ಧರ್ಮಶಿಕ್ಷಣ ನೀಡುವ ಮಾಲಿಕೆ !

ನಮ್ಮ ದಿನಚರಿ ಹೇಗಿರಬೇಕು ?
ನಮ್ಮ ದಿನಚರಿಯು ನಿಸರ್ಗದ ಮೇಲೆ ಎಷ್ಟು ಆಧರಿಸಿರುತ್ತದೆಯೋ, ಅಷ್ಟು ಅದು ಆರೋಗ್ಯಕ್ಕೆ ಪೂರಕವಾಗಿರುತ್ತದೆ. ನಿಸರ್ಗದ ಮತ್ತು ಅಧ್ಯಾತ್ಮದ ದೃಷ್ಟಿಯಿಂದ, ದಿನಚರಿಗೆ ಸಂಬಂಧಿಸಿದ ಆಚಾರಗಳನ್ನು ಪಾಲಿಸುವ ಯೋಗ್ಯಪದ್ಧತಿ ಮತ್ತು ಅವುಗಳ ಹಿಂದಿನ ಸೂಕ್ಷ್ಮಸ್ತರದ ಶಾಸ್ತ್ರೀಯ ಕಾರಣ ಮೀಮಾಂಸೆಗಳನ್ನು ಈ ಮಾಲಿಕೆಯಲ್ಲಿ ನೀಡಲಾಗುವುದು. ಇದನ್ನು ಓದಿ ಹಿಂದೂಗಳು ನಮ್ಮ ಆಚಾರಧರ್ಮದ ಶ್ರೇಷ್ಠತೆ ತಿಳಿದು, ಅದನ್ನು ಪ್ರತ್ಯಕ್ಷ ಆಚರಣೆಯಲ್ಲಿ ತರಲು ಮತ್ತು ಮಕ್ಕಳಲ್ಲೂ ಸಂಸ್ಕಾರ ಮೂಡಿಸಲು ಪ್ರೇರಣೆ ಸಿಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ.
ಹಲ್ಲುಗಳನ್ನು ಉಜ್ಜುವುದರ (ತಿಕ್ಕುವ) ವಿಷಯದ ಆಚಾರಗಳು
ಅ. ಹಲ್ಲುಗಳನ್ನು ಉಜ್ಜುವುದಕ್ಕಿಂತ ಮೊದಲು ಹಲ್ಲುಗಳನ್ನು ಉಜ್ಜಲು ಉಪಯೋಗಿಸುವ ವಸ್ತುಗಳಿಗೆ ಪ್ರಾರ್ಥನೆ ಮಾಡುವುದು : ಹಲ್ಲುಗಳನ್ನು ಉಜ್ಜಲು (ತಿಕ್ಕಲು) ಉಪಯೋಗಿಸುವ ವಸ್ತುಗಳಿಗೆ ಮುಂದಿನಂತೆ ಪ್ರಾರ್ಥನೆಯನ್ನು ಮಾಡಬೇಕು.
ಆಯುರ್ಬಲಂ ಯಶೋ ವರ್ಚಃ ಪ್ರಜ್ಞಾಃ ಪಶೂನ್ ವಸೂನಿ ಚ ಬ್ರಹ್ಮ ಪ್ರಜ್ಞಾಂ ಚ ಮೇಧಾಂ ಚ ತ್ವಂ ನೋ ದೇಹಿ ವನಸ್ಪತೇ ॥ - ನಾರದಪುರಾಣ, ಪೂರ್ವಭಾಗ, ಪಾದ ೧, ಅಧ್ಯಾಯ ೨೭, ಶ್ಲೋಕ ೨೫

ಅರ್ಥ : ಹೇ ವನಸ್ಪತಿಯೇ, ನೀನು ನಮಗೆ ಆಯುಷ್ಯ, ಬಲ, ಯಶಸ್ಸು, ತೇಜಸ್ಸು, ಪ್ರಜಾ, ಪಶು, ಧನ, ಬ್ರಹ್ಮ, ಪ್ರಜ್ಞಾ (ಗ್ರಹಣಶಕ್ತಿ) ಮತ್ತು ಮೇಧಾ (ಧಾರಣಶಕ್ತಿ) ಇವುಗಳನ್ನು ನೀಡು. (ಹಲ್ಲುಗಳನ್ನು ಉಜ್ಜಲು ಉಪಯುಕ್ತವಾಗುವಂತಹ ವನಸ್ಪತಿಗಳಿಗೂ ಕೃತಜ್ಞತಾ ಭಾವವನ್ನು ವ್ಯಕ್ತಪಡಿಸಿ ವನಸ್ಪತಿಗಳಲ್ಲಿಯೂ ದೇವತ್ವವನ್ನು ನೋಡಲು ಕಲಿಸುವಂತಹ ಮಹಾನ್ ಹಿಂದೂಧರ್ಮ ! - ಸಂಕಲನಕಾರರು)
ಆ. ಹಲ್ಲುಗಳನ್ನು ಉಜ್ಜಲು ಏನು ಉಪಯೋಗಿಸಬೇಕು ಮತ್ತು ಏನು ಉಪಯೋಗಿಸಬಾರದು ?
ಆ ೧. ಹಲ್ಲುಗಳನ್ನು ಉಜ್ಜಲು ಕಹಿಬೇವು, ಖದಿರ (ಕಗ್ಗಲಿ ಮರ), ಹಲಗಲಿ, ಔದುಂಬರ ಮುಂತಾದ ವೃಕ್ಷಗಳ ದಪ್ಪ ಕಡ್ಡಿಗಳನ್ನು ಉಪಯೋಗಿಸಬೇಕು.
ಶಾಸ್ತ್ರ : ‘ಕಹಿಬೇವು, ಔದುಂಬರ ಮುಂತಾದ ಗಿಡಗಳ ಕಡ್ಡಿಗಳಿಂದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳ ಮೇಲಿರುವ ರಜ-ತಮ ಲಹರಿಗಳ ವಿಘಟನೆಯಾಗಿ ಬಾಯಿಯಲ್ಲಿ ಶುದ್ಧವಾಯು ನಿರ್ಮಾಣವಾಗುತ್ತದೆ. ಈ ಶುದ್ಧವಾಯುವು ನಿಧಾನವಾಗಿ ದೇಹದ ಟೊಳ್ಳುಗಳಲ್ಲಿ ಸಂಕ್ರಮಿತವಾಗಿ ದೇಹದಲ್ಲಿರುವ ಟೊಳ್ಳುಗಳಿಗೆ ದಿನವಿಡೀ ಕಾರ್ಯವನ್ನು ಮಾಡಲು ತಗಲುವ ಉತ್ತೇಜನವನ್ನು ನೀಡುತ್ತದೆ.’ - ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೯.೧೦.೨೦೦೭, ಬೆಳಗ್ಗೆ ೯.೪೬)
ಆ ೨. ಹಲ್ಲುಗಳನ್ನು ಉಜ್ಜಲು ಹಸುವಿನ ಸೆಗಣಿಯ ಬೆರಣಿಗಳನ್ನು ಸುಟ್ಟು ತಯಾರಿಸಿದ ಬೂದಿಯನ್ನು ಅಥವಾ ಸ್ಫಟಿಕದ ಚೂರ್ಣವನ್ನು ಉಪಯೋಗಿಸಬೇಕು
ಅ. ಶಾಸ್ತ್ರ : ಹಲ್ಲುಗಳು ಪ್ರಾಬಲ್ಯದರ್ಶಕ ಪೃಥ್ವಿ ಮತ್ತು ಆಪತತ್ತ್ವಗಳ ಸಂಯೋಗದಿಂದ ನಿರ್ಮಾಣ ವಾಗಿರುತ್ತವೆ. ಅನ್ನವನ್ನು ತಿನ್ನುವಾಗ ಹಲ್ಲುಗಳ ಸಂದು ಗಳಲ್ಲಿ ಸಂಗ್ರಹವಾದ ಅನ್ನದ ಕಣಗಳು ಸ್ವಲ್ಪ ಸಮಯದ ನಂತರ ರಜ-ತಮಯುಕ್ತ ನಿರುಪಯುಕ್ತ ವಾಯುವನ್ನು ನಿರ್ಮಾಣ ಮಾಡುತ್ತವೆ. ಇದರಿಂದ ಬಾಯಿಯು ಅಶುದ್ಧ ಅಂದರೆ ದೂಷಿತವಾಗುತ್ತದೆ.
೧. ಬೆರಣಿಯ ಬೂದಿ : ಹಸುವಿನ ಸೆಗಣಿಯಿಂದ ತಯಾರಿಸಿದ ಬೆರಣಿಗಳನ್ನು (ಕುಳ್ಳುಗಳನ್ನು) ಸುಟ್ಟು ತಯಾರಿಸಿದ ಬೂದಿಯಲ್ಲಿ ತೇಜತತ್ತ್ವರೂಪಿ ಗಂಧದರ್ಶಕ ವಾಯು ಇರುತ್ತದೆ. ಈ ಬೆರಣಿಯ ಬೂದಿಯಿಂದ ಹಲ್ಲುಗಳನ್ನು ಉಜ್ಜುವುದರಿಂದ ಹಲ್ಲುಗಳಲ್ಲಿರುವ ರಜ-ತಮಾತ್ಮಕ ಲಹರಿಗಳು ಮತ್ತು ನಿರುಪಯುಕ್ತ ವಾಸನೆಯ ಲಹರಿಗಳು ಬಾಯಿಯಲ್ಲಿಯೇ ವಿಘಟನೆಯಾಗಿ ಬಾಯಿಯ ಶುದ್ಧತೆ ಯನ್ನು ಕಾಪಾಡಲು ಸಹಾಯವಾಗುತ್ತದೆ.
ಹಲ್ಲುಜ್ಜಿಯಾದ ನಂತರ ನೀರಿನಿಂದ ಜೋರಾಗಿ ಬಾಯಿಯನ್ನು ಮುಕ್ಕಳಿಸುವುದರಿಂದ ಉಳಿದು ಕೊಂಡಿರುವ ಮತ್ತು ಬಾಯಿಯಲ್ಲಿ ವಿಘಟನೆಯಾದ ರಜ-ತಮಾತ್ಮಕ ಲಹರಿಗಳು ಮತ್ತು ವಾಯುವು ನೀರಿನಲ್ಲಿ ವಿಸರ್ಜನೆಯಾಗಿ ಬಾಯಿಯು ಸಂಪೂರ್ಣ ಶುದ್ಧವಾಗುತ್ತದೆ.
೨. ಸ್ಫಟಿಕ : ಸ್ಫಟಿಕದಲ್ಲಿ ಘರ್ಷಣಾತ್ಮಕ ಮತ್ತು ತೇಜತತ್ತ್ವಕ್ಕೆ ಸಂಬಂಧಿಸಿದ ಪ್ರವಾಹಿ ಗಂಧದರ್ಶಕ ವಾಯು ಇರುವುದರಿಂದ, ಸ್ಫಟಿಕದ ಸ್ಪರ್ಶದಿಂದ ಹಲ್ಲುಗಳಲ್ಲಿನ ಹಾಗೂ ಬಾಯಿಯಲ್ಲಿನ ರಜ-ತಮಾತ್ಮಕ ಲಹರಿಗಳು ಮತ್ತು ನಿರುಪಯುಕ್ತ ವಾಯುವು ಘನೀಕರಣವಾಗಲು ಸಹಾಯವಾಗುತ್ತದೆ. ತೇಜದ ಸ್ತರದಲ್ಲಾಗಿರುವ ಮತ್ತು ಸ್ವಲ್ಪ ಪ್ರಮಾಣದಲ್ಲಿ ರಜ- ತಮಾತ್ಮಕ ಲಹರಿಗಳ ವಿಘಟನೆಯಾಗಿ ಘನೀಕರಣವಾದ ವಾಯುಮಂಡಲವು ಬಾಯಿ ಮುಕ್ಕಳಿಸುವುದರಿಂದ ನೀರಿನಲ್ಲಿ ವಿಸರ್ಜನೆಯಾಗುತ್ತದೆ. ಈ ರೀತಿಯಲ್ಲಿ ಹಲ್ಲುಗಳೊಂದಿಗೆ ಬಾಯಿಯು ಶುದ್ಧವಾಗುತ್ತದೆ. ಆಕಳ ಸೆಗಣಿಯ ಬೆರಣಿಗಳನ್ನು (ಕುಳ್ಳುಗಳನ್ನು) ಸುಟ್ಟು ಮಾಡಿದ ಬೂದಿಯು ಸ್ಫಟಿಕಕ್ಕಿಂತಲೂ ಹೆಚ್ಚು ಲಾಭದಾಯಕವಾಗಿದೆ.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೧೧.೧೨.೨೦೦೭, ಮಧ್ಯಾಹ್ನ ೩.೦೩)
ಆ ೩. ತ್ರಿದೋಷ ಮತ್ತು ತ್ರಿಗುಣಗಳಿಗನುಸಾರ ಹಲ್ಲುಗಳನ್ನು ಉಜ್ಜಲು ಮರದ ಕಡ್ಡಿ, ಬೆರಣಿಯ ಬೂದಿ ಅಥವಾ ಸ್ಪಟಿಕವನ್ನು ಉಪಯೋಗಿಸಬೇಕು
ಸಂಕಲನಕಾರರು : ನೀವು ಮರದ ಕಡ್ಡಿ, ಬೆರಣಿಯ ಬೂದಿ ಅಥವಾ ಸ್ಫಟಿಕವನ್ನು ಉಪಯೋಗಿಸಿ ಹಲ್ಲುಗಳನ್ನು ಉಜ್ಜಬೇಕು ಎಂದು ಹೇಳಿದ್ದೀರಿ, ಹಾಗಾದರೆ ಪ್ರತಿದಿನ ಬೇರೆಬೇರೆ ವಸ್ತುಗಳಿಂದ ಹಲ್ಲು ಗಳನ್ನು ಉಜ್ಜಬೇಕೇನು ?
ಓರ್ವ ವಿದ್ವಾಂಸ : ಇಲ್ಲ. ಅವರವರ ಪ್ರಕೃತಿಗನುಸಾರ ಮರದ ಕಡ್ಡಿ, ಬೆರಣಿಯ ಬೂದಿ ಅಥವಾ ಸ್ಫಟಿಕವನ್ನು ಉಪಯೋಗಿಸಬೇಕು.
ಅ. ತ್ರಿದೋಷಗಳು : ವಾತ, ಕಫ ಮತ್ತು ಪಿತ್ತ ಪ್ರಕೃತಿಯ ಜೀವಗಳು ಅನುಕ್ರಮವಾಗಿ ಮರದ ಕಡ್ಡಿ, ಬೆರಣಿಯ ಬೂದಿ ಮತ್ತು ಸ್ಫಟಿಕವನ್ನು ಉಪಯೋಗಿಸುವುದು ಲಾಭದಾಯಕವಾಗಿದೆ.
ಆ. ತ್ರಿಗುಣಗಳು : ತತ್ತ್ವದ ಭಾಷೆಯಲ್ಲಿ ಸತ್ತ್ವ ಗುಣೀ ಜೀವಗಳು ಮರದ ಕಡ್ಡಿಯನ್ನು, ರಜೋಗುಣಿ ಜೀವಗಳು ಬೆರಣಿಗಳ ಬೂದಿಯನ್ನು ಮತ್ತು ತಮೋಗುಣಿ ಜೀವಗಳು ಸ್ಫಟಿಕದ ಹುಡಿಯನ್ನು ಉಪಯೋಗಿಸುವುದು ಹೆಚ್ಚು ಯೋಗ್ಯವಾಗಿದೆ.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೪.೧೨.೨೦೦೭, ಸಾಯಂಕಾಲ ೬.೫೮)
ಟಿಪ್ಪಣಿ ೧ - ಯಾವಾಗ ನಮ್ಮ ಪ್ರಕೃತಿಯಲ್ಲಿ ಯಾವುದೇ ಒಂದು ದೋಷವು ಪ್ರಧಾನವಾಗಿರುವುದಿಲ್ಲವೋ ಆಗ ಅಂಶ ‘೫ ಆ ೫’ ರಲ್ಲಿ ನೀಡಲಾಗಿರುವ ಹಲ್ಲುಗಳ ಲಕ್ಷಣಗಳಿಂದ ಮರದ ಕಡ್ಡಿ, ಬೆರಣಿಗಳ ಬೂದಿ ಅಥವಾ ಸ್ಫಟಿಕಗಳಲ್ಲಿ ಯಾವುದನ್ನು ಉಪಯೋಗಿಸಬೇಕು ಎಂಬುದನ್ನು ನಿರ್ಧರಿಸಬಹುದು.
ಆ ೪. ಎಕ್ಕೆ ಎಲೆಯ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಬಾರದು
ಶಾಸ್ತ್ರ : ಎಕ್ಕೆ ಎಲೆಯ ಕಡ್ಡಿಯು ತಮೋಗುಣ ವರ್ಧಕವಾಗಿರುವುದರಿಂದ ಅದನ್ನು ಉಪಯೋಗಿಸಬಾರದು.
- ಓರ್ವ ವಿದ್ವಾಂಸ (ಸೌ. ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨.೬.೨೦೦೭, ಮಧ್ಯಾಹ್ನ ೧೨.೦೬)
(ಆಧಾರ : ಸನಾತನ ನಿರ್ಮಿತ ಗ್ರಂಥ ‘ಸ್ನಾನದ ಮೊದಲಿನ ಆಚಾರಗಳ ಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಧರ್ಮಶಿಕ್ಷಣ ನೀಡುವ ಮಾಲಿಕೆ !