ಜೀವಂತವಿರುವ ತಂದೆ, ಅಜ್ಜ ಮುಂತಾದವರನ್ನು ಸತ್ಕರಿಸುವುದೆಂದರೆ ಶ್ರಾದ್ಧವೆಂದು ಹೇಳುವುದು ತಪ್ಪು !

ಟೀಕೆ : ‘ಬದುಕಿರುವ ತಂದೆ, ಕೀರ್ತಿವಂತ ಅಜ್ಜ, ಮುತ್ತಜ್ಜ ಮುಂತಾದವರ ಸತ್ಕಾರ ಮಾಡುವುದೆಂದರೆ ಶ್ರಾದ್ಧ’
- ದಯಾನಂದ ಸ್ವಾಮಿ, ಸ್ಥಾಪಕರು, ಆರ್ಯ ಸಮಾಜ
ಖಂಡನೆ : ಅ. ಶ್ರಾದ್ಧವನ್ನು ಕೇವಲ ಮೃತ ವ್ಯಕ್ತಿಗಾಗಿ ಮಾತ್ರ ಮಾಡುತ್ತಾರೆ :
ಜೀವಂತವಿರುವ ತಂದೆ, ಅಜ್ಜ ಮುಂತಾದವರ ಸತ್ಕಾರವೆಂದರೆ ಶ್ರಾದ್ಧ, ಎಂಬುದರ ಬಗ್ಗೆ ಸ್ವಾಮಿ ದಯಾನಂದರು ಮನುವಿನ ಯಾವ ಶ್ಲೋಕಗಳ ಸಂದರ್ಭವನ್ನು ಕೊಟ್ಟಿದ್ದಾರೆಯೋ, ಅವುಗಳಿಂದ ತಂದೆ ಜೀವಂತವಿರುವಾಗ ಅವನ ಶ್ರಾದ್ಧವನ್ನು ಮಾಡುವುದು ಸಾಧ್ಯವೇ ಇಲ್ಲ ಎಂಬುದು ಸ್ಪಷ್ಟ ವಾಗುತ್ತದೆ. ಶ್ರಾದ್ಧವನ್ನು ಕೇವಲ ಮೃತ ವ್ಯಕ್ತಿಗಾಗಿ ಮಾಡುತ್ತಾರೆ.

ಆ. ಶ್ರಾದ್ಧದಿಂದಾಗುವ ಲಾಭಗಳು : ಪೃಥ್ವಿಯ ಮೇಲೆ (ದಕ್ಷಿಣ ದಿಕ್ಕಿಗೆ ಭೂಮಿಯನ್ನು ಕೆದರಿ ಅಲ್ಲಿ ದರ್ಭೆಗಳನ್ನು ಹರಡಿ ಮೂರು ಪಿಂಡಗಳನ್ನು ಇಡುವುದು) ಮೂರು ಪಿಂಡಗಳನ್ನು ದಾನ ಮಾಡಿದರೆ, ನರಕದಲ್ಲಿರುವ ಪಿತೃಗಳ ಉದ್ಧಾರವಾಗುತ್ತದೆ. ಪುತ್ರನು ಮೃತ ತಂದೆಯ ಶ್ರಾದ್ಧವನ್ನು ಎಲ್ಲ ಪ್ರಯತ್ನಗಳಿಂದ ಮಾಡಬೇಕು. ಅವರ ಹೆಸರು ಮತ್ತು ಗೋತ್ರವನ್ನು ವಿಧಿವತ್ತಾಗಿ ಉಚ್ಚರಿಸಿ ಪಿಂಡದಾನ ಮುಂತಾದವುಗಳನ್ನು ಮಾಡುವುದರಿಂದ ಅವರಿಗೆ ಬೇಕಾಗಿರುವುದು ಸಿಗುತ್ತದೆ. ಇದರಿಂದ ಅವರ ಅತೃಪ್ತ ವಾಸನೆಗಳು ಪೂರ್ಣವಾಗುವುದರಿಂದ ಆ ತೃಪ್ತಾತ್ಮವು ಆ ಕುಟುಂಬಕ್ಕೆ ತೊಂದರೆಗಳನ್ನು ಕೊಡುವುದಿಲ್ಲ. ಇಷ್ಟೇ ಅಲ್ಲ, ಅವರಿಗೆ ಗತಿ ದೊರಕಿ ಮುಂದಿನ ಲೋಕಕ್ಕೆ ಹೋಗುತ್ತಾರೆ. ‘ಶ್ರಾದ್ಧವನ್ನು ಮಾಡುವುದರಿಂದ ಅದರ ಪರಿಣಾಮ ಒಳ್ಳೆಯದಾಗುತ್ತದೆ’, ಎಂಬುದು ಪ್ರಯೋಗದಿಂದಲೂ ಸಿದ್ಧವಾಗಿದೆ.
ಇದರಿಂದಾಗಿ ಆರ್ಯ ಸಮಾಜದ ದಯಾನಂದರ ಮತ್ತು ಆಧುನಿಕರ ಮೇಲಿನ ವಿಚಾರವು ತಪ್ಪಾಗಿದೆ, ಎಂಬುದು ಕಂಡುಬರುತ್ತದೆ; ಹಾಗೇನಾದರೂ ಕಾರಣವಿದ್ದರೆ, ಶ್ರಾದ್ಧದಲ್ಲಿರುವ ದೊಡ್ಡ ವಿಧಿ-ವಿಧಾನಗಳ ಆವಶ್ಯಕತೆಯಾದರೂ ಏನಿತ್ತು ?
- ಗುರುದೇವ ಡಾ. ಕಾಟೇಸ್ವಾಮೀಜಿ (ಘನಗರ್ಜಿತ, ಡಿಸೆಂಬರ್ ೨೦೦೮ ಮತ್ತು ಜನವರಿ ೨೦೦೯)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜೀವಂತವಿರುವ ತಂದೆ, ಅಜ್ಜ ಮುಂತಾದವರನ್ನು ಸತ್ಕರಿಸುವುದೆಂದರೆ ಶ್ರಾದ್ಧವೆಂದು ಹೇಳುವುದು ತಪ್ಪು !