ಸೇನೆಯಲ್ಲಿ ಸುಮಾರು ೫೦ ನಕಲಿ ಸೈನಿಕರ ಭರ್ತಿ ಆಗಿರುವುದು ಬಹಿರಂಗ !

ಈ ನಕಲಿ ಸೈನಿಕರ ಮೂಲಕ ಭಯೋತ್ಪಾದಕರು ಒಳಗೆ ನುಸುಳಿರಲು ಸಾಧ್ಯವಿದೆಯಲ್ಲವೇ ?
ಇಂತಹ ಅಕ್ಷಮ್ಯ ನಿಷ್ಕಾಳಜಿಯನ್ನು ತೋರಿಸಿ ದೇಶದ ಸುರಕ್ಷೆಯನ್ನು ಅಪಾಯಕ್ಕೆ ಸಿಲುಕಿಸುವ ಸೈನ್ಯದ ಜವಾಬ್ದಾರಿಯುತ ಅಧಿಕಾರಿಗಳ ಮೇಲೆ ಸರಕಾರವು ಕಠಿಣ ಕ್ರಮ ಜರುಗಿಸಿ ಅವರನ್ನು ಜೈಲಿಗೆ ಕಳುಹಿಸುವುದೇ ?
ಭ್ರಷ್ಟಾಚಾರದಿಂದ ಕಲುಷಿತಗೊಂಡ ಭಾರತೀಯ ಸೈನ್ಯ !
ನಾಸಿಕ : ನಕಲಿ ಕಾಗದಪತ್ರಗಳ ಆಧಾರದಲ್ಲಿ ಏಜೆಂಟರ ಮೂಲಕ ಸೈನ್ಯದಲ್ಲಿ ನಕಲಿ ಸೈನಿಕರು ಭರ್ತಿಗೊಳಿಸುವವರ ಆಟ ಬಯಲಾಗಿದೆ. ದೆಹಲಿಯಿಂದ ನಡೆಯುವ ಕಾನೂನುಬಾಹಿರ ಕ್ರಮಗಳಿಂದ ಸುಮಾರು ೪೦ ರಿಂದ ೫೦ ನಕಲಿ ಸೈನಿಕರು ಸೈನ್ಯದಲ್ಲಿ ಪ್ರವೇಶ ಪಡೆದಿರುವ ವಿವರ ದೊರಕಿದೆ
.ಈ ಪ್ರಕರಣದಲ್ಲಿ ಸೈನ್ಯದ ಸಿಪಾಯಿ ಮತ್ತು ೩ ಜನ ಅರ್ಜಿದಾರರು ಹೀಗೆ ನಾಲ್ಕು ಜನರನ್ನು ಬಂಧಿಸಲಾಗಿದೆ. ಇಬ್ಬರು ಏಜೆಂಟರನ್ನು ನಾಸಿಕ ಪೊಲೀಸರು ವಶಕ್ಕೆ ಪಡೆದಿದ್ದಾರೆ.

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸೇನೆಯಲ್ಲಿ ಸುಮಾರು ೫೦ ನಕಲಿ ಸೈನಿಕರ ಭರ್ತಿ ಆಗಿರುವುದು ಬಹಿರಂಗ !