ಬಿಳಿ ಸಕ್ಕರೆಯಿಂದ ಶರೀರದ ಮೇಲಾಗುವ ದುಷ್ಪರಿಣಾಮಗಳು !

೧. ಬಿಳಿ ಸಕ್ಕರೆಯಿಂದ ಶರೀರದ ಮೇಲಾಗುವ ದುಷ್ಪರಿಣಾಮಗಳು
ದೈನಂದಿನದ ಶಾರೀರಿಕ ಕ್ರಿಯೆಗೆ ಅಗತ್ಯವಾಗಿರುವ ಶೇಕಡಾ ೪೫ ರಿಂದ ೬೫ ರಷ್ಟು ಶಕ್ತಿಯು ಆಹಾರದ ಮೂಲಕ ದೊರೆಯುವ ನೈಸರ್ಗಿಕ ಸಕ್ಕರೆಯಿಂದ (ಪಿಷ್ಟ ಪದಾರ್ಥಗಳಿಂದ) ಸಿಗುತ್ತದೆ. ಅದು ಧಾನ, ಫಲಗಳು, ನೆಲಗಡಲೆ, ಕಂದಮೂಲ, ಹಾಲು ಇತ್ಯಾದಿಗಳ ಮೂಲಕ ಸಹಜವಾಗಿ ದೇಹಕ್ಕೆ ಪೂರೈಸಲಾಗುತ್ತದೆ. ಶಾರೀರಿಕ ಕ್ರಿಯೆಗಳನ್ನು ಮಾಡಲು ನೈಸರ್ಗಿಕ ಸಕ್ಕರೆಯು ಇಂಧನದಂತೆ ಕಾರ್ಯ ಮಾಡುತ್ತದೆ. ಅದಕ್ಕಾಗಿ ಅವು ಉಪಯುಕ್ತವಾಗಿರುತ್ತವೆ; ಆದರೆ ರಿಫೈಂಡ್ ಸಕ್ಕರೆಯನ್ನು ಜೀರ್ಣಗೊಳಿಸುವಾಗ ಶಾರೀರಿಕ ಶಕ್ತಿ ಹಾಗೂ ಶರೀರದ ಮೂಲಭೂತ ತತ್ತ್ವಗಳ ಅಪವ್ಯಯವಾಗು ತ್ತದೆ. ಅದು ಮೂಳೆಗಳು, ಹೃದಯ, ಮೆದುಳು, ಮೇದೋಜೀರಕ ಗ್ರಂಥಿ, ಯಕೃತ್ ಇತ್ಯಾದಿಗಳ ಕಾರ್ಯಪ್ರಣಾಲಿಯನ್ನು ಅಡ್ಡಿಪಡಿಸುತ್ತದೆ.
೧ ಅ. ಸಕ್ಕರೆ ಹಾಗೂ ಎಲುಬುಗಳ ರೋಗ : ಸಕ್ಕರೆಯನ್ನು ಜೀರ್ಣಿಸಲು ಅಗತ್ಯವಾಗಿರುವ ಕ್ಯಾಲ್ಸಿಯಂ ಅನ್ನು ಎಲುಬುಗಳಿಂದ ಹಾಗೂ ಹಲ್ಲು ಗಳಿಂದ ತೆಗೆದು ಕೊಳ್ಳುತ್ತದೆ. ಕ್ಯಾಲ್ಶಿಯಮ್ ಹಾಗೂ ಫಾಸ್ಫರಸ್‌ನ ಸಮತೋಲನ ದಲ್ಲಿ ಬದಲಾವಣೆ ಯಾದಾಗ ಮೂಳೆಗಳು ಪುಡಿಯಾಗುತ್ತವೆ. ಆದ್ದರಿಂದ ಕೀಲುನೋವು, ಸೊಂಟನೋವು, ಸರ್ವೈಕಲ್ ಸ್ಪಾನ್ಡಿಲಿಸಿಸ್ (ಕುತ್ತಿಗೆ ನೋವು), ಹಲ್ಲಿನ ರೋಗ, ಕೂದಲು ಉದುರುವುದು ಇತ್ಯಾದಿ ಸಮಸ್ಯೆಗಳು ಉದ್ಭವಿಸುತ್ತದೆ.
೧ ಆ. ಸಕ್ಕರೆ ಹಾಗೂ ಮಧುಮೇಹ : ಸಕ್ಕರೆಯು ರಕ್ತದಲ್ಲಿ ನ ಪಿಷ್ಟ ಅಂಶವನ್ನು ಬಹಳ ಬೇಗ ಹೆಚ್ಚಿಸುತ್ತದೆ. ಇದನ್ನು ಶರೀರದೊಳಗೆ ಹೀರಿಕೊಳ್ಳುವ ಸಲುವಾಗಿ ಮೇದೋಜೀರಕ ಗ್ರಂಥಿಗಳು ಇನ್ಸುಲಿನ್‌ಅನ್ನು ಬಿಡು ಗಡೆ ಮಾಡುತ್ತದೆ. ಸತತವಾಗಿ ಹೆಚ್ಚಾಗುತ್ತಿರುವ ಇನ್ಸುಲಿನ್‌ನ ಬೇಡಿಕೆಯಿಂದ ಈ ಗ್ರಂಥಿಗಳಿಗೆ ಆಯಾಸ ವಾಗುತ್ತದೆ. ಆದ್ದರಿಂದ ಇನ್ಸುಲಿನ್‌ನ ನಿರ್ಮಾಣ ಕಡಿಮೆ ಯಾಗಿ ಮಧುಮೇಹವಾಗುತ್ತದೆ.
೧ ಇ. ಸಕ್ಕರೆ ಹಾಗೂ ಹೃದ್ರೋಗ : ಸಕ್ಕರೆಯು ಹೆಚ್.ಡಿ.ಎಲ್ ಎಂಬ ಲಾಭದಾಯಕ ಕೊಲೆಸ್ಟ್ರಾಲ್‌ಅನ್ನು ಕಡಿಮೆ ಮಾಡಿ ಹಾನಿಕಾರಿ ಕೊಲೆಸ್ಟ್ರಾಲ್ ಎಲ್.ಡಿ.ಎಲ್ ಹಾಗೂ ಟ್ರೈಗ್ಲಿಸರೈಡ್ಸ್‌ಅನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತನಾಳಗಳ ಗೋಡೆಗಳು ದಪ್ಪವಾಗಿ ಉಚ್ಚರಕ್ತದೊತ್ತಡ ಹಾಗೂ ಹೃದ್ರೋಗಗಳು ಉತ್ಪನ್ನವಾಗುತ್ತದೆ. ಲಂಡನ್‌ನ ಪಾ.ಜಾನ್ ಯುಡಕೀನ್‌ರವರ ಮಾತಿನಂತೆ ಹೃದ್ರೋಗಕ್ಕೆ ಸಕ್ಕರೆ ಸಹ ಬೊಜ್ಜಿನಷ್ಟೇ ಜವಾಬ್ದಾರಿಯಾಗಿದೆ.
೧ ಈ. ಸಕ್ಕರೆ ಹಾಗೂ ಅರ್ಬುದರೋಗ (ಕ್ಯಾನ್ಸರ್): ಸಕ್ಕರೆ ಇದು ಅರ್ಬುದರೋಗದ ಕೋಶಕ್ಕೆ ಪರಿಪೂರ್ಣ ಆಹಾರವಾಗಿದೆ. ಈ ಕೋಶಗಳಿಗೆ ಬೇರೆ ಆಹಾರ ತತ್ತ್ವಗಳು ಉಪಯೋಗವಾಗುವುದಿಲ್ಲ; ಆದ್ದರಿಂದ ಅದಕ್ಕೆ ಸಕ್ಕರೆಯ ಅಗತ್ಯ ಕಂಡುಬರುತ್ತದೆ. ಯಾವ ಪದಾರ್ಥಗಳಿಂದ ರಕ್ತದಲ್ಲಿ ಸಕ್ಕರೆಯು ತೀವ್ರವಾಗಿ ಹೆಚ್ಚಾಗುತ್ತದೆಯೋ, ಆ ಪದಾಥಗಳು ಅರ್ಬುದದ ಕೋಶಗಳನ್ನು ಅಪಾರ ಪ್ರಮಾಣದಲ್ಲಿ ಹೆಚ್ಚು ಮಾಡಲು ಸಹಾಯ ಮಾಡುತ್ತದೆ. ಡಾ. ಥಾಮಸ್ ಗ್ರೆಬರ್‌ರವರು ಅರ್ಬುದದ ಕೋಶಗಳಿಗೆ ಸಕ್ಕರೆಯು ಆಹಾರವಾಗಿ ಸಿಗದಿದ್ದರೆ ಅದು ಮೃತಪಡುತ್ತದೆ ಎಂಬುದನ್ನು ಸಾಬೀತು ಪಡಿಸಿದ್ದಾರೆ.
ಸಕ್ಕರೆಯಿಂದ ಶರೀರದ ರೋಗಪ್ರತಿಕಾರಕ ಕ್ಷಮತೆ ಕಡಿಮೆಯಾಗುತ್ತದೆ. ಆದ್ದರಿಂದ ಅರ್ಬುದರೋಗವು ಹರಡಲು ಸಹಾಯವಾಗುತ್ತದೆ. ಆದ್ದರಿಂದ ಬೇರೆ ತೊಂದರೆದಾಯಕ ರೋಗಗಳ ಸಂಕ್ರಮಣವಾಗುವ ಸಾಧ್ಯತೆಗಳು ಹೆಚ್ಚಾಗುತ್ತದೆ. ಮಾದಕ ಪದಾರ್ಥಗಳಂತೆ ಈಗ ರಿಫೈಂಡ್ ಸಕ್ಕರೆಯು ಅರ್ಬುದರೋಗಕ್ಕೆ ಮುಖ್ಯ ಕಾರಣವೆಂದು ಸಾಬೀತುಪಡಿಸಲಾಗಿದೆ.
೧ ಉ. ಸಣ್ಣ ಮಕ್ಕಳಲ್ಲಿ ಸಕ್ಕರೆಯ ದುಷ್ಪರಿಣಾಮ :ಸಿಹಿ ಪದಾರ್ಥಗಳ ಅತಿಯಾದ ಸೇವನೆಯಿಂದ ಸಣ್ಣ ಮಕ್ಕಳಲ್ಲಿ ಅಸಹನೆ, ಚಂಚಲತೆ ಹಾಗೂ ಅಶಾಂತಿ ಹೆಚ್ಚುತ್ತದೆ. ಸಕ್ಕರೆಯಿಂದ ಉತ್ಪನ್ನವಾಗುವ ಆಮ್ಲಗಳು ಹಲ್ಲುಗಳ ಮೇಲಿನ ಸಂರಕ್ಷಕ ಪದರವನ್ನು (ಎನಾಮಲ್) ನಾಶ ಮಾಡುತ್ತದೆ. ಎಮೋರಿ ವಿಶ್ವವಿದ್ಯಾಲಯವು ನಡೆಸಿದ ಸಮೀಕ್ಷೆಯಂತೆ ಯಾವ ಮಕ್ಕಳಲ್ಲಿ ಶೇಕಡಾ ೩೦ ಕ್ಕಿಂತ ಹೆಚ್ಚು ಊರ್ಜೆಯ ಮೂಲ ಸಕ್ಕರೆಯುಕ್ತ ಪದಾರ್ಥದಿಂದ ಇರುತ್ತದೆಯೋ, ಅವರಲ್ಲಿ ಹೃದಯದ ದೌರ್ಬಲ್ಯತೆ, ಕೊಲೆಸ್ಟ್ರಾಲ್‌ನ ಹೆಚ್ಚಳ, ಹೊಟ್ಟೆಹುಳ , ಬೊಜ್ಜು ಹಾಗೂ ಇನ್ಸುಲಿನ್‌ನ ಪ್ರತಿರೋಧ (ರೆಸಿಸ್ಟೆನ್ಸ್) ಕಂಡುಬಂದಿದೆ.
೧ ಊ. ಸಕ್ಕರೆಯ ಇತರ ದುಷ್ಪರಿಣಾಮಗಳು : ಸಕ್ಕರೆ ಹೆಚ್ಚಾದರೆ ಶರೀರದಲ್ಲಿ ಬಿ ಜೀವಸತ್ವದ ಕೊರತೆ ನಿರ್ಮಾಣವಾಗುತ್ತದೆ. ಇದರಿಂದ ಜೀರ್ಣಕ್ರಿಯೆ ಹಾಗೂ ಸ್ನಾಯುಗಳಿಗೆ ಸಂಬಂಧಪಟ್ಟ ರೋಗಗಳು ಉತ್ಪನ್ನವಾಗುತ್ತವೆ. ಸಕ್ಕರೆಯು ರಕ್ತದಲ್ಲಿನ ಆಮ್ಲವನ್ನು ಹೆಚ್ಚಿಸಿ ಮೈಗ್ರೇನ್ ಹಾಗೂ ತ್ವಚೆಯ ರೋಗ ಉತ್ಪನ್ನ ಮಾಡುತ್ತದೆ. ಸಕ್ಕರೆಯಿಂದ ವೀರ್ಯವು ತೆಳುವಾಗು ತ್ತದೆ. ಆಹಾರದಲ್ಲಿ ಸಕ್ಕರೆ ಹೆಚ್ಚಾದಂತೆ ಬೊಜ್ಜಿನ ಅಪಾಯ ಹೆಚ್ಚಾಗುತ್ತದೆ.
೧ ಎ. ಸಕ್ಕರೆಯು ಇಷ್ಟು ಭಯಂಕರವೇಕೆ ?: ಸಕ್ಕರೆ ಯನ್ನು ಬಿಳುಪಾಗಿ ಹೊಳೆಯುವಂತೆ ಮಾಡಲು ಸಲ್ಫರ್ ಡೈಆಕ್ಸೈಡ್, ಫಾಸ್ಫೊರಿಕ್ ಆಸಿಡ್, ಕ್ಯಾಲ್ಶಿಯಮ್ ಹೈಡ್ರಾಕ್ಸೈಡ್, ಆಕ್ಟಿವೇಟೆಡ್ ಕಾರ್ಬನ್ ಇತ್ಯಾದಿ ರಾಸಾಯನಿಕಗಳನ್ನು ಬಳಸಲಾಗುತ್ತದೆ. ಅನಂತರ ಅದನ್ನು ಅತಿ ಹೆಚ್ಚು ತಾಪಮಾನದಲ್ಲಿ ಬಿಸಿ ಮಾಡಿ ಅತಿ ಕಡಿಮೆ ತಾಪಮಾನದಲ್ಲಿ ಒಣಗಿಸಲಾಗುತ್ತದೆ. ಈ ಪ್ರಕ್ರಿಯೆಯಿಂದ ಅದರಲ್ಲಿರುವ ಎಲ್ಲ ಪೌಷ್ಟಿಕ ತತ್ತ್ವಗಳು, ಖನಿಜಗಳು, ಪ್ರೊಟೀನ್ ಹಾಗೂ ಜೀವಸತ್ವಗಳು ನಾಶವಾಗುತ್ತವೆ. ಆದ್ದರಿಂದ ರಿಫೈನ್ಡ್ ಸಕ್ಕರೆಯು ಒಂದು ಸೌಮ್ಯ ವಿಷ (ಸ್ಲೋ ವೈಟ್ ಪಾಯ್‌ಸನ್)ವಾಗುತ್ತದೆ.
೧ ಏ. ಅತಿ ಹೆಚ್ಚು ಸಕ್ಕರೆಯಿರುವ ಪದಾರ್ಥ : ವಿವಿಧ ಸಿದ್ಧ ಪದಾರ್ಥಗಳಲ್ಲಿರುವ ಸಕ್ಕರೆಯ ಪ್ರಮಾಣವನ್ನು ಈ ಕೆಳಗೆ ನೀಡಲಾಗಿದೆ. ಈ ಸಂಖ್ಯೆಗಳು ವಿಸ್ಮಯ ಮೂಡಿಸುವಂತಹದ್ದಾಗಿದೆ.


೧ ಒ. ಸಕ್ಕರೆಯನ್ನು ಹೆಚ್ಚಾಗಿ ಬಳಸುವುದು ಅಪಾಯಕಾರಿ : ‘ಫುಡ್ ಆಂಡ್ ಅಗ್ರಿಕಲ್ಚರ್ ಆರ್ಗನೈಸೇಶನ್’ (FAO)ನಡೆಸಿದ ಸಮೀಕ್ಷೆಯಂತೆ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ವರ್ಷದಲ್ಲಿ ೨೪ ಕೆಜಿ (ಪ್ರತಿದಿನ ೬೬ ಗ್ರಾಂ) ಸಕ್ಕರೆಯನ್ನು ಸೇವಿಸುತ್ತಾನೆ. ಸಕ್ಕರೆ ಕಾರ್ಖಾನೆಗಳು ನಿರ್ಮಾಣವಾಗುವ ಮುನ್ನ ಎಲ್ಲಿಯೂ ಖಾದ್ಯ ಪದಾರ್ಥಗಳಲ್ಲಿ ರಿಫೈಂಡ್ ಸಕ್ಕರೆ ಯನ್ನು ಬಳಸುತ್ತಿರಲಿಲ್ಲ. ಆದ್ದರಿಂದ ಹಳೆ ಕಾಲದ ಜನರು ದೀರ್ಘಾಯುಷಿಗಳಾಗಿ ಹಾಗೂ ಸಂಪೂರ್ಣ ಆಯಸ್ಸು ಸಕ್ರಿಯವಾಗಿರುತ್ತಿದ್ದರು.
(ಆಧಾರ : ಮಾಸಿಕ ಋಷಿಪ್ರಸಾದ)

೨. ರಾಸಾಯನಿಕ ಸಕ್ಕರೆಗೆ ಪರ್ಯಾವೆಂದರೆ ಬೆಲ್ಲ !
ಸಕ್ಕರೆಗೆ ಹೋಲಿಸಿದರೆ ಬೆಲ್ಲವನ್ನು ತಯಾರಿಸುವಾಗ ಅದರಲ್ಲಿ ಕಡಿಮೆ ರಾಸಾಯನಿಕಗಳ ಪ್ರಕ್ರಿಯೆ ಮಾಡುತ್ತಾರೆ. ಆದ್ದರಿಂದ ರಾಸಾಯನಿಕ ಸಕ್ಕರೆಗಿಂತ ಬೆಲ್ಲವು ಆರೋಗ್ಯಕ್ಕೆ ಲಾಭಕರವಾಗಿದೆ. ಸೇಂದ್ರಿಯ ಪದ್ಧತಿಯಲ್ಲಿ, ಅಂದರೆ ಯಾವುದೇ ರೀತಿಯ ಹಾನಿಕಾರಿ ರಾಸಾಯನಿಕವನ್ನು ಉಪಯೋಗಿಸದೆ ತಯಾರಿಸಲಾಗುವ ಬೆಲ್ಲ ಅಥವಾ ಸಕ್ಕರೆ ಇದು ರಾಸಾಯನಿಕ ಸಕ್ಕರೆಗೆ ಪರ್ಯಾಯವಾಗಿದೆ. ಬೆಲ್ಲದಲ್ಲಿ ಶರೀರಕ್ಕೆ ಅಗತ್ಯವಾಗಿರುವ ಖನಿಜಗಳಿರುತ್ತದೆ.
- ವೈದ್ಯ ಮೇಘರಾಜ ಪರಾಡಕರ್, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೮.೫.೨೦೧೬)

ಮಾನವನಿಗಾಗಿ ಹಾನಿಕಾರಿಯಾಗಿರುವ ಬಿಳಿ ಸಕ್ಕರೆಯ ಉತ್ಪಾದನೆಗೆ ಪ್ರೋತ್ಸಾಹ ನೀಡಿ ಜನರ ಆರೋಗ್ಯದೊಂದಿಗೆ ಯಾವುದೇ ಸಂಬಂಧವಿಲ್ಲ ಎಂಬುದನ್ನು ಸಾಬೀತು ಪಡಿಸುವ ಸರ್ವಪಕ್ಷೀಯ ಸರಕಾರಗಳು !

ಬಿಳಿ ಸಕ್ಕರೆಯ ದುಷ್ಪರಿಣಾಮಗಳು ತಿಳಿದಿ ದ್ದರೂ ಇಂದಿನ ತನಕ ಸರ್ವಪಕ್ಷೀಯ ಸರಕಾರದ ಆಡಳಿತಗಾರರು ಬಿಳಿ ಸಕ್ಕರೆಯ ಸಮಸ್ಯೆಯ ಮೇಲೆ ಉಪಾಯವನ್ನಂತು ಮಾಡಲಿಲ್ಲ, ಬದಲಾಗಿ ಅವರು ಮುಂದಿನ ಸ್ವಾರ್ಥ ಕೃತ್ಯ ಮಾಡಿದರು.
೧. ತಮ್ಮ ಅಧಿಪತ್ಯದ ಕೆಳಗೆ ಹಲವಾರು ಸಕ್ಕರೆ ಕಾರ್ಖಾನೆಗಳನ್ನು ತೆರೆದು ಜನತೆಯ ಹಣದಿಂದ ಸಾವಿರಾರು ಕೋಟಿ ರೂಪಾಯಿಯ ಅನುದಾನ ವನ್ನು ನೀಡಿದರು ಹಾಗೂ ನಂತರ ಅದನ್ನು ಕೊಳ್ಳೆ ಹೊಡೆದರು.
೨. ಸಕ್ಕರೆಸಮ್ರಾಟ ಎಂಬ ಬಿರುದನ್ನು ಮೆರೆಯಿ ಸುವುದಕ್ಕಾಗಿ ಸಕ್ಕರೆ ಉದ್ಯೋಗಕ್ಕೆ ಅನಗತ್ಯ ಮಹತ್ವ ವನ್ನು ನೀಡಿ, ಅತಿ ಹೆಚ್ಚು ಪ್ರಮಾಣದಲ್ಲಿ ನೀರು ಕುಡಿಯುವ ಹಾಗೂ ಭೂಮಿಯ ಫಲವತ್ತತೆಯನ್ನು ಕಡಿಮೆ ಮಾಡುವ ಕಬ್ಬು ಉತ್ಪಾದನೆಗೆ ಪ್ರೋತ್ಸಾಹ ನೀಡಿದರು. ಇದರಿಂದ ದೇಶದಲ್ಲಿ ಅಲ್ಲಲ್ಲಿ ಬರಗಾಲ ಪ್ರದೇಶಗಳು ನಿರ್ಮಾಣವಾಗಿದೆ. - (ಪರಾತ್ಪರ ಗುರು) ಡಾ. ಆಠವಲೆ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಬಿಳಿ ಸಕ್ಕರೆಯಿಂದ ಶರೀರದ ಮೇಲಾಗುವ ದುಷ್ಪರಿಣಾಮಗಳು !