ಪಾನ್ಸರೆ ಕೊಲೆ ಪ್ರಕರಣದಲ್ಲಿ ಪೊಲೀಸರು ಸನಾತನದ ಸಾಧಕರಾದ ಡಾ. ತಾವಡೆಯವರನ್ನು ಥಳಿಸಿದ ಹಾಗೂ ಅವರನ್ನು ಸಿಲುಕಿಸಲು ಮಾಡಿದ ಅಯೋಗ್ಯ ಪ್ರಯತ್ನ !

ಶ್ರೀ. ಅಜಯ ಕೇಳಕರ್
೧. ಡಾ. ತಾವಡೆಯವರನ್ನು ಎಂದೂ ಕರೆದುಕೊಂಡು ಬರಬಹುದು ಎಂಬ ದರ್ಪದಿಂದ ಪುಣೆಗೆ ಹೋದ ಕೊಲ್ಹಾಪುರದ ಎಸ್‌ಐಟಿ ತಂಡದವರಿಗಾದ ಮುಖಭಂಗ !
ಕಾ. ಗೋವಿಂದ ಪಾನ್ಸರೆ ಕೊಲೆ ಪ್ರಕರಣ ದಲ್ಲಿ ಕೊಲ್ಹಾಪುರದ ವಿಶೇಷ ತನಿಖಾ ದಳದವರು (ಎಸ್‌ಐಟಿ) ಸೆಪ್ಟೆಂಬರ್ ೧ ರಂದು ಸನಾತನ ಸಂಸ್ಥೆಯ ಸಾಧಕರಾದ ಡಾ. ವೀರೇಂದ್ರಸಿಂಹ ತಾವಡೆಯವರನ್ನು ವಶಪಡಿಸಿಕೊಳ್ಳಲು ಪುಣೆಯ ಯೆರವಡಾ ಸೆರೆಮನೆಗೆ ಹೋಗಿದ್ದರು. (ಡಾ. ತಾವಡೆಯವರನ್ನು ದಾಭೋಳಕರ್ ಕೊಲೆ ಪ್ರಕರಣದಲ್ಲಿ ಸಿಬಿಐ ಸಿಲುಕಿಸಿದ್ದು ಅವರು ಸೆರೆಮನೆಯಲ್ಲಿದ್ದಾರೆ.) ತಾವಡೆಯವರನ್ನು ಎಂದೂ ಕರೆದುಕೊಂಡು ಬರಬಹುದೆಂಬ ದರ್ಪದಿಂದ ಹೋಗಿದ್ದ ಕೊಲ್ಹಾಪುರದ ಎಸ್‌ಐಟಿ ತಂಡದವರಿಗೆ ಕಾನೂನಿನ ಬಗ್ಗೆ ಇರುವ ಜ್ಞಾನವನ್ನು ಯೆರವಡಾ ಸೆರೆಮನೆಯ ಅಧಿಕಾರಿಗಳು ಬಟಾಬಯಲು ಮಾಡಿದರು. ನೀವು ಜೂನ್ ೨೦ ರಂದು ತಾವಡೆಯವರನ್ನು ವಶಪಡಿಸಿಕೊಳ್ಳಲು ಅನುಮತಿ ಪಡೆದುಕೊಂಡಿದ್ದೀರಿ. ಆದರೆ ಈಗ ಇಷ್ಟು ದಿನಗಳ ನಂತರ ಪ್ರತ್ಯಕ್ಷ ವಶಪಡಿಸಿಕೊಳ್ಳಲು ಬರುತ್ತಿದ್ದೀರಿ ? ಇದು ಅಯೋಗ್ಯವಾಗಿದೆ. ನೀವು ಪುನಃ ಅನುಮತಿ ಪಡೆಯಬೇಕು, ಎಂದು ಹೇಳಿ ಸೆರೆಮನೆಯ ಅಧಿಕಾರಿಗಳು ಮಧ್ಯಾಹ್ನ ಮೂರು ವಾಹನಗಳ ದಂಡಿನೊಂದಿಗೆ ಹೋಗಿದ್ದ ಕೊಲ್ಹಾಪುರದ ಪೊಲೀಸರನ್ನು ಸೆರೆಮನೆಯ ಹೊರಗೆ ಅಟ್ಟಿದರು. ಈ ತಂಡದಲ್ಲಿ ಈ ವಿಶೇಷ ದಳದ ಪ್ರಮುಖರು ಮತ್ತು ಮಹಾರಾಷ್ಟ್ರದ ಅಪರಾಧ ತನಿಖಾ ವಿಭಾಗದ ಪ್ರಮುಖ ಸಂಜಯಕುಮಾರ ಸಹ ಇದ್ದರು ಎಂಬುದು ವಿಶೇಷ ! ಹೀಗೆ ಮುಖಭಂಗ ಮಾಡಿಕೊಂಡ ಈ ಪೊಲೀಸ್ ತಂಡದವರಿಗೆ ಪರ್ಯಾಯವಿಲ್ಲದೆ ಪುನಃ ಮರುದಿನ ಪುಣೆಯಲ್ಲಿನ ನ್ಯಾಯಾಲಯದ ಬಾಗಿಲು ತಟ್ಟಬೇಕಾಯಿತು. ಕೊನೆಗೆ ಸಾಯಂಕಾಲದ ಸಮಯದಲ್ಲಿ ನ್ಯಾಯಾಲಯ ಅನುಮತಿ ನೀಡಿದಾಗ ಅಷ್ಟೇ ಅವಸರದಿಂದ ಅವರು ಡಾ. ತಾವಡೆಯವರನ್ನು ವಶಪಡಿಸಿಕೊಂಡು ಕೊನೆಗೆ ಈ ದಂಡು ಕೊಲ್ಹಾಪುರದತ್ತ ಹೊರಟಿತು.

೨. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ಕಾನೂನುದ್ರೋಹಿಯಾಗಿ ವರ್ತಿಸುವ ಪೊಲೀಸರು !
೨ ಅ. ಉಚ್ಚ ನ್ಯಾಯಾಲಯ ಮುಚ್ಚಳಿಕೆಯ ನಂತರವೂ ಪೊಲೀಸರಿಂದ ಪತ್ರಕರ್ತರಿಗೆ ಮಾಹಿತಿಯ ಪ್ರಸಾರ ! : ಈ ತಂಡವು ಕೊಲ್ಹಾಪುರದ ದಿಕ್ಕಿಗೆ ಪ್ರಯಾಣ ಬೆಳೆಸಿತು. ಅದರ ವಾರ್ತೆ ಕೊಲ್ಹಾಪುರದ ಪತ್ರಕರ್ತರಿಗೆ ಸಿಕ್ಕಿತು. ಡಾ. ತಾವಡೆಯವರ ವೈದ್ಯಕೀಯ ಪರೀಕ್ಷೆ ಆಗಲಿದೆ, ಅದು ಸಹ ಜಿಲ್ಲಾ ನ್ಯಾಯಾಲಯದಲ್ಲಿ, ಎಂಬುದು ಎಲ್ಲರಿಗೂ ತಿಳಿಯಿತು. ವಾಸ್ತವದಲ್ಲಿ ಈ ಪ್ರಕರಣದ ತನಿಖೆಯನ್ನು ಗೌಪ್ಯವಾಗಿಡಬೇಕೆಂದು ಉಚ್ಚ ನ್ಯಾಯಾಲಯದ ಆದೇಶವಿದೆ; ಆದರೆ ಈ ಆದೇಶವನ್ನು ಪೊಲೀಸರು ಉಲ್ಲಂಘಿಸಿದರು.
೨ ಆ. ಯಾರು ಬೇಕಾದರೂ ಬನ್ನಿ ಸಮೀಪದಿಂದ ಛಾಯಾಚಿತ್ರ ತೆಗೆದುಕೊಳ್ಳಿ, ಎನ್ನುವಂತಹ ಪೊಲೀಸರ ವರ್ತನೆ ! : ಡಾ. ತಾವಡೆಯವರೊಂದಿಗೆ ಈ ತಂಡವು ರಾತ್ರಿ ಕೊಲ್ಹಾಪುರದ ಜಿಲ್ಲಾ ಆಸ್ಪತ್ರೆಗೆ ತಲುಪಿತು. ಅವರು ಕೆಳಗೆ ಇಳಿಯುತ್ತಿರುವಾಗಲೇ ಪತ್ರಕರ್ತರು ಅವರಿಗೆ ಮುತ್ತಿಗೆ ಹಾಕಿದರು. ಸಣ್ಣ ಹಾಗೂ ದೊಡ್ಡ ಕ್ಯಾಮೆರಾಗಳು, ಸಂಚಾರಿವಾಣಿಯಲ್ಲಿನ ಕ್ಯಾಮೆರಾ ಮುಂತಾದವುಗಳ ಪ್ರಕಾಶದಿಂದ ಸುತ್ತಮುತ್ತಲಿನ ಪರಿಸರವೆಲ್ಲ ಝಗಮಗಿಸುತ್ತಿತ್ತು. ಇವರೆಲ್ಲರೂ ಡಾ. ತಾವಡೆಯವರಿಂದ ಒಂದರಿಂದ ಒಂದುವರೆ ಅಡಿಯಷ್ಟು ದೂರದಲ್ಲಿದ್ದರು. ಇವರೆಲ್ಲರೂ ಅವರ ಛಾಯಾಚಿತ್ರ ತೆಗೆದರು. ಈ ಸಂದರ್ಭದಲ್ಲಿ ಸುಮಾರು ೫೦ ಪೊಲೀಸರಿರುವ ಒಂದು ತಂಡ ಅಲ್ಲಿತ್ತು; ಆದರೆ ಕೋಲು, ಬಂದೂಕು, ಪಿಸ್ತೂಲುಗಳು ಮತ್ತು ಅತ್ಯಾಧುನಿಕ ಸಂಪರ್ಕ ವ್ಯವಸ್ಥೆ ಜೊತೆಗಿದ್ದ ಪೊಲೀಸರೆಲ್ಲ ಪತ್ರಕರ್ತರಿಂದ ಡಾ. ತಾವಡೆಯವರ ಮುಖ ಬಹಿರಂಗವಾಗುವಾಗ (ಆರೋಪಿಯ ಮುಖವನ್ನು ಮುಚ್ಚಿಡಬೇಕೆಂಬ ನಿಯಮವಿದೆ), ಅವರ ಮೂಲಭೂತ ಅಧಿಕಾರದ ಕಗ್ಗೊಲೆಯಾಗುತ್ತಿರುವಾಗ ಸುಮ್ಮನೆ ನಿಂತು ನೋಡುತ್ತಿದ್ದರು, ಅದರ ಅರ್ಥ ಅವರಿಗೆ ಅದೇ ಬೇಕಿತ್ತು ಎಂದಾಗುತ್ತದೆ !
೨ ಇ. ಆಸ್ಪತ್ರೆಯ ಹೊರಗೆ ಮತ್ತು ತನಿಖಾ ವಿಭಾಗದಲ್ಲಿಯೂ ಪತ್ರಕರ್ತರ ಕ್ಯಾಮೆರಾಗಳ ಅಲೆದಾಟ ಮತ್ತು ಉಪಯೋಗ ! : ಇಷ್ಟು ಮಾತ್ರವಲ್ಲ, ಡಾ. ತಾವಡೆಯವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋದನಂತರ ಆಸ್ಪತ್ರೆಯ ಒಳಗಿನ ಕೋಣೆಯಲ್ಲಿ ಅಂದರೆ ಎಲ್ಲಿ ವೈದ್ಯಕೀಯ ಚಿಕಿತ್ಸೆ ನಡೆಯುತ್ತಿತ್ತೋ ಅಲ್ಲಿಗೂ ಪತ್ರಕರ್ತರು ಹೋಗುತ್ತಿದ್ದರು. ಈ ವಿಭಾಗದ ಒಳಗಿನ ಛಾಯಾಚಿತ್ರವೂ ಮರುದಿನದ ಅನೇಕ ದೈನಿಕಗಳಲ್ಲಿ ಮುದ್ರಣಗೊಂಡಿತು. ಪೊಲೀಸರು ಉನ್ನತ ಭದ್ರತೆಯ ಬಗ್ಗೆ ಮಾತನಾಡುತ್ತಾರೆ, ಹಾಗಾದರೆ ಈ ಛಾಯಾಚಿತ್ರಗಳನ್ನು ತೆಗೆಯಲು ಪತ್ರಕರ್ತರು ಮತ್ತು ಛಾಯಾಚಿತ್ರಕಾರರು ಅಲ್ಲಿಗೆ ಹೇಗೆ ತಲುಪಿದರು ? ಅದೇ ರೀತಿ ತಾವಡೆಯವರನ್ನು ಒಳಗೆ ಕರೆದು ಕೊಂಡು ಹೋದನಂತರ ಅವರ ಯಾವುದೆಲ್ಲ ಪರೀಕ್ಷೆಗಳಾದವು, ಎಂಬ ವಿಷಯವೂ ಕೆಲವು ದಿನಪತ್ರಿಕೆಗಳಲ್ಲಿ ಪ್ರಸಿದ್ಧವಾಗಿತ್ತು. ಈ ಮಾಹಿತಿ ಕೇವಲ ಪೊಲೀಸರಿಗಷ್ಟೇ ತಿಳಿದಿರುವಾಗ ಅದು ಹೊರಗೆ ಹೇಗೆ ಹೋಯಿತು ?
೩. ಪೊಲೀಸರ ಅಕ್ಷಮ್ಯ ತಪ್ಪುಗಳಿಂದಾಗಿ ಪುರೋಗಾಮಿಗಳಿಂದ ಡಾ. ತಾವಡೆಯವರ ಮೇಲೆ ಆಕ್ರಮಣ ಮಾಡುವ ಪ್ರಯತ್ನ !
ಪತ್ರಕರ್ತರ ಮುಂದೆ ಘಟಿಸಿದ ಪ್ರಸಂಗದ ಹಾಗೆಯೇ ಡಾ. ತಾವಡೆ ಯವರನ್ನು ಕೊಲ್ಹಾಪುರದಲ್ಲಿರುವ ಸರಕಾರಿ ಆಸ್ಪತ್ರೆಗೆ ತರುವ ಮೊದಲು ಒಂದು ಪುರೋಗಾಮಿ ಸಂಘಟನೆಯ ಕಾರ್ಯಕರ್ತ ಡಾ. ತಾವಡೆಯವ ರಿಗೆ ಹೊಡೆಯುವ ಉದ್ದೇಶದಿಂದ ಬಂದಿದ್ದನು. ಯೋಗಾಯೋಗದಿಂದ ಅದು ಒಬ್ಬ ಪೊಲೀಸನ ಗಮನಕ್ಕೆ ಬಂದಿದ್ದ ಕಾರಣ ಅವನು ಈ ಕಾರ್ಯಕರ್ತನನ್ನು ದೂರ ತಳ್ಳಿದನು. ಆದರೆ ಅವನ ತನಿಖೆಯನ್ನು ಮಾಡಲಿಲ್ಲ ಅಥವಾ ವಿಚಾರಣೆಯನ್ನು ಸಹ ಮಾಡಲಿಲ್ಲ. ಅವನಿಗೆ ಈ ಗೌಪ್ಯ ವಿಷಯ ಯಾರಿಂದ ತಿಳಿಯಿತು, ಎಂಬುದರ ತನಿಖೆಯನ್ನೂ ಮಾಡಲಿಲ್ಲ. ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮುಗಿದು ಯಾವ ಕಾರಣಕ್ಕಾಗಿ ಪರೀಕ್ಷೆ ಮಾಡಲಾಗಿತ್ತೋ, ಆ ವೈದ್ಯಕೀಯ ವರದಿಯನ್ನು ಜೊತೆಗೆ ತೆಗೆದುಕೊಳ್ಳದೆಯೇ ಡಾ. ತಾವಡೆ ಯವರೊಂದಿಗೆ ಈ ತಂಡ ದವರು ಪೊಲೀಸ್ ಮುಖ್ಯಾಲಯಕ್ಕೆ ಬಂದರು.
೪. ಅನೇಕ ಶಾರೀರಿಕ ತೊಂದರೆಗಳಿರುವುದನ್ನು ತಿಳಿದುಕೊಳ್ಳದೆಯೇ
 ಡಾ. ತಾವಡೆಯವರಿಗೆ ಅಮಾನವೀಯವಾಗಿ ಥಳಿಸುವ ಪೊಲೀಸರ ಮೊಗಲಾಡಳಿತ !
ಇಂತಹ ಪರಿಸ್ಥಿತಿಯಲ್ಲಿ ಆರೋಗ್ಯದ ನಿಜವಾದ ಸ್ಥಿತಿಯನ್ನು ತಿಳಿದುಕೊಳ್ಳದ ಪೊಲೀಸರು ಡಾ. ತಾವಡೆಯವರಿಗೆ ರಾತ್ರಿಯಿಡೀ ಹೊಡೆ ದರು. ಅವರಿಗೆ ಮಲಗಲೂ ಬಿಡಲಿಲ್ಲ, ಅವರ ಶಾರೀರಿಕ ಸ್ಥಿತಿ ಹೇಗಿದೆ ?, ಎಂಬುದನ್ನು ತಿಳಿದುಕೊಳ್ಳಲಿಲ್ಲ. ಡಾ. ತಾವಡೆಯವರಿಗೆ ವಾಂತಿಯಾಗು ತ್ತಿತ್ತು, ರಕ್ತದೊತ್ತಡದ ತೊಂದರೆಯಾಗುತ್ತಿತ್ತು, ತಲೆ ತಿರುಗುತ್ತಿತ್ತು. ಈ ಸ್ಥಿತಿಯನ್ನು ಅವರು ಪೊಲೀಸರಿಗೆ ಹೇಳುತ್ತಿದ್ದರು; ಆದರೆ ಮಲಗಿದವರನ್ನು ಎಬ್ಬಿಸಬಹುದು, ಮಲಗಿದ ಹಾಗೆ ನಟನೆ ಮಾಡುವವರನ್ನು ಎಬ್ಬಿಸುವುದು ಹೇಗೆ ? ಡಾ. ತಾವಡೆಯವರನ್ನು ಅಪರಾಧಿಯೆಂದು ಸಾಬೀತು ಮಾಡಲೇಬೇಕು, ಎಂಬ ಆವೇಶದಿಂದ ಈ ಪೊಲೀಸರು ಡಾಕ್ಟರರ ಯಾವುದೇ ಮಾತನ್ನು ಕೇಳಿಸಿಕೊಳ್ಳಲಿಲ್ಲ. ಅವರಿಗೆ ಇಡೀ ರಾತ್ರಿ ಮತ್ತು ಮರುದಿನ ಪುನಃ ಹೊಡೆಯುವುದು ಮುಂದುವರಿಯಿತು. ಅವರ ಎರಡೂ ಕೆನ್ನೆಗೆ ಕನಿಷ್ಠ ೩೦ ಸಲ ಹೊಡೆಯಲಾಗಿತ್ತು, ಅವರಿಗೆ ಬೆನ್ನಿಗೆ, ಭುಜಕ್ಕೆ, ಎದೆಗೆ, ಕಾಲಿಗೆ ಎಲ್ಲೆಡೆ ಹೊಡೆಯಲಾಯಿತು, ಹೊಡೆಯುವಾಗ ಬಹಳ ಜಾಗರೂಕತೆ ವಹಿಸಲಾಗಿತ್ತು, ಅಂದರೆ ಹೊಡೆತದ ಗುರುತು ಕಾಣಿಸದಂತೆ ಹೊಡೆಯಲಾಗಿತ್ತು. ಆದ್ದರಿಂದ ನ್ಯಾಯಾಲಯದಲ್ಲಿ ಅದು ಸಿದ್ಧವಾಗುವುದಿಲ್ಲ, ಇದು ಪೊಲೀಸರ ಕಾರ್ಯಕ್ಷಮತೆಯಲ್ಲವೇ ?
೫. ವಾರ್ತೆ ಸಂಕಲನ ಮಾಡುವ ವಿಷಯದಲ್ಲಿ ಪೊಲೀಸರ ವಿಚಿತ್ರ ಫತ್ವಾ !
ಮರುದಿನ ಅಂದರೆ ಶನಿವಾರ ನ್ಯಾಯಾಲಯದಲ್ಲಿ ಡಾ. ತಾವಡೆಯವರನ್ನು ಹಾಜರು ಪಡಿಸಲಿಕ್ಕಿತ್ತು. ಆದ್ದರಿಂದ ಬೆಳಗ್ಗಿನಿಂದಲೇ ಬೃಹತ್ಪ್ರಮಾಣದಲ್ಲಿ ಪತ್ರಕರ್ತರು ನ್ಯಾಯಾಲಯದಲ್ಲಿ ಹಾಜರಿದ್ದರು; ಆದರೆ ಅವರನ್ನು ಮಧ್ಯಾಹ್ನ ಕರೆದುಕೊಂಡು ಬರುವರು, ಎಂದು ತಿಳಿದಾಗ ಈ ಜನಸಂದಣಿ ಚದುರಿತು. ಮಧ್ಯಾಹ್ನ ೧ ಗಂಟೆಯಿಂದಲೇ ನ್ಯಾಯಾಲಯದಲ್ಲಿ ಪೊಲೀಸರ ಅಲೆದಾಟ ಹೆಚ್ಚಾಯಿತು, ಅನಾವಶ್ಯಕ ಗದ್ದಲವನ್ನು ಕಡಿಮೆ ಮಾಡಲಾಯಿತು. ಆ ನ್ಯಾಯಾಲಯದ ಪರಿಸರವು ಪೊಲೀಸರ ಚಾವಡಿಯ ರೂಪ ತಾಳಿತು. ಕೇವಲ ಬೆರಳೆಣಿಕೆಯಷ್ಟೇ ವಕೀಲರನ್ನು ಒಳಗೆ ಬಿಡಲಾಯಿತು. ನ್ಯಾಯಾಧೀಶರ ಕಕ್ಷೆಗೆ ಹೋಗಲು ಪ್ರಾರಂಭದಲ್ಲಿ ಪತ್ರಕರ್ತರಿಗೂ ಅಡ್ಡಿಪಡಿಸಿದ್ದರು. ಸ್ವಲ್ಪ ಸಮಯದ ನಂತರ ಅದನ್ನು ಕೊಡಲಾಯಿತು. ನ್ಯಾಯಾಧೀಶರ ಕಕ್ಷೆಗೆ ಹೋದನಂತರ, ಪತ್ರಕರ್ತರು ಕಾಗದ ಮತ್ತು ಪೆನ್ ಉಪಯೋಗಿಸಿ ವಾರ್ತೆಗಳನ್ನು ಬರೆಯದೆ ಕೇವಲ ಕೇಳಿಸಿಕೊಂಡು ನಂತರ ವಾರ್ತೆಗಳನ್ನು ತಯಾರಿಸಬೇಕೆಂದು ಪೊಲೀಸರು ವಿಚಿತ್ರವಾದ ಸೂಚನೆ ನೀಡಿದ್ದರು. (ಕೇವಲ ಪೊಲೀಸರೇ ಇರುವಲ್ಲಿ ಕ್ಯಾಮೆರಾವನ್ನು ನಡೆಯಬಹುದು, ಆದರೆ ನ್ಯಾಯಾಲಯದ ಮುಂದೆ ಪೆನ್ ಸಹ ಉಪಯೋಗಿಸಬಾರದು, ಇಂತಹ ಬೂಟಾಟಿಕೆ ಮಾಡುವ ಪೊಲೀಸರು ಜಿಹಾದಿ ಉಗ್ರರೊಂದಿಗೆ ಹೇಗೆ ಹೋರಾಡುವರು ? - ಸಂಪಾದಕರು)
೬. ...ಹೀಗಾಯಿತು, ನ್ಯಾಯಾಲಯದ ಕಾರ್ಯಕಲಾಪದ ಆರಂಭ !
ಈ ರೀತಿಯಲ್ಲಿ ನ್ಯಾಯಾಲಯದಲ್ಲಿ ಕೆಲವು ಪತ್ರಕರ್ತರು, ಬೆರಳೆಣಿಕೆ ಯಷ್ಟೇ ವಕೀಲರು ಮತ್ತು ಪೊಲೀಸರ ದೊಡ್ಡ ದಂಡು ಬಂದನಂತರ ಸ್ವಲ್ಪ ಸಮಯದಲ್ಲಿ ಡಾ. ತಾವಡೆಯವರನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಯಿತು. ವಾತಾವರಣವು ಶಾಂತವೆನಿಸುತ್ತಿದ್ದರೂ, ಅದು ಅತ್ಯಧಿಕ ಒತ್ತಡಪೂರ್ಣವಾಗಿತ್ತು. ಒಂದೊಂದು ನಿಮಿಷವೂ ಬಹಳ ದೀರ್ಘಕಾಲದ ಹಾಗೆ ಅನಿಸುತ್ತಿತ್ತು. ಕೊನೆಗೆ ನ್ಯಾಯಾಧೀಶರ ಆಗಮನವಾಯಿತು ಹಾಗೂ ನ್ಯಾಯಾಲಯದ ಸಂಘರ್ಷ ಆರಂಭವಾಯಿತು.
೬ ಅ. ವಕೀಲುಪತ್ರದಲ್ಲಿ ಸಹಿ ತೆಗೆದುಕೊಳ್ಳುವ ವಿಷಯದ ಚರ್ಚೆ ಯಲ್ಲಿ ಪೊಲೀಸರಿಗೆ ಬೆವರಿಳಿಯುತ್ತಿತ್ತು ! : ಈ ವಿಷಯದಲ್ಲಿ ಡಾ. ತಾವಡೆಯವರ ವಕೀಲ ಸಮೀರ ಪಟವರ್ಧನ್‌ರವರು ನಮಗೆ ವಕೀಲುಪತ್ರದಲ್ಲಿ ಆರೋಪಿಯ ಸಹಿ ತೆಗೆದುಕೊಳ್ಳಲಿಕ್ಕಿದೆ, ಎಂದು ನ್ಯಾಯಾಲಯದಲ್ಲಿ ವಿನಂತಿಸಿದರು. ನ್ಯಾಯಾಲಯದ ಅನುಮತಿಯಲ್ಲಿ ವಕೀಲರಾದ ಪಟವರ್ಧನ್ ಮತ್ತು ವೀರೇಂದ್ರ ಇಚಲಕರಂಜಿಕರ್ ಸಹಿ ತೆಗೆದುಕೊಳ್ಳುವಾಗಲೇ ಡಾ. ತಾವಡೆಯವರು, ನನಗೆ ಪೊಲೀಸರು ವಿಪರೀತ ಹೊಡೆದರು ! ಎಂದು ಹೇಳಿದರು. ಆಗ ವಕೀಲ ಇಚಲಕರಂಜಿಕರ್ ಇವರು, ನ್ಯಾಯಾಧೀಶರು ನಿಮ್ಮೊಂದಿಗೆ, ಪೊಲೀಸರು ಏನಾದರೂ ಅಯೋಗ್ಯ ರೀತಿಯಲ್ಲಿ ವರ್ತಿಸಿದರೇ ?, ಎಂದು ಕೇಳುವರು, ಆಗ ನೀವು ಇದನ್ನು ನಿಸ್ಸಂಕೋಚದಿಂದ ಹೇಳಿರಿ ! ಎಂದು ಹೇಳಿದರು. ಈ ವಿಷಯ ಪಕ್ಕದ್ದಲ್ಲಿದ್ದ ಪೊಲೀಸರಿಗೆ ಕೇಳಿಸಿತು. ಆಗ ಬಹಳ ಗುಜುಗುಜು ಆರಂಭವಾಯಿತು, ಪೊಲೀಸ್ ಅಧಿಕಾರಿ, ಸರಕಾರಿ ವಕೀಲರು ಹೊರಗೆ ಹೋದರು. ನ್ಯಾಯಾಲಯದ ಕಾರ್ಯಕಲಾಪ ನಿಂತಿತು. ಕೊನೆಗೆ ನ್ಯಾಯಾಲಯದ ಹೊರಗೆ ದೊಡ್ಡ ಚರ್ಚೆಯಾಗಿ ಎಲ್ಲರೂ ಒಳಗೆ ಬಂದನಂತರ ಕಾರ್ಯ ಆರಂಭವಾಯಿತು.
೬ ಆ. ಡಾ. ತಾವಡೆಯವರಿಂದ ಪೊಲೀಸರ ಹೊಡೆತದ ವಿಷಯದಲ್ಲಿ ನ್ಯಾಯಾಧೀಶರ ಮುಂದೆ ಆಲಾಪ : ಡಾ. ತಾವಡೆಯವರು ತಮಗೆ ಎಲ್ಲೆಲ್ಲಿ ಹೊಡೆದರು, ಎಂದು ನ್ಯಾಯಾಲಯಕ್ಕೆ ವಿವರಿಸಿದರು. ಆಗ ಡಾ. ತಾವಡೆಯವರು ಪ್ಯಾಂಟ್ ಮೇಲೆ ಮಾಡಿ ಕಾಲಿಗೆ ಹೊಡೆದಿರುವ ವಿಷಯವನ್ನು ಹೇಳಿದರು ಹಾಗೂ ಪ್ಯಾಂಟ್ ಮೇಲೆ ಬೂಟುಕಾಲಿನ ಗುರುತನ್ನು ತೋರಿಸಿದರು ಹಾಗೂ ಪೊಲೀಸರು ಅವರಿಗೆ ಎದೆಯ ಮೇಲೆ ಹೃದಯದ ಸ್ಥಾನಕ್ಕೆ ಹೊಡೆದಿದ್ದು ಅದು ಈಗಲೂ ನೋಯುತ್ತಿದೆ, ಎಂದು ಹೇಳಿದರು.
೬ ಇ. ಡಾ. ತಾವಡೆಯವರು ಸುಳ್ಳು ಹೇಳುತ್ತಾರೆಂದು ಹೇಳಲು ಪ್ರಯತ್ನಿಸುತ್ತಿದ್ದ ಸರಕಾರಿ ವಕೀಲರನ್ನು ವಕೀಲ ಪಟವರ್ಧನ್‌ರವರು ತಡೆದರು ! : ಅವರಿಗೆ ಹೊಡೆದಿರುವ ಮಾಹಿತಿಯನ್ನು ಡಾ. ತಾವಡೆಯವರು ಕಳಕಳಿಯಿಂದ ಹೇಳುತ್ತಿರುವಾಗಲೇ ವಿಶೇಷ ಸರಕಾರಿ ವಕೀಲ ಚಂದ್ರಕಾಂತ ಬುಧಲೆ ಇವರು ಅವರು ಸುಳ್ಳು ಹೇಳುತ್ತಿದ್ದಾರೆ, ಇವರು ಬರುವಾಗಲೇ ಸುಳ್ಳು ಹೇಳಲು ನಿರ್ಧರಿಸಿಕೊಂಡು ಬಂದಿರುವ ಹಾಗಿದೆ, ಎಂದರು. ಆಗ ವಕೀಲ ಪಟವರ್ಧನ ಇವರು ಡಾ. ತಾವಡೆಯವರು ನ್ಯಾಯಾಧೀಶರಿಗೆ ಹೇಳುತ್ತಿದ್ದಾರೆ. ನೀವು ನಡುವೆ ಮಾತನಾಡಬೇಡಿ ಎಂದು ಹೇಳಿದಾಗ ನಿರುಪಾಯವಾಗಿ ಸುಮ್ಮನಿರಬೇಕಾಯಿತು.
೬ ಈ. ಡಾ. ತಾವಡೆಯವರಿಂದ ನ್ಯಾಯಾಲಯದಲ್ಲಿ ಕೈಜೋಡಿಸಿ ವಿನಂತಿ ! : ಈ ಸಂದರ್ಭದಲ್ಲಿ ಡಾ. ತಾವಡೆಯವರು, ‘ನನಗೆ ತನಿಖೆಯಲ್ಲಿ ಸಹಕರಿಸಲಿಕ್ಕಿದೆ; ಆದರೆ ನನ್ನ ಶಾರೀರಿಕ ಸ್ಥಿತಿ ಅತ್ಯಂತ ಗಂಭೀರವಾಗಿದೆ. ನನಗೆ ವಾಂತಿ ಆಗುತ್ತಿದೆ, ತಲೆತಿರುಗುತ್ತಿದೆ, ಇಂತಹ ಸ್ಥಿತಿಯಲ್ಲಿ ಇವರು ನನಗೆ ಔಷಧಿಯನ್ನೂ ಕೊಡದೆ ನನಗೆ ಹೊಡೆಯುತ್ತಿದ್ದಾರೆ. ನ್ಯಾಯಾಲಯದ ಮುಂದೆ ನಾನು ಕೈಮುಗಿದು ವಿನಂತಿಸುತ್ತಿದ್ದೇನೆ, ನಾನು ತನಿಖೆಗೆ ಸಂಪೂರ್ಣ ಸಹಕರಿಸಲು ಸಿದ್ಧನಿದ್ದೇನೆ; ಆದರೆ ನನಗೆ ಹೊಡೆಯಬಾರದು’ ಎಂದು ವಿನಂತಿಸಿದರು.
೬ ಉ. ವೈದ್ಯಕೀಯ ವರದಿ ಸಲ್ಲಿಸಲು ಪೊಲೀಸರಿಂದ ಹಿಂಜರಿಕೆ ! : ಈ ಬಗ್ಗೆ ನ್ಯಾಯಾಲಯವು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಹೇಲ ಶರ್ಮಾ ರವರಲ್ಲಿ, ಡಾ. ತಾವಡೆಯವರಿಗೆ ಸಂಬಂಧಿಸಿದ ಮೊದಲಿನ ವೈದ್ಯಕೀಯ ವರದಿ ಇದೆಯೇ ?, ಎಂದು ಕೇಳಿತು. ನ್ಯಾಯಾಧೀಶರು ವೈದ್ಯಕೀಯ ವರದಿಯನ್ನು ಕೇಳಿದಾಗ ಈಗ ಕೊಡುತ್ತೇನೆ, ನಂತರ ಕೊಡುತ್ತೇನೆ, ಒಂದು ಗಂಟೆಯ ನಂತರ ಕೊಡುತ್ತೇನೆ ಎಂದು ಹೇಳುತ್ತಾ ಎರಡು ಗಂಟೆಯ ನಂತರವೂ ಪೊಲೀಸರು ಡಾ. ತಾವಡೆಯವರ ವೈದ್ಯಕೀಯ ವರದಿ ಸಲ್ಲಿಸಲಿಲ್ಲ ! ಕೊನೆಗೆ ಆಸ್ಪತ್ರೆಯಲ್ಲಿ ಡಾ. ತಾವಡೆಯವರ ಪರೀಕ್ಷೆ ಮಾಡಿದ ನಂತರವೇ ಆ ವರದಿ ಸಿಕ್ಕಿತು. (ಇದರಿಂದ ಪೊಲೀಸರಿಗೆ ವೈದ್ಯಕೀಯ ಪರೀಕ್ಷೆಯ ಇಚ್ಛೆ ಇಲ್ಲ, ಕೇವಲ ಪತ್ರಕರ್ತರಿಗೆ ಬೇಕಾಗುವ ವಾರ್ತೆಗಳು ಮಾತ್ರ ಸಿಗಬೇಕೆಂಬ ಪ್ರಯತ್ನವಿತ್ತೆಂಬುದು ಅರಿವಾಗುತ್ತದೆ ! - ಸಂಪಾದಕರು)
೬ ಊ. ವೈದ್ಯಕೀಯ ವರದಿ ತಯಾರಿಸುವಾಗ ಪೊಲೀಸರು ಮತ್ತು ವೈದ್ಯಕೀಯ ವಿಭಾಗ ಇವರಲ್ಲಿನ ಒಡಂಬಡಿಕೆ ಬಗ್ಗೆ ನ್ಯಾಯಾಧೀಶರ ಗಮನ ವನ್ನು ಸೆಳೆದರು ! : ಡಾ. ತಾವಡೆಯವರು ದುಃಖವನ್ನು ಹೇಳಿ ಮುಗಿಯುತ್ತಲೇ ವಕೀಲ ಪಟವರ್ಧನ್‌ರವರು ಎದ್ದು ನಿಂತು ನ್ಯಾಯಾಲಯಕ್ಕೆ ಹೀಗೆಂದರು, ಪೊಲೀಸರು ಬಹಳ ಚತುರರಿದ್ದಾರೆ. ಅವರು ಹೊಡೆದಿರುವ ಗುರುತು ಕಾಣಿಸದಂತೆ ಹೊಡೆಯುತ್ತಾರೆ. ಆದ್ದರಿಂದ ಈ ಪರೀಕ್ಷೆ ಅತ್ಯಂತ ವಿವರವಾಗಿ ಆಗಬೇಕು ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಮತ್ತು ಪೊಲೀಸ್ ಅಧೀಕ್ಷಕರು ಇಬ್ಬರೂ ಸರಕಾರಿ ನೌಕರರಾಗಿರುವುದರಿಂದ ಇಬ್ಬರೂ ಪರಸ್ಪರರನ್ನು ರಕ್ಷಣೆ ಮಾಡಲು ಪ್ರಯತ್ನಿಸಬಹುದು. ಹಾಗಾಗಬಾರದೆಂದು ಕಾಳಜಿ ವಹಿಸಬೇಕು, ಎಂದು ವಿನಂತಿಸಿದರು.
೭. ಡಾ. ತಾವಡೆಯವರ ಪೊಲೀಸ್ ಕಸ್ಟಡಿ ವಿಷಯದಲ್ಲಿ ಯುಕ್ತಿವಾದ ಪ್ರಾರಂಭ !
೭ ಅ. ಸರಕಾರಿ ವಕೀಲರ ಯುಕ್ತಿವಾದ : ಈ ಸಂದರ್ಭದಲ್ಲಿ ಯುಕ್ತಿವಾದ ಮಾಡುವಾಗ ಸರಕಾರಿ ವಕೀಲ ಚಂದ್ರಕಾಂತ ಬುಧಲೆ ಯವರು, ‘ಪೊಲೀಸರಲ್ಲಿ ಸಂಜಯ ಸಾಡವಿಲಕರ ಎಂಬ ವ್ಯಕ್ತಿ ಸಾಕ್ಷಿದಾರನಾಗಿದ್ದು ಅವನ ಆಧಾರದಲ್ಲಿಯೇ ಈ ಬಂಧನವಾಗಿದೆ. ಪೊಲೀಸರಿಗೆ ಗಣೇಶೋತ್ಸವದ ಭದ್ರತೆಯ ಒತ್ತಡವಿದೆ, ಆದ್ದರಿಂದ ಡಾ. ತಾವಡೆಯವರನ್ನು ಹೆಚ್ಚು ವಿಚಾರಣೆ ಮಾಡುವ ಸಲುವಾಗಿ ಪೊಲೀಸರಿಗೆ ೧೪ ದಿನಗಳ ಪೊಲೀಸ್ ಕಸ್ಟಡಿ ಬೇಕು’ ಎಂದರು.
೭ ಆ. ಪೊಲೀಸರ ಯುಕ್ತಿವಾದ ! : ಈ ಸಂದರ್ಭದಲ್ಲಿ ಸುಹೇಲ ಶರ್ಮಾ ಹೀಗೆಂದರು, ‘ಈ ಪ್ರಕರಣವನ್ನು ನಾವು ಅತ್ಯಂತ ಯೋಗ್ಯ ಪದ್ಧತಿಯಲ್ಲಿ ನಿರ್ವಹಿಸುತ್ತಿದ್ದೇವೆ. ಆರೋಪಿಯ ಚಟುವಟಿಕೆ ಸಂಶಯಾಸ್ಪದವಾಗಿದೆ. ಗೋವಾ ಸ್ಫೋಟ ಪ್ರಕರಣದ ಆರೋಪಿಯೊಂದಿಗೆ ಡಾ. ತಾವಡೆಯವರ ಸಂಪರ್ಕವಿತ್ತು. ಈ ಅಪರಾಧದ ವ್ಯಾಪ್ತಿ ಬಹಳ ದೊಡ್ಡದಿದೆ. ಡಾ. ತಾವಡೆಯವರು ಕಾ. ಪಾನ್ಸರೆ ಮತ್ತು ಡಾ. ದಾಭೋಳಕರ್ ವಿಷಯದಲ್ಲಿ ಬಹಳಷ್ಟು ಮಾತನಾಡುತ್ತಿದ್ದರು. ಡಾ. ತಾವಡೆಯವರ ಸಂಘಟನೆಯ ವಿಚಾರಧಾರೆಯು ಹತ್ಯೆಯಾದ ಇಬ್ಬರ ವಿಚಾರದ ವಿರುದ್ಧವಾಗಿರುವುದರಿಂದ ಡಾ. ತಾವಡೆಯವರಿಗೆ ಇಬ್ಬರನ್ನೂ ಮುಗಿಸಲಿಕ್ಕಿತ್ತು. ಈ ತನಿಖೆಯನ್ನು ನಮಗೆ ಮಹಾರಾಷ್ಟ್ರ, ಕರ್ನಾಟಕ, ಗೋವಾ ರಾಜ್ಯಗಳಿಗೆ ಹೋಗಿ ಮಾಡಲಿಕ್ಕಿದೆ. ಆದ್ದರಿಂದ ತನಿಖೆಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ನಮಗೆ ೧೪ ದಿನಗಳ ಪೊಲೀಸ್ ಕಸ್ಟಡಿ ಬೇಕು.’
೮. ಭದ್ರತಾ ವ್ಯವಸ್ಥೆಯ ಬಟಾಬಯಲು ಮಾಡಿದ ವಕೀಲ ವಿರೇಂದ್ರ ಇಚಲಕರಂಜಿಕರ್ !
೮ ಅ. ಭದ್ರತೆ ವಿಷಯದಲ್ಲಿ ಪೊಲೀಸರ ದುರ್ಲಕ್ಪ್ಯ ! : ಮುಂದೆ ವಕೀಲ ಇಚಲಕರಂಜಿಕರ್ ಹೀಗೆಂದರು, ಈ ಪ್ರಕರಣವನ್ನು ನಾವು ಅತ್ಯಂತ ಯೋಗ್ಯ ಪದ್ಧತಿಯಲ್ಲಿ ನಿರ್ವಹಿಸುತ್ತಿದ್ದೇವೆ ಎಂದು ಸುಹೇಲ ಶರ್ಮಾ ಹೇಳುತ್ತಿದ್ದಾರೆ. ಈ ದಿನಪತ್ರಿಕೆಯಲ್ಲಿ ಮುದ್ರಣವಾಗಿರುವ ಛಾಯಾಚಿತ್ರವನ್ನು ನೋಡಿ. ಪತ್ರಕರ್ತರು, ಜನಸಾಮಾನ್ಯರು ಆರೋಪಿಯ ಎಷ್ಟು ಸಮೀಪಕ್ಕೆ ಹೋಗಬಹುದೆಂಬುದನ್ನು ನೋಡಬೇಕು. ಸಾಮ್ಯವಾದಿಗಳು ಕೇರಳ ಮತ್ತು ಬಂಗಾಲದಲ್ಲಿ ಹಿಂದುತ್ವವಾದಿಗಳ ಹತ್ಯೆ ಮಾಡಿದ್ದಾರೆ. ಇಲ್ಲಿಯೂ ಹಾಗೆಯೇ ನಡೆಯಬೇಕೆಂದು ಪೊಲೀಸರ ಇಚ್ಛೆಯಿತ್ತೇ ? ಇದು ಯೋಗ್ಯ ತನಿಖೆಯೇ ? ಮೂಲತಃ ೭೫ ದಿನಗಳಿಂದ ತನಿಖೆ ಮಾಡುತ್ತಿದ್ದೀರಿ, ಪೊಲೀಸರಿಗೆ ವಿಚಾರಣೆ ಮಾಡಲಿಕ್ಕಿರುತ್ತಿದ್ದರೆ, ಯೆರವಡಾ ಸೆರೆಮನೆಗೆ ಹೋಗಿ ಅಲ್ಲಿಯೇ ವಿಚಾರಣೆ ಮಾಡಬಹುದಿತ್ತು. ನ್ಯಾಯಾಲಯ ಅದಕ್ಕೆ ಆದೇಶವನ್ನೂ ಕೊಡುತ್ತಿತ್ತು; ಆದರೆ ಅವರಿಗೆ ಹಾಗೆ ಮಾಡಲಿಕ್ಕಿರಲಿಲ್ಲ.
೮ ಆ. ಆರೋಪಿಯ ಸಂಶಯಾಸ್ಪದ ಕಾರ್ಯಾಚರಣೆ, ಎಂಬ ಯುಕ್ತಿವಾದದ ಮೇಲೆ ಪ್ರಹಾರ ! : ಸಂಶಯಾಸ್ಪದ ಚಟುವಟಿಕೆ ಎಂದರೇನು ? ಸುಹೇಲ ಶರ್ಮಾರವರನ್ನು ಒಬ್ಬ ವ್ಯಕ್ತಿ ನೋಡಿದರೂ ಅವರಿಗೆ ಸಂಶಯಾಸ್ಪದವೆನಿಸಬಹುದು. ನಾನು ನ್ಯಾಯಾಲಯದಿಂದ ಅನಿರೀಕ್ಷಿತ ವಾಗಿ ಹೊರಗೆ ಹೋದರೂ ನನ್ನ ವರ್ತನೆ ಸಂಶಯಾಸ್ಪದವೆನಿಸಬಹುದು. ಯಾವುದೇ ಪೊಲೀಸ್‌ಗೆ ಏನಾದರೂ ಸಂಶಯಾಸ್ಪದವೆನಿಸಿದರೆ ಅದಕ್ಕೇನೂ ಅರ್ಥವಿಲ್ಲ. ನ್ಯಾಯಾಲಯದಲ್ಲಿ ಸಾಕ್ಷಿಗಳನ್ನು ಮಂಡಿಸಲಾಗುತ್ತದೆ, ಯಾರಿಗೂ ಅನಿಸುವ ಭ್ರಮೆಯನ್ನಲ್ಲ. ನಿರಪರಾಧಿಗಳು ಅವರ ಭ್ರಮೆಗೆ ಬಲಿಯಾಗುವುದು ನ್ಯಾಯವಲ್ಲ, ಇದು ಸಂವಿಧಾನದ ಇಚ್ಛೆಯಲ್ಲ. ಪೊಲೀಸರು ಸಾಕ್ಷಿಯನ್ನು ತರಬೇಕು.
೮ ಇ. ದಾಭೋಲಕರ್ ಮತ್ತು ಪಾನ್ಸರೆಯವರ ಕೊಲೆಯಲ್ಲಿ ಸಾಮ್ಯತೆ ಇದೆ, ಎಂಬುದೇ ಪೊಲೀಸರ ಭ್ರಮೆ ! : ಗೋವಾ ಸ್ಫೋಟದ ತನಿಖೆ ಮುಗಿದಿದೆ, ಆ ಖಟ್ಲೆ ಮುಗಿದಿದೆ. ಅದರಲ್ಲಿನ ಆರೋಪಿಗಳು ನಿರಪರಾಧಿಗಳೆಂದು ಮುಕ್ತರಾಗಿದ್ದಾರೆ. ಮೂಲತಃ ಪಾನ್ಸರೆ ಕೊಲೆಯ ತನಿಖೆ ನಡೆಯುತ್ತಿದೆ. ೨೦೦೯ ರ ಗೋವಾ ಸ್ಫೋಟ ಮತ್ತು ಇದಕ್ಕೇನು ಸಂಬಂಧ ? ಸುಹೇಲ ಶರ್ಮಾ ಹೇಳುತ್ತಾರೆ, ಪಾನ್ಸರೆ ದಾಭೋಲಕರ್ ಕೊಲೆಯಲ್ಲಿ ಸಾಮ್ಯತೆ ಇದೆ. ಇದೇ ಅವರ ಭ್ರಮೆಯಾಗಿದೆ, ಎಂದು ನಾನು ಹೇಳುತ್ತಿದ್ದೇನೆ. ಮಾರ್ನಿಂಗ್ ವಾಕ್‌ಗೆ ಹೋದಾಗ ದಾಭೋಲಕರ್‌ರ ಹತ್ಯೆಯಾಗಿತ್ತು, ಪಾನ್ಸರೆ ಬೆಳಗ್ಗೆ ಇಡ್ಲಿ ತಿನ್ನಲು ಮನೆಯ ಎದುರಿನ ಅಂಗಡಿಗೆ ಹೋಗಿದ್ದರು. ಇದೆಂತಹ ಸಾಮ್ಯತೆಯ ಕಥೆ ಕಟ್ಟುವುದು, ಏನೋ ಹೇಳುವುದು ಅಯೋಗ್ಯ. ಈಗ ಇಲ್ಲಿ ಪಾನ್ಸರೆ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ನಿಜವಾಗಿಯೂ ಅದೇನು ಪ್ರಥಮದರ್ಶಿ ಸಾಕ್ಷಿ ದೊರೆತಿದೆ ಯೆಂದು ಅವರಿಗೆ ತನಿಖೆ ಮಾಡಲು ಡಾ. ತಾವಡೆಯವರು ಬೇಕಾಗಿದ್ದಾರೆ ?
ಆ ವಿಷಯ ನ್ಯಾಯಾಲಯದ ಮುಂದೆ ಬರುವುದು ಆವಶ್ಯಕವಾಗಿದೆ. ಕೇವಲ ಸಂಶಯ ಪಡುವುದು ಅಯೋಗ.
೮ ಈ. ತನಗೆ ಒಪ್ಪಿಗೆಯಾಗದ ವಿಚಾರಸರಣಿಯನ್ನು ವಿರೋಧಿಸುವುದು ಸಂಶಯವಾಗಲು ಸಾಧ್ಯವಿಲ್ಲ ! : ಡಾ. ತಾವಡೆಯವರು ದಾಭೋಲಕರ್ ಮತ್ತು ಪಾನ್ಸರೆ ವಿರುದ್ಧ ಮಾತನಾಡುತ್ತಿದ್ದರು, ಇದು ಸಂಶಯವಾಗಲು ಸಾಧ್ಯವಿಲ್ಲ. ಇಂದು ನಾನು ಸುಹೇಲ ಶರ್ಮಾ ವಿರುದ್ಧ ಯುಕ್ತಿವಾದ ಮಾಡುತ್ತಿದ್ದೇನೆ. ನಾಳೆ ನನಗೇನಾದರೂ ಆದರೆ ಅದಕ್ಕೆ ಸುಹೇಲಶರ್ಮಾ ಜವಾಬ್ದಾರರೆಂದು ಹೇಳುತ್ತೀರಾ ? ಒಪ್ಪಿಗೆಯಾಗದ ವಿಚಾರಸರಣಿಯನ್ನು ಕಾನೂನುಮಾರ್ಗದಲ್ಲಿ ವಿರೋಧಿಸುವ ಅಧಿಕಾರ ಪ್ರತಿಯೊಬ್ಬರಿಗೂ ಸಂವಿಧಾನ ನೀಡಿದೆ. ಅದನ್ನು ಉಪಯೋಗಿಸಿದ ನೆಂದು ಅವನು ಕೊಲೆಗಾರನಾಗುವನೇ ?
೮ ಉ. ಅರ್ಥಹೀನ ಆರೋಪ ಮಾಡಿ ಒಬ್ಬರ ಜೀವನವನ್ನು ಹಾಳುಗೆಡ ಹುವ ಅಧಿಕಾರವನ್ನು ಸಂವಿಧಾನ ಯಾರಿಗೂ ನೀಡಿಲ್ಲ ! : ಪೊಲೀಸ್ ವ್ಯವಸ್ಥೆ ಒಟ್ಟಾರೆಯಾಗಿ ಡಾ. ತಾವಡೆಯವರನ್ನು ಕೊಲೆಗಾರನೆಂದು ಹೇಳುತ್ತಿದೆ; ಆದರೆ ಎಲ್ಲಿಯವರೆಗೆ ಅವರ ಆರೋಪ ಸಿದ್ಧವಾಗುವುದಿಲ್ಲವೋ, ಅಲ್ಲಿಯ ವರೆಗೆ ಅವರು ನಿರಪರಾಧಿಯೇ ಆಗಿರುತ್ತಾರೆ, ಎಂಬುದನ್ನು ಗಮನದಲ್ಲಿಡಬೇಕು. ಇಲ್ಲಿ ಒಬ್ಬ ನಿರಪರಾಧಿ ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ, ಅವರ ಗೌರವಕ್ಕೆ ಆಘಾತವಾಗುತ್ತಿದೆ, ಇಂತಹ ಆರೋಪಗಳಿಂದ ಒಬ್ಬರ ಜೀವನವನ್ನೇ ಮುಗಿಸಿಬಿಡುವ ಅಧಿಕಾರವನ್ನು ಸಂವಿಧಾನ ಯಾರಿಗೂ ನೀಡಿಲ್ಲ, ಎಂಬುದನ್ನು ನ್ಯಾಯಾಲಯ ಸಹ ಗಮನದಲ್ಲಿಡಬೇಕು.
೯. ದಾರಿತಪ್ಪಿದ ತನಿಖೆಯಿಂದಾಗಿ ಡಾ. ತಾವಡೆಯವರು ಇನ್ನೊಬ್ಬ ಸಮೀರ್ ಗಾಯಕವಾಡ್ ಆಗಬಾರದೆಂಬುದೇ ನಮ್ಮ ಇಚ್ಛೆ ! - ವಕೀಲ ಪಟವರ್ಧನ್
ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಯಾವುದೇ ಸಾಕ್ಷಿಯನ್ನು ಮಂಡಿಸಿಲ್ಲ. ಕೇವಲ ಪೊಲೀಸರ ಇಚ್ಛೆ ಇದೆ ಹಾಗೂ ಪೊಲೀಸರಿಗೆ ಕೇವಲ ಸಂಶಯವೆನಿಸುತ್ತದೆ; ಆದ್ದರಿಂದ ಒಬ್ಬ ನಿರಪರಾಧಿಯನ್ನು ಖಟ್ಲೆಯ ಹೆಸರಿನಲ್ಲಿ ಎಷ್ಟು ದಿನ ನೀವು ಪೊಲೀಸ್ ಕಸ್ಟಡಿಯಲ್ಲಿಡುವಿರಿ ?
ಕಳೆದ ವರ್ಷ ಇದೇ ನ್ಯಾಯಾಲಯದಲ್ಲಿ ಇದೇ ಖಟ್ಲೆಯಲ್ಲಿ ಸಮೀರ್ ಗಾಯಕವಾಡ್ ಇವರ ವಿಷಯದಲ್ಲಿ ಆಲಿಕೆ ಆಗಿತ್ತು. ಆಗ ಸಹ ಅವನು ಕೊಲೆಗಾರನಾಗಿದ್ದಾನೆ, ಎಂಬ ಚಿತ್ರಣವನ್ನು ನಿರ್ಮಿಸಲಾಗಿತ್ತು; ಆದರೆ ಆಗ ಸಹ ತನಿಖೆ ಯಾವ ಹಂತದಲ್ಲಿತ್ತೋ, ಆ ಹಂತದಿಂದ ಮುಂದೆ ಹೋಗಲೇ ಇಲ್ಲ. ಕಲೆಯಲ್ಲಿನ ಅಗ್ನಿಶಸ್ತ್ರಗಳು, ಗುಂಡುಗಳು, ವಾಹನ ಇತ್ಯಾದಿ ಹುಡುಕಲು ಸಮೀರ ಗಾಯಕವಾಡ್ ಇವರನ್ನು ವಶಪಡಿಸಿಕೊಳ್ಳುವುದು ಆವಶ್ಯಕವಾಗಿದೆ, ಎಂಬ ಒಂದು ವರ್ಷದ ಹಿಂದಿನ ಕಾರಣವನ್ನು ಹೇಳಿ ಇಂದು ಡಾ. ತಾವಡೆಯವರನ್ನು ವಶಪಡಿಸಿಕೊಳ್ಳಲಾಗುತ್ತಿದೆ. ತನಿಖೆಯ ದಾರಿಯೇ ತಪ್ಪಿದೆ. ಇಂದು ರಾಜ್ಯ ಸರಕಾರ ಸಮೀರ ಗಾಯಕವಾಡ್ ಇವರ ವಿರುದ್ಧ ಖಟ್ಲೆ ನಡೆಸಲು ತಯಾರಿಲ್ಲ, ಇಂತಹ ಸ್ಥಿತಿ ನಿರ್ಮಾಣವಾಗಿದೆ.
ಹಿಂದುತ್ವವಾದಿ ಆರೋಪಿಗಳಿಗೆ ಹೊಡೆಯುವ ಇತಿಹಾಸವಿರುವಾಗ
ಡಾ. ತಾವಡೆಯವರ ಭದ್ರತೆ ವಿಷಯದಲ್ಲಿ ದುರ್ಲಕ್ಷಿಸುವ ಪೊಲೀಸರು !
೧. ಹಿಂದೂ ವಿಧಿಜ್ಞ ಪರಿಷತ್ತು ಸನಾತನದ ಕೋಂಬಿಂಗ್ ಅಪರೇಶನ್ ಮಾಡುವ ಡಾ. ಭಾರತ ಪಾಟಣಕರ ವಿರುದ್ಧ ಕೊಲ್ಹಾಪುರ ಪೊಲೀಸ ರಲ್ಲಿ ದೂರು ನೀಡಿ ಸಾಧಕರ ಮೇಲೆ ದಾಳಿಯಾಗುವ ಸಾಧ್ಯತೆಯಿದೆ ಎಂಬ ಸಂಕೇತದ ದೂರನ್ನೂ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಆಂದೋಲನ ಮಾಡಿ ಕಾನೂನನ್ನು ಕೈಗೆತ್ತಿಕೊಳ್ಳುವ ಇತಿಹಾಸವನ್ನೂ ಹೇಳಿ ದ್ದಾರೆ; ಆದರೆ ಪೊಲೀಸರು ಈ ಬಗ್ಗೆ ಏನೂ ಮಾಡಿದ್ದು ಕಾಣಿಸುವುದಿಲ್ಲ.
೨. ಕೊಲ್ಹಾಪುರದಲ್ಲಿ ಒಂದು ಸುಳ್ಳು ಪ್ರಕರಣದಲ್ಲಿ ಪೂ. ತೋಡ್ಕರ್ ಮಹಾರಾಜರನ್ನು ಬಂಧಿಸಲಾಗಿತ್ತು. ಆಗ ಸರಕಾರಿ ಆಸ್ಪತ್ರೆಯಿಂದ ಹೊರಗೆ ಬರುತ್ತಿರುವಾಗ ಒಬ್ಬ ಪುರೋಗಾಮಿ ಕಾರ್ಯಕರ್ತನು ಪೂ. ತೋಡ್ಕರ್ ಮಹಾರಾಜರಿಗೆ ಹೊಡೆದಿದ್ದನು. ಈ ಘಟನೆಯನ್ನು ಪೊಲೀಸರು ದುರ್ಲಕ್ಷಿಸಿದರು ಹಾಗೂ ಡಾ. ತಾವಡೆಯವರ ಭದ್ರತೆಯ ವಿಷಯದಲ್ಲೂ ದುರ್ಲಕ್ಷಿಸಿದರು.
ದಿನಪತ್ರಿಕೆಗಳಲ್ಲಿಯೂ ಡಾ. ತಾವಡೆಯವರಿಗೆ ಹೊಡೆದಿರುವ ವಿಷಯ ನೋಂದಣಿ !
ಡಾ. ತಾವಡೆಯವರನ್ನು ನ್ಯಾಯಾಲಯದಲ್ಲಿ ಉಪಸ್ಥಿತಗೊಳಿಸಿ ದಾಗ ಅವರು ಪೊಲೀಸರು ತಮ್ಮ ಮೇಲೆ ಹೇಗೆ ದೌರ್ಜನ್ಯ ಮಾಡಿದರು, ಎಂಬುದನ್ನು ಹೇಳಿದರು. ಈ ವಿಷಯವನ್ನು ಸೆಪ್ಟೆಂಬರ್ ೪ ರಂದು ಹೆಚ್ಚು ಕಡಿಮೆ ಎಲ್ಲ ದಿನಪತ್ರಿಕೆಗಳು ಯೋಗ್ಯರೀತಿಯಲ್ಲಿ ಮುದ್ರಿಸಿವೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಪಾನ್ಸರೆ ಕೊಲೆ ಪ್ರಕರಣದಲ್ಲಿ ಪೊಲೀಸರು ಸನಾತನದ ಸಾಧಕರಾದ ಡಾ. ತಾವಡೆಯವರನ್ನು ಥಳಿಸಿದ ಹಾಗೂ ಅವರನ್ನು ಸಿಲುಕಿಸಲು ಮಾಡಿದ ಅಯೋಗ್ಯ ಪ್ರಯತ್ನ !