ಪೊಲೀಸರೇ, ಇದನ್ನು ಗಮನದಲ್ಲಿಡಿರಿ !

ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಕರ್ಮವನ್ನು ಸರಿಯಾಗಿ ನಿರ್ವಹಿಸಬೇಕು, 
ಇಲ್ಲದಿದ್ದಲ್ಲಿ ಪಾಪ ತಟ್ಟುತ್ತದೆ ! - ಪ.ಪೂ. ಪಾಂಡೆ ಮಹಾರಾಜರು
೧. ಕರ್ಮವನ್ನು ಮಾಡುವಾಗ ಎಚ್ಚರದಿಂದಿರುವುದು ಆವಶ್ಯಕವಾಗಿದೆ; 
ಏಕೆಂದರೆ ತಪ್ಪು ಕರ್ಮವನ್ನು ಮಾಡುವವನಿಗೆ ಮಹಾಪಾಪ ತಟ್ಟುತ್ತದೆ !
‘ಪ್ರತಿಯೊಬ್ಬ ವ್ಯಕ್ತಿಯೂ ತನ್ನಿಂದ ತಪ್ಪು ಕರ್ಮಗಳಾಗದಂತೆ ಎಚ್ಚರ ವಹಿಸಬೇಕು; ಏಕೆಂದರೆ ಮಾಡಿದ ಕರ್ಮದ ಫಲವನ್ನು ನಾವೇ ಅನುಭವಿಸಬೇಕಾಗುತ್ತದೆ. ನಮ್ಮ ಕೈಯಿಂದಾದ ಕುಕರ್ಮಕ್ಕಾಗಿ ನಾವು ಮೃತ್ಯುವಿನ ಬಳಿಕವೂ ಯಮಯಾತನೆಯನ್ನು ಭೋಗಿಸಬೇಕಾಗುತ್ತದೆ. ಪ್ರತಿಯೊಂದು ಕರ್ಮವೂ ಮಾನವೀಯತೆಯನ್ನು ಹೊಂದಿರಬೇಕು. ಒಳ್ಳೆಯ ವ್ಯಕ್ತಿಗೆ ತೊಂದರೆಯನ್ನು ಕೊಡುವುದು ಬಹಳ ದೊಡ್ಡ ತಪ್ಪು ಕರ್ಮವಾಗಿದೆ. ಇದರಿಂದ ಆ ವ್ಯಕ್ತಿಗೆ ಮಹಾಪಾಪ ತಟ್ಟುತ್ತದೆ. ಈ ಧರ್ಮಶಾಸ್ತ್ರದ ನಿಯಮವನ್ನು ಗಮನದಲ್ಲಿರಿಸಿ ಎಲ್ಲರೂ ಯೋಗ್ಯ ಕರ್ಮವನ್ನೇ ಮಾಡಬೇಕು.

೨. ಪೊಲೀಸರು ತಮ್ಮ ಕುಕರ್ಮಗಳ ಪರಿಣಾಮವನ್ನು ಭೋಗಿಸಬೇಕಾಗಿದ್ದು, ಹಾಗೆಯೇ ಅವರ ಜೀವನವು ಅಪಾಯದಲ್ಲಿರುವುದು
ಕೆಲವು ಪೊಲೀಸರಿಂದ ತಪ್ಪು ಕರ್ಮಗಳಾಗುತ್ತಿದೆ. ಪ್ರತ್ಯಕ್ಷದಲ್ಲಿ ಪೊಲೀಸರು ಯಾವ ವ್ಯಕ್ತಿಯನ್ನಾದರೂ ಸಂಶಯದ ಆಧಾರದಲ್ಲಿ ಬಂಧಿಸಿದ ಬಳಿಕ ಅವನಿಗೆ ತೊಂದರೆ ಕೊಡುವ ನಿಯಮಗಳಿಲ್ಲವಾದರೂ ಒಳ್ಳೆಯ ವ್ಯಕ್ತಿಗಳಿಗೂ ಪೊಲೀಸರು ತೊಂದರೆಯನ್ನು ಕೊಡುತ್ತಾರೆ. ದುಷ್ಟ ವ್ಯಕ್ತಿಗೆ ಸವಲತ್ತುಗಳನ್ನು ಕೊಡಲಾಗುತ್ತದೆ ಮತ್ತು ಒಳ್ಳೆಯ ವ್ಯಕ್ತಿಗೆ ವಿನಾಕಾರಣ ತೊಂದರೆಯನ್ನು ಕೊಡುತ್ತಾರೆ. ಪೊಲೀಸರ ಈ ಕರ್ಮದ ಪರಿಣಾಮವೆಂದು ಗೂಂಡಾಗಳು, ನಕ್ಸಲ್‌ವಾದಿಗಳು ಮತ್ತು ಭಯೋತ್ಪಾದಕರು ಪೊಲೀಸರ ಮೇಲೆ ದಾಳಿ ಮಾಡುತ್ತಿದ್ದಾರೆ. ಜನಸಾಮಾನ್ಯರು ದುರ್ಬಲರಾಗಿದ್ದಾರೆ. ಆದರೆ ಅದರೊಂದಿಗೆ ಪೊಲೀಸರು ಸಹ ದುರ್ಬಲರಾಗುತ್ತಿದ್ದಾರೆ. ಪೊಲೀಸರ ಜೀವನವೇ ಅಪಾಯದಲ್ಲಿದೆ. ಆದುದರಿಂದ ಪೊಲೀಸರು ಅವರ ಕರ್ಮವನ್ನು ಸರಿಯಾಗಿ ನಿರ್ವಹಿಸಬೇಕು ಇಲ್ಲದಿದ್ದಲ್ಲಿ ಅದರ ತಕ್ಕ ಪ್ರತಿಫಲವನ್ನು ಅವರು ಭೋಗಿಸಬೇಕಾಗುವುದು ಎನ್ನುವುದನ್ನು ಅರಿತುಕೊಂಡು ತನ್ನ ಕರ್ಮವನ್ನು ದೇವರು ಮೆಚ್ಚುವಂತೆ ಮಾನವೀಯತೆಯಿಂದ ನಿರ್ವಹಿಸಬೇಕು. ಕರ್ಮ ವನ್ನು ಮಾಡುವಾಗ ಪ್ರತಿಯೊಬ್ಬನೂ ತನ್ನ ಮೃತ್ಯುವನ್ನು ಕಣ್ಣೆದುರಿಗೆ ಇಟ್ಟು ಕೊಂಡು ಕರ್ಮವನ್ನು ಮಾಡಿದರೆ ತಪ್ಪುಗಳಾಗುವುದಿಲ್ಲ. ಕರ್ಮವನ್ನು ಮಾಡುವಾಗ ಸ್ಮಶಾನವೈರಾಗ್ಯ ಬೇಡ, ಮನಸ್ಸಿನಲ್ಲಿ ನಿರಂತರವಾಗಿ ಸಂವೇದನಾಶೀಲತೆ ಹೊಂದಿರಬೇಕು.
- ಪ.ಪೂ. ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ್.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪೊಲೀಸರೇ, ಇದನ್ನು ಗಮನದಲ್ಲಿಡಿರಿ !