ಶ್ರಾದ್ಧವನ್ನು ಮಾಡುವ ಉದ್ದೇಶ

ಎಲ್ಲ ಜೀವಗಳ ಲಿಂಗದೇಹಗಳು ಸಾಧನೆಯನ್ನು ಮಾಡುವ ಲಿಂಗದೇಹಗಳಾಗಿರುವುದಿಲ್ಲ. ಆದುದರಿಂದ ಶ್ರಾದ್ಧವಿಧಿಗಳನ್ನು ಮಾಡಿ ಬಾಹ್ಯ ಇಂಧನದ ಬಲದಿಂದ ಅವುಗಳನ್ನು ಮುಂದೆ ತಳ್ಳಬೇಕಾಗುತ್ತದೆ; ಆದುದರಿಂದ ಶ್ರಾದ್ಧವನ್ನು ಮಾಡುವುದು ಅವಶ್ಯಕವಾಗಿದೆ. ಶ್ರಾದ್ಧ ವನ್ನು ಮಾಡಿ ಜೀವಗಳ ಲಿಂಗದೇಹಗಳ ಸುತ್ತಲೂ ಇರುವ ವಾಸನಾತ್ಮಕ ಕೋಶಗಳ ಆವರಣವನ್ನು ಕಡಿಮೆ ಮಾಡಿ, ಅವುಗಳನ್ನು ಹಗುರಗೊಳಿಸಿ, ಮಂತ್ರಶಕ್ತಿಯ ಇಂಧನದಿಂದ ಅವರಿಗೆ ಗತಿಯನ್ನು ಕೊಡುವುದೇ ಶ್ರಾದ್ಧ ಮಾಡುವುದರ ಮುಖ್ಯ ಉದ್ದೇಶವಾಗಿದೆ.

ಅ. ಪಿತೃಲೋಕ ಪ್ರಾಪ್ತವಾದ ಪಿತೃಗಳಿಗೆ ಮುಂದಿನ ಲೋಕಕ್ಕೆ ಹೋಗಲು ಗತಿ ಸಿಗಬೇಕೆಂದು ಶ್ರಾದ್ಧವಿಧಿಗಳ ಮೂಲಕ ಅವರಿಗೆ ಸಹಾಯ ಮಾಡುವುದು.
ಆ. ನಮ್ಮ ಕುಲದಲ್ಲಿನ ಯಾವ ಮೃತ ವ್ಯಕ್ತಿ ಗಳಿಗೆ ಅವರ ಅತೃಪ್ತ ವಾಸನೆಗಳಿಂದ ಸದ್ಗತಿಯು ದೊರಕಿಲ್ಲವೋ, ಅಂದರೆ ಯಾರು ಉಚ್ಚಲೋಕಕ್ಕೆ ಹೋಗದೇ ನೀಚಲೋಕದಲ್ಲಿ ಸಿಲುಕಿಕೊಂಡಿ ದ್ದಾರೆಯೋ, ಅಂತಹವರ ಆಸೆ-ಆಕಾಂಕ್ಷೆಗಳನ್ನು ಶ್ರಾದ್ಧ ವಿಧಿಗಳ ಮುಖಾಂತರ ಪೂರೈಸಿ ಅವರಿಗೆ ಮುಂದಿನ ಗತಿಯನ್ನು ಪ್ರಾಪ್ತ ಮಾಡಿಕೊಡುವುದು.
ಇ. ಕೆಲವು ಪಿತೃಗಳು (ಪೂರ್ವಜರು) ಅವರ ದುಷ್ಕರ್ಮಗಳಿಂದ ಪಿತೃಲೋಕಕ್ಕೆ ಹೋಗದೆ ಅವರಿಗೆ ಭೂತಯೋನಿ ಸಿಗುತ್ತದೆ. ಇಂತಹ ಪಿತೃಗಳನ್ನು ಶ್ರಾದ್ಧದ ಮೂಲಕ ಆ ಯೋನಿಯಿಂದ ಮುಕ್ತಗೊಳಿಸುವುದು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಶ್ರಾದ್ಧವನ್ನು ಮಾಡುವ ಉದ್ದೇಶ