ಸನಾತನ ಸಂಸ್ಥೆಯ ತೇಜೋವಧೆ ಪ್ರಕರಣದಲ್ಲಿ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕ, ಮಾಲೀಕ, ಪ್ರಕಾಶಕ ಮತ್ತು ಮುದ್ರಕರ ವಿರುದ್ಧ ಸಂಸ್ಥೆಯ ಮಾನನಷ್ಟ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಿವಾಣಿ ದಾವೆ ದಾಖಲು !

ಫೋಂಡಾ (ಗೋವಾ) : ಸನಾತನ ಸಂಸ್ಥೆಯ ಹೆಚ್ಚುತ್ತಿರುವ ಪ್ರಸಾರದ ವ್ಯಾಪ್ತಿ ಮತ್ತು ಸಮಾಜದಲ್ಲಿ ಸಂಸ್ಥೆಯ ಹೆಸರು ಮನೆಮಾತಾಗಿರುವಾಗ ಸಂಸ್ಥೆಯನ್ನು ಅವಮಾನಗೊಳಿಸುವ ಉದ್ದೇಶದಿಂದ ದೈನಿಕ ಟೈಮ್ಸ್ ಆಫ್ ಇಂಡಿಯಾ ಈ ಆಂಗ್ಲ ದಿನಪತ್ರಿಕೆಯು ‘ಫಾರ್ ದಿಸ್ ಕಲ್, ಕ್ರಿಟಿಕ್ಸ್ ಆರ್ ಡೆಮಾನ್ಸ್’ ಈ ಶೀರ್ಷಿಕೆಯಲ್ಲಿ ಸಂಸ್ಥೆಯ ವಿರುದ್ಧ ಮಾನಹಾನಿಗೊಳಿಸುವ ಲೇಖನವನ್ನು ೨೦ ಜೂನ್ ೨೦೧೬ ರ ಸಂಚಿಕೆಯಲ್ಲಿ ಪ್ರಸಿದ್ಧಪಡಿಸಿ ಸಂಸ್ಥೆಯ ಮಾನಹಾನಿ ಮಾಡಿದೆ. ಅದರಿಂದ ಸನಾತನ ಸಂಸ್ಥೆಗೆ ಅಪಾರ ಹಾನಿಯಾಗಿದೆ; ಆದ್ದರಿಂದ ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ತರಾದ ಶ್ರೀ. ವಿರೇಂದ್ರ ಮರಾಠೆ ಇವರು ಸಂಸ್ಥೆಯ ಗೌರವಾನ್ವಿತ ಸಲಹೆಗಾರರಾದ ಶ್ರೀ. ರಾಮದಾಸ ಕೇಸರಕರ್ ಇವರ ಮೂಲಕ ಈ ದೈನಿಕದ ಸಂಪಾದಕ, ಮಾಲೀಕ, ಮುದ್ರಕ ಮತ್ತು ಪ್ರಕಾಶಕರ ವಿರುದ್ಧ ೧೦ ಕೋಟಿ ರೂಪಾಯಿಗಳ ನಷ್ಟಪರಿಹಾರ ಕೊಡಬೇಕೆಂದು ಫೋಂಡಾ ಗೋವಾದ ದಿವಾಣಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.
ಸಂಪಾದಕ, ಮಾಲೀಕ, ಮುದ್ರಕ ಮತ್ತು ಪ್ರಕಾಶಕರಿಗೆ ೧೧.೭.೨೦೧೬ ರಂದು ಕಾನೂನು ಪ್ರಕಾರ ನೋಟಿಸು ಜ್ಯಾರಿ ಮಾಡಿ ಪರಿಹಾರದ ಮೊತ್ತ ೧೦ ಕೋಟಿ ರೂಪಾಯಿಗಳನ್ನು ಕೇಳಿತ್ತು; ಆದರೆ ಅವರು ಕಾನೂನು ಪ್ರಕಾರ ನೋಟಿಸ್‌ನಲ್ಲಿನ ಸಂಸ್ಥೆಯ ಬೇಡಿಕೆಯನ್ನು ಪೂರೈಸಲು ನಿರಾಕರಿಸಿದರು. ಆದ್ದರಿಂದ ಸನಾತನ ಸಂಸ್ಥೆಯ ವ್ಯವಸ್ಥಾಪಕ ವಿಶ್ವಸ್ತರಾದ ಶ್ರೀ. ವಿರೇಂದ್ರ ಮರಾಠೆ ಇವರು ಹಿಂದುತ್ವನಿಷ್ಠ ನ್ಯಾಯವಾದಿಗಳಾದ ಶ್ರೀ. ಗಜಾನನ ನಾಯಿಕ್, ಶ್ರೀ. ನಾಗೇಶ ತಾಕಭಾತೆ, ಕು. ದೀಪಾ ತಿವಾಡಿ ಮತ್ತು ಶ್ರೀ. ರಾಮದಾಸ ಕೇಸರಕರ್ ಇವರ ಮೂಲಕ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕ ಜಾಯ್ ಪೂರಕಾಯಸ್ಥಾ, ಮಾಲೀಕ ಬೆನೆಟ್ ಕೊಲಮನ್ ಎಂಡ್ ಕಂಪನಿ ಲಿ.; ಮುದ್ರಕ ಮತ್ತು ಪ್ರಕಾಶಕ ಶ್ರೀ. ರಣಜಿತ್ ಜಗದಾಳೆ ಇವರ ವಿರುದ್ಧ ಮಾನನಷ್ಟ ಪರಿಹಾರಕ್ಕಾಗಿ ೧೦ ಕೋಟಿ ರೂಪಾಯಿಗಳ ಬೇಡಿಕೆಯೊಂದಿಗೆ ಗೋವಾದಲ್ಲಿನ ದಿವಾಣಿ ನ್ಯಾಯಾಧೀಶ (ವರಿಷ್ಠಸ್ತರ) ರ ನ್ಯಾಯಾಲಯದಲ್ಲಿ ಖಟ್ಲೆಯನ್ನು ದಾಖಲಿಸಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ತೇಜೋವಧೆ ಪ್ರಕರಣದಲ್ಲಿ ದೈನಿಕ ಟೈಮ್ಸ್ ಆಫ್ ಇಂಡಿಯಾದ ಸಂಪಾದಕ, ಮಾಲೀಕ, ಪ್ರಕಾಶಕ ಮತ್ತು ಮುದ್ರಕರ ವಿರುದ್ಧ ಸಂಸ್ಥೆಯ ಮಾನನಷ್ಟ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ದಿವಾಣಿ ದಾವೆ ದಾಖಲು !