ಸನಾತನ-ನಿರ್ಮಿತ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತನ್ನು ಭಾರತೀಯ ಎಲ್ಲ ಭಾಷೆಗಳಲ್ಲಿ ಪ್ರಕಾಶನಗೊಳಿಸಲು ಅನುವಾದ ಮಾಡುವ ವ್ಯಾಪಕ ಸೇವೆಯಲ್ಲಿ ಸಹಭಾಗಿಯಾಗಿ !

ಭಾರತೀಯ ವಿವಿಧ ಭಾಷೆಗಳ ಜ್ಞಾನವಿರುವ ಸಾಧಕರು, ವಾಚಕರು,
ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ಗುರುಸೇವೆಯ ಸುವರ್ಣಾವಕಾಶ !
೧. ಸನಾತನವು ಪ್ರಕಾಶಿಸಿದ ವಿವಿಧ ಭಾಷೆಗಳಲ್ಲಿನ ಗ್ರಂಥಗಳೆಂದರೆ ಅಮೂಲ್ಯವಾದ ಜ್ಞಾನಾಮೃತ ! : ‘ಗ್ರಂಥಗಳು ಅಧ್ಯಾತ್ಮಪ್ರಸಾರ ಮಾಡುವ ಸರ್ವೋತ್ತಮ ಮಾಧ್ಯಮವಾಗಿವೆ. ಸನಾತನ ಸಂಸ್ಥೆಯು ವಿವಿಧ ಭಾಷೆಗಳಲ್ಲಿ ಅಮೂಲ್ಯ ಗ್ರಂಥಸಂಪತ್ತನ್ನು ನಿರ್ಮಿಸಿದೆ. ಅಧ್ಯಾತ್ಮ ಮತ್ತು ವೈಜ್ಞಾನಿಕ ದೃಷ್ಟಿಕೋನಗಳನ್ನು ಅವಲಂಬಿಸಿ ಸುಲಭ ಭಾಷೆಯಲ್ಲಿ ಜ್ಞಾನ ನೀಡುವ ಈ ಗ್ರಂಥಗಳು ವಾಚಕರಿಗೂ ಮಾರ್ಗದರ್ಶಕವಾಗಿವೆ.
ಈ ಗ್ರಂಥಗಳ ಕುರಿತು ಅನೇಕ ಸಾಧಕರು ಹಾಗೂ ಜಿಜ್ಞಾಸುಗಳಿಗೆ ಬಂದ ಅನುಭೂತಿಗಳೆಂದರೆ ಈ ಗ್ರಂಥಗಳಲ್ಲಿನ ಚೈತನ್ಯವನ್ನು ಸಿದ್ಧಪಡಿಸುವ ಪ್ರಮಾಣ ಪತ್ರಗಳಾಗಿರುತ್ತವೆ.
೨. ಭಾರತೀಯ ವಿವಿಧ ಭಾಷೆಗಳ ಜ್ಞಾನವಿರುವವರಿಗೆ ಸೇವೆಯ ಸುವರ್ಣಾವಕಾಶ ! : ಈ ಗ್ರಂಥಗಳನ್ನು ಎಲ್ಲ ಜಿಜ್ಞಾಸುಗಳ ವರೆಗೆ ಆದಷ್ಟು ಬೇಗನೆ ಮುಟ್ಟಿಸುವುದು ಅಗತ್ಯವಿದೆ; ಆದರೆ ವಿವಿಧ ಭಾಷೆಗಳ ಜ್ಞಾನವಿರುವ ಮನುಷ್ಯಬಲದ ಅಭಾವದಿಂದಾಗಿ ಈ ಕಾರ್ಯವು ಮಂದಗತಿಯಲ್ಲಿ ನಡೆಯುತ್ತಿದೆ. ಗ್ರಂಥ ನಿರ್ಮಾಣದ ಈ ವ್ಯಾಪಕ ಕಾರ್ಯಕ್ಕೆ ವೇಗ ನೀಡಲು, ಮರಾಠಿ, ಹಿಂದಿ, ಆಂಗ್ಲ, ತಮಿಳು, ತೆಲುಗು, ಮಲಯಾಳಂ, ಓಡಿಯಾ, ಗುಜರಾತಿ ಮುಂತಾದ ಭಾರತೀಯ ಭಾಷೆಗಳ ಜ್ಞಾನವುಳ್ಳವರು ಈ ಸೇವೆಯಲ್ಲಿ ಸಹಭಾಗಿಯಾಗಬಹುದು. ಈ ಸೇವೆಯ ಇಚ್ಛೆಯುಳ್ಳ ಸಾಧಕರು ಹಾಗೂ ಹಿತಚಿಂತಕರು ಮತ್ತು ಧರ್ಮಪ್ರೇಮಿಗಳು ಜಿಲ್ಲಾಸೇವಕರ ಮಾಧ್ಯಮದಿಂದ ಕೆಳಗಿನ ಕೋಷ್ಟಕಕ್ಕನುಸಾರ ತಮ್ಮ ವಿವರಗಳನ್ನು granthgoa@gmail.com ಈ ಗಣಕೀಯ ವಿಳಾಸಕ್ಕೆ ಕಳುಹಿಸಬೇಕು.
- (ಸದ್ಗುರು) ಸೌ. ಬಿಂದಾ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೬.೮.೨೦೧೬)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ-ನಿರ್ಮಿತ ಸರ್ವಾಂಗಸ್ಪರ್ಶಿ ಗ್ರಂಥಸಂಪತ್ತನ್ನು ಭಾರತೀಯ ಎಲ್ಲ ಭಾಷೆಗಳಲ್ಲಿ ಪ್ರಕಾಶನಗೊಳಿಸಲು ಅನುವಾದ ಮಾಡುವ ವ್ಯಾಪಕ ಸೇವೆಯಲ್ಲಿ ಸಹಭಾಗಿಯಾಗಿ !