ದೇವತೆಗಳ ವಿಡಂಬನೆಯ ವಿರುದ್ಧ ಆಂದೋಲನವನ್ನು ಹಮ್ಮಿಕೊಳ್ಳುವಾಗ ಸನಾತನದ ಪ್ರಕಾಶನಗಳು ಮತ್ತು ಉತ್ಪಾದನೆಗಳ ಮೇಲೆ ದೇವತೆಗಳ ಚಿತ್ರವೇಕೆ ?

ಸನಾತನ ಸಂಸ್ಥೆ ವ್ಯಾಪಾರಿ ಉತ್ಪಾದನೆಗಳ ಹಾಗೂ ಅವುಗಳ ಜಾಹೀರಾತುಗಳ ಮೂಲಕ ದೇವರ ವಿಡಂಬನೆ ಆಗಬಾರದೆಂದು ವಿವಿಧ ಚಳುವಳಿಗಳನ್ನು ಹಮ್ಮಿಕೊಳ್ಳು ತ್ತದೆ. ವಿವಿಧ ಉತ್ಪಾದನೆಗಳ ಮೇಲೆ ದೇವರ ಚಿತ್ರಗಳನ್ನು ಮುದ್ರಿಸುವುದರಿಂದ ಸ್ವಲ್ಪ ಸಮಯದ ನಂತರ ಅದು ಎಲ್ಲೆಡೆ ಎಸೆಯಲ್ಪಟ್ಟು ಕಾಲಿನಡಿಗೆ ಬೀಳುವ ಸಾಧ್ಯತೆ ಇರುವುದರಿಂದ ಹಾಗೆ ಮಾಡಬಾರದೆಂದು ಸಮಾಜ ಪ್ರಬೋಧನೆಯನ್ನೂ ಮಾಡುತ್ತದೆ. ಹಾಗಾಗಿ ಸನಾತನದ ನಿಯತಕಾಲಿಕೆಗಳು, ಉತ್ಪಾದನೆ, ಗ್ರಂಥ ಮತ್ತು ಪ್ರಸಾರ ಸಾಮಗ್ರಿಗಳ ಮೇಲೆ ದೇವರ ಚಿತ್ರಗಳು ಅಥವಾ ಗುರುಕೃಪಾಯೋಗದ (ಗುರು-ಶಿಷ್ಯರ) ಬೋಧ ಚಿಹ್ನೆ ಏಕೆ ?, ಎಂದು ಯಾರಿಗಾದರೂ ಅನಿಸಬಹುದು. ಇದರ ಉತ್ತರ ಮುಂದಿನಂತಿದೆ.
೧. ಅಧ್ಯಾತ್ಮದಲ್ಲಿ ಕೃತಿಗಿಂತ ಅದರ ಹಿಂದಿನ ಉದ್ದೇಶಕ್ಕೆ ಹೆಚ್ಚು ಮಹತ್ವವಿದೆ. ಯಾವುದೇ ಪ್ರಕಾಶನ ಮತ್ತು ಉತ್ಪಾದನೆ ತಯಾರಿಸುವುದರ ಹಿಂದೆ ಸನಾತನದ ವ್ಯಾವಹಾರಿಕ ಉದ್ದೇಶವಿಲ್ಲದೆ ಅಧ್ಯಾತ್ಮ ಪ್ರಸಾರದಿಂದ ಸಮಾಜದ ಸಾತ್ತ್ವಿಕತೆ ಹೆಚ್ಚಿಸುವುದಾಗಿದೆ. ಸನಾತನ-ನಿರ್ಮಿತ ದೇವರ ಚಿತ್ರಗಳು ಮಾರುಕಟ್ಟೆಯಲ್ಲಿ ಸಿಗುವ ಚಿತ್ರಗಳಿಗಿಂತ ಹೆಚ್ಚು ಸಾತ್ತ್ವಿಕವಾಗಿರುವುದರಿಂದ ಈ ಉದ್ದೇಶ ಈಡೇರುತ್ತದೆ. ಅಧ್ಯಾತ್ಮದ ಜ್ಞಾನವಿರುವವರಿಗೆ ಮತ್ತು ಸಾಧಕರಿಗೆ ಆ ಬಗ್ಗೆ ಅನುಭೂತಿಯೂ ಬಂದಿವೆ.
೨. ಸನಾತನದ ಪ್ರಕಾಶನಗಳು ಮತ್ತು ಉತ್ಪಾದನೆ ಗಳ ಮೇಲೆ ದೇವರ ಚಿತ್ರಗಳನ್ನು ಮುದ್ರಿಸುವಾಗಲೇ ಅವುಗಳನ್ನು ಹೇಗೆ ಜೋಪಾನ ಮಾಡಬೇಕು, ಉತ್ಪಾದನೆ ಗಳ ಉಪಯೋಗವಾದ ನಂತರ ಅವುಗಳ ವಿನಿಯೋಗ ಹೇಗೆ ಮಾಡಬೇಕು, ಇತ್ಯಾದಿ ವಿಷಯಗಳ ಬಗ್ಗೆ ಆದಷ್ಟು ಆಯಾ ಉತ್ಪಾದನೆ ಮೇಲೆ ಸೂಚನೆಗಳನ್ನು ಮುದ್ರಿಸ ಲಾಗುತ್ತದೆ. ಸನಾತನದ ವಾಚಕರು, ಹಿತಚಿಂತಕರು, ಸಾಧಕರು ಆ ಸೂಚನೆ ಪಾಲಿಸಿ ಇತರರಿಗೂ ಹೇಳುತ್ತಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವತೆಗಳ ವಿಡಂಬನೆಯ ವಿರುದ್ಧ ಆಂದೋಲನವನ್ನು ಹಮ್ಮಿಕೊಳ್ಳುವಾಗ ಸನಾತನದ ಪ್ರಕಾಶನಗಳು ಮತ್ತು ಉತ್ಪಾದನೆಗಳ ಮೇಲೆ ದೇವತೆಗಳ ಚಿತ್ರವೇಕೆ ?