ಶ್ರೀ ದುರ್ಗಾ ಪರಮೇಶ್ವರಿ ದೇವಿಯನ್ನು ಅವಮಾನಿಸುವ ಲೇಖನ ಫೇಸ್‌ಬುಕ್‌ನಲ್ಲಿ ಪೋಸ್ಟ್ !

ಮಂಗಳೂರು : ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಿಯನ್ನು ಅವಮಾನಿಸುವ ಬರಹವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು ಕೆಲವು ಹಿಂದೂ ಸಂಘಟನೆಗಳ ಹಾಗೂ ಧರ್ಮಾಭಿಮಾನಿಗಳ ಗಮನಕ್ಕೆ ಬಂದಿದ್ದರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ.
ಆಗಸ್ಟ್ ೨ ರಂದು ಈ ಅವಮಾನಕಾರಿ ಬರವಣಿಗೆಯನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿತು. ನಂತರ ಈ ಪೋಸ್ಟ್ ಅನ್ನು ಇತರ ಜನರು ಬೇರೆ ಹೆಸರಿನಲ್ಲಿ ಸಮರ್ಥಿಸಿದ್ದಾರೆ. ಈ ವಿಷಯವು ಗಮನಕ್ಕೆ ಬಂದ ಮೇಲೆ ಹಿಂದೂ ಜಾಗರಣ ವೇದಿಕೆ ಹಾಗೂ ಕರಾವಳಿ ಸಂಸ್ಕೃತಿ ವೇದಿಕೆ ಎಂಬ ಹಿಂದುತ್ವನಿಷ್ಠ ಸಂಘಟನೆಗಳು ಮಂಗಳೂರು ಪೋಲೀಸ್ ಆಯುಕ್ತರಾದ ಎಮ್.ಚಂದ್ರಶೇಖರ್ ಇವರನ್ನು ಭೇಟಿಯಾಗಿ ಮೇಲಿನ ಪ್ರಕರಣದ ವಿರುದ್ಧ ದೂರು ನೀಡಿರುವ ಹಲವಾರು ಪತ್ರಗಳನ್ನು ಪ್ರಸ್ತುತ ಪಡಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀ ದುರ್ಗಾ ಪರಮೇಶ್ವರಿ ದೇವಿಯನ್ನು ಅವಮಾನಿಸುವ ಲೇಖನ ಫೇಸ್‌ಬುಕ್‌ನಲ್ಲಿ ಪೋಸ್ಟ್ !