ಸುಸಂಸ್ಕಾರವನ್ನು ನೀಡುವ ಬೋಧಕಥೆ !

ನಿಜವಾದ ತ್ಯಾಗ
ಸದ್ಗುಣ, ರಾಷ್ಟ್ರಭಕ್ತಿಯ ಮಹತ್ವವು ಎಲ್ಲರಿಗೂ ತಿಳಿದು ಭಾವೀ ಪೀಳಿಗೆಯು ಸಂಸ್ಕಾರಯುತವಾಗಿರಬೇಕೆಂದು ಈ ಮಾಲಿಕೆಯನ್ನು ಇಲ್ಲಿ ಪ್ರಸ್ತುತ ಪಡಿಸು ತ್ತಿದ್ದೇವೆ. ಮುಂದೆ ನೀಡಿದ ಕಥೆಯಿಂದ ನಮ್ಮ ಸಂಪೂರ್ಣ ಗಮನ ಗುರಿಯ ಮೇಲಿದ್ದರೆ ಮಾತ್ರ ಹೇಗೆ ಯಶಸ್ವಿಯಾಗುವೆವು ಎಂಬುದು ತಿಳಿಯುತ್ತದೆ.
೧. ತನ್ನನ್ನು ತಾನು ಒಬ್ಬ ದೊಡ್ಡ ತ್ಯಾಗಿ ಎಂದು 
ತಿಳಿಯುವ ಬ್ರಹ್ಮಚಾರಿಯು ತನ್ನಲ್ಲಿರುವ ಎಲ್ಲ ವಸ್ತುಗಳನ್ನೂ ಅಗ್ನಿಗೆ 
ಸಮರ್ಪಿಸಿ ‘ನಾನು ಸರ್ವಸ್ವದ ತ್ಯಾಗ ಮಾಡಿದ್ದೇನೆ’, ಎಂದು ತಿಳಿಯುವುದು
‘ಯೋಗವಸಿಷ್ಠದಲ್ಲಿ ತ್ಯಾಗದ ಬಗ್ಗೆ ಒಂದು ಕಥೆ ಇದೆ. ಓರ್ವ ಬ್ರಹ್ಮಚಾರಿಯು ತನ್ನನ್ನು ತಾನು ಒಬ್ಬ ದೊಡ್ಡ ತ್ಯಾಗಿ ಎಂದು ತಿಳಿಯುತ್ತಿದ್ದನು. ಸಂಪೂರ್ಣ ಬಾಹ್ಯ ವಿಷಯಗಳ ತ್ಯಾಗ ಮಾಡಿ ಅವನು ಅತ್ಯಂತ ಸಾಮಾನ್ಯ ಬಟ್ಟೆ, ಆಸನ ಮತ್ತು ಕಮಂಡಲವನ್ನು ತೆಗೆದು ಕೊಂಡು ಇರುತ್ತಿದ್ದನು.
ಒಮ್ಮೆ ಅವನ ಗುರುಗಳು ಅವನ ಕಣ್ಣುತೆರೆಯಲೆಂದು ಅವನಿಗೆ, ‘ನೀನು ಏನು ತ್ಯಾಗ ಮಾಡಿದ್ದೀ ? ನೀನಂತೂ ಯಾವುದೇ ತ್ಯಾಗ ಮಾಡಲಿಲ್ಲ’ ಎಂದರು. ಆಗ ಬ್ರಹ್ಮಚಾರಿಯ, ‘ನನ್ನ ಹತ್ತಿರವಂತೂ ಏನೂ ಇಲ್ಲ. ಕೇವಲ ಉಡುವ ಬಟ್ಟೆಗಳು, ಆಸನ ಮತ್ತು ಕಮಂಡಲ ಮಾತ್ರ ಇದೆ. ಗುರುದೇವರು ಇವೆಲ್ಲವುಗಳನ್ನು ನಿರ್ಲಕ್ಷಿಸಿ ಹೀಗೇಕೆ ಹೇಳುತ್ತಿದ್ದಾರೆ ?’ ಎಂದು ವಿಚಾರ ಮಾಡಿ ಬ್ರಹ್ಮಚಾರಿಯು, ಅವೆಲ್ಲವುಗಳ ತ್ಯಾಗ ಮಾಡಲೆಂದು ಎದುರಿಗೆ ಬೆಂಕಿಯನ್ನು ಉರಿಸಿ ಅದರಲ್ಲಿ ಒಂದೊಂದರಂತೆ ಎಲ್ಲ ವಸ್ತುಗಳನ್ನು ಆಹುತಿ ನೀಡಿ, ಈಗ ನನ್ನಿಂದ ನನ್ನ ಸರ್ವಸ್ವದ ತ್ಯಾಗವಾಯಿತು’ ಎಂದನು.
೨. ‘ ಬಾಹ್ಯ ವಸ್ತುಗಳ ತ್ಯಾಗವೆಂದರೆ ಸರ್ವಸ್ವದ ತ್ಯಾಗವಲ್ಲ’, ಎಂದು ಗುರುಗಳು 
ಹೇಳಿದಾಗ ಬ್ರಹ್ಮಚಾರಿಯು ತನ್ನ ದೇಹವನ್ನು ಅಗ್ನಿಯಲ್ಲಿ ಅರ್ಪಣೆ ಮಾಡಲು ಸಿದ್ಧನಾಗುವುದು
ಆಗ ಗುರುಗಳು, ‘ನಿನ್ನಿಂದ ಎಂತಹ ತ್ಯಾಗವಾಗಿದೆ? ಬಟ್ಟೆಯ ತ್ಯಾಗ ? ಅದಂತೂ ಹತ್ತಿಯಿಂದ ಸಿದ್ಧವಾಗಿದೆ. ಅದೇ ರೀತಿ ಆಸನ, ಕಮಂಡಲ ಇತ್ಯಾದಿ ವಸ್ತುಗಳು ಬೇರೆ ಬೇರೆ ವಸ್ತುಗಳಿಂದ ಸಿದ್ಧವಾಗಿವೆ; ಅವುಗಳ ತ್ಯಾಗ ಮಾಡುವುದರಿಂದ ನಿನ್ನಿಂದ ಏನು ತ್ಯಾಗವಾಯಿತು?’ ಎಂದರು. ಆಗ ಬ್ರಹ್ಮಚಾರಿಯು, ‘ಈಗ ನನ್ನದು ಎಂದು ಎನ್ನಲು ಉಳಿದದ್ದಾರೂ ಏನು ? ಅಂದರೆ ಈ ಶರೀರವು ನನ್ನದಿದೆ. ಹಾಗಾದರೆ ಈ ಶರೀರವನ್ನು ಅಗ್ನಿಯಲ್ಲಿ ಆಹುತಿ ಕೊಡುವೆನು’ ಎಂದು ವಿಚಾರ ಮಾಡಿ ಆ ಬ್ರಹ್ಮಚಾರಿಯು ಎದುರಿಗೆ ಉರಿಯುತ್ತಿರುವ ಅಗ್ನಿಯಲ್ಲಿ ತನ್ನ ದೇಹವನ್ನು ಅರ್ಪಿಸಲು ಸಿದ್ಧನಾದನು.
೩. ಅಹಂಕಾರವೇ ಎಲ್ಲ ಅನರ್ಥಗಳಿಗೆ ಮುಖ್ಯ ಕಾರಣವಾಗಿದ್ದು ಅದರ
 ತ್ಯಾಗವೇ ನಿಜವಾದ ತ್ಯಾಗವಾಗಿದೆ, ಎನ್ನುವುದು ಗುರುಕೃಪೆಯಿಂದ ಅರಿವಾಗುವುದು
ಆಗ ಗುರುಗಳು, ‘ನಿಲ್ಲು, ನೀನು ಏನು ಮಾಡಲು ಹೊರಟಿರುವೆ ? ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ ನೋಡು ! ಈ ಶರೀರದಲ್ಲಿ ನಿನ್ನದು ಎನ್ನುವುದು ಏನಿದೆ ? ಈ ಶರೀರವು ತಾಯಿ-ತಂದೆಯವರ ರಜ-ವೀರ್ಯದಿಂದ ಉತ್ಪನ್ನವಾಗಿದ್ದು ಆಹಾರದ ಮೂಲಕ ಅದು ಬೆಳೆದು ಕೊಬ್ಬಿದೆ; ಅದರಲ್ಲಿ ನಿನ್ನದೇನಿದೆ ?’ ಎಂದರು. ಆಗ ಮಾತ್ರ ಬ್ರಹ್ಮಚಾರಿಯ ಕಣ್ಣುಗಳು ತೆರೆದವು. ಗುರುಗಳ ಕೃಪೆಯಿಂದ ಅವನಿಗೆ ‘ಅಹಂಕಾರವೇ ಎಲ್ಲ ಅನರ್ಥಗಳಿಗೆ ಮುಖ್ಯ ಕಾರಣ ವಾಗಿದೆ’ ಎಂಬುದು ಅರಿವಾಯಿತು. ಈ ಅಹಂಕಾರ ವನ್ನು ತ್ಯಜಿಸಲು ಸಾಧ್ಯವಾದರೆ ಮಾತ ನಿಜವಾದ ತ್ಯಾಗ ವಾಗುತ್ತದೆ; ಇಲ್ಲವಾದರೆ ಎಲ್ಲ ಬಾಹ್ಯ ವಸ್ತುಗಳ, ಇಷ್ಟೇ ಅಲ್ಲದೇ ಶರೀರದ ತ್ಯಾಗ ಮಾಡಿದರೂ ಸಹ ಯಾವುದೇ ತ್ಯಾಗ ಆಗುವುದಿಲ್ಲ’ ಎಂದು ಅರಿವಾಯಿತು.
- ಸ್ವಾಮಿ ತುರಿಯಾನಂದರವರು ಬರೆದ ‘ಪ್ರಿಯ ಸಾಧಕರೇ’ ಎಂಬ ಗ್ರಂಥದಿಂದ ( ಪು.೨೨೭-೨೨೮ )
(ಆಧಾರ : ಮಾಸಿಕ ಜೀವನ -ವಿಕಾಸ,’ ಫೆಬ್ರವರಿ ೨೦೦೭)
(ಯುವ ಪೀಳಿಗೆಗಳಲ್ಲಿ ಯೋಗ್ಯ ಸಂಸ್ಕಾರವನ್ನು ನಿರ್ಮಾಣ ಮಾಡಲು ಉಪಯುಕ್ತ ಜಾಲತಾಣ : http://www.balsanskar.com/)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸುಸಂಸ್ಕಾರವನ್ನು ನೀಡುವ ಬೋಧಕಥೆ !