ಜಿಹಾದಿ ಹಿಡಿತದಲ್ಲಿ ಸಿಲುಕಿರುವ ಪಾಕಿಸ್ತಾನ ಮತ್ತು ಬಲುಚಿಸ್ತಾನಿಗಳ ಬಂಡಾಯ !

  
ಶ್ರೀ. ಭಾವೂ ತೋರ್ಸೆಕರ್
೧. ಪಾಕಿಸ್ತಾನದ ಜಿಹಾದಿ ಮಾನಸಿಕತೆಯನ್ನು ಪ್ರೋತ್ಸಾಹಿಸುತ್ತಿದ್ದ ಬುದ್ಧಿವಾದಿ ವರ್ಗದವರೇ ಈಗ ಅಲ್ಲಿನ ಸಂಭಾವಿತರ ವಿರುದ್ಧ ತಿರುಗಿ ಬಿದ್ದಿದ್ದಾರೆ !
ಪಾಕಿಸ್ತಾನದಲ್ಲಿ ಈಗ ಅಲ್ಲಿನ ತಜ್ಞ ಹಾಗೂ ಸಂಭಾವಿತರಿಗೆ ಜಿಹಾದ್‌ನ ಬಿಸಿ ತಟ್ಟಲು ಆರಂಭವಾಗಿದೆ. ಕೆಲವೇ ದಿನಗಳ ಹಿಂದೆ ಕ್ವೆಟ್ಟಾದಲ್ಲಿ ಘಟಿಸಿದ ಭೀಕರ ಬಾಂಬ್‌ಸ್ಫೋಟದ ಘಟನೆಯು ಅದಕ್ಕೆ ಸಾಕ್ಷಿ ನೀಡುತ್ತದೆ; ಏಕೆಂದರೆ ಈ ಸ್ಫೋಟದಲ್ಲಿ ಹೆಚ್ಚು ಪ್ರಮಾಣದಲ್ಲಿ ನ್ಯಾಯವಾದಿಗಳು ಮೃತಪಟ್ಟಿದ್ದರು. ಒಬ್ಬ ಗಣ್ಯ ನ್ಯಾಯವಾದಿಯ ಮೇಲೆ ಇಬ್ಬರು ದ್ವಿಚಕ್ರ ವಾಹನ ಸವಾರರು ಗುಂಡು ಹಾರಿಸಿದರು. ಅವರು ನ್ಯಾಯವಾದಿ ಸಂಘಟನೆಯ ಪದಾಧಿಕಾರಿಯಾಗಿದ್ದರು. ಇದರಿಂದ ಸಹಜವಾಗಿಯೇ ಆಕ್ರೋಶದ ಅಲೆ ಏಳುವುದು ಎಂಬುದು ಸ್ಪಷ್ಟವಾಗಿತ್ತು. ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನಡೆಯುತ್ತಿರುವಾಗಲೇ ಅವರು ಮೃತಪಟ್ಟರು.
ಮುಂದಿನ ಘಟನೆಯು ಅಪೇಕ್ಷಿತವಾಗಿತ್ತು. ತಕ್ಷಣ ಅಲ್ಲಿ ನ್ಯಾಯವಾದಿಗಳ ಜನಸಂದಣಿ ಹೆಚ್ಚಾಯಿತು ಹಾಗೂ ಆ ಜನಸಂದಣಿಯ ನಡುವೆಯೇ ಯಾರೋ ಭೀಕರ ಸ್ಫೋಟ ನಡೆಸಿ ೭೫ ಜನರನ್ನು ಬಲಿತೆಗೆದುಕೊಂಡರು. ಇದರ ಹಿಂದೆ ಯಾರ ಕೈವಾಡವಿದೆ, ಎಂಬುದನ್ನು ಕಂಡುಹಿಡಿಯುವ ಮೊದಲೇ ಬಲುಚಿಸ್ತಾನದ ಮುಖ್ಯಮಂತ್ರಿ ಭಾರತೀಯ ಗೂಢಚಾರ ವಿಭಾಗದ ಮೇಲೆ ರಕ್ತಪಾತದ ಆರೋಪ ಹೊರಿಸಿದರು. ಪಾಕಿಸ್ತಾನದ ಸ್ಥಳೀಯ ಅಧಿಕಾರಿಗಳು ಸಹ ಅದನ್ನು ಪುಷ್ಟೀಕರಿಸಿದರು. ಈಗ ಇದು ಪಾಕಿಸ್ತಾನಿ ಶೈಲಿ ಆಗಿದೆ. ಪಾಕಿಸ್ತಾನದಲ್ಲಿ ಎಲ್ಲಿಯೇ ಅಸಂತೋಷ ಅಥವಾ ಹಿಂಸಾತ್ಮಕ ಘಟನೆ ಘಟಿಸಿದರೆ ಅದಕ್ಕೆ ಭಾರತದ ಗೂಢಚಾರ ವಿಭಾಗವೇ ಜವಾಬ್ದಾರಿಯೆಂದು ಹೇಳುವುದು ಈಗ ಫ್ಯಾಶನ್ ಆಗಿಬಿಟ್ಟಿದೆ. ಪ್ರಾರಂಭದಲ್ಲಿ ಪಾಕಿಸ್ತಾನದ ಮಾಧ್ಯಮಗಳು ಮತ್ತು ಪತ್ರಕರ್ತರು ಅದರ ಲೋಕನಿಂದನೆ ಮಾಡುತ್ತಾ ಇರುತ್ತಾರೆ; ಆದರೆ ಅದರ ಬಿಸಿ ತಟ್ಟಲು ಆರಂಭವಾದಾಗ ಕೆಲವರು ಎಚ್ಚರಗೊಂಡರು. ಭಾರತವನ್ನು ಹೀಯಾಳಿಸುವ ಅವಕಾಶವೆಂದು ಯಾವ ಬುದ್ಧಿವಾದಿ ವರ್ಗ ದವರು ಪಾಕಿಸ್ತಾನಿ ಜಿಹಾದಿ ಮಾನಸಿಕತೆಯನ್ನು ಪ್ರೋತ್ಸಾಹಿಸಿದರೋ, ಅದೇ ಮನೋವೃತ್ತಿಯು ಈಗ ಅಲ್ಲಿನ ಸಂಭಾವಿತರ ಮೇಲೆಯೇ ತಿರುಗಿ ಬೀಳಲು ಆರಂಭವಾಯಿತು. ಪಾಕಿಸ್ತಾನದಲ್ಲಿ ನೂರಾರು ಚಿಕ್ಕ-ಪುಟ್ಟ ಜಿಹಾದಿ ಗುಂಪುಗಳು ತಯಾರಾಗಿದ್ದು ಅವುಗಳು ತಮ್ಮ ತಮ್ಮ ಉದ್ದೇಶಕ್ಕಾಗಿ ಯಾರನ್ನಾದರೂ ಗುರಿ ಮಾಡಲು ಆರಂಭಿಸಿವೆ. ಆ ಮಾನಸಿಕತೆಯ ಭೀಕರ ಆವಿಷ್ಕಾರವೆಂದರೆ ಕ್ವೆಟ್ಟಾದ ಘಟನೆಯೆಂದು ಹೇಳಬಹುದು; ಆದರೆ ಅದರಿಂದ ಭಾರತದ ಮೇಲಾದ ಆರೋಪವನ್ನು ಕೇವಲ ದುರ್ಲಕ್ಷ ಮಾಡಲು ಸಾಧ್ಯವಿಲ್ಲ. ಅದರ ಹಿಂದೆ ಎಷ್ಟು ಸತ್ಯವಿದೆ, ಎಂಬುದನ್ನೂ ಸೂಕ್ಷ್ಮದಿಂದ ನೋಡಬೇಕಾಗುವುದು.
ಆಂದೋಲನ ನಡೆಸುತ್ತಿರುವ ಬಲುಚಿಗಳು
೨. ಪಾಕಿಸ್ತಾನದ ಸೇನೆಯೇ ತರಬೇತಿ ನೀಡಿದ ಬಲುಚಿ ಯುವಕರು ಪಾಕಿಸ್ತಾನದ ವಿರುದ್ಧ ಬಂಡಾಯ ಹೂಡಿದ್ದಾರೆ !
ಕಳೆದ ೧೦-೧೨ ವರ್ಷಗಳಲ್ಲಿ ಪಾಕಿಸ್ತಾನದ ಈ ಬಲುಚಿಸ್ತಾನ ಪ್ರಾಂತ್ಯದಲ್ಲಿ ಹೊಗೆಯಾಡಲು ಆರಂಭವಾಗಿದೆ. ಮೂಲತಃ ಭಾರತ ಸ್ವತಂತ್ರವಾಗಿ ಅದು ವಿಭಜನೆಯಾದಾಗ ಬಲುಚಿಸ್ತಾನವು ಪಾಕಿಸ್ತಾನಕ್ಕೆ ಸಿಗುವ ಪ್ರದೇಶವಾಗಿರಲಿಲ್ಲ. ಬ್ರಿಟೀಶರು ಅಲ್ಲಿನ ಸುಲ್ತಾನನಿಗೆ ಸ್ವಯಂನಿರ್ಣಯದ ಅವಕಾಶವನ್ನು ನೀಡಿದ್ದರು; ಆದರೆ ಇಲ್ಲಿ ಕಾಶ್ಮೀರದೊಳಗೆ ನುಸುಳುವ ಪಾಕಿಸ್ತಾನದ ಸೈನಿಕರು ರಾಜಕೀಯ ಸಮರ್ಥನೆಯಿಂದ ಬಲುಚಿಸ್ತಾನದೊಳಗೆ ನುಸುಳಿ ಆ ಪ್ರಾಂತ್ಯವನ್ನು ಕಬಳಿಸಿದರು. ಅಲ್ಲಿನ ಸುಲ್ತಾನನ ತಲೆಗೆ ಪಿಸ್ತೂಲ್ ಇಟ್ಟು ವಿಲೀನೀಕರಣದ ಪ್ರಸ್ತಾಪಕ್ಕೆ ಸಹಿ ಹಾಕಿಸಿಕೊಳ್ಳಲಾಯಿತು. ಅಂದಿನಿಂದ ಬಲುಚಿಗಳು ಅಸ್ವಸ್ಥರಾಗಿದ್ದಾರೆ. ಪ್ರಾರಂಭದಲ್ಲಿ ಈ ಜನರಿಗೆ ಆಧುನಿಕ ಜಗತ್ತಿನ ರೀತಿಯೇ ತಿಳಿಯದಿರುವ ಕಾರಣ ಅವರಿಗೆ ಸುಲ್ತಾನನ ಸ್ಥಾನದಲ್ಲಿ ಹೊಸ ಪಾಕಿಸ್ತಾನ ಸರಕಾರ ಬಂದಿರುವುದರಿಂದ ಯಾವುದೇ ವ್ಯತ್ಯಾಸದ ಅರಿವಾಗಲಿಲ್ಲ; ಆದರೆ ದಿನಕಳೆದಂತೆ ಅವರ ಪ್ರದೇಶದಲ್ಲಿ ಬಲವಂತವಾಗಿ ಇತರ ಸ್ಥಳಗಳ ನಾಗರಿಕರನ್ನು ತಂದು ನೆಲೆಗೊಳಿಸಲು ಆರಂಭವಾದಾಗ ಅಲ್ಲಿ ಅಸಮಾಧಾನ ಹೆಚ್ಚುತ್ತಾ ಹೋಯಿತು. ತಮ್ಮ ಪಂಗಡದ ಸಂಸ್ಕೃತಿಯನ್ನು ಬಿಡಲು ಸಿದ್ಧರಾಗದ ಈ ಜನರ ಮೇಲೆ ಪಾಕಿಸ್ತಾನಿ ಆಡಳಿತವು ತನ್ನ ಪದ್ಧತಿಯ ಇಸ್ಲಾಮ್ ಹೇರಲು ಆರಂಭಿಸಿತು. ಇತರ ವಿಷಯಗಳಲ್ಲಿ ಆಧುನಿಕವಾಗಿರುವ ಪಾಕಿಸ್ತಾನವು ಕಾನೂನನ್ನು ಅನ್ವಯಿಸುವ ಅಟ್ಟಾಹಾಸ ಮಾಡಿರುವುದರಿಂದ ಸಂಘರ್ಷ ನಡೆಯಲು ಆರಂಭವಾಯಿತು. ಅದರಲ್ಲಿಯೇ ೧೯೮೦ ರ ನಂತರ ಅಲ್ಲಿ ಅಫ್ಘಾನಿಗಳು ಜಿಹಾದ್‌ಗಾಗಿ ಜಗತ್ತಿನಾದ್ಯಂತದ ಮುಸಲ್ಮಾನ ಯುವಕರನ್ನು ತಂದು ತರಬೇತಿ ನೀಡುತ್ತಾರೆ. ಅವರ ಜೀವನ ಶೈಲಿಯು ಈ ಗುಂಪಿನವರಿಗೆ ತಮ್ಮದೇ ಎನಿಸುವಹಾಗಿತ್ತು. ಆದ್ದರಿಂದ ಗುಂಪುಗಳಲ್ಲಿ ವಿಭಜಿಸಲ್ಪಟ್ಟ ಬಲುಚಿಯಲ್ಲಿ ಜಿಹಾದಿ ಹಿಂಸೆಯ ರೋಗ ಅಂಟಿಕೊಂಡಿತು. ಅವರಿಗೆ ಪಾಕಿಸ್ತಾನದ ಸೈನಿಕರು ತರಬೇತಿ ನೀಡಿದರು. ಇಂದು ಸಹಜವಾಗಿ ಸ್ವಾತಂತ್ರ್ಯದ ಧ್ವಜವನ್ನು ಹೆಗಲಿಗೇರಿಸಿಕೊಂಡು ಬಂಡಾಯ ಹೂಡುತ್ತಿರುವವರು ಪಾಕಿಸ್ತಾನದ ಸೈನಿಕರು ತರಬೇತಿ ನೀಡಿದ ಜಿಹಾದಿಗಳೇ ಆಗಿದ್ದಾರೆ. ತಾಲಿಬಾನ್ ಎಂದು ನಿರ್ಮಿಸಲಾಯಿತು, ಅವರಲ್ಲಿನ ಕೆಲವರು ಬಲುಚಿ ಆಗಿದ್ದರು ಹಾಗೂ ಈಗ ಅವರು ತಮ್ಮ ಬೇರೆಯೇ ಸಂಘಟನೆಯನ್ನು ರಚಿಸಿದ್ದಾರೆ. ಪಾಕಿಸ್ತಾನದ ಗೂಢಚಾರ ವಿಭಾಗ ಮತ್ತು ಸೇನೆಯು ಯಾರನ್ನು ನಿರ್ಮಿಸಿದೆಯೋ, ಅವರೇ ಈಗ ತಮ್ಮ ಸೂತ್ರಧಾರನಿಗೆ ಗೌರವ ನೀಡದವರಾಗಿದ್ದಾರೆ. ಅದರಿಂದ ಬಲುಚಿಸ್ತಾನದಲ್ಲಿ ಈಗ ಹೊಗೆಯಾಡಲು ಆರಂಭವಾಗಿದೆ.

೩. ಕೇವಲ ಬಂದೂಕನ್ನು ತೋರಿಸಿ ಬಲುಚಿಸ್ತಾನವನ್ನು ಹಿಡಿತದಲ್ಲಿಟ್ಟುಕೊಳ್ಳುವುದು ಅಸಾಧ!
ಮೊದಲು ಅಫ್ಘಾನ್ ಜಿಹಾದ್ ಮತ್ತು ನಂತರ ಅಮೇರಿಕಾದ ತಾಲಿಬಾನ್ ಮುಕ್ತಿಗಾಗಿ ಪಾಕಿಸ್ತಾನವುಲಾಗ ಹಾಕಿರುವುದರಿಂದ ಜಿಹಾದಿಗಳಲ್ಲಿ ಒಡಕುಂಟಾಗಿದೆ. ಅವರಲ್ಲಿ ಕೆಲವರು ಇಂದು ಸಹ ಪಾಕಿಸ್ತಾನದ ಗೂಢಚಾರರ ಅಡಿಯಾಳುಗಳೆಂದು ಹೊಸ ಅಫ್ಘಾನಿ ಸರಕಾರಕ್ಕೆ ಕಿರುಕುಳ ಕೊಡುತ್ತಿದ್ದಾರೆ; ಆದರೆ ಅದರಲ್ಲಿ ಪಖ್ತೂನಿ ಮತ್ತು ಬಲುಚಿಗಳು ಮಾತ್ರ ಪಾಕಿಸ್ತಾನದ ಸೇನೆಯಿಂದ ದೂರವಾಗಿದ್ದಾರೆ. ಅದರಿಂದಲೇ ಹೊಸ ಸಂಘರ್ಷ ಆರಂಭವಾಗಿದೆ. ಅವರಲ್ಲಿನ ಕೆಲವರು ನೇರವಾಗಿ ಭಾರತ ಹಸ್ತಕ್ಷೇಪ ಮಾಡಬೇಕೆಂದು ಆಗ್ರಹಿಸಿದ್ದಾರೆ. ಆದರೆ ಬಲುಚಿಯ ಗಡಿ ಎಲ್ಲಿಯೂ ಭಾರತದ ಸಮೀಪ ಇಲ್ಲದಿರುವುದರಿಂದ ಭಾರತ ಇಂತಹ ಯಾವುದೇ ಸಹಾಯ ಮಾಡಲು ಸಾಧ್ಯವಿಲ್ಲ; ಆದರೆ ಇರಾನ್ ಮಾರ್ಗದಿಂದ ಹಾಗೆ ಸಹಾಯ ಮಾಡಬಹುದು ಹಾಗೂ ಹಾಗೆ ಏನೋ ಆಗುತ್ತಿದೆಯೆಂದು ಪಾಕಿಸ್ತಾನ ಹೇಳುತ್ತಿದೆ. ಅದರಲ್ಲಿ ಸ್ವಲ್ಪವೂ ಹುರುಳಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಈ ಹಿಂದೆ ಇರಾನ್‌ನಲ್ಲಿ ವ್ಯವಸಾಯ ಮಾಡುತ್ತಿದ್ದ ಓರ್ವ ಮಾಜಿ ಭಾರತೀಯ ಸೈನ್ಯಾಧಿಕಾರಿಯನ್ನು ಬಲುಚಿ ಪ್ರದೇಶದಲ್ಲಿ ಬಂಧಿಸಿರುವುದಾಗಿ ಪಾಕಿಸ್ತಾನ ಹೇಳಿತ್ತು. ಅವರು ಇನ್ನೂ ಪಾಕಿಸ್ತಾನದ ವಶದಲ್ಲಿದ್ದಾರೆ; ಆದರೆ ವಿಷಯ ಭಾರತವು ಪಾಕಿಸ್ತಾನದಲ್ಲಿ ಹಿಂಸಾಚಾರ ಮಾಡುವುದು ಅಥವಾ ಅಲ್ಲಿನ ಬಂಡಕೋರರಿಗೆ ಸಹಾಯ ಮಾಡುವುದಲ್ಲ, ಏಕೆಂದರೆ ಯಾವುದೇ ದೇಶದ ಗೂಢಚಾರ ವಿಭಾಗವು ಇಂತಹ ಉದ್ಯೋಗವನ್ನು ಮಾಡುತ್ತಾ ಇರುತ್ತದೆ. ಪಾಕಿಸ್ತಾನದ ಗೂಢಚಾರ ವಿಭಾಗ ಭಾರತದಲ್ಲಿ ಕುತಂತ್ರ ಮಾಡಲು ಸಹಾಯ ಮಾಡುತ್ತಿದ್ದರೆ, ಭಾರತದ ಗೂಢಚಾರ ವಿಭಾಗ ಸಹ ಅಂತಹ ಯಾವುದೇ ಅವಕಾಶವನ್ನು ಬಿಡುವುದಿಲ್ಲ. ಅದನ್ನು ನಿಯಂತ್ರಿಸಲಿಕ್ಕಿದ್ದರೆ, ತಮ್ಮ ಪ್ರದೇಶದಲ್ಲಿನ ಜನರು ಅಸಮಾಧಾನ ಹಾಗೂ ಅಸಂತುಷ್ಟರಾಗಿರದಂತೆ ಜಾಗರೂಕರಾಗಿರಬೇಕು. ಪಾಕಿಸ್ತಾನವು ಬಲುಚಿಸ್ತಾನದಲ್ಲಿ ಅಷ್ಟು ಜಾಗರೂಕತೆ ವಹಿಸಿದರೆ ಭಾರತಕ್ಕೆ ಅಲ್ಲಿ ಅಡಿಯಾಳುಗಳು ಸಿಗಲು ಸಾಧ್ಯವಿಲ್ಲ. ಯಾವುದೇ ದೇಶವು ತಮ್ಮ ನಾಗರಿಕರನ್ನು ಇನ್ನೊಂದು ದೇಶಕ್ಕೆ ಕಿತಾಪತಿ ಮಾಡಲು ಕಳುಹಿಸುವುದಿಲ್ಲ. ಘರ್ಷಣೆ ಮಾಡಲು ಸ್ಥಳೀಯ ಜನರನ್ನೇ ಉಪಯೋಗಿಸುತ್ತದೆ. ಕ್ವೆಟ್ಟಾ ಹಾಗೂ ಇತರ ಪಾಕ್ ಪ್ರದೇಶದಲ್ಲಿ ಏನಾದರೂ ಆಗುತ್ತಿದ್ದರೆ, ತಮ್ಮ ನಾಗರಿಕರ ವೇದನೆ, ಯಾತನೆಯನ್ನು ಪಾಕಿಸ್ತಾನ ತಿಳಿದುಕೊಳ್ಳಬೇಕು. ಕೇವಲ ಬಂದೂಕನ್ನು ತೋರಿಸಿ ಬಲುಚಿಸ್ತಾನವನ್ನು ಮುಷ್ಟಿಯಲ್ಲಿಟ್ಟುಕೊಳ್ಳಲು ಸಾಧವಿಲ್ಲ.

೪. ಪಾಕಿಸ್ತಾನದ ವಿದೇಶ ನೀತಿಯ ವಿಷಯ ಈಗ ಉಗ್ರರ ವಶದಲ್ಲಿ !
ಕಳೆದ ವರ್ಷದಿಂದ ಹಂತಹಂತವಾಗಿ ಪಾಕಿಸ್ತಾನದ ಅನೇಕ ಪ್ರಾಂತ್ಯಗಳಲ್ಲಿ ಹಿಂಸಾತ್ಮಕ ಘಟನೆಗಳ ವೇಗ ಹೆಚ್ಚುತ್ತಿದೆ. ಬಲುಚಿಸ್ತಾನವಂತೂ ಬೆಂಕಿಯ ಬೇಗೆಯಲ್ಲಿರುವಂತೆ ಹೊಗೆಯಾಡುತ್ತಿದೆ. ಅದರ ಬಿಸಿ ಕರಾಚಿ ಮತ್ತು ಇತರ ನಗರಗಳಿಗೂ ಅರಿವಾಗಲು ಆರಂಭವಾಗಿದೆ; ಆದರೆ ಇದರಲ್ಲಿ ವ್ಯತ್ಯಾಸವನ್ನು ಗಮನಿಸುವ ಹಾಗಿದೆ. ಹಿಂದೆ ಪಾಕಿಸ್ತಾನದ ರಾಜಕಾರಣಿಗಳು ಭಾರತವನ್ನು ಬೆದರಿಸುತ್ತಿದ್ದರು. ನಂತರ ಅವರನ್ನೂ ಹಿಂದಿಕ್ಕಿ ಸೈನ್ಯದ ಮುಖಂಡರು, ಅಧಿಕಾರಿಗಳು ಎಚ್ಚರಿಕೆ ನೀಡುವ ರೂಢಿಯಾಯಿತು. ಪಾಕಿಸ್ತಾನದಲ್ಲಿ ಸೈನ್ಯದ ಮಾತೇ ನಡೆಯುತ್ತದೆ, ಎಂಬ ಒಂದು ವಿಚಾರಧಾರೆ ಅದರಿಂದ ರೂಢಿಯಾಗಿತ್ತು; ಆದರೆ ಈಗ ವಿಷಯವು ಸೈನ್ಯದ ಕೈಯಿಂದಲೂ ಜಾರಿಹೋಗಿರುವುದು ಕಾಣಿಸುತ್ತಿದೆ; ಏಕೆಂದರೆ ಈಗ ಭಾರತಕ್ಕೆ ಬೆದರಿಕೆ ಹಾಕುವ ವಿದೇಶಿನೀತಿಯನ್ನು ಅಲ್ಲಿನ ಮುಜಾಹಿದೀನ ಮತ್ತು ತೊಯಬಾ ಘೋಷಿಸಲು ಆರಂಭಿಸಿವೆ. ಸಯೀದ್ ಹಾಫೀಜ್ ಅಥವಾ ಸಲಾವುದ್ದೀನ್ ರಂತಹವರು ಪಾಕಿಸ್ತಾನ ಸರಕಾರ ಏನು ಮಾಡಬೇಕೆಂಬ ವಿಷಯದಲ್ಲಿ ಮಾರ್ಗದರ್ಶನ ಮಾಡಲು ಆರಂಭಿಸಿವೆ. ಇಂತಹ ಒಂದು ಸ್ಥಳದಲ್ಲಿ ಅಣುಬಾಂಬ್ ಹಾಕುವೆವು ಅಥವಾ ಕಾಶ್ಮೀರಕ್ಕೆ ವೈದ್ಯಕೀಯ ತಂಡವನ್ನು ಕಳುಹಿಸುವೆವು, ಎಂದು ಸಯೀದ್ ಹಾಫೀಜ್ ಹೇಳುತ್ತಾನೆ, ಆದ್ದರಿಂದ ಅವನು ಯಾವ ಅಧಿಕಾರದಿಂದ ಮಾತನಾಡುತ್ತಾನೆ ? ಈ ಜನರು ಎಷ್ಟು ಉದ್ಧಟರಾಗಿದ್ದಾರೆಂದರೆ, ಅವರ ಜಿಹಾದ್ ಮತ್ತು ಧಾರ್ಮಿಕ ಉಗ್ರವಾದವು ನಾಗರಿಕರು ಮತ್ತು ಸಂಭಾವಿತ ವರ್ಗದವರನ್ನು ಭಯಭೀತರನ್ನಾಗಿ ಮಾಡುತ್ತಿದೆ. ಅದನ್ನು ಯಾರಾದರೂ ವಿರೋಧಿಸಿದರೆ ಅವರನ್ನು ಘರ್ಷಣೆಯಲ್ಲಿ ಮುಗಿಸಿಬಿಡುವ ಪ್ರಕ್ರಿಯೆ ಈಗ ಆರಂಭವಾಗಿದೆ. ಕ್ವೆಟ್ಟಾ ಅಥವಾ ಕರಾಚಿಯಲ್ಲಿ ನಡೆದ ಅನೇಕ ಹಿಂಸಾತ್ಮಕ ಘಟನೆಗಳನ್ನು ನೋಡಿದರೆ ನಾಗರಿಕರ ಅಧಿಕಾರ ಹಾಗೂ ಪ್ರಜಾಪ್ರಭುತ್ವವನ್ನು ಹೊಸಕಿ ಹಾಕುವ ಬುದ್ಧಿವಾದಿಗಳನ್ನು ಅದರಲ್ಲಿ ನಿರ್ಧರಿಸಿ ಗುರಿ ಮಾಡಲಾಗುತ್ತದೆ. ಪಾಕಿಸ್ತಾನ ಈಗಂತೂ ಜಿಹಾದಿ ಉಗ್ರರ ಹಿಡಿತದಲ್ಲಿ ಸಿಲುಕಿದೆ. ಸೈನಿಕರಿಗಾದರೂ ಸ್ವಲ್ಪ ಶಿಸ್ತು ಇರುತ್ತಿತ್ತು; ಆದರೆ ಜಿಹಾದಿ ಯೆಂದರೆ ಅನಾಗರಿಕ ನ್ಯಾಯ. ಇದರಲ್ಲಿ ಮೊತ್ತಮೊದಲು ಬುದ್ಧಿವಾದಿಗಳು ಬಲಿಯಾಗುತ್ತಾರೆ. ಸಿರಿಯಾ, ಇರಾಕ್ ಮತ್ತು ಲಿಬಿಯಾ ಇವುಗಳು ಅದರ ಇತ್ತೀಚೆಗಿನ ಉದಾಹರಣೆಗಳಾಗಿವೆ.

- ಶ್ರೀ. ಭಾವೂ ತೋರ್ಸೆಕರ್, ಹಿರಿಯ ಪತ್ರಕರ್ತರು, ಮುಂಬಯಿ. (ಆಧಾರ: http://jagatapahara.blogspot.in/)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜಿಹಾದಿ ಹಿಡಿತದಲ್ಲಿ ಸಿಲುಕಿರುವ ಪಾಕಿಸ್ತಾನ ಮತ್ತು ಬಲುಚಿಸ್ತಾನಿಗಳ ಬಂಡಾಯ !