ವಿಚಾರಣೆಯ ಉದ್ದೇಶದಿಂದ ಆಶ್ರಮಕ್ಕೆ ದೂರವಾಣಿ ಕರೆ ಮಾಡುವವರ ಬಗ್ಗೆ ಎಚ್ಚರ !

ಒಂದು ಆಶ್ರಮಕ್ಕೆ ಮುಂಬಯಿಯ ಮಹಿಳೆಯೊಬ್ಬಳು ದೂರವಾಣಿ ಮುಖಾಂತರ ಮಾತನಾಡಿ ಅನಾರೋಗ್ಯ ವ್ಯಕ್ತಿಯೊಬ್ಬನನ್ನು ಆಶ್ರಮದಲ್ಲಿ ಇಡಬೇಕಾಗಿದ್ದು, ‘ನಿಮ್ಮ ಆಶ್ರಮದಲ್ಲಿ ರೋಗಿಗಳನ್ನು ಇಟ್ಟುಕೊಳ್ಳುವಿರೇ ? ಎಂದು ಕೇಳಿದರು. ಸನಾತನದ ಆಶ್ರಮದಲ್ಲಿ ಈ ರೀತಿ ರೋಗಿಗಳನ್ನು ಇಟ್ಟುಕೊಳ್ಳುವುದಿಲ್ಲವೆಂದು ಹೇಳಿದರೂ, ಅವರು ಪುನಃ, ‘ಸನಾತನದ ರಾಮನಾಥಿ ಆಶ್ರಮದಲ್ಲಿಯಾದರೂ ರೋಗಿಗಳನ್ನು ಇಟ್ಟುಕೊಳ್ಳುವರೇ? ಎಂದು ಕೇಳಿದಾಗ ಇಲ್ಲವೆಂದು ಹೇಳಲಾಯಿತು. ಬಳಿಕ ಅವರಿಗೆ ಆಶ್ರಮದ ದೂರವಾಣಿ ಸಂಖ್ಯೆ ಎಲ್ಲಿಂದ ದೊರೆಯಿತೆಂದು ಕೇಳಿದಾಗ ಆ ಮಹಿಳೆಯು ‘ಆಶ್ರಮದ ದೂರವಾಣಿ ಸಂಖ್ಯೆಯು ದೇವಸ್ಥಾನದಲ್ಲಿ ದೊರೆಯಿತು’ ಎಂದು ಹೇಳಿದರು. ಆದರೆ ಈ ರೀತಿ ದೇವಸ್ಥಾನದಲ್ಲಿ ಆಶ್ರಮದ ದೂರವಾಣಿ ಸಂಖ್ಯೆಯನ್ನು ಯಾರಿಗೂ ನೀಡಿರುವುದಿಲ್ಲ. ಆದುದರಿಂದ ಈ ರೀತಿ ವಿಚಾರಣೆಯ ಉದ್ದೇಶದಿಂದ ಸಂಪರ್ಕಿಸುವ ವ್ಯಕ್ತಿಗಳಿಂದ ಜಾಗೃತರಾಗಿರಬೇಕು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ವಿಚಾರಣೆಯ ಉದ್ದೇಶದಿಂದ ಆಶ್ರಮಕ್ಕೆ ದೂರವಾಣಿ ಕರೆ ಮಾಡುವವರ ಬಗ್ಗೆ ಎಚ್ಚರ !