ಸರಕಾರದ ಪರಾಜಯವನ್ನು ಮುಚ್ಚಿಡಲು ಸರಕಾರ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವುದು ! - ಮಾಯಾವತಿ

ಭಾರತವನ್ನು ಪ್ರತಿದಿನ ಕೆಣಕುವ ಪಾಕಿಸ್ತಾನದೊಂದಿಗೆ ಯುದ್ಧ ಮಾಡಲು
 ಮಾಯಾವತಿಯಂತಹ ರಾಜಕಾರಣಿಗಳು ವಿರೋಧಿಸಿದರೆ ಆಶ್ಚರ್ಯವೇನಿಲ್ಲ !
ಆಜಮ್‌ಗಢ್ (ಉತ್ತರಪ್ರದೇಶ) : ತನ್ನ ಪರಾಜಯವನ್ನು ಮುಚ್ಚಿಟ್ಟು ಜನರ ಗಮನವನ್ನು ಬೇರೆಡೆಗೆ ಹೊರಳಿಸಲು ಮೋದಿ ಸರಕಾರವು ಪಾಕಿಸ್ತಾನದೊಂದಿಗೆ ಉಗ್ರವಾದದ ವಿಷಯದಲ್ಲಿ ಯುದ್ಧ ಮಾಡುವುದು, ಎಂದು ಬಹುಜನ ಸಮಾಜ ಪಕ್ಷದ ಮುಖ್ಯಸ್ತೆ ಹಾಗೂ ಮಾಜಿ ಮುಖ್ಯಮಂತ್ರಿ ಮಾಯಾವತಿ ಇವರು ಭವಿಷ್ಯ ನುಡಿದಿದ್ದಾರೆ. ಅವರು ಮಾತು ಮುಂದುವ ರಿಸುತ್ತಾ, ‘ಒಂದೆಡೆ ಭಾಜಪ ಸರಕಾರವು ಶ್ರಿಮಂತರ ೧ ಲಕ್ಷದ ೧೪ ಸಾವಿರ ಕೋಟಿ ರೂಪಾಯಿಗಳ ಸಾಲವನ್ನು ಮನ್ನಾ ಮಾಡಿತು, ಇನ್ನೊಂದೆಡೆ ಬಡವರು ಆತ್ಮಹತ್ಯೆ ಮಾಡುತ್ತಿರುವ ವಿರೋಧಾಭಾಸದ ಚಿತ್ರಣವಿದೆ, ಎಂದು ಹೇಳಿದರು. ರಾಜ್ಯ ಹಾಗೂ ಕೇಂದ್ರಸರಕಾರಗಳು ಜನರಿಗೆ ಮೋಸ ಮಾಡಿವೆ. ಭಾಜಪ ದಲಿತ ವಿರೋಧಿಯಾಗಿದೆ ಹಾಗೂ ಸಮಾಜವಾದಿ ಪಕ್ಷ ಅಪರಾಧಿಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಉತ್ತರಪ್ರದೇಶದ ಚುನಾವಣೆಯ ಮೊದಲು ರಾಜಕೀಯ ಲಾಭಕ್ಕಾಗಿ ಭಾಜಪ ಮತ್ತು ಸಮಜವಾದಿ ಪಕ್ಷಗಳು ಗಲಭೆ ಎಬ್ಬಿಸುವ ಸಾಧ್ಯತೆಯೂ ಇದೆ. ಬಸಪ ಅಧಿಕಾರಕ್ಕೆ ಬಂದರೆ ರಾಜ್ಯ ದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲಾಗುವುದು, ಎಂದರು.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸರಕಾರದ ಪರಾಜಯವನ್ನು ಮುಚ್ಚಿಡಲು ಸರಕಾರ ಪಾಕಿಸ್ತಾನದೊಂದಿಗೆ ಯುದ್ಧ ಮಾಡುವುದು ! - ಮಾಯಾವತಿ