ಜಿಹಾದಿಗಳಿಂದ ಮಹಿಳಾ ಮಾನವಾಧಿಕಾರದ ಉಲ್ಲಂಘನೆ ಆಗುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳಿಂದ ಇಂಗ್ಲೆಂಡಿನ ಸಂಸತ್ತಿನ ಹೊರಗೆ ಪ್ರತಿಭಟನೆ !

ಪೆಗಿಡಾ, ಶರಿಯಾ ವಾಚ್ ಮತ್ತು ಎಕ್ಸಮಿನ್ ಇಸ್ಲಾಮ್ ಸಂಘಟನೆಗಳಿಂದ ಪ್ರತಿಭಟನೆ
ಹಿಂದೂ ಧರ್ಮದ ಮೇಲೆ ಆಧಾರಹೀನವಾಗಿ ಕೆಸರೆರಚುವ ಸ್ತ್ರೀ ಮುಕ್ತಿವಾದಿಗಳು ಮತ್ತು ಪ್ರಗತಿಪರ ಸಂಘಟನೆಗಳು ಒಂದೆಡೆ ಪಾಶ್ಚಾತ್ಯ ವಿಚಾರಸರಣಿಯ ಜಯಜಯಕಾರ ಮಾಡುತ್ತವೆ. ಇನ್ನೊಂದೆಡೆ ಇಂಗ್ಲೆಂಡಿನಲ್ಲಿ ನಡೆದ ಸದರಿ ಪ್ರತಿಭಟನೆಗೆ ತಮ್ಮ ಸಹಮತಿಯನ್ನು ವ್ಯಕ್ತಪಡಿಸಲಿಲ್ಲ. ಇಂತಹ ಕೃತ್ಯಗಳಿಂದಲೇ ಸ್ತ್ರೀಮುಕ್ತಿ ಮತ್ತು ಪ್ರಗತಿಪರತೆಯ ಹೆಸರಿನ ಇಂತಹ ಸಂಘಟನೆಗಳ ಡಾಂಭಿಕತೆ ಮತ್ತು ಹಿಂದೂದ್ವೇಷದ ಅರಿವಾಗುತ್ತದೆ.
ಲಂಡನ್ : ಮಹಿಳೆಯರ ಮಾನವಾಧಿಕಾರಗಳ ವಿಷಯದಲ್ಲಿ ಜಿಹಾದ್ ಅತ್ಯಂತ ಅಪಾಯಕಾರಿಯಾಗಿದೆ. ಇಸ್ಲಾಂ ಕಿಲ್ಸ ವುಮನ್ ಮುಂತಾದ ಘೋಷಣೆ ಲಂಡನ್ ನಲ್ಲಿ ಮೊಳಗಿತು. ಇಲ್ಲಿನ ಸಂಸತ್ತಿನ ಹೊರಗೆ ಇತ್ತೀಚೆಗೆ ಈ ಬಗ್ಗೆ ಬಲವಾಗಿ ಪ್ರತಿಭಟಿಸಲಾಯಿತು.
ಇಂಗ್ಲೆಂಡಿನ ಪೆಗಿಡಾ ಹೆಸರಿನ ಪ್ರಖರ ರಾಷ್ಟ್ರವಾದಿ ಸಂಘಟನೆಯ ನಾಯಕಿ ಅನಿಮರಿ ವಾಟರ್ಸ ಇವರ ಮುಂದಾಳತ್ವದಲ್ಲಿ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಪೆಗಿಡಾ, ಶರಿಯಾ ವಾಚ್ ಮತ್ತು ಎಕ್ಸಮಿನ ಇಸ್ಲಾಂ ಡಾಟ ಆರ್ಗ ಈ ಸಂಘಟನೆಗಳಿಂದ ಈ ಪ್ರತಿಭಟನೆ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಬೆಲ್ಜಿಯಂನ ಲ್ವಾಂಮ್ಸ ಬೆಲಾಂಗನ ನಿರಾಶ್ರಿತರ ವಿರುದ್ಧ ಪ್ರತಿಪಕ್ಷಗಳ ಶಾಸಕರಾದ ಅಂಕೆ ವನ ಡರಮೀರ್ಶ ಮತ್ತು ಇತರ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಯುರೋಪಿನಲ್ಲಿ ನಿರಾಶ್ರಿತರ ಡೇರೆಗಳಲ್ಲಿ ನಿರಾಶ್ರಿತರಿಂದ ಬಲಾತ್ಕಾರವಾಗುತ್ತಿರುವ ಘಟನೆಗಳು ಘಟಿಸುತ್ತಿರುವುದು ದೈನಂದಿನ ಸುದ್ದಿಯಾಗಿದೆ. ಈ ಶರಣಾರ್ಥಿಗಳಿಂದ ಜರ್ಮನಿ ಮತ್ತು ಸ್ವೀಡನ್ನಿನ ಮಹಿಳೆಯರು ಮತ್ತು ಚಿಕ್ಕ ಬಾಲಕಿಯರ ಮೇಲೆಯೂ ಬಲಾತ್ಕಾರವಾಗುತ್ತಿದೆ. ಇಂಗ್ಲೆಂಡಿನಲ್ಲಂತೂ ಕೆಲವು ದಶಕಗಳಿಂದಲೂ ವಾಸನಾಂಧ ಜಿಹಾದಿಗಳಿಂದ ಯುವತಿಯರ ಮೇಲೆ ಲೈಂಗಿಕ ಶೋಷಣೆ ನಿರಂತರವಾಗಿ ನಡೆದಿದೆ. ರಾಟರಹ್ಯಾಮ್‌ನಲ್ಲಿ ೩ ಸಾವಿರ ಯುವತಿಯರ ಮೇಲೆ ಲೈಂಗಿಕ ಶೋಷಣೆ ನಡೆದಿರುವ ಆಘಾತಕಾರಿ ಸುದ್ಧಿಯು ಕೆಲವು ತಿಂಗಳುಗಳ ಹಿಂದೆ ಬಹಿರಂಗಗೊಂಡಿದೆ. ಮುಸಲ್ಮಾನ ದೇಶದಲ್ಲಿ ಮಹಿಳೆಯರ ಸ್ವಾತಂತ್ರ್ಯದ ಮೇಲೆ ಬಹಳಷ್ಟು ಬಂಧನಗಳನ್ನು ಹೇರಲಾಗುತ್ತದೆ. ಇದರಿಂದ ನಿರಾಶ್ರಿತರಿಂದ ಯುರೋಪಿನ ಮಹಿಳೆಯರ ಸುರಕ್ಷತೆಗೆ ಅಪಾಯವಿದೆ ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮುಖಂಡರು ತಿಳಿಸಿದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜಿಹಾದಿಗಳಿಂದ ಮಹಿಳಾ ಮಾನವಾಧಿಕಾರದ ಉಲ್ಲಂಘನೆ ಆಗುತ್ತಿರುವುದರ ವಿರುದ್ಧ ವಿವಿಧ ಸಂಘಟನೆಗಳಿಂದ ಇಂಗ್ಲೆಂಡಿನ ಸಂಸತ್ತಿನ ಹೊರಗೆ ಪ್ರತಿಭಟನೆ !