ಶ್ರೀಕೃಷ್ಣನೀತಿ : ಭಾರತವನ್ನು ಅರಾಜಕತೆಯಿಂದ ರಕ್ಷಿಸುವ ವಿಜಯನೀತಿ !

‘ಭಾರತದ ಪಾಕಿಸ್ತಾನ ಮತ್ತು ಚೀನಾ ಗಡಿಯಲ್ಲಿ ನಡೆಯುತ್ತಿರುವ ನುಸುಳುವಿಕೆ ಮತ್ತು ಕಳ್ಳಸಾಗಾಣಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇನ್ನೊಂದೆಡೆ ವಾಯುವ್ಯದ ರಾಜ್ಯಗಳನ್ನು ಭಾರತದಿಂದ ಪ್ರತ್ಯೇಕಿಸಲು ಕ್ರೈಸ್ತರು ಗಾಳ ಬೀಸಿದ್ದಾರೆ. ಇಂತಹ ವಿಶ್ವಾಸಘಾತಕ ಶತ್ರುರಾಷ್ಟ್ರಗಳು ಹಾಗೂ ಧರ್ಮಪ್ರಸಾರಕರಿಂದ ಭಾರತಕ್ಕೆ ಮೇಲಿಂದ ಮೇಲೆ ಪೆಟ್ಟುಗಳು ಬೀಳುತ್ತಿವೆ. ಈ ಪರಿಸ್ಥಿತಿಯಲ್ಲಿ ರಾಷ್ಟ್ರರಕ್ಷಣೆಗಾಗಿ ಒಂದೇ ಒಂದು ಉಪಾಯವೆಂದರೆ ‘ಕೃಷ್ಣನೀತಿ’ಯನ್ನು ಅವಲಂಬಿಸು ವುದಾಗಿದೆ. ಆದರೆ ನಿಧರ್ಮಿಗಳೆಂದು ಕರೆಸಿಕೊಳ್ಳುವ ಭಾರತೀಯ ರಾಜಕಾರಣಿಗಳು ಅದನ್ನು ಹೇಗೆ ಅವಲಂಬಿಸುವರು ? ಅದಕ್ಕಾಗಿ ಹಿಂದೂಗಳೇ ‘ಕೃಷ್ಣ ನೀತಿ’ ಯನ್ನು ಕಾರ್ಯಗತಗೊಳಿಸಿ ಧರ್ಮಾಧಾರಿತ ಹಿಂದೂರಾಷ್ಟ್ರಕ್ಕಾಗಿ ಕಟಿಬದ್ಧರಾಗಬೇಕು !
 ೧. ವಿಶ್ವಾಸಘಾತಕಿಗಳಿಗೆ ಏಟು ಎದುರೇಟು ನೀಡಬೇಕು ! 
ಮಹಾಭಾರತದ ಕಾಲದಲ್ಲಿ ಕೌರವರು ಕಾಲಕಾಲಕ್ಕೆ ಕುಟಿಲ ನೀತಿಯನ್ನು ಅನುಸರಿಸಿ ಪಾಂಡವರಿಗೆ ವಿಶ್ವಾಸಘಾತ ಮಾಡಿದರು. ಆಗ ‘ಕೌರವರಂತಹ ವಿಶ್ವಾಸಘಾತಕಿಗಳ ಕುಟಿಲ ನೀತಿಗಳನ್ನು ಸದೆಬಡಿಯಲು ಪ್ರಸಂಗ ಬಂದಾಗ ಏಟಿಗೆ ಎದುರೇಟಿನ ಉತ್ತರವನ್ನೇ ನೀಡುವ ಧೋರಣೆಯನ್ನು ಅವಲಂಬಿಸಬೇಕು’, ಎಂದು ಶ್ರೀಕೃಷ್ಣನು ಪಾಂಡವರಿಗೆ ಮಾರ್ಗದರ್ಶನವನ್ನು ಮಾಡಿದನು. ಈ ನೀತಿಯನ್ನು ಅನುಸರಿಸಿ ಮತ್ತು ಸತ್ಯದ ಮಾರ್ಗದಲ್ಲಿಯೇ ನಡೆದಿದ್ದರಿಂದಲೇ ಪಾಂಡವರು ಕೌರವರೊಂದಿಗಿನ ಯುದ್ಧದಲ್ಲಿ ಜಯಶಾಲಿಗಳಾದರು. ಮಹಾಭಾರತದಿಂದ ಸ್ಪಷ್ಟವಾಗಿರುವ ಈ ‘ಕೃಷ್ಣನೀತಿಯೆಂದರೆ ವಿಜಯನೀತಿಯಾಗಿದೆ’ ‘ಅವಿಶ್ವಾಸದ ಮಾರ್ಗವೆಂದರೆ ಪಾಪ ಎನ್ನುವ ಭಾವನೆ ಹಿಂದೂಗಳ ಮನಸ್ಸಿನಲ್ಲಿ ಆಳವಾಗಿ ಬೇರೂರಿದೆ. ಇಂತಹ ನೈತಿಕತೆಯ ಮೌಲ್ಯವರ್ಧಿತ ವರ್ತನೆ ವಿಶ್ವಾಸಕ್ಕೆ ಅರ್ಹವಿರುವವರೊಂದಿಗೆ ಮಾಡಬಹುದು. ‘ವಿಶ್ವಾಸಘಾತಕಿ ವೃತ್ತಿಯವರೊಂದಿಗೆ ಇಂತಹ ವರ್ತನೆಯನ್ನು ಮಾಡುವುದೆಂದರೆ ಆತ್ಮಘಾತಕವಾಗಿದೆ’ ಎನ್ನುವುದನ್ನು ಈ ಕೃಷ್ಣನೀತಿಯಿಂದ ಕಲಿಯಬಹುದಾಗಿದೆ.
೨. ಶತ್ರುಗಳನ್ನು ಹತಾಶೆಗೊಳಿಸುವ ಶ್ರೀಕೃಷ್ಣನ ಶಿಷ್ಟಾಚಾರ ಪಾಲನೆ !
‘ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದ ಬಳಿಕ ಅವನನ್ನು ಬಂಧಿಸಬೇಕೆಂದು ದುರ್ಯೋಧನನು ವಿಚಾರ ಮಾಡಿದ್ದನು. ಶ್ರೀಕೃಷ್ಣನನ್ನು ಬಂಧಿಸಿದರೆ, ಪಾಂಡವರು ಹತಾಶರಾಗುವರು ಎನ್ನುವುದು ಅವನ ಅಭಿಪ್ರಾಯವಾಗಿತ್ತು. ಅದರಂತೆ ಶ್ರೀಕೃಷ್ಣನು ಹಸ್ತಿನಾಪುರಕ್ಕೆ ಬಂದ ಬಳಿಕ ದುರ್ಯೋಧನನು ಅವನ ಅಪಮಾನ ಮಾಡಿದನು. ಅಷ್ಟೇ ಅಲ್ಲದೇ, ಕೃಷ್ಣನನ್ನು ಬಂಧಿಸಿ ಸೆರೆಮನೆಯಲ್ಲಿಡುವ ಬಗ್ಗೆ ಎಲ್ಲ ಮಾತನಾಡಿದನು. ಆಗ ಶ್ರೀಕೃಷ್ಣನು ದುರ್ಯೋಧನನಿಗೆ, ‘ಒಮ್ಮೆ ಹೊರಗೆ ಹೋಗಿ ನೋಡು, ನನ್ನ ಒಂದು ಅಕ್ಷೋಹಿಣಿ ಸೈನ್ಯವು ನಿನ್ನ ರಾಜಧಾನಿಯನ್ನು ಸುತ್ತುವರಿದಿದೆ. ಮನಸ್ಸು ಮಾಡಿದರೆ, ನಾನು ಇಲ್ಲಿಯೇ ನಿಮ್ಮೆಲ್ಲರನ್ನು ವಧಿಸಬಲ್ಲೆನು’ ಎಂದು ಬೆದರಿಕೆ ಹಾಕಿದನು. ಶ್ರೀಕೃಷ್ಣನ ಈ ಶಿಷ್ಟಾಚಾರದಿಂದಾಗಿ ದುರ್ಯೋಧನನು ಹತಾಶೆಗೊಳ್ಳುವ ಪರಿಸ್ಥಿತಿ ಎದುರಾಯಿತು.
೩. ಭಯವನ್ನು ನಿರ್ಮಾಣ ಮಾಡಿ ಶತ್ರುವಿನ ಶಕ್ತಿಯನ್ನು ಕ್ಷೀಣಿಸುವ ಯುದ್ಧ ಮನಃಶಾಸ್ತ್ರ !
ಮಹಾಭಾರತದ ಯುದ್ಧ ಪ್ರಾರಂಭಗೊಳ್ಳುವ  ಹಿಂದಿನ ರಾತ್ರಿ ಕೌರವರ ದೂತನಾದ ಉಲೂಕನು ಶ್ರೀಕೃಷ್ಣನನ್ನು ಭೇಟಿಯಾದನು. ಅವನಿಗೆ ಶ್ರೀಕೃಷ್ಣನು, ‘ಯುದ್ಧದಲ್ಲಿ ಶಸ್ತ್ರಗಳನ್ನು ಹಿಡಿಯುವುದಿಲ್ಲವೆನ್ನುವುದು ನನ್ನ ಪ್ರತಿಜ್ಞೆಯಾಗಿದೆ. ಅದನ್ನು ನಾನು ಪಾಲಿಸುತ್ತೇನೆ. ಆದರೆ ಒಂದು ವೇಳೆ ಸಮಯ ಬಂದರೆ, ನಾನು ಶಸ್ತ್ರಗಳನ್ನು ಕೈಗೆತ್ತಿಕೊಳ್ಳಲು ಸಹ ಹಿಂಜರಿಯುವುದಿಲ್ಲ!’ ಎಂದು ಹೇಳಿದನು. ಈ ಮಾತಿನಿಂದ ಯುದ್ಧದ ಮನಃಶಾಸ್ತ್ರವು ಶ್ರೀಕೃಷ್ಣನಿಗೆ ಎಷ್ಟು ತಿಳಿದಿತ್ತು ಎನ್ನುವುದು ಅರಿವಾಗುತ್ತದೆ. ಶ್ರೀಕೃಷ್ಣನು ಕೈಯಲ್ಲಿ ಶಸ್ತ್ರಗಳನ್ನು ಹಿಡಿಯುವುದಿಲ್ಲ ಎನ್ನುವ ಕಲ್ಪನೆಯಿಂದ ಸಂತೋಷಗೊಂಡಿದ್ದ ಕೌರವ ಪಕ್ಷದ ಅತಿರಥ-ಮಹಾರಥರು ಈ ವಾರ್ತೆಯಿಂದ ನಿದ್ದೆಗೆಟ್ಟರು. ಅಲ್ಲದೇ ಕೌರವರು ಯುದ್ಧ ಮಾಡುವಾಗ ಶ್ರೀಕೃಷ್ಣನ ಮೇಲೆ ಒಂದು ಕಣ್ಣಿಡತೊಡಗಿದರು.
೪. ಶತ್ರುಯೋಧನ ಬಲವನ್ನು ಅರಿತಿದ್ದರಿಂದ ಜಯದ್ರಥನ ವಧೆ ಸಾಧ್ಯವಾಗುವುದು !
ಜಯದ್ರಥನೊಂದಿಗೆ ಯುದ್ಧ ಮಾಡುವ ಮೊದಲು ಶ್ರೀಕೃಷ್ಣನು ಅರ್ಜುನನಿಗೆ, ‘ಇವನ ತಲೆಯನ್ನು ಭೂಮಿಯ ಮೇಲೆ ಬೀಳಲು ಬಿಡಬೇಡ. ಈ ಯುದ್ಧ ಭೂಮಿಯ ಹೊರಗಡೆ ಅವನ ತಂದೆಯಾದ ವೃದ್ಧಕ್ಷತ್ರ ಕುಳಿತಿದ್ದಾನೆ, ಅವರ ತೊಡೆಯ ಮೇಲೆ ತಲೆ ಬೀಳುವಂತೆ ಮಾಡು, ಏಕೆಂದರೆ, ಅವನ ತಂದೆಯು ‘ಜಯದ್ರಥನ ತಲೆಯನ್ನು ಯಾರು ಭೂಮಿಯ ಮೇಲೆ ಬೀಳಿಸುವರೋ ಅವನ ತಲೆಯು ನೂರು ಭಾಗ ವಾಗುವುದು’ ಎಂಬ ವಾಣಿಯನ್ನು ಉಚ್ಛರಿಸಿದ್ದಾನೆ’ ಎಂದು ಹೇಳಿದನು.
೫. ಧರ್ಮದ ಭಾಷೆ ಮಾತನಾಡುವ ಕರ್ಣನ ಅಧರ್ಮಿ
ನೀತಿಯನ್ನು ಮನಗಾಣುವಂತೆ ಮಾಡಿ ಗೊಂದಲವನ್ನು ದೂರಗೊಳಿಸುವುದು
ಕರ್ಣನಿಗೆ ಮರಣಕಾಲ ಸಮೀಪಿಸಿದ್ದರಿಂದ ಅಸ್ತ್ರಗಳು ನೆನಪಿಗೆ ಬರುತ್ತಿರಲಿಲ್ಲ. ಅಲ್ಲದೇ ಅವನ ರಥದ ಎಡಚಕ್ರ ಭೂಮಿಯಲ್ಲಿ ಹೂತು ಹೋಗಿತ್ತು. ಸೂರ್ಯಾಸ್ತವಾಗುತ್ತಿದ್ದುದರಿಂದ, ಸಮಯ ಕಳೆಯುವ ಸಲುವಾಗಿ ಕರ್ಣನು ಅರ್ಜುನನ್ನು ತಡೆದು ‘ಈ ರಥದ ಚಕ್ರವನ್ನು ಮೇಲಕ್ಕೆತ್ತುತ್ತೇನೆ, ಬಳಿಕ ನಾವು ಯುದ್ಧ ಮಾಡೋಣ ! ನಾನು ಶಸ್ತ್ರಹೀನನಾಗಿರುವಾಗಿ ನೀನು ಶಸ್ತ್ರವನ್ನು ಉಪಯೋಗಿಸುವುದು ಧರ್ಮವಲ್ಲ’ ಎಂದು ಹೇಳಿದನು. ಆಗ ಶ್ರೀಕೃಷ್ಣನು ಅರ್ಜುನನಿಗೆ, ‘ನೀನು ನಿಲ್ಲಬೇಡ, ಶಸ್ತ್ರಗಳಿಲ್ಲದೇ ಒಬ್ಬಂಟಿಯಾಗಿದ್ದ ಅಭಿಮನ್ಯುವನ್ನು ವಧಿಸುವಾಗ ಕರ್ಣನೆಲ್ಲಿ ಯುದ್ಧದ ನಿಯಮಗಳನ್ನು ಪಾಲಿಸಿದ್ದನು ? ಆದುದರಿಂದ ಅವನು ರಥದಲ್ಲಿ ಕುಳಿತುಕೊಳ್ಳುವ ಮೊದಲೇ ಅವನನ್ನು ವಧಿಸು’ ಎಂದು ಹೇಳಿದನು.
- ರಾಷ್ಟ್ರೀಯ ಪ್ರವಚನಕಾರರು ಡಾ. ಸಚ್ಚಿದಾನಂದ ಶೇವಡೆ (ಸಾಂಸ್ಕೃತಿಕ ವಾರ್ತಾಪತ್ರ ೨೬.೧.೨೦೧೨)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರೀಕೃಷ್ಣನೀತಿ : ಭಾರತವನ್ನು ಅರಾಜಕತೆಯಿಂದ ರಕ್ಷಿಸುವ ವಿಜಯನೀತಿ !