ಜ್ವರ, ಪಶ್ಚಾತ್ತಾಪ ಮತ್ತು ಮನಸ್ತಾಪ !

ನಿಮಗೆ ಜ್ವರ ಬಂದಿದೆಯೇ ? ಹಾಗಿದ್ದರೆ ಈ ಲೇಖನವನ್ನು ತಪ್ಪದೆ ಓದಿರಿ. ಜ್ವರ ಬಂದಾಗ ನಾವು ತಪ್ಪದೇ ಮಾಡುವ ತಪ್ಪನ್ನು ತೋರಿಸುವ ಹಾಗೂ ಅದನ್ನು ವಿವರಿಸಿ ಅದಕ್ಕೆ ಯೋಗ್ಯ ಉಪಾಯವನ್ನು ಹೇಳುವ ಈ ಲೇಖನ.
೧. ಜ್ವರ ಬಂದಾಗ ಪ್ಯಾರಾಸಿಟಮೋಲ್ ತೆಗೆದುಕೊಳ್ಳುವುದು ತಾತ್ಕಾಲಿಕ ಉಪಾಯ !
ಜ್ವರ ! ನಮ್ಮೆಲ್ಲರಿಗೂ ಪರಿಚಯವಿರುವ ಕಾಯಿಲೆ ! ಈ ಹಿಂದೆ ಪ್ರತಿಯೊಬ್ಬರೂ ಅನುಭವಿಸಿರುವ ಕಾಯಿಲೆ. ಆಯುರ್ವೇದದಲ್ಲಿ ಜ್ವರಕ್ಕೆ ಸರ್ವರೋಗಾಧಿಪತಿ, ಬಲಿ ಇತ್ಯಾದಿ ಅನೇಕ ವಿವಿಧ ವಿಶೇಷಣಗಳಿಂದ ಗೌರವಿಸಿ ಇತರ ಯಾವುದೇ ಕಾಯಿಲೆಗೆ ಮಾಡ ದಷ್ಟು ವಿಸ್ತಾರವಾಗಿ ವರ್ಣಿಸಲಾಗಿದೆ. ಈ ರೀತಿ ಯಲ್ಲಿ ವರ್ಣಿಸಲ್ಪಟ್ಟ ಜ್ವರ ಬಂದರೆ ಸಾಕು ನಮ್ಮಲ್ಲಿ ಹೆಚ್ಚಿನವರು ಪ್ಯಾರಾಸಿಟಮೋಲ್(Paracetamol) ಖಡ್ಗವನ್ನು (ಔಷಧಿ) ತೆಗೆದೇ ಬಿಡುತ್ತಾರೆ ! ಇದನ್ನು ನೋಡಿ ಪಾಪ ಅದು ಅಲ್ಲಿಯೇ ಮುದುಡಿ ಕುಳಿತುಕೊಳ್ಳುತ್ತದೆ ಅಥವಾ ತಾತ್ಕಾಲಿಕವಾದರೂ ಹೊರಟು ಹೋಗುತ್ತದೆ, ಇದು ಸಹ ಸಾಮಾನ್ಯವಾಗಿದೆ! ನಾವು ಮಾತ್ರ ಅದನ್ನು ಪರಾಜಯಗೊಳಿಸಿದ ಹುಂಬತನದ ಭ್ರಮೆಯಲ್ಲಿರುತ್ತೇವೆ.
ಜ್ವರ ಬಂದಾಗ ಪಾಲಿಸಬೇಕಾದ ಸಾಮಾನ್ಯ ನಿಯಮಗಳನ್ನು ಕಡೆಗಣಿಸಿ ತಮ್ಮ ನಿತ್ಯದ ಕೆಲಸಗಳನ್ನು ಮಾಡುತ್ತಾ ಇರುತ್ತೇವೆ. ಕೆಲವೊಮ್ಮೆ ಪರ್ಯಾಯವಿಲ್ಲದೆ, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ದುರ್ಲಕ್ಷಿಸಿ, ಕೆಲವೊಮ್ಮೆ ಅಜ್ಞಾನದಿಂದ ಹೀಗಾಗುತ್ತದೆ. ಒಂದು ವೇಳೆ ಬೇರೆ ಯಾವುದೋ ಕಾಯಿಲೆಯ ಜೊತೆಗೆ ಅದರ ಲಕ್ಷಣವೆಂದು ಜ್ವರ ಬಂದಿದ್ದರೆ, ಅದು ಸುಮ್ಮನೆ ಹೊರಟು ಹೋಗುತ್ತದೆ; ಆದರೆ ಅದೊಂದು ಸ್ವತಂತ್ರವಾದ ವ್ಯಾಧಿಯಾಗಿ ಬಂದಾಗಲೂ ಅದನ್ನು ದುರ್ಲಕ್ಷಿಸಿದರೆ ಅಥವಾ ಬಲವಂತವಾಗಿ ಪ್ಯಾರಾಸಿಟ ಮೋಲ್ ಎಂಬ ಆ್ಯಂಟಿಬಯೋಟಿಕ್ಸ್ ಇತ್ಯಾದಿಗಳಿಂದ ಹೊಡೆದು ಅದನ್ನು ಶರೀರದ ಹೊರಗೆ ಹಾಕುವ ಪ್ರಯತ್ನ ಮಾಡಿದರೆ ಅದು ಅವಕಾಶ ಸಿಕ್ಕಿದಾಗ ಪುನಃ ತಲೆ ಎತ್ತುವುದು ಖಚಿತ.
೨. ಜ್ವರ ಬಂದಾಗ ವಿಶ್ರಾಂತಿ ತೆಗೆದುಕೊಳ್ಳದೆ ಕೆಲಸ ಮಾಡುವುದು ತಪ್ಪು !
ಜ್ವರ ಬಂದಾಗ ವಿಶ್ರಾಂತಿ ತೆಗೆದುಕೊಳ್ಳಲು ಸಮಯವಿಲ್ಲವೆಂದು ಕೆಲಸದ ಒಂದು ದಿನವನ್ನು ಉಳಿಸುವ ಸಲುವಾಗಿ ಯಾವುದಾದರೂ ದುಬಾರಿ ಔಷಧಿಗಳಿಂದ ಆಘಾತ ಮಾಡಿದಾಗ ತಾತ್ಕಾಲಿಕ ಬಿಡುಗಡೆಯಾಗುತ್ತದೆ. ಆದರೆ ಮುಂದೆ ಅದರಿಂದ ಬರುವ ಭಯಂಕರ ಆಯಾಸ, ಹೊಸತಾಗಿ ಅರಿವಾಗುವ ಸಹಿಸಲಸಾಧ್ಯವಾದ ಉಷ್ಣತೆಯಿಂದ ಹಿಡಿದು ಕೂದಲು ಉದುರುವುದು, ಕಣ್ಣುಗಳು ಉರಿಯುವುದು, ಇಲ್ಲಿಯವರೆಗಿನ after effects (ಅಂದರೆ ಅನಂತರದ ಪರಿಣಾಮ !) ಇಂತಹ ಮುಖವಾಡಗಳನ್ನು ಹಾಕಿಕೊಂಡು ಅದು ನಮಗೆ ತೊಂದರೆ ಕೊಡುತ್ತದೆ. ನಂತರ ಅನೇಕ ದಿನಗಳವರೆಗೆ ಕೆಲಸ ಮಾಡುವ ಕ್ಷಮತೆ ಕಡಿಮೆಯಾಗುತ್ತದೆ ಅಥವಾ ಒಂದು ವಾರ ರಜೆ ಹಾಕಿ ಮನೆಯಲ್ಲಿರುವುದು, ಇದನ್ನು ಬಿಟ್ಟರೆ ಬೇರೆ ಪರ್ಯಾಯವಿರುವುದಿಲ್ಲ. ಈ ಜ್ವರ ಪುನಃ ಬರುವಾಗ ಮನಸ್ತಾಪ ಹೆಸರಿನ ಇನ್ನೊಬ್ಬ ತಮ್ಮನನ್ನು ಜೊತೆಗೆ ಕರೆದುಕೊಂಡು ಬರುತ್ತದೆ !
೩. ಉಪವಾಸ : ಜ್ವರಕ್ಕೆ ರಾಮಬಾಣ ಉಪಾಯ !
ಆದ್ದರಿಂದ ಇಂತಹ ಜ್ವರದ ಚಕ್ರದಲ್ಲಿ ಸಿಲುಕಿ ನಮಗೆ ಪಶ್ಚಾತ್ತಾಪದ ಪ್ರಸಂಗ ಬರಬಾರದೆಂದು ಆಯುರ್ವೇದದಲ್ಲಿ ಹೇಳಿದ ಕೆಲವು ನಿಯಮಗಳನ್ನು ಪಾಲಿಸಬೇಕು. ಅದರಲ್ಲಿ ಎಲ್ಲಕ್ಕಿಂತ ಮಹತ್ವದ್ದು ಉಪವಾಸ ! (ಈ ಶಬ್ದವನ್ನು ಕೇಳಿಯೇ ಕೆಲವರು ಹೆದರುತ್ತಾರೆ) ಈ ಶಬ್ದದ ಅರ್ಥ ಉಪವಾಸವೆಂದಿದ್ದರೂ ಉಪವಾಸವೆಂದಾಗ ಸರಾಗವಾಗಿ ತಿನ್ನುವ ಬಟಾಟೆ, ಸಾಬೂದಾನಾ ಇತ್ಯಾದಿ ಪದಾರ್ಥ ಇಲ್ಲಿ ಸಂಪೂರ್ಣ ವರ್ಜ್ಯವಾಗಿದೆ. ಕೇವಲ ಉಪವಾಸದಿಂದಲೇ ಗುಣ ವಾಗುವ ಕೆಲವು ಕಾಯಿಲೆಗಳಲ್ಲಿ ಜ್ವರ ಸಹ ಇದೆ. ಇತ್ತೀಚೆಗೆ ಜ್ವರ ಬಂದರೆ heavy antibiotics ತೆಗೆದುಕೊಳ್ಳಲೇಬೇಕು ಹಾಗೂ ಅದನ್ನು ಸಹಿಸಿಕೊಳ್ಳಲು ಅದರ ಮೊದಲು ಏನಾದರೂ ತಿನ್ನಲೇಬೇಕು, ಎಂಬ ರೂಢಿಯಿಂದಾಗಿ ನಿಜವಾಗಿಯೂ ಜ್ವರ ಬಂದಾಗ ಉಪವಾಸ ಮಾಡುವುದು ಹಾಗೂ ಉಪವಾಸದಿಂದ ಜ್ವರ ಗುಣವಾಗುವವರೆಗೆ ಔಷಧಿಯನ್ನು ವರ್ಜಿಸುವುದು, ಇವೆರಡೂ ನಿಯಮಗಳನ್ನು ಬದಿಗಿಟ್ಟು ಮುಂದೆ ಶರೀರದ ಮೇಲಾಗುವ ದುಷ್ಪರಿಣಾಮಗಳಿಗೆ ಸ್ಥಾನ ನಿರ್ಮಾಣ ಮಾಡಿಕೊಡುತ್ತೇವೆ.
೪. ಜ್ವರ ಬಂದಾಗ ಏನು ತಿನ್ನಬೇಕು ಹಾಗೂ ಏನು ತಿನ್ನಬಾರದು ?
ಆದ್ದರಿಂದ ಜ್ವರ ಬಂದಾಗ ಭಯಪಡದೆ ಉಪವಾಸ ಮಾಡಬೇಕು. ಅದರಿಂದ ಆಯಾಸ ಹೆಚ್ಚಾಗದೆ ಕಡಿಮೆಯಾಗುತ್ತದೆ. ಒಮ್ಮೆ ಈ ಉಪವಾಸದಿಂದ ಹಿತವೆ ನಿಸಿದಾಗ, ಸುಲಭವಾಗಿ ಜೀರ್ಣವಾಗುವ ಗಂಜಿ, ಅನ್ನ, ಹೆಸರಿನ ಸಾರು ಮುಂತಾದ ಪದಾರ್ಥಗಳನ್ನು ತಿಂದರೆ ಅಡ್ಡಿಯಿಲ್ಲ. ನೋಡಲು ಶುಭ್ರವಾಗಿರುವ, ಸ್ಪರ್ಷಿಸಿದಾಗ ಮೃದುವಾಗಿದ್ದು ಸಾತ್ತ್ವಿಕವೆನಿಸುವ ಇಡ್ಲಿ ಜ್ವರದಲ್ಲಿ ತಿನ್ನಲು ಕೊಟ್ಟರೆ ಆರುತ್ತಿರುವ ಇದ್ದಲಿ ಮೇಲೆ ಬೂದಿ ಹಾಕಿದಂತಾಗುತ್ತದೆ. ಹುಳಿಯಾಗಿಸಿ ಮಾಡಿದ ಈ ಪದಾರ್ಥವು ಶರೀರದ ಆಮ್ಲವನ್ನು ಹೆಚ್ಚಿಸಿ ಕಾಯಿಲೆ ಹೆಚ್ಚಾಗಲು ಸಹಾಯ ಮಾಡುತ್ತದೆ. ಅದು ಬೇಡವೆಂದಾದರೆ ಮನೆಯಲ್ಲಿ ಮಾಡಿದ ಗಂಜಿ, ಹೆಸರಿನ ಸಾರು, ಅನ್ನ, ಹೆಸರಿನ ತೋವೆ, ಇತ್ಯಾದಿ ಪದಾರ್ಥ ತಿನ್ನಬಹುದು. ಇಡ್ಲಿ ಮತ್ತು ಶಿರಾ ತಿನ್ನಬೇಡಿ.
೫. ಜ್ವರದ ಸಮಯದಲ್ಲಿ ಚಿಕಿತ್ಸೆಯ ಕ್ರಮ !
ಅಜ್ಞಾನದಿಂದ ಆಗುವ ಇನ್ನೊಂದು ತಪ್ಪೆಂದರೆ ತಕ್ಷಣ ಆರಂಭಿಸಿದ ಪ್ಯಾರಾಸಿಟಮೋಲ್ ಆ್ಯಂಟಿ ಬಯೋಟಿಕ್ಸ್‌ನಂತಹ ತೀಕ ಔಷಧಿಗಳನ್ನು ಸೇವಿಸಿ ಶರೀರದ ಉಷ್ಣತೆ ಕಡಿಮೆಯಾದ ತಕ್ಷಣ ನಾವು ಜ್ವರ ಹೋಯಿತು, ಎಂದು ಹೇಳುತ್ತಾ ನಿತ್ಯಕರ್ಮಗಳನ್ನು ಪ್ರಾರಂಭಿಸುತ್ತೇವೆ. ಇದರಲ್ಲಿ ಸ್ನಾನ, ಓಡಾಟ, ಗಾಳಿಯಲ್ಲಿ ಪ್ರವಾಸ, ಸಾಧ್ಯವಿದ್ದರೆ ವ್ಯಾಯಾಮ ಇತ್ಯಾದಿ ಜ್ವರದಲ್ಲಿ ಅಪಥ್ಯವೆಂದು ಕುಪ್ರಸಿದ್ಧವಿರುವ ವಿಷಯಗಳನ್ನು ಅವಲಂಬಿಸುತ್ತೇವೆ. ಆಗ ಶರೀರದ ಮೂಲೆಯಲ್ಲಿ ಎಲ್ಲಿಯೋ, ಅಡಗಿರುವ ಜ್ವರ ಆಯಾಸಗೊಂಡಿರುವ ಶರೀರಕ್ಕಾದ ಹಾನಿಯನ್ನು ಗುರುತಿಸಿ ಅವಕಾಶದ ಲಾಭಪಡೆಯುತ್ತದೆ. ಪುನಃ ಜ್ವರ ಬರುತ್ತದೆ ಅಥವಾ ಔಷಧೋಪಚಾರಕ್ಕೆ, ವಿಶ್ರಾಂತಿಗೆ ಮಣಿಯದ ಆಯಾಸವು ವ್ಯಕ್ತಿಯನ್ನು ಗುಲಾಮನನ್ನಾಗಿ ಮಾಡುತ್ತದೆ. ಆದ್ದರಿಂದ ಜ್ವರ ಬಂದಾಗ ಉಪವಾಸ ಮಾಡುವುದನ್ನು, ತಂಪು ಗಾಳಿಯಲ್ಲಿ ತಿರುಗುವುದನ್ನು ಸ್ವಲ್ಪ ಸಮಯದವರೆಗೆ ನಿಲ್ಲಿಸಿ ನಂತರವೇ ಹಗುರವಾದ ಊಟ ನಂತರ ಅವಶ್ಯಕತೆಗನುಸಾರ ಔಷಧಿ ತೆಗೆದು ಕೊಳ್ಳುವುದೇ ಚಿಕಿತ್ಸೆಯ ಕ್ರಮವಾಗಿದೆ.
೬. ಮನುಷ್ಯನ ಶರೀರದಲ್ಲಿ ನಿಸರ್ಗ ನಿರ್ಮಾಣ ಮಾಡಿದ ಕ್ರಮ-ನಿಯಮವನ್ನು ತಿಳಿದುಕೊಳ್ಳಿ !
ಆದರೆ ಇದರಲ್ಲಿ ಯಾವುದನ್ನೂ ಮಿತಿಮೀರದಂತೆ ನೋಡಿಕೊಂಡು ಶರೀರದ ಸ್ಥಿತಿಯನ್ನು ನೋಡಿಯೇ ಈ ಉಪಕ್ರಮಗಳನ್ನು ಅವಲಂಬಿಸಬೇಕು. ತುರ್ತುಪರಿಸ್ಥಿತಿ ಯಲ್ಲಿ ಔಷಧಿ ತೆಗೆದುಕೊಳ್ಳಲು ಅಡ್ಡಿಯಿಲ್ಲ; ಆದರೆ ಇಂತಹ ಸ್ಥಿತಿ ನಿರ್ಮಾಣವಾದಾಗ ನಾವಾಗಿಯೇ ಅನ್ನ ಸೇವಿಸಲು ಇಚ್ಛೆಯಿಲ್ಲದೆ ಉಪವಾಸ ಮಾಡುತ್ತೇವೆ, ಬಹಳ ಚಳಿಯಾಗುತ್ತಿರುವುದರಿಂದ ಉಣ್ಣೆಯ ಬಟ್ಟೆ ಮತ್ತು ಗಾಳಿ ಬೇಡವೆಂದು ಅನಿಸುತ್ತದೆ ಹಾಗೂ ಬಹಳ ಆಯಾಸದಿಂದ ಬಂದಿರುವ ನಿಶಕ್ತಿಯಿಂದ ಕಡ್ಡಾಯ ವಾಗಿ ವಿಶ್ರಾಂತಿ ಮಾಡಬೇಕಾಗುತ್ತದೆ, ಹೀಗೆ ಇತ್ಯಾದಿ ಉಪಚಾರಗಳ ಕ್ರಮವನ್ನು ನಿಸರ್ಗವೇ ರೋಗಿಯಲ್ಲಿ ನಿರ್ಮಾಣ ಮಾಡಿರುತ್ತದೆ. ಕೇವಲ ಅದನ್ನು ಕಣ್ತೆರೆದು ಹಾಗೂ ಶಾಸ್ತ್ರೋಕ್ತವಾಗಿ ಅದನ್ನು ನೋಡುವ ದೃಷ್ಟಿ ಮತ್ತು ಮಾನಸಿಕತೆ ಇರಬೇಕು ! - ವೈದ್ಯೆ ದೇವಶ್ರೀ ಬುಝರೂಕ್, ಎಮ್.ಡಿ. (ಆಯು.) ಕಾಯಚಿಕಿತ್ಸೆ (ಆಧಾರ : ವಾಟ್ಸ್‌ಆ್ಯಪ್)

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಜ್ವರ, ಪಶ್ಚಾತ್ತಾಪ ಮತ್ತು ಮನಸ್ತಾಪ !