ಸಾಧಕರಿಗೆ ಹಾಗೂ ಕಾರ್ಯಕರ್ತರಿಗೆ ಮಹತ್ವದ ಸೂಚನೆ

ಸಂಸ್ಥೆ ಹಾಗೂ ಸಮಿತಿಯೊಂದಿಗೆ ಸಹಕರಿಸುವ ಧರ್ಮಪ್ರೇಮಿಗಳು ರಾಷ್ಟ್ರ-ಧರ್ಮಕ್ಕೆ ಸಂಬಂಧಪಟ್ಟಂತೆ ಮಾಡಿದ ಕಾರ್ಯದ ಸುದ್ದಿಯನ್ನು ಹಾಗೂ ಅವರ ಛಾಯಾಚಿತ್ರವನ್ನು ಕೂಡಲೇ ಸನಾತನ ಪ್ರಭಾತ ಕಾರ್ಯಾಲಯಕ್ಕೆ ಕಳುಹಿಸಿ !
. ಧರ್ಮಪ್ರೇಮಿಗಳು ಹೇಳಿದ ವೈಶಿಷ್ಯಪೂರ್ಣ ಅಂಶಗಳು ಹಾಗೂ ಅವರು ಮಾಡಿದ ಪ್ರಯತ್ನಗಳನ್ನುಪ್ರಕಟಿಸಲು ಸನಾತನ ಪ್ರಭಾತ ಕಾರ್ಯಾಲಯಕ್ಕೆ 
ಕಳುಹಿಸಿಕೊಡದ ಒಂದು ಜಿಲ್ಲೆಯ ಬೇಜವಾಬ್ದಾರ ಸಾಧಕ !
ಒಂದು ನಗರದ ಓರ್ವ ಧರ್ಮಪ್ರೇಮಿಯು ಸನಾತನ ಪ್ರಭಾತದ ವಾಚಕರಾಗಿದ್ದು ಆಗಾಗ ಅವರು ಸಂಸ್ಥೆಗೆ ಸಹಾಯವನ್ನು ಮಾಡುತ್ತಾರೆ. ಅವರು ಒಂದು ಕಾರ್ಯಕ್ರಮದ ಬಗ್ಗೆ ಅವರು ಸ್ಪೂರ್ತಿಯುತ ಭಿಪ್ರಾಯವನ್ನು ನೀಡಿಯೂ ಅದನ್ನು ಸನಾತನ ಪ್ರಭಾತದ ಕಾರ್ಯಾಲಯಕ್ಕೆ ಪ್ರಸಿದ್ಧಿಗಾಗಿ ಕಳುಹಿಸುವ ಆಯೋಜನೆಯನ್ನು ಜವಾಬ್ದಾರ ಸಾಧಕರ ಮಾಡಲಿಲ್ಲ ಹಾಗೂ ಅವರು ನೀಡಿದ ಒಂದು ಜಾಹೀರಾತನ್ನು ಪತ್ರಿಕೆಯಲ್ಲಿ ಮುದ್ರಿಸಲು ಆಗುವುದಿಲ್ಲ ಎಂದು ಸ್ವಂತಮನಸ್ಸಿನಂತೆ ನಿರಾಕರಿಸಿದರು.

ಮತ್ತೊಬ್ಬ ಧರ್ಮಪ್ರೇಮಿಯು ಒಂದು ಉಪಕ್ರಮವನ್ನು ಹಮ್ಮಿಕೊಂಡು ರಾಷ್ಟ್ರಧ್ವಜದ ಅವಮಾನವನ್ನು ತಡೆಯಲು ಪ್ರಯತ್ನಿಸಿದ್ದರು ಮತ್ತು ಅದರಲ್ಲಿ ಅವರು ಸಫಲರಾದರು. ರಾಷ್ಟ್ರ-ಧರ್ಮದ ಕಾರ್ಯಕ್ಕಾಗಿ ಕೃತಿಶೀಲರಾಗಿರುವ ಈ ಧರ್ಮಪ್ರೇಮಿಗಳ ಕಾರ್ಯದ ವಾರ್ತೆಯನ್ನು ಪ್ರಸಿದ್ಧ ಪಡಿಸಲು ಸನಾತನ ಪ್ರಭಾತ ಕಾರ್ಯಾಲಯಕ್ಕೆ ಕಳುಹಿಸುವ ಆಯೋಜನೆ ಈ ಜವಾಬ್ದಾರ ಸಾಧಕರು ಮಾಡಲಿಲ್ಲ. ಇಷ್ಟೇ ಅಲ್ಲದೆ ಇತರ ಸಮಯದಲ್ಲಿಯೂ ಆ ಧರ್ಮಪ್ರೇಮಿಯು ಆಗಾಗ ರಾಷ್ಟ್ರ ಹಾಗೂ ಧರ್ಮದ ಹಿತಕ್ಕಾಗಿ ಮಾಡಿದ ಕಾರ್ಯವನ್ನು ಕಳುಹಿಸಿರಲಿಲ್ಲ, ಎಂದು ಗಮನಕ್ಕೆ ಬಂದಿತು.
ಸನಾತನದ ಓರ್ವ ಸಂತರು ಈ ತಪ್ಪುಗಳ ಗಾಂಭೀರ್ಯತೆಯನ್ನು ಗಮನಕ್ಕೆ ತಂದುಕೊಂಡು ಆ ಜವಾಬ್ದಾರ ಸಾಧಕರಿಗೆ ತಿಳಿಸಿದರು.
. ಸಾಧಕರೇ, ಧರ್ಮಪ್ರೇಮಿಗಳ ಕಾರ್ಯದ ವಾರ್ತಾಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಪ್ರತಿಯೊಂದು ಸುದ್ದಿಯನ್ನು ಸಮಯಕ್ಕೆ ಸರಿಯಾಗಿ ಸನಾತನ ಪ್ರಭಾತ ಕಾರ್ಯಾಲಯಕ್ಕೆ ಕಳುಹಿಸಿರಿ !
ವಿವಿಧ ಜಿಲ್ಲೆಗಳಲ್ಲಿನ ಹಲವಾರು ಧರ್ಮಪ್ರೇಮಿಗಳು ಆಗಾಗ ಸನಾತನ ಸಂಸ್ಥೆ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರ ಹಾಗೂ ಧರ್ಮದ ಕಾರ್ಯದಲ್ಲಿ ಸಹಕರಿಸುತ್ತಿರುತ್ತಾರೆ ಹಾಗೂ ಕೆಲವರು ಸ್ವಯಂಸ್ಫೂರ್ತಿಯಿಂದ ವಿವಿಧ ಉಪಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಧರ್ಮಪ್ರೇಮಿಗಳು ಮಾಡಿದ ಈ ಕಾರ್ಯದ ವಾರ್ತೆಯನ್ನು ಹಾಗೂ ಅದರ ಛಾಯಾಚಿತ್ರವನ್ನು ಸನಾತನ ಪ್ರಭಾತ ಕಾರ್ಯಾಲಯಕ್ಕೆ ಕಳುಹಿಸಿದರೆ ಅದನ್ನು ನಿಯತಕಾಲಿಕೆಗಳಲ್ಲಿ ಪ್ರಸಿದ್ಧಗೊಳಿಸಬಹುದು. ಅದರಿಂದ ಅವರು ಮಾಡಿದ ವೈಶಿಷ್ಯಪೂರ್ಣ ಕಾರ್ಯವು ಸಮಾಜಕ್ಕೆ ತಿಳಿಯುತ್ತದೆ ಹಾಗೂ ಆ ಧರ್ಮಪ್ರೇಮಿಗಳಿಗೆ ಮುಂದೆ ಕಾರ್ಯ ಮಾಡಲು ಪ್ರೇರಣೆ ಸಿಗುತ್ತದೆ.
ಈ ರೀತಿ ವಾರ್ತೆಯ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ಇನ್ನುಮುಂದೆ ಎಲ್ಲೆಡೆಯ ಸಾಧಕರು ಹಾಗೂ ಕಾರ್ಯಕರ್ತರು ಉಪಕ್ರಮವನ್ನು ಹಮ್ಮಿಕೊಂಡ ಬಳಿಕ ಅದರ ಬಗ್ಗೆ ವಾರ್ತೆಯನ್ನು ಆದಷ್ಟು ಬೇಗ ಕಳುಹಿಸಲು ಆಯೋಜನೆ ಮಾಡಬೇಕು. ಅದು ಸಾಧ್ಯವಾಗದಿದ್ದರೆ ಉಪಕ್ರಮ ಮುಗಿದ ೪೮ ಗಂಟೆ ಯೊಳಗೆ ತಮಗೆ ಸಮೀಪವಿರುವ ಸನಾತನ ಪ್ರಭಾತ ಕಾರ್ಯಾಲಯಕ್ಕೆ ಕಳುಹಿಸಿರಿ.
- (ಪೂ.) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೨..೨೦೧೬)                   

ಜಿಲ್ಲಾ ಸೇವಕರಿಗೆ ಸೂಚನೆ
ತಮ್ಮ ಜಿಲ್ಲೆಯಲ್ಲಿರುವ ಕೃತಿಶೀಲ ಧರ್ಮಪ್ರೇಮಿಗಳ ಕಾರ್ಯದ ವಾರ್ತೆಯನ್ನು ಆಯಾ ಸಮಯಕ್ಕೆ ಸನಾತನ ಪ್ರಭಾತ ಕಾರ್ಯಲಯಕ್ಕೆ ಕಳುಹಿಸುವ ಬಗ್ಗೆ ಸಾಧಕರ ಆಯೋಜನೆಯನ್ನು ಮಾಡಿ ಹಾಗೂ ಅದರ ವರದಿಯನ್ನು ತೆಗೆದುಕೊಳ್ಳಿರಿ.’

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸಾಧಕರಿಗೆ ಹಾಗೂ ಕಾರ್ಯಕರ್ತರಿಗೆ ಮಹತ್ವದ ಸೂಚನೆ