶ್ರೀ. ಕೊಲ್ಹಾಪುರೆ ಅವರು ನ್ಯಾಯವಾದಿಗಳನ್ನು ಭೇಟಿಯಾಗಲು ಮುಂಬಯಿಗೆ ತೆರಳಿದರು. ಆಗ ಪೊಲೀಸರು ಶ್ರೀ. ಕೊಲ್ಹಾಪುರೆಯವರ ಕುಟುಂಬದವರ ವಿಚಾರಣೆ ಮಾಡಿ ಅವರಿಗೆ ತೊಂದರೆ ಕೊಡಲು ಪ್ರಯತ್ನಿಸಿದರು. ಕುಟುಂಬದವರಿಗೆ ಯಾವ ರೀತಿ ಮಾನಸಿಕ ತೊಂದರೆ ಕೊಡಲಾಯಿತು, ಎನ್ನುವ ಒಂದು ಉದಾಹರಣೆಯು ಮುಂದಿನಂತಿದೆ.
ಪೊಲೀಸರು : ರಾಹುಲ ಬಂದರೇ ?
ಶ್ರೀ. ಕೊಲ್ಹಾಪುರೆಯವರ ತಾಯಿ : ಇಲ್ಲ
ಪೊಲೀಸರು : ಮೊದಲು ತಪ್ಪು ಮಾಡಿ ಆಮೇಲೆ ಓಡಿ ಹೋಗುವುದು.
ತಾಯಿ : ನಿನ್ನೆ ನೀವು ಅವರ ಪೂರ್ಣ ವಿಚಾರಣೆ ಮಾಡಿದ್ದೀರಲ್ಲ ? ಆದುದರಿಂದ ಓಡಿ ಹೋಗುವ ಪ್ರಶ್ನೆಯೇ ಬರುವುದಿಲ್ಲ
ಪೊಲೀಸರು : ಹಾಗಾದರೆ ಅವರು ಸಂಚಾರಿವಾಣಿ ಯನ್ನು ಏಕೆ ಬಂದ್ ಮಾಡಿಟ್ಟಿದ್ದಾರೆ ?
ತಾಯಿ : ನನಗೆ ಗೊತ್ತಿಲ್ಲ, ಏನಾದರೂ ಅಡಚಣೆ ಗಳಿರಬಹುದು
ಪೊಲೀಸರು : ನಿಮಗೆ ಅವರ ಸಂಪರ್ಕವಾಗು ತ್ತದೆಯೆ ?
ತಾಯಿ : ಇಲ್ಲ
ಪೊಲೀಸರು : ಅವರಿಗೆ ಹೇಳಿ, ಅವರ ಇಂತಹ ವರ್ತನೆಯಿಂದ ಅವರ ಮೇಲಿನ ಸಂದೇಹ ಬಲವಾಗುತ್ತದೆ. ಮಕ್ಕಳ ಮೇಲೆ ಇದೇ ಸಂಸ್ಕಾರ ಮಾಡಿದ್ದೇನು ನೀವು ?
ನೀವು ಒಳ್ಳೆಯವರಿದ್ದೀರಿ, ಹಾಗಾಗಿ ನಿಮಗೆ ಹೇಳು ತ್ತಿದ್ದೇನೆ. ಈಗ ಅವರು ಯಾವಾಗ ಬರುತ್ತಾರೆ ?
ತಾಯಿ : ಅದನ್ನು ನಾನು ಹೇಗೆ ಹೇಳಲಿ ?
ಪೊಲೀಸರು : ಸರಿ. ಬಂದನಂತರ ಅವರಿಗೆ ಸಂಪರ್ಕ ಮಾಡಲು ಹೇಳಿರಿ.
೨೬ ಆಗಸ್ಟ್ ೨೦೧೩ ರಂದು ಪೊಲೀಸರು ಶ್ರೀ. ಕೊಲ್ಹಾಪುರೆಯವರ ತಮ್ಮನನ್ನು ಅವರು ಕೆಲಸ ಮಾಡುವಲ್ಲಿಗೆ ಹೋಗಿ ಭೇಟಿಯಾದರು. ಪೊಲೀಸರು ಅವರ ವಿಚಾರಣೆ ಮಾಡಿದರು. ೨೭ ಆಗಸ್ಟ್ ೨೦೧೩ ರಂದು ಪೊಲೀಸರು ಪುನಃ ಮನೆಗೆ ಬಂದರು. ಅವರು ಶ್ರೀ. ಕೊಲ್ಹಾಪುರೆಯವರ ತಮ್ಮನ ಹೆಸರು, ವ್ಯವಸಾಯ ಮುಂತಾದವುಗಳ ವಿಚಾರಣೆ ಮಾಡಿದರು. ಪೊಲೀಸರು ಪುನಃ ರಾತ್ರಿ ೯.೩೦ ಕ್ಕೆ ಮನೆಗೆ ಬಂದರು. ಅವರು ತಮ್ಮನನ್ನು ಪುನಃ ಭೇಟಿಯಾದರು ಮತ್ತು ಕೊಲ್ಲಾಪುರೆಯವರ ಬಗ್ಗೆ ವಿಚಾರಣೆ ಮಾಡಿದರು. ೨೮ ಆಗಸ್ಟ್ ೨೦೧೩ ರಂದು ಪೊಲೀಸರು ಶ್ರೀ. ಕೊಲ್ಹಾಪುರೆಯವರ ತಮ್ಮನ ಹೆಸರು, ವಾಹನ ಸಂಖೆ, ಶ್ರೀ. ಕೊಲ್ಹಾಪುರೆಯವರ ಪತಿ, ತಾಯಿ- ತಂದೆಯವರ ಪೂರ್ಣ ಹೆಸರು ಬರೆದುಕೊಂಡರು. ‘ಎಲ್ಲರೂ ಒಟ್ಟಿಗೆ ಇರು ತ್ತೀರಾ ? ವಾಹನದ ವಿಮೆ ಇದೆಯೇ ? ಸನಾತನದ ಕಾರ್ಯವನ್ನು ಎಲ್ಲರೂ ಮಾಡುತ್ತಾರಾ ? ಶ್ರೀ. ರಾಹುಲ ಕೊಲ್ಹಾಪುರೆಯವರ ಸಂಚಾರಿವಾಣಿಯನ್ನು ಏಕೆ ಬಂದ್ ಮಾಡಲಾಗಿದೆ ? ಅವರು ನಿಮ್ಮನ್ನು ಏಕೆ ಸಂಪರ್ಕಿಸುವುದಿಲ್ಲ ? ನೀವು ಸಂಪರ್ಕ ಮಾಡಿದ್ದೀರಾ ?’ ಮುಂತಾದ ಪ್ರಶ್ನೆಗಳನ್ನು ಶ್ರೀ. ಕೊಲ್ಹಾಪುರೆಯವರ ತಮ್ಮನಿಗೆ ಕೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಸನಾತನ ಪ್ರಭಾತ’ದ ಸಾತಾರಾದ ವರದಿಗಾರ ಶ್ರೀ. ರಾಹುಲ ಕೊಲ್ಹಾಪುರೆಯವರಿಗೆ ಮತ್ತು ಅವರ ಕುಟುಂಬದವರಿಗೆ ಮಾನಸಿಕ ಕಿರುಕುಳ ನೀಡುವುದು !