ವಿಚಾರಣೆಯ ಸಮಯದಲ್ಲಿ ಪೊಲೀಸರು ಥಳಿಸಿದರು ! - ಡಾ. ವೀರೇಂದ್ರಸಿಂಹ ತಾವಡೆ

ಡಾ. ತಾವಡೆಯವರನ್ನು ನ್ಯಾಯಾಲಯದಲ್ಲಿ ನಿಲ್ಲಿಸಿದಾಗ, ‘ಪೊಲೀಸರು ನನಗೆ ವಿಚಾರಣೆಯ ಸಮಯ ದಲ್ಲಿ ಥಳಿಸಿದರು, ಕಪಾಳಕ್ಕೆ, ತಲೆಗೆ ಹೊಡೆದರು, ಎದೆಯ ಮೇಲೆ ಬೂಟ್‌ನಿಂದ ತುಳಿದರು ಮತ್ತು ಕಾಲಿಗೂ ಬೂಟ್‌ನಿಂದ ಥಳಿಸಿದರು. ಕಾಲಿಗೆ ಬೂಟ್ನಿಂದ ಥಳಿಸಿದ್ದರಿಂದ ಕಾಲಿಗೆ ಗಾಯವಾಗಿದೆ. ನನಗೆ ಮಧುಮೇಹ, ಮೂತ್ರಾಶಯದ ಕಾಯಿಲೆ, ಉಚ್ಚ ರಕ್ತದೊತ್ತಡ ಇಂತಹ ಗಂಭೀರ ಕಾಯಿಲೆಗಳಿ ದ್ದರೂ ಪೊಲೀಸರು ನನಗೆ ವಿಚಾರಣೆ ಹೆಸರಿನಲ್ಲಿ ಥಳಿಸುತ್ತಿದ್ದಾರೆ. ಇದರಿಂದ ನಿಶ್ಯಕ್ತಿಯಾಗಿದೆ. ನನಗೆ ಜ್ವರ ಬಂದಿದ್ದು ತೀವ್ರ ಪ್ರಮಾಣದಲ್ಲಿ ತಲೆ ನೋಯುತ್ತಿದೆ’ ಎಂದು ನ್ಯಾಯಾಧೀಶರಲ್ಲಿಹೇಳಿದರು. ಇದಕ್ಕೆ ನ್ಯಾಯಾಧೀಶ ವಿ.ವಿ. ಪಾಟೀಲರು ಡಾ. ತಾವಡೆಯವರನ್ನು ಎದುರು ಕರೆದು ಶರೀರಕ್ಕೆ ಎಲ್ಲೆಲ್ಲಿ ಥಳಿಸಿದರು ಎಂದು ತೋರಿಸಲು ಹೇಳಿದರು.
ಇದಕ್ಕೆ ಡಾ. ತಾವಡೆಯವರು ಪ್ಯಾಂಟ್ ಮೇಲೆ ಮಾಡಿ ಕಾಲಿಗೆ ಥಳಿಸಿದ ಗುರುತನ್ನು ತೋರಿಸಿದರು. ಡಾ. ತಾವಡೆಯವರು ಮಾಡಿದ ಆರೋಪವನ್ನು ಖಚಿತಪಡಿಸಲು ನ್ಯಾಯಾಧೀಶರು ಡಾ. ತಾವಡೆಯ ವರನ್ನು ಜಿಲ್ಲಾ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿ ಬರುವಂತೆ ತಿಳಿಸಿದರು. ತಪಾಸಣೆ ಮಾಡಿದ ನಂತರ ಪ್ರತ್ಯಕ್ಷ ವರದಿ ನೋಡಿ ನ್ಯಾಯಾಧೀಶರು, ಥಳಿಸಿರುವ ಆರೋಪ ಸಿದ್ಧವಾಗುತ್ತಿಲ್ಲ, ಎಂದು ನಿಷ್ಕರ್ಷಕ್ಕೆ ಬಂದರು; ಆದರೆ ಈ ಸಮಯದಲ್ಲಿ ನ್ಯಾಯವಾದಿ ವಿರೇಂದ್ರ ಇಚಲಕರಂಜೀಕರರು, ಡಾ. ತಾವಡೆಯವರಿಗಿರುವ ಗಂಭೀರ ಕಾಯಿಲೆಗಳ ಬಗ್ಗೆ ವೈದ್ಯಕೀಯ ವರದಿಯಲ್ಲಿ ಉಲ್ಲೇಖಿಸಲಾಗಿದೆ, ಎಂದರು. ಅದೇ ರೀತಿ ಎಡಗಾಲಿಗೆ ಪೆಟ್ಟಾಗಿರುವ ಗುರುತೂ ಇದೆ, ಎಂಬುದನ್ನು ಗಮನಕ್ಕೆ ತಂದುಕೊಟ್ಟರು.
ಈ ಹಿಂದೆಯೂ ಪೊಲೀಸರ ವರ್ತನೆಯನ್ನು ನೋಡಿದರೆ ಅವರು ಸಂಶಯಿತನನ್ನು ವಶಪಡಿಸಿಕೊಂಡ ನಂತರ ಅವನು ಹೆದರಿ ನಿಜ ಹೇಳಬಹುದು ಎಂಬ ವಿಚಾರದಿಂದ ಅವನಿಗೆ ಅಮಾನವೀಯವಾಗಿ ಥಳಿಸುತ್ತಾರೆ. ಪೊಲೀಸರು ಸಂಶಯಿತನಿಗೆ ಥಳಿಸುವಾಗ ಬಾಹ್ಯ ಗಾಯ ಆಗದಂತೆ ಮತ್ತು ಮೇಲುಮೇಲೆ ಪೆಟ್ಟು ಬೀಳುವಂತೆ ಥಳಿಸುತ್ತಾರೆ. ಅದರ ನಂತರ ಸಂಶಯಿತನನ್ನು ನ್ಯಾಯಾಧೀಶರೆದುರು ನಿಲ್ಲಿಸಿದಾಗ ಅವನು ಥಳಿಸಿದ ಬಗ್ಗೆ ದೂರು ನೀಡಿದರೆ ಅವನನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗುತ್ತದೆ ಮತ್ತು ವೈದ್ಯಕೀಯ ಪರೀಕ್ಷೆಯ ವರದಿಯೂ ಪೊಲೀಸರಿಗೆ ಪೂರಕವಾಗಿಯೇ ಇರುತ್ತದೆ ಎಂಬುದು ಇಂದಿನ ವರೆಗಿನ ಅನುಭವವಾಗಿದೆ. ಇಂತಹ ಪೊಲೀಸರನ್ನು ಗುರುತಿಸಿ ಅವರ ಬಗ್ಗೆ ಮೇಲಧಿಕಾರಿಯವರಲ್ಲಿ ದೂರನ್ನು ದಾಖಲಿಸಿ. ಹಿಂದೂ ರಾಷ್ಟ್ರದಲ್ಲಿ ಇಂತಹ ಪೊಲೀಸರು ಇರುವುದಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿಚಾರಣೆಯ ಸಮಯದಲ್ಲಿ ಪೊಲೀಸರು ಥಳಿಸಿದರು ! - ಡಾ. ವೀರೇಂದ್ರಸಿಂಹ ತಾವಡೆ