ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?

ದೇವಿ ಪ್ರತಿಮೆಗೆ ಅನಾಮಿಕಾ ಬೆರಳಿನಿಂದ ಚಂದನವನ್ನು ಹಚ್ಚಿರಿ.
ನಂತರ ಅರಿಶಿನ-ಕುಂಕುಮ ಅರ್ಪಿಸಿರಿ.
ತೊಟ್ಟಿನ ಭಾಗವು ದೇವಿಯೆಡೆಗೆ ಬರುವಂತೆ ಹೂವನ್ನು ಅರ್ಪಿಸಿರಿ.
ಸಾಧ್ಯವಿದ್ದಲ್ಲಿ ಹೂವಿನ ಮಾಲೆಯನ್ನು ಅರ್ಪಿಸಿರಿ.
ದೇವಿಗೆ ಒಂದು ಅಥವಾ ಒಂಬತ್ತರ ಪಟ್ಟಿನ ಸಂಖ್ಯೆಯಲ್ಲಿ ಹೂವು ಗಳನ್ನು ಅರ್ಪಿ ಸಿರಿ. ಹೂವುಗಳನ್ನು ಗೋಲಾಕಾರದಲ್ಲಿ ಅರ್ಪಿಸಿ ಮಧ್ಯದಲ್ಲಿ ಟೊಳ್ಳು ಜಾಗವನ್ನು ನಿರ್ಮಿಸಿರಿ. ವಿಶಿಷ್ಟ ದೇವತೆಗೆ ವಿಶಿಷ್ಟ ಹೂವುಗಳನ್ನು ಅರ್ಪಿಸುವುದು ಮಹತ್ವ ಪೂರ್ಣವಾಗಿದೆ.

ದೇವಿಪೂಜೆಯಲ್ಲಿ ನಿಷಿದ್ಧವಾದ ಹೂವುಗಳು
. ಅಪವಿತ್ರ ಸ್ಥಳದಲ್ಲಿ ಅರಳಿದ
. ಅರಳದಿರುವ ಅಂದರೆ ಮೊಗ್ಗುಗಳು
. ದಳಗಳು ಉದುರಿರುವ
. ನಿರ್ಗಂಧ ಅಥವಾ ತೀವ್ರ ಗಂಧವಿರುವ
. ಪರಿಮಳವನ್ನು ಅನುಭವಿಸಲಾದ
. ಭೂಮಿಯ ಮೇಲೆ ಉದುರಿದ
. ಎಡಗೈಯಿಂದ ತಂದಿರುವ
. ನೀರಿನಲ್ಲಿ ಅದ್ದಿ ತೊಳೆಯಲಾದ
. ಇತರರನ್ನು ಅಪ್ರಸನ್ನಗೊಳಿಸಿ ತರಲಾದ
೧೦. ಒಳ ಉಡುಪುಗಳನ್ನು ಮಾತ್ರ ಧರಿಸಿ ತರಲಾದ ಹೂವುಗಳನ್ನು ದೇವಿಗೆ ಅರ್ಪಿಸಬೇಡಿ.
ಇಂತಹ ಹೂವುಗಳನ್ನು ದೇವಿಗೆ ಅರ್ಪಿಸುವುದರಿಂದ ಪೂಜಕನಿಗೆ ಯಾವುದೇ ರೀತಿಯ ಆಧ್ಯಾತ್ಮಿಕ ಲಾಭವಾಗುವುದಿಲ್ಲ; ಆದುದರಿಂದ ಯೋಗ್ಯ ಹೂವುಗಳನ್ನು ಆಯ್ಕೆ ಮಾಡಬೇಕು.
ದೀಪ : ಪೂರ್ಣ ವೃತ್ತಾಕಾರ ಪದ್ಧತಿಯಲ್ಲಿ ದೇವಿಗೆ ದೀಪವನ್ನು ಬೆಳಗಿರಿ.
ನೈವೇದ್ಯ : ನಂತರ ನೈವೇದ್ಯವನ್ನು ನಿವೇದಿಸಿರಿ.
ಊದುಬತ್ತಿ : ದೇವಿಯ ತಾರಕ ರೂಪವನ್ನು ಉಪಾಸನೆ ಮಾಡಲು ಚಂದನ, ಗುಲಾಬಿ, ಮಲ್ಲಿಗೆ, ಕೇದಗೆ, ಚಂಪಾ, ಚಮೇಲಿ, ಜಾಜಿ, ಖಸ,ರಾತ್ರಿರಾಣಿ ಹಾಗೂ ಕನಕಾಂಬರ ಮುಂತಾದ ಸುಗಂಧ ಭರಿತ ಊದುಬತ್ತಿ ಯನ್ನು ಉಪಯೋಗಿಸಿ. ದೇವಿಯ ಮಾರಕ ರೂಪದ ಉಪಾಸನೆಗಾಗಿ ಹೀನಾ ಹಾಗೂ ದರಬಾರ ಸುಗಂಧವುಳ್ಳ ಊದುಬತ್ತಿಯನ್ನು ಉಪಯೋಗಿಸಿ.
ಊದುಬತ್ತಿ ತೋರಿಸುವಾಗ ಎರಡು ಊದುಬತ್ತಿ ಗಳನ್ನು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ಅಂದರೆ ‘ಕ್ಲಾಕ್ ವೈಸ್’ ದಿಕ್ಕಿನಲ್ಲಿ ವೃತ್ತಾಕಾರದಲ್ಲಿ ದೇವಿಯ ಪ್ರತಿಮೆಯ ನಾಲ್ಕೂ ದಿಕ್ಕಿನಲ್ಲಿ ನಿಧಾನವಾಗಿ ಮೂರುಬಾರಿ ಬೆಳಗಿರಿ.
ಈ ಎಲ್ಲ ಕೃತಿಯನ್ನು ಮಂತ್ರಪಠಣ, ಪ್ರಾರ್ಥನೆ ಅಥವಾ ನಾಮಜಪ ಸಹಿತ ಮಾಡುವುದರಿಂದ ಅಪೇಕ್ಷೆಗಿಂತ ಹೆಚ್ಚು ಲಾಭವಾಗುತ್ತದೆ.
(ದೇವಿಯ ಪೂಜೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ಗ್ರಂಥ ‘ದೇವಿಯ ಪೂಜೆಗೆ ಸಂಬಂಧಿಸಿದ ಕೃತಿಗಳ ಶಾಸ್ತ್ರ’)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ದೇವಿಮಾತೆಯ ನಿತ್ಯ ಉಪಾಸನೆ ಹೇಗೆ ಮಾಡಬೇಕು ?