ಕಾಶ್ಮೀರದ ಉರಿಯಲ್ಲಿನ ಸೇನಾನೆಲೆ ಮೇಲೆ ಉಗ್ರರ ದಾಳಿ !

ಎಂದಿನ ವರೆಗೆ ಭಯೋತ್ಪಾದಕರ ಮೂಲ ನಾಶವಾಗುವುದಿಲ್ಲವೋ, ಅಂದಿನ ವರೆಗೆ ಈ ರೀತಿಯ ಘಟನೆಗಳು ನಿಲ್ಲುವುದಿಲ್ಲ, ಎಂಬುದು ಸರಕಾರಕ್ಕೆ ತಿಳಿಯುವು ದಿಲ್ಲವೇ ಅಥವಾ ಬೇಕಂತಲೇ ನಿರ್ಲಕ್ಯ ಮಾಡಲಾಗುತ್ತಿದೆಯೇ ಎಂಬುದು ಜನತೆಗೆ ಗೊತ್ತಾಗಬೇಕು ! ಮುನ್ಸೂಚನೆ ಸಿಕ್ಕಿದ್ದರೂ ನಿಷ್ಕಾಳಜಿ ವಹಿಸಿದವರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು !
ಕಾಂಗ್ರೆಸ್ ಕಾಲದಲ್ಲಿ ಏನು ನಡೆ ಯುತ್ತಿತ್ತೋ, ಅದೇ ಈಗ ಮುಂದು ವರಿದಿರುವುದರಿಂದ ಈ ಸ್ಥಿತಿ ಹಿಂದೂ ರಾಷ್ಟ್ರದ ಸ್ಥಾಪನೆ ಅನಿವಾರ್ಯಗೊಳಿ ಸುತ್ತದೆ !
ಶ್ರೀನಗರ : ಜಮ್ಮು - ಕಾಶ್ಮೀರದ ಉರಿ ಸೇನಾನೆಲೆ ಮೇಲೆ ಸೆಪ್ಟೆಂಬರ್ ೧೮ ರ ಬೆಳಗಿನ ಜಾವ ೫.೩೦ ಕ್ಕೆ ಜೈಶ್--ಮಹಮ್ಮದ್‌ನ ೪ ಜಿಹಾದಿ ಉಗ್ರರು ನಡೆಸಿದ ಆಕ್ರಮಣದಲ್ಲಿ ೧೮ ಸೈನಿಕರು ಹುತಾತ್ಮರಾದರು ಹಾಗೂ ಕೆಲವು ಸೈನಿಕರು ಗಾಯಗೊಂಡರು.
ಸೈನಿಕರು ದಾಳಿ ನಡೆಸಿ ನಾಲ್ಕೂ ಉಗ್ರರನ್ನು ಕೊಂದಿದ್ದು ಪರಿಸರದಲ್ಲಿ ಶೋಧ ಅಭಿಯಾನ ನಡೆಯುತ್ತಿದೆ. ಗಾಯಗೊಂಡ ಸೈನಿಕರನ್ನು ಏರ್ ಆ್ಯಂಬುಲೆನ್ಸ್ ಮೂಲಕ ಶ್ರೀನಗರಕ್ಕೆ ರವಾನಿಸಲಾಯಿತು. ಅವರ ಪೈಕಿ ಕೆಲವರ ಸ್ಥಿತಿ ಗಂಭೀರವಾಗಿದೆ.ಉಗ್ರರು ಸೇನಾ ನೆಲೆಯ ಮೇಲೆ ದಾಳಿ ಮಾಡಬಹುದು ಎಂದು ಗುಪ್ತಚರ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದರೂ ಎಚ್ಚರ ವಸಹಿಸದ ಕಾರಣ ಈ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. (ಪಾಠಣಕೋಟ್ ವಾಯುನೆಲೆ ಹಾಗೂ ಈಗ ಉರಿಯ ಸೇನಾನೆಲೆ ಇವೆರಡರ ಮೇಲೂ ಆಕ್ರಮಣವಾಗುವ ಸಾಧ್ಯತೆಯಿರುವ ಮಾಹಿತಿ ಸಿಕ್ಕಿದ ನಂತರವೂ ದೊಡ್ಡ ಪ್ರಮಾಣದಲ್ಲಿ ಹಾನಿಯಾಗುವುದು ಭಾರತೀಯ ಸೈನ್ಯಕ್ಕೆ ಹಾಗೂ ಸರಕಾರಕ್ಕೆ ಲಜ್ಜಾಸ್ಪದವಾಗಿದೆ ! ಒಂದು ವೇಳೆ ಮಾಹಿತಿ ಸಿಕ್ಕಿದ ಮೇಲೂ ಅದನ್ನು ತಪ್ಪಿಸಲು ಸಾಧ್ಯವಿಲ್ಲದಿದ್ದರೆ, ಆಗ ಆ ಮಾಹಿತಿಯ ಉಪಯೋಗವಾದರೂ ಏನು? - ಸಂಪಾದಕರು)
ಪಾಕ್‌ಗೆ ಪಾಠ ಕಲಿಸಲು ಅನುಮತಿ ನೀಡಿ !
- ಭಾರತೀಯ ಸೇನೆ
ನವ ದೆಹಲಿ : ಉರಿ ದಾಳಿಯ ನಂತರ ಪಾಕ್‌ಗೆ ಪಾಠ ಕಲಿಸಲು ಭಾರತ ಸೇನೆ ಆತುರ ಪಡುತ್ತಿದೆ. ಪಾಕ್‌ಗೆ ಪಾಠ ಕಲಿಸಲು ಸೀಮಿತ; ಆದರೆ ಪ್ರಭಾವೀ ಆಕ್ರಮಣ ನಡೆಸುವ ಯೋಜನೆಯ ಬಗ್ಗೆ ಸರಕಾರವು ವಿಚಾರ ಮಾಡಲಿ, ಎಂಬ ಬೇಡಿಕೆಯನ್ನು ಸೇನೆಯ ತಂಡವು ಮಾಡಿದೆ. ಗಡಿಯಾಚೆಗೆ ಆಕ್ರಮಣ ಮಾಡಬೇಕಾಗಿ ಬಂದರೆ ಪಾಕ್ ಸೈನ್ಯವು ಪ್ರತೀಕಾರ ಮಾಡುತ್ತದೆ; ಆದರೆ ಪ್ರಭಾವೀ ಉತ್ತರ ನೀಡಬಹುದು. ಎಂಬ ವಿಶ್ವಾಸವನ್ನು ಭಾರತೀಯ ಸೇನೆ ವ್ಯಕ್ತಪಡಿಸಿದೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಕಾಶ್ಮೀರದ ಉರಿಯಲ್ಲಿನ ಸೇನಾನೆಲೆ ಮೇಲೆ ಉಗ್ರರ ದಾಳಿ !