‘ಹಿಂದೂ ರಾಷ್ಟ್ರ’ ಅಂದರೆ ರಾಮರಾಜ್ಯ !

ಅಖಿಲ ಮನುಕುಲದ್ದಷ್ಟೇ ಅಲ್ಲ, ಎಲ್ಲ ಸಜೀವ ಪ್ರಾಣಿಗಳ ಉದ್ಧಾರಕ್ಕಾಗಿ ಲಾಭದಾಯಕವಾಗಿರುವ ‘ಹಿಂದೂ ರಾಷ್ಟ್ರ’ ! ಇದೊಂದು ಸಂಕಲ್ಪನೆ ಎಂದು ಅರಿತುಕೊಳ್ಳದೆ, ವಿರೋಧಕರು, ಧರ್ಮದ್ರೋಹಿಗಳು ಮತ್ತು ಅವರನ್ನು ಓಲೈಸುವ ವಾರ್ತಾವಾಹಿನಿಯವರು ಅದರ ವಿರುದ್ಧ ಮಾತನಾಡುತ್ತಿದ್ದಾರೆ ಮತ್ತು ಸಾಮಾನ್ಯ ಹಿಂದೂಗಳನ್ನೂ ಉದ್ರೇಕಿಸುವ ಕಾರ್ಯ ಮಾಡುತ್ತಿದ್ದಾರೆ. ಅವರಿಗಾಗಿ ನಿಜವಾಗಿಯೂ ‘ಹಿಂದೂ ರಾಷ್ಟ್ರ’ ಅಂದರೆ ಏನು ?, ಎಂಬುದನ್ನು ಮುಂದೆ ನೀಡಲಾಗಿದೆ.
೧. ಸಾಧನೆ ಮಾಡಿ ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ ಮಾಡುವವನು ‘ಹಿಂದೂ’ !
‘ಮನುಷ್ಯನ ಜನ್ಮವು ಸಾಧನೆ ಮಾಡಿ ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಮಾಡಿ ಈಶ್ವರಪ್ರಾಪ್ತಿ ಮಾಡಲಿಕ್ಕಾಗಿಯೇ ಆಗಿದೆ, ಆತನು ಜನ್ಮ-ಮೃತ್ಯುವಿನ ಚಕ್ರದಲ್ಲಿ ಪುನಃ ಸಿಲುಕಬಾರದು ಎಂಬುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ಹಿಂದೂ ಧರ್ಮದಲ್ಲಿ ಜೀವದ ಕಲ್ಯಾಣದ ಮಾರ್ಗವನ್ನು ಹೇಳಲಾಗಿದೆ. ಸಾಧನೆ ಮಾಡಿ ತನ್ನಲ್ಲಿನ ಸ್ವಭಾವದೋಷ ಮತ್ತು ಅಹಂಗಳ ನಿರ್ಮೂಲನೆ ಮಾಡುವವನಿಗೆ ‘ಹಿಂದೂ’ ಎನ್ನಲಾಗಿದೆ.೨. ‘ಮೇರುತಂತ್ರ’ ಹೆಸರಿನ ಗ್ರಂಥದಲ್ಲಿ ‘ಹಿಂದೂ’ ಈ ಶಬ್ದದ ಅರ್ಥವು ಮುಂದಿನಂತೆ ನೀಡಲಾಗಿದೆ.
೨ ಅ. ವಿಶ್ವದಲ್ಲಿನ ಎಲ್ಲ ಸಜೀವ ಪ್ರಾಣಿಗಳ ಉದ್ಧಾರ ಮಾಡಲಿಕ್ಕಾಗಿ ನಿರ್ಮಾಣವಾಗುವುದು, ಅದುವೇ ‘ಹಿಂದೂ ರಾಷ್ಟ್ರ’ ! : ‘ಹೀನಂ ದೂಷಯತಿ ಇತಿ ಹಿಂದೂ ಃ ’, ಎಂದರೆ ‘ಯಾರು ತನ್ನಲ್ಲಿನ ದೋಷ ಮತ್ತು ಅಹಂಗಳನ್ನು ದೂರಗೊಳಿಸಲು ನಿರಂತರ ಪ್ರಯತ್ನಿಸುತ್ತಿರುತ್ತಾನೆಯೋ, ಅವನು ‘ಹಿಂದೂ’ ! ಈ ರೀತಿ ಸಾಧನೆ ಮಾಡುವ ಸಾಧಕನು ಎಲ್ಲ ಜೀವಗಳ ಕಲ್ಯಾಣ ಮಾಡುವವನೇ ಆಗಿರುತ್ತಾನೆ. ಈ ರೀತಿಯಲ್ಲಿ ವಿಶ್ವದ ಪ್ರತಿಯೊಂದು ಸಜೀವ ಪ್ರಾಣಿಗಳ ಉದ್ಧಾರ ಮಾಡಲಿಕ್ಕಾಗಿ ನಿರ್ಮಾಣ ವಾಗುವುದು ‘ಹಿಂದೂ ರಾಷ್ಟ್ರ’! ಇದರಲ್ಲಿ ಎಲ್ಲ ಜೀವಗಳು ಸಾಧಕರೆಂದೇ ಕಾರ್ಯನಿರತರಾಗಿರುವರು.
೩. ಗುರುಕುಲ ಪದ್ಧತಿಯ ಮೂಲಕ ಸಾಧಕರಿಗೆ ಮಾರ್ಗದರ್ಶನವಾಗಿದ್ದರಿಂದ ಮನುಷ್ಯನು 
ಸಾವಿರಾರು ವರ್ಷ ಆನಂದದಿಂದ ಭೌತಿಕ ಮತ್ತು ಪಾರಮಾರ್ಥಿಕ ಜೀವನ ನಡೆಸಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವುದು
ಭಾರತದಲ್ಲಿ ಮೊದಲು ಈ ರೀತಿಯಲ್ಲಿ ಗುರುಕುಲ ಪದ್ಧತಿಯ ಮೂಲಕ ಸಾಧಕರಿಗೆ ಮಾರ್ಗದರ್ಶನ ಮಾಡಿ ಅವರನ್ನು ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಿದ್ಧಪಡಿಸಲಾಗುತ್ತಿತ್ತು. ಋಷಿಗಳು ಭಗವಂತನ ಆದೇಶಕ್ಕನು ಸಾರ ಈ ಪದ್ಧತಿಯಲ್ಲಿ ೪ ವೇದಗಳು, ೪ ಆಶ್ರಮಗಳು, ೪ ವರ್ಣಗಳು ಮತ್ತು ೪ ಪುರುಷಾರ್ಥಗಳ ಹೊಂದಾಣಿಕೆ ಮಾಡಿ ಸಮಾಜದ ಅಡಿಪಾಯ ಹಾಕಿದ್ದರು. ಆದ್ದರಿಂದ ಮನುಷ್ಯನು ಸಾವಿರಾರು ವರ್ಷಗಳ ವರೆಗೆ ಆನಂದದಿಂದ ಭೌತಿಕ ಮತ್ತು ಪಾರಮಾರ್ಥಿಕ ಜೀವನ ನಡೆಸಿ ಮೋಕ್ಷಪ್ರಾಪ್ತಿ ಮಾಡಿಕೊಂಡನು.
೪. ಹಿಂದೂ ರಾಷ್ಟ್ರದ ಕಾರ್ಯವು ರಾಮರಾಜ್ಯದಂತೆಯೇ ಭೇದಭಾವರಹಿತವಾಗಿರುವುದು
ರಾಮನು ರಾಜ್ಯ ನಡೆಸುವಾಗ ‘ಪ್ರತಿಯೊಂದು ಜೀವದ ಕಲ್ಯಾಣವಾಗಬೇಕು’ ಎಂಬುದಕ್ಕಾಗಿಯೇ ರಾಜ್ಯ ನಡೆಸಿದನು. ರಾಮರಾಜ್ಯದಲ್ಲಿ ಯಾವುದೇ ಭೇದಭಾವವಿರಲಿಲ್ಲ. ಆದ್ದರಿಂದ ರಾಮರಾಜ್ಯವನ್ನು ಇಂದಿಗೂ ಸ್ತುತಿಸಲಾಗುತ್ತದೆ. ಇದರಂತೆಯೇ ‘ಹಿಂದೂ ರಾಷ್ಟ್ರ’ದ ಕಾರ್ಯವು ರಾಮರಾಜ್ಯದಂತೆಯೇ ಇರಲಿದೆ.’ - ಪ.ಪೂ. ಪರಶರಾಮ ಮಾಧವ ಪಾಂಡೆ, ಸನಾತನ ಆಶ್ರಮ, ದೇವದ, ಪನವೇಲ್ (೧೮.೫.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ಹಿಂದೂ ರಾಷ್ಟ್ರ’ ಅಂದರೆ ರಾಮರಾಜ್ಯ !