‘ವಾಚಕವೃದ್ಧಿ ಅಭಿಯಾನ’ದ ವೈಶಿಷ್ಯಪೂರ್ಣ ವಿಷಯಗಳು

ಸದ್ಯ ಭಾರತಾದ್ಯಂತ ‘ವಾಚಕವೃದ್ಧಿ ಆಂದೋಲನ’ ನಡೆಯುತ್ತಿದ್ದು ಅನೇಕ ಜನರನ್ನು ವಾಚಕರನ್ನಾಗಿಸಲು ಸಾಧಕರು ತಳಮಳದಿಂದ ಪ್ರಯತ್ನಿಸುತ್ತಿದ್ದಾರೆ. ಸಮಾಜದಿಂದ ಅದಕ್ಕೆ ಸಿಕ್ಕಿದ ಪ್ರೋತ್ಸಾಹವನ್ನು ಮುಂದೆ ನೀಡುತ್ತಿದ್ದೇನೆ.
೧. ಓರ್ವ ವಾಚಕರು ತಮ್ಮ ಪರಿಚಿತರಿಗೆ ತನ್ನ ಸ್ವಂತ ಹಣದಿಂದ ಸಂಚಿಕೆಯನ್ನು ಆರಂಭಿಸುವುದು : ಒಂದು ಊರಿನ ಓರ್ವ ವಾಚಕರಿಗೆ ಸ್ಥಳೀಯ ಸಾಧಕರು ‘ನಿಮ್ಮ ಪರಿಚಿತರಲ್ಲಿ ಯಾರನ್ನಾದರೂ ವಾಚಕರಾಗಲು ಉತ್ತೇಜಿಸಬಹುದೇ ?’ ಎಂದು ಕೇಳಿದರು. ಆಗ ಅವರು ಕೆಲವರ ಹೆಸರನ್ನು ಹೇಳಿದರು. ಸಾಧಕರು ಆ ವ್ಯಕ್ತಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರು; ಆದರೆ ಅವರು ಆಗಲಿಲ್ಲ.
ಅದು ಆ ವಾಚಕರಿಗೆ ತಿಳಿದಾಗ ಅವರು ‘ಆ ವ್ಯಕ್ತಿಗಳಿಗೂ ಈ ನಿಯತಕಾಲಿಕೆಯಲ್ಲಿನ ಜ್ಞಾನದ ಲಾಭವು ಶೀಘ್ರದಲ್ಲಿಯೇ ಆಗಬೇಕೆಂಬ ಉದ್ದೇಶದಿಂದ’, ತಮ್ಮ ಇಬ್ಬರು ಪರಿಚಿತರ ಚಂದಾ ಹಣವನ್ನು ಸ್ವತಃ ತುಂಬಿಸಿದರು.
೨. ಕೆಲವು ವಾಚಕರು ‘ನಿಮಗೆ ಯಾರನ್ನು ಚಂದಾದಾರರನ್ನಾಗಿ ಮಾಡಬೇಕೆಂದು ಅನಿಸುವುದೋ, ಅಂತಹ ೨-೩ ಜಿಜ್ಞಾಸುಗಳಿಗೆ ನನ್ನ ವತಿಯಿಂದ ಸನಾತನ ಪ್ರಭಾತವನ್ನು ಆರಂಭಿಸಿರಿ, ಎಂದು ಹೇಳಿದ್ದಾರೆ.’
೩. ನಿಯತಕಾಲಿಕೆ ಬಗ್ಗೆ ಜನರಿಂದ ವ್ಯಕ್ತವಾದ ಪ್ರತಿಕ್ರಿಯೆ ! :
ಅ. ‘ಇಂತಹ ಕಠಿಣ ಕಾಲದಲ್ಲಿಯೂ ನೀವು ಕಾರ್ಯವನ್ನು ಮುಂದುವರಿಸುತ್ತಿದ್ದೀರಿ. ಅದಕ್ಕಾಗಿ ನಿಮಗೆ ಅಭಿನಂದನೆಗಳನ್ನು ನೀಡ ಬೇಕು. ಸನಾತನದ ವಿಜಯ ಆಗಿಯೇ ಆಗುತ್ತದೆ’, ಎಂದು ಓರ್ವ ವಾಚಕರು ಅಭಿಪ್ರಾಯ ವ್ಯಕ್ತಪಡಿಸಿದರು.
ಆ. ಓರ್ವ ವಾಚಕರು ಸ್ವಪ್ರೇರಣೆಯಿಂದ ‘ನಿಮ್ಮದು ಮೃತ ಹಿಂದೂವನ್ನು ಜಾಗೃತಗೊಳಿಸುವಂತಹ ದೈನಿಕವಾಗಿದೆ. ನಮಗೆ ನಿಮ್ಮ ಕಾರ್ಯ ಬಹಳ ಇಷ್ಟವಾಗುತ್ತದೆ’ ಎಂದು ಹೇಳಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
‘ವಾಚಕವೃದ್ಧಿ ಅಭಿಯಾನ’ದ ವೈಶಿಷ್ಯಪೂರ್ಣ ವಿಷಯಗಳು