ಸನಾತನ ಸಂಸ್ಥೆಯ ಮಾನಹಾನಿ ಮಾಡುವ ವಾರ್ತೆ ಪ್ರಕಟಿಸುವ ದಿನಪತ್ರಿಕೆಗಳ ಮಾಹಿತಿಯನ್ನು ತಿಳಿಸಿರಿ !

ಡಾ. ದಾಬೋಲಕರ್ ಹತ್ಯೆ ಪ್ರಕರಣದಲ್ಲಿ ಸನಾತನದ ಸಾಧಕ ಡಾ. ವಿರೇಂದ್ರಸಿಂಹ ತಾವಡೆಯವರನ್ನು ಬಂಧಿಸಿದ ನಂತರ ವಿವಿಧ ರಾಷ್ಟ್ರದ್ರೋಹಿ ಮತ್ತು ಧರ್ಮದ್ರೋಹಿ ವಾರ್ತಾವಾಹಿನಿ ಮತ್ತು ನಿಯತಕಾಲಿಕೆಗಳು ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಮಾನಹಾನಿಯನ್ನು ಮಾಡುವ ವಾರ್ತೆಯನ್ನು ಪ್ರಕಟಿಸುತ್ತಿವೆ. ಸಾಧಕರು ಇಂತಹ ಅಪಪ್ರಚಾರದಿಂದಾಗಿ ಸ್ವಲ್ಪವೂ ವಿಚಲಿತರಾಗಬಾರದು. ಈ ವಾರ್ತೆ ಬಗ್ಗೆ ಕಾನೂನುಕ್ರಮಕೈಗೊಳ್ಳಬಹುದೇ, ಎಂಬುದನ್ನು ಕಾನೂನುತಜ್ಞರಿಂದ ಅರಿತುಕೊಳ್ಳಲು ಸಂಬಂಧಿತ ವಾರ್ತೆಯ ಛಾಯಾಚಿತ್ರ ತೆಗೆದು ‘ವಾಟ್ಸ್‌ಆ್ಯಪ್’ ಮೂಲಕ ಶ್ರೀ. ಶಿವಾಜಿ ವಟಕರ್ (ಸಂಪರ್ಕ : ೮೪೫೧೦೦೬೧೧೧) ಇವರಿಗೆ ಕಳುಹಿಸಬೇಕು. ಅದರೊಂದಿಗೆ ನಿಯತಕಾಲಿಕೆ ಮತ್ತು ಆವೃತ್ತಿಯ ಹೆಸರು, ಪ್ರಕಟಣೆಯ ದಿನಾಂಕ, ಪುಟ ಸಂಖ್ಯೆ ಇತ್ಯಾದಿ ಮಾಹಿತಿ ತಿಳಿಸಬೇಕು. ಸಾಧ್ಯವಿದ್ದರೆ ಆ ವಾರ್ತೆಯನ್ನು ‘ಸ್ಕ್ಯಾನ್’ ಮಾಡಿ ವಿ-ಅಂಚೆ ಮೂಲಕ (hjs.karya@gmail.com) ಕಳುಹಿಸಬೇಕು.
ಮುಂದಿನ ಕಾನೂನುಕ್ರಮಕ್ಕಾಗಿ ಸಂಚಿಕೆಯನ್ನು ಎಲ್ಲಿಗೆ ಕಳುಹಿಸಬೇಕೆಂದು ಸಂಬಂಧಿತ ಸಾಧಕರಿಗೆ ತಿಳಿಸಲಾಗುವುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ಸಂಸ್ಥೆಯ ಮಾನಹಾನಿ ಮಾಡುವ ವಾರ್ತೆ ಪ್ರಕಟಿಸುವ ದಿನಪತ್ರಿಕೆಗಳ ಮಾಹಿತಿಯನ್ನು ತಿಳಿಸಿರಿ !