ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !

ಸ್ವಾತಂತ್ರ್ಯವೀರ ಸಾವರಕರರ ಜೀವನವನ್ನು ನೆನಪಿಸುವ ಲೇಖನಮಾಲೆ !
ಮಡಗಾಂವ್ ಸ್ಫೋಟ ಪ್ರಕರಣದಲ್ಲಿ ನಿರಪರಾಧಿಗಳೆಂದು
ಬಿಡುಗಡೆಯಾದ ಸನಾತನದ ಸಾಧಕರ ಹಾಗೂ ಅವರ ಕುಟುಂಬದವರ ಭೀಕರ ಅನುಭವ !
೨೦೦೯ ರಲ್ಲಿ ಮಡಗಾಂವ್‌ನಲ್ಲಿ ಒಂದು ವಾಹನದಲ್ಲಿ ಸ್ಫೋಟವಾಗಿ ಅದರಲ್ಲಿ ಸನಾತನ ಸಂಸ್ಥೆಯ ಇಬ್ಬರು ಸಾಧಕರು ಮೃತಪಟ್ಟರು. ಹೀಗಿದ್ದರೂ ಸನಾತನ ಸಂಸ್ಥೆಯ ಅಪಕೀರ್ತಿಯನ್ನು ಮಾಡಲು ಕಾಂಗ್ರೆಸ್ಸಿನ ತಾಳಕ್ಕನುಸಾರ ಕುಣಿಯುವ ಸೂತ್ರದ ಗೊಂಬೆಗಳಂತೆ ಆರಕ್ಷಕರು ಮತ್ತು ಪ್ರಸಾರಮಾಧ್ಯಮಗಳು ಯಾವುದೇ ಮುನ್ಸೂಚನೆಯನ್ನು ನೀಡದೇ ಸನಾತನದ ಸಾಧಕರನ್ನು ಬಂಧಿಸುವುದು, ಅವರ ಮೇಲೆ ಹೇರಿದ ಅನೇಕ ತೊಂದರೆದಾಯಕ ಕಲಂಗಳು, ಸುಳ್ಳು ಸಾಕ್ಷಿದಾರರು ಹಾಗೂ ಸುಳ್ಳು ಪುರಾವೆಗಳು, ಸಾಧಕರಿಗೆ ನೀಡಿದ ಅಸಹನೀಯ ಶಾರೀರಿಕ ಹಾಗೂ ಮಾನಸಿಕ ಹಿಂಸೆ, ಸಾಧಕರ ಕುಟುಂಬದವರಿಗೆ ನೀಡಿದ ಕಿರುಕುಳ ಮುಂತಾದ ಯಾತನೆಗಳ ಮಾಲಿಕೆಯನ್ನು ಇಲ್ಲಿ ನೀಡುತ್ತಿದ್ದೇವೆ.
ಸಂಕಲನಕಾರರು : ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆ
.................................................................................................................................................
ಭದ್ರವಾದ ಸೆರೆಮನೆಯಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟದಿರುವ ಸರಕಾರದ ಲಂಚಕೋರ ಪ್ರತಿಬಂಧಕ ವಿಭಾಗವು ಸಮಾಜದಲ್ಲಿನ ಭ್ರಷ್ಟಾಚಾರವನ್ನು ಎಂದಾದರೂ ತಡೆಗಟ್ಟಬಹುದೇ ?
ಈ ವಿಭಾಗದಲ್ಲಿನ ಅಧಿಕಾರಿಗಳ ವೇತನಕ್ಕಾಗಿ ಜನತೆಯ ಕೋಟಿಗಟ್ಟಲೆ ರೂಪಾಯಿಗಳನ್ನು ಏಕೆ ಖರ್ಚು ಮಾಡಬೇಕು ? 
- (ಪರಾತ್ಪರ ಗುರು) ಡಾ. ಆಠವಲೆ
...................................................................................................................................................
ಸಾಮಾನ್ಯಜನತೆಯು ಬೆವರು ಸುರಿಸಿ ಗಳಿಸಿದ ಹಣದಿಂದಲೇ ಕೆಲಸಗಳ, ವ್ಯಸನಿ, ಗೂಂಡಾ ಪ್ರವೃತ್ತಿಯ ಅಧಿಕಾರಿಗಳನ್ನು ಪೋಷಿಸ ಲಾಗುವುದರಿಂದ ಅವರನ್ನು ತಕ್ಷಣ ಅಮಾನತುಗೊಳಿಸಿ !
- (ಪರಾತ್ಪರ ಗುರು) ಡಾ. ಆಠವಲೆ
..................................................................................................................................................
ಅಪರಾಧವನ್ನು ಮಾಡಿದ ಕೈದಿಗಳಲ್ಲಿ ಅಪರಾಧಿ ವೃತ್ತಿಯನ್ನು ನಾಶಮಾಡಿ ಅವರನ್ನು ಉತ್ತಮ ವ್ಯಕ್ತಿಯನ್ನಾಗಿಸಿ ಬದುಕಲು ಕಲಿಸುವ ಜವಾಬ್ದಾರಿ ತಮ್ಮ ಮೇಲಿದೆಯೆಂಬುದನ್ನು ಮರೆತಿರುವ ಸರ್ವಪಕ್ಷೀಯ ರಾಜಕಾರಣಿಗಳು ಮತ್ತು ಪೊಲೀಸರು !
- (ಪರಾತ್ಪರ ಗುರು) ಡಾ. ಆಠವಲೆ
................................................................................................................................................. 
ಸೆರೆಮೆನೆಯೆಂದರೆ ಭೂಲೋಕದಲ್ಲಿರುವ ನರಕ !
೭. ಕಾರಾಗೃಹದಲ್ಲಿನ ಭ್ರಷ್ಟಾಚಾರಿ ಅಧಿಕಾರಿ
೭ ಅ. ಹಣಕ್ಕಾಗಿ  ಅತಿಯಾಸೆ ಪಡುವ  ಅಧಿಕಾರಿ
೭ ಅ ೧. ಶ್ರೀ. ಧನಂಜಯ ಅಷ್ಟೇಕರ್
೭ ಅ ೧ ಆ. ಅಧಿಕಾರಿಗಳು ಆಕಸ್ಮಿಕ ದಾಳಿ ಮಾಡಿದಾಗ ಕಾನೂನು ಬಾಹಿರ ವಸ್ತು ಕಂಡು ಬಂದರೆ ಕೆಲಸದಿಂದ ಅಮಾನತುಗೊಳಿಸುವ ಶಿಕ್ಷೆ ಇರುವುದರಿಂದ ಇಂತಹ ಘಟನೆಯನ್ನು ಅಲ್ಲೇ ಮುಚ್ಚಿ ಹಾಕುವುದು : ಸೆರೆಮನೆಯಲ್ಲಿ ನಡೆಯುವ ಕಾನೂನುಬಾಹಿರ ವಸ್ತುಗಳ ಉಪಯೋಗವು ಐ.ಜಿ.ಪಿ.ಯ (ಇನ್ಸ್‌ಪೆಕ್ಟರ್ ಜನರಲ್ ಆಫ್ ಪ್ರಿಝನ್ಸ್‌ಗಳ) ಅಧಿಕಾರ ಕ್ಷೇತ್ರದಲ್ಲಿ ಬರುತ್ತದೆ. ಅವರು ದಾಳಿ ನಡೆಸಿದಾಗ ಒಂದುವೇಳೆ ಕಾನೂನುಬಾಹಿರ ವಸ್ತು ಸಿಕ್ಕರೆ, ಅದನ್ನು ಸೀಲ್ ಮಾಡಲಾಗುತ್ತದೆ. ನಂತರ ಅದರ ವಿಭಾಗ ಅಂತರ್ಗತ ವಿಚಾರಣೆ ಮಾಡಲಾಗುತ್ತದೆ. ಈ ವಸ್ತು ಸೆರೆಮನೆಗೆ ಯಾವಾಗ ಬಂತು. ಆ ಸಮಯದಲ್ಲಿ ಯಾರು ಕೆಲಸದಲ್ಲಿದ್ದರು, ಎಂಬುದರ ವಿಚಾರಣೆಯಾಗುತ್ತದೆ ಮತ್ತು ಅವರನ್ನು ಅಮಾನತುಗೊಳಿಸಲಾಗುತ್ತದೆ. ಇದನ್ನು ತಪ್ಪಿಸಲು ಕೆಳದರ್ಜೆಯಿಂದ ಹಿಡಿದು ಮೇಲ್ದರ್ಜೆಯ ವರೆಗಿನ ಎಲ್ಲ ಅಧಿಕಾರಿಗಳು ಇಂತಹ ಘಟನೆಗಳನ್ನು ಅಲ್ಲಲ್ಲೇ ಮುಚ್ಚಿ ಹಾಕುತ್ತಾರೆ. ಆದುದರಿಂದ ಈ ವಿಷಯ ಯಾವಾಗಲೂ ಐ.ಜಿ.ಪಿ. (ಇನ್ಸ್‌ಪೆಕ್ಟರ್ ಜನರಲ್ ಆಫ್ ಪ್ರಿಝನ್ಸ್)ಯವರೆಗೆ ತಲುಪುವುದೇ ಇಲ್ಲ.
೭ ಅ ೧ ಇ. ಸಂಚಾರಿವಾಣಿಗಳಂತಹ ವಸ್ತುಗಳನ್ನು ಕೈದಿಗಳ ವರೆಗೆ ತಲುಪಿಸಲು ಕಾವಲುಗಾರರು ಅವನಿಂದ ಮತ್ತು ಅವನ ಸಂಬಂಧಿಕರಿಂದ ಹಣವನ್ನು ಪಡೆಯುವುದು : ಸೆರೆಮನೆಯಲ್ಲಿರುವ ಕೈದಿಗಳಲ್ಲಿ ಸಂಚಾರಿವಾಣಿಯ ಉಪಕರಣವಿರುತ್ತದೆ. ಯಾರಿಗಾದರೊಬ್ಬನಿಗೆ ಒಂದು ವಸ್ತು ಬೇಕಾಗಿದ್ದರೆ, ಅವನು ಆ ವಸ್ತುವನ್ನು ತರಲು ತನ್ನ ಮನೆಯವರನ್ನು ಸಂಪರ್ಕಿಸುತ್ತಾನೆ ಮತ್ತು ಸೆರೆಮನೆಯ ಬಾಗಿಲ ಬಳಿ ಇರುವ  ಪೊಲೀಸರೊಂದಿಗೆ ನನ್ನ ಒಪ್ಪಂದವಾಗಿದೆ. ಅವನಿಗೆ ೧ ಸಾವಿರ ರೂಪಾಯಿಗಳನ್ನು ಕೊಡು ಮತ್ತು ವಸ್ತುವನ್ನು ಒಳಗಡೆ ಕಳುಹಿಸಿ, ಎಂದು ಹೇಳುತ್ತಾನೆ. ಅವನೊಂದಿಗಿರುವ ರಕ್ಷಣಾ ಅಧಿಕಾರಿಗೆ ಇಷ್ಟರಲ್ಲಿ ಸಮಾಧಾನವಾಗುವುದಿಲ್ಲ. ಅವನಿಗೆ ಎರಡು ಕಡೆಗಳಿಂದ ಹಣ ಬೇಕಾಗಿರುತ್ತದೆ. ಎರಡೂ ಕಡೆಗಳಿಂದ ಹಣ ಸಿಕ್ಕರೆ ಮಾತ್ರ ಅವನು ಆ ವಸ್ತುವನ್ನು ಒಳಗೆ ಕಳುಹಿಸುತ್ತಾನೆ. ಹೊರಗಿನಿಂದ ಸಂಚಾರಿವಾಣಿಯ ಉಪಕರಣವನ್ನು ಒಳಗೆ ಕಳುಹಿಸಲು ೨ ಸಾವಿರ ರೂಪಾಯಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ಹೊರಗಿನಿಂದ ತನಗಾಗಿ ಸಂಚಾರಿವಾಣಿಯ ಉಪಕರಣವನ್ನು ತರಲು ಯಾರೂ ಇಲ್ಲದಿದ್ದರೂ ಅವನಿಗೆ ಸಂಚಾರವಾಣಿ ಉಪಕರಣ ಅಥವಾ ಇತರ ವಸ್ತು ಬೇಕಾಗಿದ್ದಲ್ಲಿ, ಅದನ್ನು ಖರೀದಿಸಿ ತರಲು ಬೇರೆ ಮತ್ತು ಒಳಗೆ ತರಲು ಬೇರೆ ಹಣವನ್ನು ಕೈದಿಗಳಿಂದ ತೆಗೆದುಕೊಳ್ಳಲಾಗುತ್ತದೆ. ನನಗೆ ಸಂಚಾರವಾಣಿ ಉಪಕರಣ ಬೇಕಾಗಿದೆ, ಎಂದು ಅಧಿಕಾರಿಗೆ ಹೇಳಿದಾಗ ೩ ಸಾವಿರ ರೂಪಾಯಿಗಳ ಸಂಚಾರಿವಾಣಿ ಉಪಕರಣಕ್ಕಾಗಿ ೫ ಸಾವಿರ ರೂಪಾಯಿಗಳು ಮತ್ತು ಅದನ್ನು ಒಳಗೆ ತರಲು ಇನ್ನೂ ೧ ಸಾವಿರ ರೂಪಾಯಿಗಳು ಹೀಗೆ ಒಟ್ಟು ೬ ಸಾವಿರ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ಕೆಲವು ಕೈದಿಗಳು ಸಂಬಂಧಿಕರಿಗೆ ರಕ್ಷಣಾ ಅಧಿಕಾರಿಯ ಕ್ರಮಾಂಕವನ್ನು ಕೊಡುತ್ತಾರೆ ಮತ್ತು ಅವರಿಗೆ ಹಣವನ್ನು ಕೊಟ್ಟ ನಂತರ ಆ ಅಧಿಕಾರಿಯು ಆ ವಸ್ತುವನ್ನು ಕೈದಿಗಳಿಗೆ ತಂದು ಕೊಡುತ್ತಾರೆ. ಅದಕ್ಕಾಗಿ ಅವರಿಗೆ ೫೦೦ ರಿಂದ ೧ ಸಾವಿರ ರೂಪಾಯಿಗಳನ್ನು ಕೊಡಬೇಕಾಗುತ್ತದೆ. ನನ್ನ ಕೊಠಡಿಯಲ್ಲಿ ೨-೩ ಕೈದಿಗಳು ಇದೇ ರೀತಿ ಸಾಮಾನುಗಳನ್ನು ತರಿಸುತ್ತಿದ್ದರು.
೭ ಅ ೧ ಈ. ಸೆರೆಮನೆಯಲ್ಲಿ ಹಣದ ಪ್ರಭಾವದಿಂದ ಮೃತ್ಯುವನ್ನೂ ಖರೀದಿಸಬಹುದು ! : ಸೆರೆಮನೆಯಲ್ಲಿ ಹಣ ಮಾತನಾಡುತ್ತದೆ ಎಂದು ಹೇಳುತ್ತಾರೆ. ಹಣಕ್ಕಾಗಿ ಜೀವ ಕೊಡುವ-ತೆಗೆದುಕೊಳ್ಳುವ ವಿಷಯ ಅಲ್ಲಿ ನಡೆಯುತ್ತದೆ. ಯಾರ ಬಳಿ ಹೆಚ್ಚು ಹಣವಿರುವುದೋ, ಅವರು ಹಣದ ಬಲದಲ್ಲಿ ಏನನ್ನೂ ಮಾಡಬಹುದು. ಸೆರೆಮನೆಯು ಎಂತಹ ಒಂದು ವ್ಯವಸ್ಥೆಯಾಗಿದೆಯೆಂದರೆ ಅದು ಮಾರಾಟವೇ ಆಗಿದೆ. ೨೦೦೯ ರಲ್ಲಿ ನಮ್ಮನ್ನು ಬಂಧಿಸಿದರು. ೨೦೧೦ ರಲ್ಲಿ ಅಲ್ಲಿರುವ ವಿದೇಶಿ ಕೈದಿಗೆ ಕೆಲವು ದಿನಗಳ ನಂತರ ತನ್ನ ಬಿಡುಗಡೆಯಾಗಲಿದೆ ಎಂಬುದು ತಿಳಿಯಿತು. ಆದರೆ ಸೆರೆಮನೆಯ ಹೊರಗಡೆ ನಡೆದಂತಹ ಖಟ್ಲೆಗನುಸಾರ ಅವನಿಗೆ ಇನ್ನೂ ೧೦ ವರ್ಷಗಳ ಶಿಕ್ಷೆಯಾಗುವುದಿತ್ತು. ಹೊರಗಡೆಯ ನಿಯಮಗಳು ಕಟ್ಟುನಿಟ್ಟಾ ಗಿರುತ್ತವೆ, ಎಂದು ಅವನಿಗೆ ತಿಳಿದಿತ್ತು. ಅವನಲ್ಲಿ ಬಹಳಷ್ಟು ಹಣವಿತ್ತು. ಅವನು ಆತ್ಮಹತ್ಯೆ ಮಾಡಿಕೊಳ್ಳುವ ವಿಚಾರವನ್ನು ಮಾಡಿದನು. ಸೆರೆಮನೆಯ ಅಧಿಕಾರಿಗೆ ಹಣವನ್ನು ಕೊಟ್ಟು ಅವನು ನಿದ್ರೆಯ ೧೦೦ ಮಾತ್ರೆಗಳನ್ನು ತರಿಸಿಕೊಂಡನು.
ನಾನು ಅವನ ಪಕ್ಕದ ಸೆಲ್‌ನಲ್ಲಿ ಇರುತ್ತಿದೆನು. ಅವನು ಕಾವಲುಗಾರನಿಗೆ ನಾನು ಮಾತ್ರೆಯನ್ನು ತೆಗೆದುಕೊಂಡ ನಂತರ ಪೂರ್ತಿ ಸಾಯುವವರೆಗೆ ಯಾರೂ ಬಾಗಿಲನ್ನು ತೆರೆಯಬಾರದು ಎಂದು ಹೇಳಿಟ್ಟಿದ್ದನು. ರಾತ್ರಿ ೧೦-೧೧ ಗಂಟೆಯವರೆಗೆ ಎಲ್ಲರೂ ಮಲಗಿದರು. ಒಮ್ಮಿಂದೊಮ್ಮೆಲೆ ರಾತ್ರಿ ಒಂದೂವರೆಗೆ ಸೆಲ್‌ನ ಬಾಗಿಲನ್ನು ಬಡಿಯುವ ಶಬ್ದ ಕೇಳಿಸಿತು. ಅವನು ಎಲ್ಲ ಮಾತ್ರೆಗಳನ್ನು ನುಂಗಿ ಪ್ರಜ್ಞೆ ತಪ್ಪಿ ಬಿದ್ದಿದ್ದನು. ಅವನ ಕೊಠಡಿಯಲ್ಲಿರುವ ಕೈದಿಗಳು ಬಾಗಿಲನ್ನು ತಟ್ಟಲು ಪ್ರಾರಂಭಿಸಿದರು. ಇವನನ್ನು ಎತ್ತಿಕೊಂಡು ಹೋಗಿ, ಇಲ್ಲದಿದ್ದರೆ ನಮ್ಮ ಮೇಲೆ ತಪ್ಪು ಬರುತ್ತದೆ, ಎಂದು ಹೇಳುತ್ತಿದ್ದರು; ಆದರೆ ಅವನು ಕಾವಲುಗಾರರಿಗೆ ಮೊದಲೇ ಹೇಳಿದುದರಿಂದ ಯಾರೂ ಬರಲಿಲ್ಲ. ಎರಡು ಗಂಟೆಗಳ ಕಾಲ ಇತರ ಕೈದಿಗಳು ಆ ಸೆಲ್‌ನ ಬಾಗಿಲನ್ನು ತಟ್ಟುತ್ತಿದ್ದರು. ಎರಡು ಗಂಟೆಗಳ ನಂತರ ಸೆರೆಮನೆಯ ಅಧಿಕಾರಿಯು ಬಂದರು ಮತ್ತು ಅವನನ್ನು ಎತ್ತಿಕೊಂಡು ಹೋದರು.
ಇದೆಲ್ಲವೂ ಇಲ್ಲಿಗೇ ಮುಗಿಯಲಿಲ್ಲ; ಏಕೆಂದರೆ ಆ ಕೈದಿಯು ವಿದೇಶದವನಾಗಿದ್ದನು. ಅವನ ದೂತವಾಸದ ಅಧಿಕಾರಿಗಳು ಬಂದು ಮೃತ್ಯುವಿಗೆ ಕಾರಣವೇನು ? ಎಂದು ವಿಚಾರಣೆ ಮಾಡಿದರು. ಸೆರೆಮನೆಯ ಹಿರಿಯ ಅಧಿಕಾರಿಗಳು, ಅವನ ಮೃತ್ಯು ನೈಸರ್ಗಿಕವಾಗಿ ಆಗಿದೆ ಎಂದು ಹೇಳಿದರು ? ಎಲ್ಲ ವ್ಯವಹಾರವು ಹಣದ ಬಲದಲ್ಲಿ ನಡೆಯುತ್ತದೆ.
೭ ಅ ೧ ಉ. ಓರ್ವ ಕೈದಿಗೆ ಹೊಡೆಯಲು ಇತರ ಕೈದಿಗಳು ಸೆರೆ ಮನೆಯ ಅಧಿಕಾರಿಗೆ ಲಂಚ ಕೊಡುವುದು :
ಯಾರಾದರೊಬ್ಬ ಕೈದಿಗೆ ಹೊಡೆಯುವುದಿದ್ದರೆ, ಸೆರೆಮನೆಯಲ್ಲಿ ಯಾವನಾದರೊಬ್ಬ ಅಧಿಕಾರಿಗೆ ಹಣವನ್ನು ಕೊಟ್ಟು ಅವನನ್ನು ಉಪಯೋಗಿಸಲು ಸಾಧ್ಯವಾಗುತ್ತದೆ. ನನ್ನ ಕೊಠಡಿಯಲ್ಲಿನ ಕೈದಿಗಳು ಪಕ್ಕದ ಕೊಠಡಿಯಲ್ಲಿರುವ ಒಬ್ಬ ಡಾನ್‌ಗೆ ಹೊಡೆಯುವ ಆಯೋಜನೆಯನ್ನು ಮಾಡಿದರು. ಅದಕ್ಕಾಗಿ ಅವರು ೧೦ ಸಾವಿರ ರೂಪಾಯಿಗಳನ್ನು ಜಮೆ ಮಾಡಿ ಕೆಲಸದ ಅಧಿಕಾರಿಗೆ ನೀಡಿದರು. ಮರುದಿನ ಬೆಳಗ್ಗೆ ೬ ಗಂಟೆಗೆ ಗಂಟೆ ಬಾರಿಸಿದಾಗ ೧೦ ರಿಂದ ೧೨ ಕೈದಿಗಳು ಗಂಟೆಯನ್ನು ಬಾರಿಸುವ ಕಬ್ಬಿಣದ ಕೋಲಿನಿಂದ ಅವನಿಗೆ ಬಹಳ ಹೊಡೆದರು. ಅದರ ನಂತರ ಮೇಲಿನ ಮಹಡಿಯಲ್ಲಿರುವ ಕೈದಿಗಳಿಗೂ ಡಾನ್‌ಗೆ ಹೊಡೆಯುವುದಿತ್ತು. ಅವರು ಬೇರೆ ಅಧಿಕಾರಿಗೆ ಹಣವನ್ನು ನೀಡಿ ಸಿದ್ಧಪಡಿಸಿದರು. ರಕ್ಷಣೆಗಾಗಿ ಆ ಡಾನ್‌ನನ್ನು ದಿನವಿಡಿ ಕೀಲಿ ಹಾಕಿ ಒಳಗಡೆ ಕೂಡಿಟ್ಟಿದ್ದರು. ಕೇವಲ ಭೋಜನ ಮತ್ತು ಚಹಾ ಕೊಡಲು ಕೀಲಿಯನ್ನು ತೆಗೆಯಲಾಗುತ್ತಿತ್ತು. ಎರಡನೇ ದಿನ ಒಬ್ಬ ಕೈದಿಯು ಅವನಿಗಾಗಿ ಭೋಜನ ತೆಗೆದುಕೊಂಡು ಹೋಗುವಾಗ ಭೋಜನಗೃಹದಲ್ಲಿನ ದೊಡ್ಡ ಚೂರಿಯನ್ನು ತೆಗೆದುಕೊಂಡು ಹೋದನು ಮತ್ತು ಅವನ ಕೊಠಡಿಯ ಬಾಗಿಲನ್ನು ತೆಗೆದು ತಕ್ಷಣವೇ ಅವನ ಮೇಲೆ ಆಕ್ರಮಣ ಮಾಡಲು ಧಾವಿಸಿದನು. ಆ ಡಾನ್ ಗಾಯಗೊಂಡು ಧಾವಿಸುತ್ತಾ ನಮ್ಮ ಕೊಠಡಿಗೆ ಬಂದು ನನ್ನ ಹಾಸಿಗೆಯ ಮೇಲೆ  ಬಿದ್ದನು. ಸೆರೆಮನೆಯಲ್ಲಿ ಅದು ನನ್ನ ಮೊದಲ ಅನುಭವವಾಗಿತ್ತು.
೭ ಆ. ಅಮಲು ಪದಾರ್ಥಗಳನ್ನು ಪೂರೈಸುವುದು
೭ ಆ ೧. ಶ್ರೀ. ಪ್ರಶಾಂತ ಅಷ್ಟೇಕರ್
೭ ಆ ೧ ಅ. ಸೆರೆಮನೆಯಲ್ಲಿ ಮಾದಕ ಪದಾರ್ಥಗಳ ಮಾರಾಟ ಮತ್ತು ಅವುಗಳನ್ನು ಉಪಯೋಗಿಸಲು ಅನುಮತಿ ನೀಡುವ ಸೆರೆಮನೆ ಅಧಿಕಾರಿ ಗಳ ಭ್ರಷ್ಟ ಆಡಳಿತ ! : ಸೆರೆಮನೆಯಲ್ಲಿ ಮಾದಕ ಪದಾರ್ಥಗಳನ್ನು ಮಾರಾಟ ಮಾಡುವ ಓರ್ವ ಕೈದಿಗೆ ಒಬ್ಬ ಸೆರೆಮನೆಯ ಅಧಿಕಾರಿಯು ತೊಂದರೆ ನೀಡಿದನು. ಅವನ ಒಳಸಂಚನ್ನು ಬೆಳಕಿಗೆ ತರಲು ಆ ಕೈದಿಯು ಚರಸ್, ಗಾಂಜಾ, ಮಧ್ಯದ ಬಾಟಲಿಗಳು, ಸಿಗರೇಟ್‌ಗಳಂತಹ ಎಲ್ಲ ವಸ್ತುಗಳನ್ನು ಸಂಗ್ರಹ ಮಾಡಿ ೪-೫ ಕೈದಿಗಳೊಂದಿಗೆ ಸೇರಿಕೊಂಡು ಅದರ ಚಿತ್ರೀಕರಣವನ್ನು ಮಾಡಿದನು ಮತ್ತು ವಾಹಿನಿಯಲ್ಲಿ ಅದರ ಪ್ರಸಾರ ಮಾಡಿದನು. ಪ್ರಸಾರಮಾಧ್ಯಮದಲ್ಲಿ ಇದರ ಬಗ್ಗೆ ದೊಡ್ಡ ಚರ್ಚೆಯಾಯಿತು. ಇದರ ವಿಚಾರಣೆ ನಡೆಯಿತು ಮತ್ತು ಸೆರೆಮನೆಯ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಲಾಯಿತು. ಯಾವ ಕೈದಿಯು ಈ ಪ್ರಕರಣವನ್ನು ಬೆಳಕಿಗೆ ತಂದಿದ್ದನೋ, ಅವನಿಗೆ ಇತರ ಕೈದಿಗಳು ಹೊಡೆದರು ಮತ್ತು ನಂತರ ಅವನು ಮಾನಸಿಕ ಉಪಚಾರ ಮಾಡಿಕೊಳ್ಳಬೇಕಾಯಿತು. ಹೀಗೆ ಬಹಳಷ್ಟು ಘಟನೆಗಳು ನಡೆಯುತ್ತವೆ.
ಚರಸ್ ಮತ್ತು ತಂಬಾಕು ತರುವಾಗ ಓರ್ವ ಕಾವಲುಗಾರನನ್ನು ಸಾಕ್ಷಿ ಸಹಿತ ಹಿಡಿಯಲಾಯಿತು. ಕಾಲಿಗೆ ‘ನಿ ಕ್ಯಾಪ್’ ಹಾಕಿಕೊಂಡು ಅದರಲ್ಲಿ ಚರಸ್‌ಅನ್ನು ಒಳಗಡೆ ತರಲಾಗುತ್ತಿತ್ತು. ಸದ್ಯ ಕಾವಲು ಹೆಚ್ಚಾಗಿರುವುದರಿಂದ ಈ ರೀತಿ ನಡೆಯುವುದಿಲ್ಲ, ಆದರೆ ಮೊದಲು ಹೀಗಾಗುತ್ತಿತ್ತು.
೭ ಆ ೧ ಆ. ಕೈದಿಗಳಿಗೆ ಸೆರೆಮನೆಯ ಅಧಿಕಾರಿಗಳಿಂದ ಪೂರ್ವಸೂಚನೆ ದೊರೆತುದರಿಂದ ಮುತ್ತಿಗೆ ಹಾಕಿದರೂ ಅಧಿಕಾರಿಗಳ ಕೈಗೆ ಏನೂ ಸಿಗದಿರುವುದು : ದಾಳಿ ಮಾಡಿದಾಗ ಸಂಬಂಧಿತ ಕೈದಿಗೆ ಶಿಕ್ಷೆಯಾಗುತ್ತದೆ. ಯಾವ ವಸ್ತು ದೊರೆಯುುತ್ತದೆಯೋ ಅದಕ್ಕನುಸಾರ ಶಿಕ್ಷೆಯ ಸಮಯಮಿತಿ ಅವಲಂಬಿಸಿರುತ್ತದೆ, ಉದಾ. ಬೀಡಿ ಅಥವಾ ತಂಬಾಕು ಇವುಗಳ ಪೈಕಿ ಯಾವುದು ಸಿಕ್ಕಿದರೂ, ೧೫ ದಿನಗಳ ಅಥವಾ ಒಂದು ತಿಂಗಳ ಸಮಯಮಿತಿ ಇರುತ್ತದೆ. ಈ ಶಿಕ್ಷೆ ಕೇವಲ ಸಾಮಾನ್ಯ ಕೈದಿಗಳಿಗಾಗಿ ಇರುತ್ತದೆ. ಅನೇಕ ಬಾರಿ ದಾಳಿ ಮಾಡಿದರೂ ಅಧಿಕಾರಿಗಳಿಗೆ ಏನೂ ಸಿಗುವುದಿಲ್ಲ. ದಾಳಿ ಮಾಡಿಲಿದ್ದಾರೆ ಎಂಬುದು ತಿಳಿದ ತಕ್ಷಣ ಕೈದಿಗಳು ಅಫೀಮು, ಗಾಂಜಾದಂತಹ ವಸ್ತುಗಳನ್ನು ಮುಚ್ಚಿಡುತ್ತಾರೆ.   ಆದುದರಿಂದ ಆ ವಸ್ತುಗಳು ಅವರಿಗೆ ಸಿಗುವುದಿಲ್ಲ ಮತ್ತು ಸಿಕ್ಕಿದರೂ ಸೀಲ್ ಮಾಡಿ ತೆಗೆದುಕೊಂಡು ಹೋಗುತ್ತಾರೆ. ಸಿಗರೇಟ್‌ಗಳ ಬಹಳಷ್ಟು ಪಾಕೀಟುಗಳು ಸಿಕ್ಕಿದರೆ, ಅವುಗಳನ್ನು ತೆಗೆದುಕೊಂಡು ಹೋಗುತ್ತಾರೆ.
೭ ಆ ೨. ಶ್ರೀ. ವಿನಯ ತಳೇಕರ್
೭ ಆ ೨ ಅ. ಚರಸ್ ಮತ್ತು ಗಾಂಜಾವನ್ನು ಸೆರೆಮನೆಗೆ ತರುವಲ್ಲಿ ಅಧಿಕಾರಿಗಳ ಕೈವಾಡವಿರುವುದು : ಚರಸ್ ಮತ್ತು ಗಾಂಜಾವನ್ನು ಸೆರೆಮನೆಗೆ ತರುವಲ್ಲಿ ಶೇ. ೯೦ ರಷ್ಟು ಸೆರೆಮನೆಯಲ್ಲಿನ ಅಧಿಕಾರಿಗಳ ಕೈವಾಡವಿರುತ್ತದೆ. ಇಂತಹ ಸಾಹಿತ್ಯಗಳ ಪೂರೈಕೆಯನ್ನು ಮಾಡುವವರು ವಿಶೇಷವಾಗಿ ಸೆರೆಮನೆಯ ಕಾವಲುಗಾರರಾಗಿರುತ್ತಾರೆ. ೫-೬ ಕಾವಲುಗಾರರಿರುತ್ತಾರೆ. ಅವರಲ್ಲೂ ಕೆಲವರು ವೈಶಿಷ್ಯಪೂರ್ಣವಾಗಿರುತ್ತಾರೆ. ಅವರು ಕೇವಲ ಗಾಂಜಾವನ್ನೇ ತರುತ್ತಾರೆ. ಹೊಸ ಕೈದಿ ಬಂದರೆ ಮತ್ತು ಅವನಿಗೆ ಗಾಂಜಾ ಸೇವನೆ ಮಾಡುವ ಚಟವಿದ್ದರೆ ಅವರು ಅವನಿಗೆ ತಂದು ಕೊಡುವುದಿಲ್ಲ. ಅವರಿಗೂ ಸೆರೆಮನೆಯಲ್ಲಿ ಪ್ರತಿನಿಧಿ (ಏಜೆಂಟ್) ಇರುತ್ತಾರೆ. ಕಾವಲುಗಾರರು ಆ ಪ್ರತಿನಿಧಿ ಇರುವ ಕೈದಿಗಳಲ್ಲೇ ತಂದು ಕೊಡುತ್ತಾರೆ.
ಸನಾತನವು ಭ್ರಷ್ಟಾಚಾರವನ್ನು
ವಿರೋಧಿಸುವುದರಿಂದ ಸೆರೆಮನೆಯ
ಅಧಿಕಾರಿ ಸನಾತನದ ಸಾಧಕರಿಗೆ ಭಯ ಪಡುವುದು
ನಾನು ಸೆರೆಮನೆಯ ಭೋಜನಗೃಹಕ್ಕೆ ಹೋಗುವ ಮೊದಲು ಕಮಿಷನ್ ಕೊಡುವುದು-ತೆಗೆದುಕೊಳ್ಳುವುದು ನಡೆಯುತ್ತಿತ್ತು. ನಾವು ಸನಾತನದ ಸಾಧಕರಾಗಿದ್ದೇವೆ ಮತ್ತು ಸನಾತನವು ಭ್ರಷ್ಟಾಚಾರವನ್ನು ವಿರೋಧಿಸುತ್ತದೆ ಎಂಬುದು ಎಲ್ಲರಿಗೂ ಗೊತ್ತಿತ್ತು. ಆದುದರಿಂದ ಆ ಜನರು ನನಗೆ ಸ್ವಲ್ಪ ಹೆದರುತ್ತಿದ್ದರು. ಅವರು ತಮ್ಮೊಳಗಿನ ವಿಷಯವನ್ನು ನನಗೆ ಹೇಳುತ್ತಿರಲಿಲ್ಲ. ಅವರು ನನ್ನೊಂದಿಗೆ ಇನ್ನೂ ಇಬ್ಬರನ್ನು ನೇಮಿಸಿದ್ದರು. ಮಹತ್ವದ ಕೆಲಸಗಳನ್ನು ಅವರು ನೋಡಿಕೊಳ್ಳುತ್ತಿದ್ದರು ಮತ್ತು ಮೇಲುಮೇಲಿನ ವ್ಯವಹಾರವನ್ನು ನಾನು ನೋಡಿಕೊಳ್ಳುತ್ತಿದ್ದೆನು. ಇತರರಿಗೆ ಕಮಿಷನ್ ಕೊಡುವ-ತೆಗೆದುಕೊಳ್ಳುವ ಪ್ರಯತ್ನವಾಗುತ್ತಿತ್ತು; ಆದರೆ ನನ್ನೊಂದಿಗೆ ಹೀಗೆ ಎಂದೂ ನಡೆಯಲಿಲ್ಲ.
- ಶ್ರೀ. ಪ್ರಶಾಂತ ಜುವೇಕರ್

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಸನಾತನ ವಿರೋಧಿ ಷಡ್ಯಂತ್ರದಿಂದಾಗಿ ನಿರಪರಾಧಿ ಸಾಧಕರು ನೀಡಬೇಕಾಯಿತು ಅಗ್ನಿಪರೀಕ್ಷೆ !