ಭಾರತೀಯರು ಭಿಕ್ಷೆ ಬೇಡುವಂತೆ ಮಾಡಿದ ರಾಕ್ಷಸೀ ಪ್ರವೃತ್ತಿಯ ಆಂಗ್ಲರು !

ಗಾಂಧಿವಾದಿ ಲೇಖಕರಾದ ಧರ್ಮಪಾಲರು, ಆಂಗ್ಲರು ತಪ್ಪು ಮಾರ್ಗಗಳನ್ನು ಅವಲಂಬಿಸಿ ಭಾರತಕ್ಕೆ ಬಹುದೊಡ್ಡ ಹಾನಿಯನ್ನು ಮಾಡಿದ ಬಗ್ಗೆ ಮುಂದಿನಂತೆ ಹೇಳುತ್ತಾರೆ. ಆಂಗ್ಲರು ಇಲ್ಲಿಯ ಅಮೂಲ್ಯ ನೈಸರ್ಗಿಕ ಹಾಗೂ ಇತರ ಸಂಪತ್ತನ್ನು ಲೂಟಿ ಮಾಡಿ ಕೊಂಡೊಯ್ದರು. ಇದರಿಂದ ಜನಸಾಮಾನ್ಯನು ಭಿಕ್ಷೆ ಬೇಡಬೇಕಾಯಿತು. ಹಾಗೆಯೇ ಅವರು ಅನೇಕರಿಗೆ ದುರ್ಮಾರ್ಗಗಳನ್ನು ಕಲಿಸಿದರು. ಈ ಬಗ್ಗೆ ವಾರನ್ ಹೇಸ್ಟಿಂಗ್ ಇದರ ಲಿಖಿತ ಪುರಾವೆ ನೀಡಿ ಮುಂದಿನಂತೆ ಹೇಳಿದ್ದಾರೆ, ನಮ್ಮ ಧೋರಣೆ ಹಾಗೂ ನಾವು ಕೈಕೊಂಡ ಕೃತ್ಯಗಳಿಂದಾಗಿ ಭಾರತದಲ್ಲಿ ದುಂದುವೆಚ್ಚಗಳು ರಾರಾಜಿಸಿದವು. ಇದರಿಂದ ಸೈನಿಕರು ಹಾಗೂ ಪೊಲೀಸರು ಸಹ ಕಳ್ಳರು ಹಾಗೂ ದರೋಡೆಕೋರರಾದರು ! ಆಂಗ್ಲರು ಭಾರತವನ್ನು ಉದ್ದೇಶಪೂರ್ವಕವಾಗಿಯೇ ಕಳಂಕಿತಗೊಳಿಸಿದರು.
- ವಿಶ್ವಾಸ ಪಾಟೀಲ (ಸಾಪ್ತಾಹಿಕ ಲೋಕಜಾಗರ, ೨೮.೯.೨೦೧೨)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಭಾರತೀಯರು ಭಿಕ್ಷೆ ಬೇಡುವಂತೆ ಮಾಡಿದ ರಾಕ್ಷಸೀ ಪ್ರವೃತ್ತಿಯ ಆಂಗ್ಲರು !