ಧರ್ಮಾಭಿಮಾನಿಗಳ ವಿಶ್ವಾಸ ಗಳಿಸಿರುವ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಶ್ರೀ. ರಮಾನಂದ ಗೌಡ !

ಶ್ರೀ. ರಮಾನಂದ ಗೌಡ
‘ಪ್ರಚಾರ ಸೇವೆಯೊಂದಿಗೆ ವಿಶೇಷವಾಗಿ ನನ್ನ ಸಂಪರ್ಕ ಬರುವುದಿಲ್ಲ. ಆದರೆ ‘ರಮಾನಂದಣ್ಣಾ ಧರ್ಮಾಭಿಮಾನಿಗಳನ್ನು ಹೇಗೆ ತಯಾರಿಸುತ್ತಾರೆ ?’ ಎನ್ನುವ ನನ್ನ ಅನುಭವವನ್ನು ಇಲ್ಲಿ ನೀಡುತ್ತಿದ್ದೇನೆ.
೧. ರಮಾನಂದಣ್ಣನವರ ಮೇಲೆ ಧರ್ಮಾಭಿಮಾನಿಗಳಿಗೆ ಪೂರ್ಣ
ವಿಶ್ವಾಸವಿರುವುದರಿಂದ ಅವರು ಯಾವುದೇ ಸಹಾಯವನ್ನು ಆನಂದದಿಂದ ಮಾಡುವುದು
 ಒಮ್ಮೆ ಅಣ್ಣನವರು ಒಬ್ಬ ಧರ್ಮಾಭಿಮಾನಿಗೆ ‘‘ನನಗೆ ಮಜ್ಜಿಗೆಯ ಚಿಕಿತ್ಸೆ ನಡೆಯುತ್ತಿದೆ; ಆದ್ದರಿಂದ ನನಗೆ ಮಜ್ಜಿಗೆ ಬೇಕಾಗಿದೆ ಎಂದು ತಿಳಿಸಿದಾಗ, ಆ ಧರ್ಮಾಭಿಮಾನಿಯು ಕೂಡಲೇ ಅವರಿಗೆ ೧೦ ಲೀಟರ್ ಮಜ್ಜಿಗೆಯನ್ನು ಕಳುಹಿಸಿದರು.
ಈಗ ಆ ಧರ್ಮಾಭಿಮಾನಿಯು ಸೇವಾಕೇಂದ್ರಕ್ಕೆ ೧೦-೨೦ ಲೀಟರ್ ಮಜ್ಜಿಗೆಯನ್ನು ಆಗಾಗ ಕಳುಹಿಸುತ್ತಾರೆ. ಆ ಧರ್ಮಾಭಿಮಾನಿಗೆ ಸ್ವಂತ ಗೋಶಾಲೆಯಿದೆ; ಆದ್ದರಿಂದ ಅವರು ಸೇವಾಕೇಂದ್ರಕ್ಕೆ ಪ್ರತಿದಿನ ಉಚಿತವಾಗಿ ಹಾಲನ್ನು ಕಳುಹಿಸುತ್ತಾರೆ. ಆಗ ರಮಾನಂದಣ್ಣನವರು ‘ನಿಮಗೆ ಏನಾದರೂ ಕೇಳಿದರೆ ನೀವು ಕೂಡಲೇ ಕಳುಹಿಸುತ್ತೀರಿ. ನಿಮ್ಮ ಬಳಿ ಎಲ್ಲವೂ ಇದೆ’ ಎಂದು ಹೇಳಿದರು. ಅದಕ್ಕೆ ಆ ಧರ್ಮಾಭಿಮಾನಿಯವರು ‘ಕೆರೆಯ ನೀರನು ಕೆರೆಗೆ ಚೆಲ್ಲಿ !, ಎಂದು ಉತ್ತರಿಸಿದರು. ಆ ಧರ್ಮಾಭಿಮಾನಿಯವರು ಸೇವೆಗಾಗಿ ಅವಶ್ಯಕತೆಯಿರುವಾಗಲೆಲ್ಲ ವಾಹನವನ್ನು ಕಳುಹಿಸುತ್ತಾರೆ. ಒಮ್ಮೆ ರಮಾನಂದಣ್ಣನವರು ಅವರಿಗೆ, ‘ನಾನು ವೈಯಕ್ತಿಕ ಕೆಲಸದ ನಿಮಿತ್ತ ಊರಿಗೆ ಹೋಗಿ ಬರುತ್ತೇನೆ’ ಎಂದರು.  ಆಗ ಅವರು ‘ನನ್ನ ವಾಹನ ತೆಗೆದುಕೊಂಡು ಹೋಗಿ’ ಎಂದರು. ರಮಾನಂದಣ್ಣನವರು ಬೇಡ ಎಂದರೂ ಅವರು ಒತ್ತಯಪೂರ್ವಕವಾಗಿ ‘ಮನೆಯ ಎದುರಿಗೆ ಗುಂಡಿಗಳನ್ನು ಮಾಡಿರುವುದರಿಂದ ಅದು ಹೊರಗಡೆ ಸುಮ್ಮನೇ ನಿಂತಿದೆ ನೀವು ತೆಗೆದುಕೊಂಡು ಹೋಗಿರಿ’ ಎಂದು ಹೇಳಿದರು.
೨. ರಮಾನಂದಣ್ಣನವರ ಮೇಲೆ ಪೂರ್ಣ ವಿಶ್ವಾಸವಿರುವುದು !
ಒಮ್ಮೆ ರಮಾನಂದಣ್ಣನವರು ಅವರಿಗೆ ‘ನಿಮಗೆ ಉತ್ಪಾದನೆ ಎಷ್ಟು ಬೇಕಾಗಿದೆ ? ಎಂದು ಕೇಳಿದರು. ಆಗ ಅವರು, ನೀವೇ ಹೇಳಿ ನಾನು ಎಷ್ಟು ತೆಗೆದುಕೊಳ್ಳಲಿ ? ಎಂದರು. ಆಗ ‘ಅವರಿಗೆ ರಮಾನಂದಣ್ಣನವರ ಮೇಲೆ ಪೂರ್ಣ ವಿಶ್ವಾಸವಿದೆ’ ಎಂದು ಗಮನಕ್ಕೆ ಬಂದಿತು.
೩. ರಮಾನಂದಣ್ಣನವರು ಧರ್ಮಾಭಿಮಾನಿಗಳನ್ನು ಮಾನಸಿಕ ಸ್ತರದಲ್ಲಿ ಸಂಭಾಳಿಸದಿರುವುದು
ಶೇ. ೬೧ ಮಟ್ಟ ತಲುಪಿದ ಧರ್ಮಾಭಿಮಾನಿಯೊಬ್ಬರು ಒಮ್ಮೆ ಒಂದು ಸತ್ಸಂಗದಲ್ಲಿ ತಪ್ಪು ವಿ
- ಶ್ರೀ. ಪ್ರಶಾಂತ ಹರಿಹರ, ಮಂಗಳೂರು (೩.೮.೨೦೧೬)
ಷಯವನ್ನು ಮಂಡಿಸಿದ್ದರು. ರಮಾನಂದಣ್ಣನವರಿಗೆ ಇದು ತಿಳಿದ ಬಳಿಕ ಅವರು ಆ ಧಮಾಭಿಮಾನಿಯವರಿಗೆ ಕೂಡಲೇ ದೂರವಾಣಿ ಕರೆ ಮಾಡಿ ತಿಳಿಸಲು ಹೇಳಿ ಅವನ ತಪ್ಪನ್ನು ತಿಳಿಸಲು ಹೇಳಿದರು. ಆ ಸಮಯದಲ್ಲಿ ರಮಾನಂದಣ್ಣನವರು ಸ್ವಲ್ಪವೂ ಭಾವನಾಶೀಲರಾಗಲಿಲ್ಲ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಾಭಿಮಾನಿಗಳ ವಿಶ್ವಾಸ ಗಳಿಸಿರುವ ಶೇ. ೬೭ ರಷ್ಟು ಆಧ್ಯಾತ್ಮಿಕ ಮಟ್ಟವನ್ನು ತಲುಪಿರುವ ಶ್ರೀ. ರಮಾನಂದ ಗೌಡ !