ಸನಾತನದ ಬಗ್ಗೆ ದ್ವೇಷವನ್ನಿಟ್ಟುಕೊಂಡು ಸಾಧಕರೊಂದಿಗೆ ಅವಮಾನಕರ ರೀತಿಯಲ್ಲಿ ವರ್ತಿಸುವ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಹೇಲ ಶರ್ಮಾ !

 ಸುಹೇಲ ಶರ್ಮಾ
ಕಾ. ಪಾನ್ಸರೆ ಹತ್ಯೆಯ ಪ್ರಕರಣದಲ್ಲಿ ತನಿಖೆ ನಡೆಸಿದ ವಿಶೇಷ ತನಿಖಾ ದಳವು ದಿನಾಂಕ ೫ ಸೆಪ್ಟೆಂಬರ್ ೨೦೧೬ ರಂದು ಗಣೇಶ ಚತುರ್ಥಿಯಂದೇ ದೇವದ, ಪನವೇಲ್ ಸನಾತನ ಆಶ್ರಮದ ತಪಾಸಣೆಯನ್ನು ನಡೆಸಿತು. ಈ ತಪಾಸಣಾ ದಳದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಹೇಲ ಶರ್ಮಾ, ಈ ಸಲ ಸನಾತನದ ಬಗ್ಗೆ ಸಂಪೂರ್ಣ ದ್ವೇಷವನ್ನಿಟ್ಟುಕೊಂಡು ಸಾಧಕರೊಂದಿಗೆ ಅವಮಾನಕರ ರೀತಿಯಲ್ಲಿ ವರ್ತಿಸುವುದು ಕಂಡುಬಂದಿತು. ಅವರ ಕುರಿತು ಸಾಧಕರಿಗೆ ಕಂಡುಬಂದ ಅಂಶಗಳು ಈ ಕೆಳಗಿನಂತಿವೆ.

೧. ಸಹೋದ್ಯೋಗಿಗಳೊಂದಿಗೆ ಸಿಟ್ಟಿನಿಂದ ಮತ್ತು ಅಧಿಕಾರವಾಣಿಯಿಂದ ಮಾತನಾಡುವುದು
೧ ಅ. ಸುಹೇಲ ಶರ್ಮಾರವರು ತಮ್ಮ ಸಹೋದ್ಯೋಗಿಗಳೊಂದಿಗೆ ಸತತವಾಗಿ ಸಿಟ್ಟಿನಿಂದ ಮಾತನಾಡುತ್ತಿದ್ದರು ಮತ್ತು ಹೀಯಾಳಿಸುತ್ತಿದ್ದರು. (ಸಹೋದ್ಯೋಗಿಗಳೊಂದಿಗೆ ಹೀಗೆ ವರ್ತಿಸುವವರು ಜನಸಾಮಾನ್ಯ ರೊಂದಿಗೆ ಹೇಗೆ ವರ್ತಿಸುತ್ತಿರಬಹುದು ಎಂದು ಕಲ್ಪನೆ ಮಾಡುವುದೂ ಕಠಿಣ ! - ಸಂಪಾದಕರು)
೧ ಆ. ಅವರು ಯಾವುದೇ ವಸ್ತುವನ್ನು ಸರಿಯಾಗಿ ಇಡುತ್ತಿರಲಿಲ್ಲ. ಸತತವಾಗಿ ವಸ್ತುಗಳನ್ನು ಎಸೆಯುತ್ತಿದ್ದರು.
೧ ಇ. ಅವರ ವರ್ತನೆಯು ಅತ್ಯಂತ ಅಧಿಕಾರಯುತ ಮತ್ತು ಉದ್ಧಟತನದಿಂದ ಇತ್ತು. ಅವರು ಮಾತನಾಡುವಾಗ ಎಲ್ಲರನ್ನೂ ಕೀಳಾಗಿ ಕಾಣುತ್ತಿದ್ದರು.
೧ ಈ. ಎದುರಿಗಿರುವ ವ್ಯಕ್ತಿಯು ಹೆದರಿ ಒತ್ತಡವನ್ನು ಅನುಭವಿಸುವಂತೆ ವರ್ತಿಸುತ್ತಿದ್ದರು.
೨. ಆಶ್ರಮದಲ್ಲಿರುವ ವೈದ್ಯರೊಂದಿಗೆ ವಿಚಾರಣೆ ನಡೆಸುವಾಗ ಗಮನಕ್ಕೆ ಬಂದಂತಹ ಅಂಶಗಳು
೨ ಅ. ಸುಹೇಲ ಶರ್ಮಾ ವಿಚಾರಣೆ ನಡೆಸುತ್ತಿರುವಾಗ ಅಸಮರ್ಪಕ ರೀತಿಯಲ್ಲಿ ವಿವರಣೆಯನ್ನು ಕೇಳುತ್ತಾ ಎದುರಿಗಿರುವ ವ್ಯಕ್ತಿಯನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡುತ್ತಿದ್ದರು. ಉದಾ. Alprax ಈ ಗುಳಿಗೆಗಳು ಬಹಳ ಇದ್ದವು. ಅದನ್ನು ನೋಡಿ ಅವರು, ‘ದೆಹಲಿಯಂತಹ ಒಂದೂಮುಕ್ಕಾಲು ಕೋಟಿ ಜನಸಂಖ್ಯೆಯಿರುವ ಮಹಾನಗರದಲ್ಲಿಯೂ ಇಷ್ಟು ಔಷಧಿ ಬೇಕಾಗುವುದಿಲ್ಲ. ಹೀಗಿರುವಾಗ, ನಿಮಗೇಕೆ ಇಷ್ಟು ಸಂಖ್ಯೆಯಲ್ಲಿ ಔಷಧಿ ಬೇಕಾಗುತ್ತದೆ ?’ ಎಂದರು. ಪ್ರತ್ಯಕ್ಷದಲ್ಲಿ ದೆಹಲಿಯಲ್ಲಿ ಈ ಗುಳಿಗೆಗಳ ಉಪಯೋಗದ ಪ್ರಮಾಣವು ಪ್ರತಿದಿನ ಸಾವಿರಾರು ಸಂಖ್ಯೆಯಷ್ಟಿದೆ. (ಈ ವಿಷಯಕ್ಕೆ ಪಾನ್ಸರೆ ಹತ್ಯೆಯ ಪ್ರಕರಣದೊಂದಿಗೆ ಏನಾದರೂ ಸಂಬಂಧವಿದೆಯೇ ? ಆದರೆ ಸಾಧಕರನ್ನು ಪೀಡಿಸುವ ಉದ್ದೇಶವಿರುವುದರಿಂದ ಪೊಲೀಸ್ ಅಧಿಕಾರಿಯು ಈ ರೀತಿ ವರ್ತಿಸುತ್ತಾರೆ - ಸಂಪಾದಕರು)
೨ ಆ. ಅವರೊಂದಿಗೆ ಫಾರ್ಮಾಸಿಸ್ಟ್ ಬಂದಿದ್ದರು. ಔಷಧಿಗಳ ಮಾಹಿತಿಯನ್ನು ಆಶ್ರಮದ ವೈದ್ಯರಲ್ಲಿ ಕೇಳುವ ಬದಲಾಗಿ ಅವರು ತಮ್ಮೊಂದಿಗೆ ಕರೆದುಕೊಂಡು ಬಂದಿದ್ದ ಫಾರ್ಮಾಸಿಸ್ಟನನ್ನು ಕೇಳುತ್ತಿದ್ದರು. ಫಾರ್ಮಾಸಿಸ್ಟರಿಗೆ ಔಷಧಿಗಳ ಕಾರ್ಯ ಪೂರ್ಣ ರೀತಿಯಲ್ಲಿ ತಿಳಿದಿರು ವುದಿಲ್ಲ ಎನ್ನುವುದೂ ಅವರಿಗೆ ತಿಳಿದಿರಲಿಕ್ಕಿಲ್ಲವೆಂದು ಅನಿಸಿತು. (ಫಾರ್ಮಾಸಿಸ್ಟರಿಗೆ ಔಷಧಿಗಳ ಕಾರ್ಯ ತಿಳಿದಿದ್ದರೆ, ಎಲ್ಲರೂ ಅವರಲ್ಲೇ ಕೇಳಿ ಔಷಧಿಗಳನ್ನು ತೆಗೆದುಕೊಳ್ಳುತ್ತಿರಲಿಲ್ಲವೇ ? ಡಾಕ್ಟರರ ಪ್ರಿಸ್ಕ್ರಿಪ್ಷನ್‌ಗೆ ಏನಾದರೂ ಅರ್ಥವಿರುತ್ತಿತ್ತೇ ? ಇಂತಹ ಸಾಮಾನ್ಯ ಜ್ಞಾನವೂ ಅಧಿಕಾರಿಗಳಿಗೆ ಇಲ್ಲದಿರುವುದು ಆಶ್ಚರ್ಯವೇ ಆಗಿದೆ. - ಸಂಪಾದಕರು)
೨ ಇ. ಸ್ತ್ರೀಯರ ನಿಯಮಿತ ರೋಗಗಳಿಗೆ ಕೆಲವು ಔಷಧಿಗಳು ಆಶ್ರಮ ದಲ್ಲಿವೆ. ಅದನ್ನು ನೋಡಿ ಅವರು ‘ಈ ಔಷಧಿಗಳು ಇಲ್ಲೇಕೆ ಬೇಕಾಗುತ್ತವೆ ?’ (ಪ್ರತ್ಯಕ್ಷದಲ್ಲಿ ಆಶ್ರಮದಲ್ಲಿ ಅನೇಕ ಸ್ತ್ರೀ ಸಾಧಕರು ವಾಸಿಸುತ್ತಿದ್ದಾರೆ. ಅವರ ರೋಗಗಳಿಗೆ ಈ ಔಷಧಿಗಳು ಬೇಕಾಗುತ್ತವೆ ಎನ್ನುವುದೂ ಅರಿಯದವರು ಏನು ತಪಾಸಣೆ ಮಾಡುತ್ತಾರೆ ? - ಸಂಪಾದಕರು)
೨ ಈ. ‘ಮಾಸಿಕ ಸರದಿಯ ತೊಂದರೆ ದೂರವಾಗಲು ಇರುವ ಔಷಧಿಯನ್ನು ಗರ್ಭವತಿ ಮಹಿಳೆಯರಿಗೆ ನೀಡಿದರೆ ಏನಾಗು ವುದು ?’ ಎನ್ನುವ ಹಾಸ್ಯಾಸ್ಪದ ಪ್ರಶ್ನೆಯನ್ನು ಅವರು ಅವರ ಫಾರ್ಮಾಸಿಸ್ಟರನ್ನು ಕೇಳಿದಾಗ, ಫಾರ್ಮಾಸಿಸ್ಟ್ ‘ಗರ್ಭಪಾತವಾಗ ಬಹುದು’ ಎಂದರು. ಆಗ ಶರ್ಮಾ ಕಿರುಚಾಡುತ್ತಾ, ‘ಇಂತಹ ಔಷಧಿಗಳನ್ನು ನೀವು ನಿಮ್ಮ ಆಸ್ಪತ್ರೆಯಲ್ಲಿ ಏಕೆ ಇಟ್ಟಿದ್ದೀರಿ ?’ ಎಂದು ಕೇಳಿದರು. ಆಗ ಆಶ್ರಮದ ವೈದ್ಯರು ಔಷಧಿಗಳ ಉಪಯೋಗದ ಕುರಿತು ತಿಳಿಸಿ ಹೇಳಿದಾಗ ಅವರು ಶಾಂತರಾದರು.
೨ ಉ. ಪನವೇಲ್‌ನ ಸಮೀಪದಲ್ಲಿಯೇ ಮಹಾತ್ಮಾ ಗಾಂಧಿ ಮೆಮೋರಿಯಲ್ ಆಸ್ಪತ್ರೆಯಿದೆ. ಆಶ್ರಮದ ಸಾಧಕರು ಅನಾರೋಗ್ಯ ವಿದ್ದಾಗ ಆ ಆಸ್ಪತ್ರೆಗೆ ಹೋಗುತ್ತಾರೆ. ಈ ಕುರಿತು ಶರ್ಮಾ ಕೂಗಾಡುತ್ತಾ, ‘ನೀವು ಆ ಆಸ್ಪತ್ರೆಗೆ ಏಕೆ ಹೋಗುತ್ತೀರಿ ? ಸರಕಾರಿ ಆಸ್ಪತ್ರೆಗೆ ಏಕೆ ಹೋಗುವುದಿಲ್ಲ ?’ ಎಂದರು. ಈ ಸಂದರ್ಭದಲ್ಲಿ ಅವರು ಬಹಳ ಆಕ್ರಮಣಕಾರಿ ರೀತಿಯಲ್ಲಿ ವರ್ತಿಸುತ್ತಿದ್ದರು. (ಈಗ ಅನಾರೋಗ್ಯವಿದ್ದರೆ ಸಾಧಕರು ಪೊಲೀಸರು ಹೇಳುವ ಆಸ್ಪತ್ರೆಗೆ ಹೋಗಬೇಕೇ ? ಇದರಿಂದ ಪೊಲೀಸರ ರಝಾಕರಿ ವರ್ತನೆ ಗಮನಕ್ಕೆ ಬರುತ್ತದೆ. - ಸಂಪಾದಕರು)
೨ ಊ. ಸನಾತನದ ಕುರಿತು ದ್ವೇಷ ! : ಸನಾತನ ಪ್ರಭಾತ ದಿನಪತ್ರಿಕೆಯ ವಿಷಯದಲ್ಲಿ ಅವರು, ‘ಸನಾತನ ಪ್ರಭಾತ ದಿನಪತ್ರಿಕೆಯೊಂದು ರದ್ದಿ ಯಾಗಿದೆ’ ಎಂದರು. ಸನಾತನ ಸಂಸ್ಥೆಯ ವಿಷಯದಲ್ಲಿ ಅವರ ಮನಸ್ಸಿನಲ್ಲಿ ಸೇಡು ತುಂಬಿಕೊಂಡಿದೆಯೆಂದು ಅವರ ಮಾತಿನಿಂದ ಅರಿವಾಗುತ್ತಿತ್ತು. ‘ಇತರ ಸಂಪ್ರದಾಯಗಳಲ್ಲಿ ನಿಮ್ಮಂತೆ ಕೊಲ್ಲಲು ಕಲಿಸುವುದಿಲ್ಲ’ ಎಂದು ಸಿಟ್ಟಿನಿಂದ ಹೇಳಿದರು. (ಸನಾತನವು ಅಹಂನಿರ್ಮೂಲನೆ ಮತ್ತು ಸ್ವಭಾವದೋಷ ನಿರ್ಮೂಲನೆ ಈ ಪ್ರಕ್ರಿಯೆಯ ಮುಖಾಂತರ ಸಿಟ್ಟಿನ ಮೇಲೆ ನಿಯಂತ್ರಣ ಪಡೆಯಲು ಮತ್ತು ಎಲ್ಲ ಜೀವಿಗಳನ್ನು ಪ್ರೀತಿಸಲು ಕಲಿಸುತ್ತದೆ. ಮತಾಂಧರಿಂದ ಯಾವಾಗಲೂ ಪೆಟ್ಟು ತಿನ್ನುವ ಪೊಲೀಸರು ಅವರಿಗೆ ಎಂದಾದರೂ ಈ ರೀತಿ ಹೇಳುವ ಧೈರ್ಯ ತೋರಿಸುವುದಿಲ್ಲ; ಆದರೆ ಅವರು ತನಿಖೆ ನಡೆಸುವಾಗ ಸಹಕರಿಸುವ ಸನಾತನವನ್ನು ಹೆದರಿಸಲು ಸದಾ ಸಕ್ರಿಯವಾಗಿರುತ್ತಾರೆ. - ಸಂಪಾದಕರು)
೨ ಎ. ಆಶ್ರಮದ ವೈದ್ಯರು ಈ ಮೊದಲು ಸರಕಾರಿ ನೌಕರಿಯನ್ನು ಮಾಡಿದ್ದರು. ಅದರ ಬಗ್ಗೆ ಅವರು ಕೂಗಾಡುತ್ತಾ ಅತೀ ಕೀಳಾಗಿ, ‘ನಿಮಗೆ ಔಷಧಿಗಳ ದಾಖಲಾತಿಗಳನ್ನು ಹೇಗಿಡಬೇಕೆಂದು ತಿಳಿದಿಲ್ಲವೇ ?’ ಎಂದರು.
೨ ಏ. ಪ್ರಿಸ್ಕ್ರಿಪ್ಷನ್ ಮತ್ತು ಕೇಸ್‌ಪೇಪರ್‌ಗಳ ವ್ಯತ್ಯಾಸ ತಿಳಿಯದ ಸುಹೇಲ ಶರ್ಮಾ ! : ಸುಹೇಲ ಶರ್ಮಾರವರು ಆಶ್ರಮದ ವೈದ್ಯರಿಗೆ ಪ್ರಿಸ್ಕ್ರಿಪ್ಷನ್ ಎಲ್ಲಿದೆಯೆಂದು ಜೋರಾಗಿ ಕೇಳಿದರು. ಆಶ್ರಮದ ವೈದ್ಯರಿಗೆ ಶರ್ಮಾರವರಿಗೆ ಏನು ಬೇಕಾಗಿದೆಯೆನ್ನುವುದೇ ತಿಳಿಯುತ್ತಿರಲಿಲ್ಲ. ಅದಕ್ಕೆ ಶರ್ಮಾರವರು ‘ನಿಮಗೆ ಪ್ರಿಸ್ಕ್ರಿಪ್ಷನ್‌ನ ಅರ್ಥ ತಿಳಿಯುವುದಿಲ್ಲವೇ ?’ ಎಂದಾಗ, ಆಶ್ರಮದ ವೈದ್ಯರು ‘ಪ್ರಿಸ್ಕ್ರಿಪ್ಷನ್ ನಮ್ಮ ಬಳಿ ಹೇಗಿರುತ್ತದೆ ? ನಾವು ಅದನ್ನು ರೋಗಿಗೆ ನೀಡುತ್ತೇವೆ. ನಿಮಗೆ ಕೇಸ್‌ಪೇಪರ್ ಬೇಕಾಗಿದೆಯೇ ?’ ಎಂದು ಕೇಳಿದಾಗ, ಅವರು ‘ಹೌದು’ ಎಂದರು. ಅವರಿಗೆ ಪ್ರಿಸ್ಕ್ರಿಪ್ಷನ್ ಮತ್ತು ಕೇಸ್‌ಪೇಪರ್‌ಗಳ ವ್ಯತ್ಯಾಸವೇ ತಿಳಿಯುತ್ತಿರಲಿಲ್ಲವೆನ್ನುವುದು ಗಮನಕ್ಕೆ ಬಂದಿತು. ಆದರೆ ಇದನ್ನು ಕೇಳುವಾಗಲೂ ಆಕ್ರಮಣಕಾರಿ ರೀತಿ ಯಲ್ಲಿ ವಿಚಾರಿಸಿದರು. ಕೇಸ್‌ಪೇಪರ್ ಕುರಿತು ಏಕವಚನದಲ್ಲಿ ಅವರು ವಿಚಾರಿಸುತ್ತಿದ್ದರು.
೨ ಐ. ವೈದ್ಯಕೀಯ ಕ್ಷೇತ್ರದ ಯಾವುದೇ ನಿಯಮಗಳು ತಿಳಿಯದಿದ್ದರೂ ಆ ವಿಷಯದಲ್ಲಿ ಏಕವಚನದಲ್ಲಿ ವಿಚಾರಿಸುವುದು ! : ಸುಹೇಲ ಶರ್ಮಾರವರು, ‘ನೀವು ವೈದ್ಯಕೀಯ ವಿಭಾಗದಲ್ಲಿ ಔಷಧಿಗಳನ್ನು ಹೇಗೆ ಇಡುತ್ತೀರಿ ? ನಿಮಗೆ ಔಷಧಿಗಳನ್ನು ಪಡೆಯಲು ಪರವಾನಿಗೆ ಇದೆಯೇ ?’ ಎಂದು ವಿಚಾರಿಸಿದರು. ಆಶ್ರಮದ ವೈದ್ಯರ ಬಳಿ ಅವರು ಡಾಕ್ಟರ್ ಆಗಿರುವುದಕ್ಕೆ ರಜಿಸ್ಟ್ರೇಶನ್ ಇದೆಯೆಂದು ಪ್ರಾರಂಭದಲ್ಲಿಯೇ ಹೇಳಲಾಗಿತ್ತು. ಆದರೂ ಶರ್ಮಾರವರು ಹಾಸ್ಯಾಸ್ಪದ ಪ್ರಶ್ನೆಗಳನ್ನು ಕೇಳಿ ಅವರ ಮೇಲೆ ಕೂಗಾಡುತ್ತಿದ್ದರು. ಆ ಸಂದರ್ಭದಲ್ಲಿ ಆಹಾರ ಮತ್ತು ಔಷಧ ಇಲಾಖೆಯ ಒಬ್ಬ ಅಧಿಕಾರಿಯು ಹಾಜರಿದ್ದರು. ಅವರು ಶರ್ಮಾರವರಿಗೆ, ಆಶ್ರಮದ ವೈದ್ಯರು ಎಷ್ಟು ಬೇಕಾದರೂ ಔಷಧಿಗಳನ್ನು ಖರೀದಿಸಬಹುದಾಗಿದ್ದು, ಆಸ್ಪತ್ರೆಯಲ್ಲಿ ಔಷಧಿಗಳನ್ನು ಸಂಗ್ರಹಿಸಿಡಬಹುದೆಂದು ತಿಳಿಸಿದ ಬಳಿಕ ಅವರು ಶಾಂತರಾದರು. (ವೈದ್ಯಕೀಯ ಕ್ಷೇತ್ರದ ಯಾವುದೇ ನಿಯಮಗಳು ತಿಳಿಯದೇ ಇದ್ದರೂ ಆ ಕುರಿತು ಏಕವಚನದಲ್ಲಿ ವಿಚಾರಿಸಿ ತಮ್ಮನ್ನೇ ಹಾಸ್ಯಾಸ್ಪದ ಮಾಡಿಕೊಳ್ಳುವ ಶರ್ಮಾ ! - ಸಂಪಾದಕರು)
೨ ಒ. ಆಶ್ರಮದ ವೈದ್ಯರಿಗೆ ಅವರು ‘ನೀವು ಮಾಡುತ್ತಿರುವುದೆಲ್ಲವೂ ಕಾನೂನುಬಾಹಿರವಾಗಿದೆ. ನಿಮ್ಮ ಮೇಲೆ ‘ಅನ್‌ಲಾಫುಲ್ ಆಕ್ಟಿವಿಟಿ ಪ್ರಿವ್ಹೆನ್‌ಶನ್ ಆಕ್ಟ್’ಗನುಸಾರ ದೂರು ದಾಖಲಿಸಬಹುದಾಗಿದೆ’ ಎಂದು ಹೇಳಿದರು. ‘ನೀವು ಚೆನ್ನಾಗಿ ಕಲಿತವರಾಗಿದ್ದು, ಸಜ್ಜನರಂತೆ ಕಾಣಿಸುತ್ತೀರಿ. (ಇಂತಹ ವೈದ್ಯರನ್ನು ಹೆದರಿಸುವ ಪೊಲೀಸ್ ಅಧಿಕಾರಿ ಜನಸಾಮಾನ್ಯರೊಂದಿಗೆ ಹೇಗೆ ವರ್ತಿಸುತ್ತಿರಬಹುದೆಂದು ಹೇಳುವುದೇ ಅಸಾಧ್ಯ ! - ಸಂಪಾದಕರು)
೨ ಓ. ತಪಾಸಣೆಯ ಸಮಯದಲ್ಲಿ ವಕೀಲರಾದ ಸಂಜೀವ ಪುನಾಳೆಕರ್‌ರವರು ಆಶ್ರಮಕ್ಕೆ ಬಂದಿದ್ದರು. ಆಶ್ರಮದ ವೈದ್ಯರು ವಕೀಲರಾದ ಪುನಾಳೆಕರರನ್ನು ಭೇಟಿಯಾಗಲು ಅವಕಾಶ ನೀಡಲು ಕೋರಿದಾಗ, ಶ್ರೀ. ಶರ್ಮಾರವರು ನಿರಾಕರಿಸಿ, ‘ವಕೀಲರು ನಿಮಗೆ ತಪ್ಪ್ಪು ಉತ್ತರಗಳನ್ನು ನೀಡುವಂತೆ ಹೇಳಬಹುದು. ಇದರಿಂದ ತೊಂದರೆಗೆ ಸಿಲುಕುತ್ತೀರಿ. ನಿಮ್ಮನ್ನು ಅವರು ಬಲಿಪಶು ಮಾಡುತ್ತಾರೆ’ ಎಂದು ಹೇಳಿದರು. (ಅಪರಾಧಿಗಳಿಗೂ ಅವರ ವಕೀಲರ ಸಲಹೆಯನ್ನು ಪಡೆ ಯುವ ಅಧಿಕಾರವಿರುತ್ತದೆ. ಇಲ್ಲಿಯಂತೂ ಆಶ್ರಮದ ವೈದ್ಯರಿಗೆ ಯಾವುದೇ ಸಂಬಂಧವಿಲ್ಲದಿರುವಾಗಲೂ ಅವರಿಗೆ ವಕೀಲರನ್ನು ಭೇಟಿಯಾಗಲೂ ಬಿಡುತ್ತಿರಲಿಲ್ಲ. ಇದೇ ಪೊಲೀಸರು ಐಸಿಸ್‌ನೊಂದಿಗೆ ಸಂಪರ್ಕ ಹೊಂದಿ ರುವ ಮತಾಂಧರಿಗೆ ಮಾತ್ರ ಹಿತೋಪದೇಶಗಳನ್ನು ಹೇಳುತ್ತಾರೆ ! - ಸಂಪಾದಕರು)
೨ ಔ. ಪುನಾಳೇಕರ ವಕೀಲರು ಆಶ್ರಮಕ್ಕೆ ಸುಹೇಲ ಶರ್ಮಾರಿಗೆ ಒಂದು ಅರ್ಜಿಯನ್ನು ನೀಡುವ ಸಲುವಾಗಿ ಬಂದಿದ್ದರು, ಅರ್ಜಿಯನ್ನು ನೀಡಿ ಹೋದ ಬಳಿಕ ಶರ್ಮಾರವರು ಪುನಾಳೆಕರ ವಕೀಲರಿಗೆ ಏಕವಚನದಲ್ಲಿ ಉಲ್ಲೇಖಿಸುತ್ತಾ, ‘ಇವನು ಮತ್ತೆ ಈ ಕಡೆ ಬರಬಾರದು. ಅವನು ನಮಗೆ ತೊಂದರೆ ನಿರ್ಮಾಣ ಮಾಡಬಹುದು. ಅವನು ಯಾರೊಂದಿಗೆ ಮಾತ ನಾಡುತ್ತಿದ್ದರೂ ಅದನ್ನು ಚಿತ್ರೀಕರಿಸಿಕೊಳ್ಳಿರಿ ಹಾಗೂ ನನ್ನೊಂದಿಗೆ ಮಾತ ನಾಡುತ್ತಿರುವಾಗಲೂ ಧ್ವನಿಚಿತ್ರೀಕರಣ ಮಾಡಿರಿ’ ಎಂದು ಹೇಳಿದರು.
೩. ಇತರ ಅಂಶಗಳು
೩ ಅ. ತಪಾಸಣೆಗೆ ಬಂದ ಬಳಿಕ ಅವರು ವೈದ್ಯಕೀಯ ವಿಭಾಗದ ವಿವರಗಳನ್ನು ಕೇಳಿದರು. ಅದಕ್ಕೆ ಶ್ರೀ. ನಿನಾದ ಗಾಡಗೀಳ ಇವರು ತನಗೆ ಗೊತ್ತಿಲ್ಲವೆಂದು ಹೇಳಿದಾಗ, ‘ನೀವೆಂತಹ ಆಡಳಿತವನ್ನು ನೋಡಿಕೊಳ್ಳು ತ್ತೀರಿ ? ನಿಮಗೆ ಇಷ್ಟೂ ಸಹ ಹೇಗೆ ಗೊತ್ತಿಲ್ಲ ? ನಿಮ್ಮನ್ನು ಒಳಗೆ ಹಾಕುತ್ತೇನೆ. ಧಾರ್ಮಿಕ ಸಂಸ್ಥೆಗಳ ಕಾರ್ಯವನ್ನು ಹೀಗೆ ಮಾಡುತ್ತಾರೆಯೇ ?’ ಎಂದು ಹೇಳಿ ಕೂಗಾಡತೊಡಗಿದರು. ಈ ಸಮಯದಲ್ಲಿ ಶ್ರೀ. ನಿನಾದ ಇವರು ಮಾತನಾಡುವಾಗ ಧ್ವನಿಚಿತ್ರೀಕರಣ ಮಾಡುತ್ತಿದ್ದರು. ಅವರು ‘ನಾವು ನಿಮ್ಮ ಚಿತ್ರೀಕರಣ ಮಾಡುತ್ತೇವೆ. ನಾವು ಇದನ್ನು ಉಪಯೋಗಿಸುವೆವು’ ಎಂದರು. (ಹೀಗೆ ಹೇಳುವುದೆಂದರೆ ಬ್ಲ್ಯಾಕ್‌ಮೇಲಿಂಗ್ ಮಾಡುವಂತೆಯೇ ಆಗಿದೆ. ಮಹಾರಾಷ್ಟ್ರದ ಗೃಹ ಇಲಾಖೆಯು ಇದನ್ನು ಗಂಭೀರವಾಗಿ ಪರಿಗಣಿಸಿ ಕ್ರಮಕೈಗೊಳ್ಳುವುದೇ ? - ಸಂಪಾದಕರು)
೩ ಆ. ಪಂಚನಾಮೆ ಮಾಡುವಾಗ ಶ್ರೀ. ನಿನಾದ ಇವರು ಪಂಚ ನಾಮೆಯ ಒಂದು ಪ್ರತಿಯನ್ನು ಕೇಳಿದರು. ಆಗ ಅವರು ‘ನಿಮಗೆ ಪ್ರತಿಯನ್ನು ಕೇಳುವ ಅಧಿಕಾರವಿಲ್ಲ. ಈಗ ನೀವು ಕೂಡಲೇ ನಿಮ್ಮ ವಕೀಲರನ್ನು ದೂರವಾಣಿ ಮುಖಾಂತರ ಕೇಳುವಿರಿ, ಇದು ನನಗೆ ತಿಳಿದೇ ಇದೆ’ ಎಂದರು.
೩ ಈ. ಇನ್ನೊಂದು ಕೋಣೆಯಲ್ಲಿ ಶ್ರೀ. ನಿನಾದರ ವಿಚಾರಣೆ ನಡೆಯುತ್ತಿತ್ತು. ಆ ಕೋಣೆಯಲ್ಲಿ ಶರ್ಮಾ ಬಂದರೆಂದು ಎಲ್ಲರೂ ಎದ್ದು ನಿಂತರು. ಶ್ರೀ. ನಿನಾದ ಇವರೂ ಎದ್ದು ನಿಂತರು. ಆಗ ಶ್ರೀ. ನಿನಾದರಿಗೆ, ‘ನೀವೇನು ನನ್ನ ನೆರಳಾಗಿದ್ದೀರೇನು ? ಇಲ್ಲೇಕೆ ನಿಂತಿದ್ದೀರಿ ? ನೀವು ಇಲ್ಲಿಂದ ಹೊರಗೆ ಹೋಗಿ’ ಎಂದು ಶರ್ಮಾ ಹೇಳಿದರು. (ಪೊಲೀಸರ ಇಂತಹ ವರ್ತನೆಯಿಂದಲೇ ಸಮಾಜದಲ್ಲಿ ಅವರಿಗೆ ತಪಾಸಣೆಗೆ ಸಹಕರಿಸುವುದಿಲ್ಲ. - ಸಂಪಾದಕರು)
೩ ಈ. ಅವರು ಸಂಪೂರ್ಣ ಸಮಯ ಶ್ರೀ. ನಿನಾದರ ಮೇಲೆ ಕಾವಲಿಡಲು ಒಬ್ಬ ಅಧಿಕಾರಿಯನ್ನು ನೇಮಿಸಿದ್ದರು. ಶ್ರೀ. ನಿನಾದ ಎಲ್ಲೆಲ್ಲಿಗೆ ಹೋಗುತ್ತಾರೆಯೋ ಅಲ್ಲಿಗೆ ಆ ಅಧಿಕಾರಿಯೂ ಹೋಗುತ್ತಿದ್ದರು.(ಜಿಹಾದಿ ಭಯೋತ್ಪಾದಕರ ಮತ್ತು ದೇಶದಲ್ಲಿ ಅವರಿಗೆ ಸಹಾಯ ಮಾಡುವವರ ಮೇಲೆ ಕಣ್ಗಾವಲು ಇಟ್ಟಿದ್ದರೆ, ದೇಶವು ಇಲ್ಲಿಯವರೆಗೆ ಭಯೋತ್ಪಾದನೆಯಿಂದ ಮುಕ್ತವಾಗುತ್ತಿತ್ತು. - ಸಂಪಾದಕರು)
ಉದ್ಧಟ ಪೊಲೀಸರ ವಿಚಾರಣೆಯಿಂದಾಗುವ ಲಾಭ

ಸಾಧಕರೇ, ಉದ್ಧಟ ಪೊಲೀಸರ ವಿಚಾರಣೆಯನ್ನು ಎದುರಿಸ ಬೇಕಾಗುತ್ತದೆ; ಎಂದು ಭಯ ಪಟ್ಟುಕೊಳ್ಳಬೇಡಿ. ಅದೂ ಒಂದು ಸಾಧನೆಯೇ ಆಗಿದೆ. ವಿಚಾರಣೆಯಿಂದಾಗಿ, ಪೊಲೀಸರು ಎಷ್ಟು ಕೆಟ್ಟದಾಗಿ ನಡೆದುಕೊಳ್ಳುತ್ತಾರೆಂದು ತಿಳಿಯುತ್ತದೆ. ಇದರಿಂದ ಸಮಾಜಕ್ಕೆ ಪೊಲೀಸರ ನಿಜರೂಪ ತಿಳಿಯುತ್ತದೆ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನದ ಬಗ್ಗೆ ದ್ವೇಷವನ್ನಿಟ್ಟುಕೊಂಡು ಸಾಧಕರೊಂದಿಗೆ ಅವಮಾನಕರ ರೀತಿಯಲ್ಲಿ ವರ್ತಿಸುವ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಹೇಲ ಶರ್ಮಾ !