ಮನೆಮನೆಯಲ್ಲಿ ಆಯುರ್ವೇದ

‘ಸ್ವೀಟ್ ಡಿಶ್’ ತಿನ್ನುತ್ತೀರಾ ?
‘ನಾವು ಭಾರತೀಯರು ಪಾಶ್ಚಾತ್ಯರು ಮಾಡುತ್ತಿರುವುದೆಲ್ಲವೂ ಒಳ್ಳೆಯದು’, ಎನ್ನುವ ತಪ್ಪು ಕಲ್ಪನೆಯಲ್ಲಿ ಮೈಮರೆತು ಹೋಗಿದ್ದೇವೆ, ನಾವು ನಮ್ಮ ಉಡುಪುಗಳಷ್ಟೇ ಅಲ್ಲದೆ, ನಮ್ಮ ಆಚಾರ ಮತ್ತು ಆಹಾರಗಳನ್ನೂ ಅವರಂತೆಯೇ ನಕಲು ಮಾಡುತ್ತಿದ್ದೇವೆ. ‘ಸ್ವೀಟ್ ಡಿಶ್’ ಕೂಡ ಅದರಲ್ಲಿನ ಒಂದು ಪ್ರಕಾರ. ‘ಸ್ವೀಟ್ ಡಿಶ್’ಅನ್ನು ವಿದೇಶದಲ್ಲಿ ಊಟವಾದ ನಂತರ ಕೊನೆಯಲ್ಲಿ ತಿನ್ನಬೇಕು ಎಂದು ತಿಳಿಯಲಾಗಿದೆ. ಆಯುರ್ವೇದದ ಪ್ರಕಾರ ‘ಮಧುರ ರಸವುಳ್ಳ ಪದಾರ್ಥಗಳನ್ನು ಭೋಜನದ ಆರಂಭದಲ್ಲಿ ತಿನ್ನಬೇಕು’, ಎಂದು ಹೇಳಲಾಗಿದೆ. ಹೀಗೆ ಮಾಡುವುದರಿಂದ ವಾತವು ಶಮನಗೊಳ್ಳುತ್ತದೆ ಮತ್ತು ಆಹಾರ ಪಚನವಾಗಲು ಅಡಚಣೆಯಾಗುವುದಿಲ್ಲ, ಎನ್ನುವುದು ಆಯುರ್ವೇದದ ಅಭಿಪ್ರಾಯ.
ಆಯುರ್ವೇದದ ಅಭಿಪ್ರಾಯವನ್ನು ಆಧುನಿಕ ಶಾಸ್ತ್ರದ ದೃಷ್ಟಿಯಿಂದ ವಿಚಾರ ಮಾಡಿದರೂ ಅಧಿಕ ಉತ್ತಮವಾಗಿರುತ್ತದೆ. ಸಿಹಿ ಪದಾರ್ಥಗಳು ಪಚನವಾಗಲು ಜಡವಾಗಿರುತ್ತದೆ. ಭೋಜನದ ಮೊದಲೇ ಸಿಹಿ ಪದಾರ್ಥವನ್ನು ಸೇವಿಸುವುದರಿಂದ ಅದು ಉತ್ತಮವಾಗಿ ಪಚನವಾಗುತ್ತದೆ. ಅಲ್ಲದೇ ನಾವು ತೆಗೆದುಕೊಳ್ಳುವ ಆಹಾರವೂ ಮಿತಿಯಾಗಿರುತ್ತದೆ. ತದ್ವಿರುದ್ಧ ನಾವು ಭೋಜನದ ಕೊನೆಯಲ್ಲಿ ತಂಪು ಮಾಡಿ ಸಿಹಿ ಪದಾರ್ಥವನ್ನು ತಿನ್ನುವುದರಿಂದ ಜಠರದ ತಾಪಮಾನವು ಕಡಿಮೆಯಾಗಿ ಪಚನಕ್ರಿಯೆಯಲ್ಲಿ ಬಾಧೆಯುಂಟಾಗುತ್ತದೆ. ಆದುದರಿಂದ ಸಿಹಿ ಪದಾರ್ಥವನ್ನು ತಿನ್ನುವುದಾದರೆ ಅದನ್ನು ಭೋಜನದ ಆರಂಭದಲ್ಲಿ ಅಥವಾ ಭೋಜನ ಮಾಡುವಾಗ ಮಧ್ಯಮಧ್ಯದಲ್ಲಿ ತಿನ್ನಬೇಕು. ಭೋಜನದ ಕೊನೆಯಲ್ಲಿ ‘ಸ್ವಿಟ್ ಡಿಶ್’ ತಿನ್ನುವ ಪಾಶ್ಚಾತ್ಯ ಪರಂಪರೆಯು ಮಾತ್ರ ನಮ್ಮ ದೇಶದಲ್ಲಿ ಖಂಡಿತವಾಗಿಯೂ ಅಹಿತಕರವಾಗಿದೆ.’ - ವೈದ್ಯ ಪರೀಕ್ಷಿತ ಶೇವಡೆ , (ಎಮ್‌ಡಿ, ಆಯುರ್ವೇದ), ಡೊಂಬಿವಲಿ. (ವೈದ್ಯ ಪರೀಕ್ಷಿತ ಶೇವಡೆಯವರ ‘ವಾಟ್ಸ್-ಆ್ಯಪ್’ನ ಲೇಖನದಿಂದ ಆಯ್ದ ಅಂಶಗಳು.)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಮನೆಮನೆಯಲ್ಲಿ ಆಯುರ್ವೇದ