ಇಬ್ಬರು ಭವಿಷ್ಯಕಾರರು ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ)ದ ಸ್ಥಾಪನೆಗೆ ಸಂಬಂಧಪಟ್ಟಂತೆ ಹೇಳಿರುವ ಮಾಹಿತಿ

ಇಬ್ಬರು ಭವಿಷ್ಯಕಾರರು ಪ.ಪೂ . ಡಾಕ್ಟರರ ಹೆಬ್ಬೆರಳ ಮೇಲಿನ ರೇಖೆಗಳನ್ನು ನೋಡಿ ‘ಇವರ ಭವಿಷ್ಯದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ಯೋಗವಿದೆ’, ಎಂದು ಹೇಳುವುದು
ನನಗೆ ನಾಡಿಶಾಸ್ತ್ರದ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಆ ಮಾಹಿತಿ ಪಡೆಯಲು ಮತ್ತು ಅದರ ಬಗ್ಗೆ ಸಂಶೋಧನೆ ಮಾಡಬೇಕೆಂದು ಸದ್ಗುರು (ಸೌ.) ಅಂಜಲಿ ಗಾಡಗೀಳರು ೩-೪ ಸಾಧಕರ ಜೊತೆಗೆ ಭವಿಷ್ಯವನ್ನು ಹೇಳುವ ಮುಂದಿನ ಇಬ್ಬರ ಬಳಿ ಹೋದರು.
೧. ಖ್ಯಾತ ಹಸ್ತರೇಖೆ ತಜ್ಞರಾದ ಕೆ.ಟಿ. ಬಾಲಾಮಣಿ, ಲಾಲಗುಡಿ, ತಿರುಚಿರಪಳ್ಳಿ, ತಮಿಳುನಾಡು.
೨. ಸಪ್ತರ್ಷಿ ಜೀವನಾಡಿವಾಚಕರಾದ ಪೂ. ಡಾ. ಓಂ ಉಲಗನಾಥನ್, ತಿರುವಣ್ಣಾಮಲೈ, ತಮಿಳುನಾಡು.
ಇವರಿಬ್ಬರೂ ಅವರ ಭವಿಷ್ಯದಲ್ಲಿ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಸ್ಥಾಪನೆಯ ಯೋಗವಿದೆ ಎಂದು ಹೇಳಿದರು.
-(ಪರಾತ್ಪರ ಗುರು) ಡಾ. ಆಠವಲೆ
(ನಾಡಿವಾಚನ ಮಾಡುವವರು ಸ್ತ್ರೀಯರ ಎಡಗೈಯ ಹೆಬ್ಬೆರಳಿನ ಅಚ್ಚನ್ನು ನೋಡಿ ಹಾಗೂ ಪುರುಷರ ಬಲಗೈ ಹೆಬ್ಬೆರಳಿನ ಅಚ್ಚನ್ನು ನೋಡಿ ಅದಕ್ಕನುಸಾರ ಆ ವ್ಯಕ್ತಿಯ ನಾಡಿಪಟ್ಟಿಯನ್ನು ಕಂಡುಹಿಡಿಯು ತ್ತಾರೆ. ಕೈಮೇಲಿನ ಇತರ ರೇಖೆಗಳು ಪ್ರತಿ ಆರು ತಿಂಗಳಿಗೊಮ್ಮೆ ಬದಲಾಗುತ್ತಿರುತ್ತವೆ; ಆದರೆ ಹೆಬ್ಬೆರಳಿನ ಮೇಲಿನ ರೇಖೆಗಳು ಹೆಚ್ಚಾಗಿ ಬದಲಾಗುವುದಿಲ್ಲ; ಆದ್ದರಿಂದ ಹೆಬ್ಬೆರಳಿನ ಅಚ್ಚನ್ನು ಹೆಚ್ಚಾಗಿ ಬಳಸು ತ್ತಾರೆ. - (ಸದ್ಗುರು) ಸೌ. ಅಂಜಲಿ ಗಾಡಗೀಳ)

ಸನಾತನ ಸಂಸ್ಥೆಯ ಮೇಲಿನ ನಿರ್ಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ಪೂ. ಡಾ. ಓಂ ಉಲಗನಾಥನ್ ಇವರ ಮಾಧ್ಯಮದಿಂದ ಮಹರ್ಷಿಗಳು ನೀಡಿದ ಉತ್ತರ
ಸನಾತನದ ಮೇಲೆ ನಿರ್ಬಂಧ ಬರುವುದು, ಸಾಧಕರನ್ನು ಸುಳ್ಳು ಆರೋಪಗಳಡಿ ವಿನಾಕಾರಣ ಹಿಂಸಿಸುವುದು, ಇವೇ ಮುಂತಾದ ಸಂಕಟಗಳಂತೂ ಮುಂದೆ ಎಲ್ಲಿಂದ ಎಲ್ಲಿಗೋ ಕಸದಂತೆ ಹಾರಿ ಹೋಗುವವು. ಇದಕ್ಕಿಂತ ಆಪತ್ಕಾಲದಲ್ಲಿ ಸಾಧಕರ ಪ್ರಾಣ ರಕ್ಷಣೆಯ ಕಡೆಗೆ ಗಮನ ಹರಿಸು ವುದು ಹೆಚ್ಚು ಮಹತ್ವದ್ದಾಗಿದೆ ಎಂದು ಮಹರ್ಷಿಗಳು ಹೇಳುವುದು
ಪ್ರಶ್ನೆ : ಪ್ರಸ್ತುತ ಸಮಾಜದಲ್ಲಿ ಕೆಲವು ಧರ್ಮದ್ರೋಹಿಗಳು, ರಾಷ್ಟ್ರದ್ರೋಹಿಗಳು ಹಾಗೂ ರಾಜಕಾರಣಿಗಳು ಇವರೆಲ್ಲರು ಪೊಲೀಸರು, ಆಡಳಿತ ಹಾಗೂ ನ್ಯಾಯಾಲಯಗಳ ಮೇಲೆ ಒತ್ತಡ ತಂದು ಸನಾತನದ ಮೇಲೆ ನಿರ್ಬಂಧವನ್ನು ಹೇರುವ ಷಡ್ಯಂತ್ರವನ್ನು ಬಹುದೊಡ್ಡ ಪ್ರಮಾಣದಲ್ಲಿ ರಚಿಸುತ್ತಿದ್ದಾರೆ. ಇದಕ್ಕೆ ಏನಾದರೂ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕಿದೆಯೇ ?
ಮಹರ್ಷಿಗಳ ಉತ್ತರ : ಏನೂ ಮಾಡಬೇಕಾಗಿಲ್ಲ. ಸನಾತನದ ಮೇಲೆ ನಿರ್ಬಂಧವನ್ನು ತರುವುದು ಅಥವಾ ಸಾಧಕರ ಮೇಲೆ ಸುಳ್ಳು ಆರೋಪಗಳನ್ನು ಹೇರಿ ವಿನಾಕಾರಣ ಹಿಂಸೆಗೊಳಪಡಿಸುವುದು ಹಾಗೆಯೇ ಸನಾತನದ ಜಾಲತಾಣಗಳನ್ನು ಹಾಗೂ ಇಮೇಲ್‌ಗಳನ್ನು ತಡೆಯುವುದು ಈ ಸಂಕಟಗಳಂತೂ ಮುಂದೆ ಎಲ್ಲಿಂದ ಎಲ್ಲಿಗೋ ಕಸದಂತೆ ಹಾರಿ ಹೋಗುವವು. ನಾವು ಆಪತ್ಕಾಲದಲ್ಲಿ ಸಾಧಕರ ಪ್ರಾಣವನ್ನು ಕಾಪಾಡಲು ನಿಜವಾದ ಪ್ರಯತ್ನಗಳನ್ನು ಮಾಡಬೇಕಾಗಿರುವುದು. ಈಗ ಮಾಡುತ್ತಿರುವ ವಿಧಿಗಳಿಂದಾಗಿ ಮೇಲೆ ಉಲ್ಲೆೀಖಿಸಿರುವ ಸಮಸ್ಯೆಗಳಿಗೆ ಖಂಡಿತ ಪರಿಹಾರ ಸಿಗುವುದು; ಆದರೆ ಈ ಎಲ್ಲ ವಿಧಿಗಳನ್ನು ಹೆಚ್ಚಾಗಿ ಸಾಧಕರ ಸುತ್ತಲೂ ವಜ್ರದಂತಹ ಕವಚವನ್ನು ನಿರ್ಮಿಸುವುದಕ್ಕಾಗಿ ಮಾಡಲಾಗುತ್ತಿದೆ. ಮುಂದೆ ಭಯಂಕರವಾದ ನೈಸರ್ಗಿಕ ಆಪತ್ತುಗಳು ಎದುರಾಗುವವು. ಪ್ರಳಯದಂತಹ ಆಪತ್ತುಗಳು ಬಂದಾಗ ಸಾಧಕರ ಮನೆಗಳಿಗೂ ಏನೂ ಆಗಬಾರದು ಎಂಬುದಕ್ಕಾಗಿಯೂ ನಾವು ಪ್ರಯತ್ನ ಮಾಡಬೇಕಾಗಿದೆ. ಈಗ ಸನಾತನದ ಮೇಲೆ ನಿರ್ಬಂಧ, ಸಾಧಕರ ಬಂಧನ ಇವೆಲ್ಲ ಸಂಕಟಗಳಿಗಿಂತ ಸಾಧಕರ ರಕ್ಷಣೆಯಾಗುವುದು ಹೆಚ್ಚು ಮಹತ್ವದ್ದಾಗಿದೆ.
- (ಸದ್ಗುರು) ಸೌ. ಅಂಜಲಿ ಗಾಡಗೀಳ, ಚೆನೈ, ತಮಿಳುನಾಡು. (೧೪.೭.೨೦೧೬, ಬೆಳಗ್ಗೆ ೮.೦೫)

೧. ಖ್ಯಾತ ಹಸ್ತರೇಖೆ ತಜ್ಞರಾದ ಕೆ. ಟಿ. ಬಾಲಾಮಣಿ
೨೬.೬.೨೦೧೬ ರಂದು ನುಡಿದ ಭವಿಷ್ಯದಲ್ಲಿ ಖ್ಯಾತ ಹಸ್ತರೇಖೆ ತಜ್ಞರಾದ ಕೆ.ಟಿ. ಬಾಲಾಮಣಿ ಇವರು ಹೀಗೆಂದರು, ಇವರ (ಪ.ಪೂ. ಡಾಕ್ಟರರ) ಜಾತಕ ಹಾಗೂ ಹಸ್ತರೇಖೆಗಳಲ್ಲಿ ಇವರು ನಿಶ್ಚಿತವಾಗಿಯೂ ರಾಮರಾಜ್ಯವನ್ನು ಸ್ಥಾಪಿಸಲಿದ್ದಾರೆ, ಎಂಬ ಯೋಗವಿದೆ. ಇವರ ಬಲಗೈಯ ಕಿರುಬೆರಳಿನ ಅಗ್ರಭಾಗದಲ್ಲಿ ಶಂಖವಿದ್ದರೆ ಬಲ ಹಾಗೂ ಎಡ ಕೈಗಳ ಉಳಿದ ಎಲ್ಲ ಬೆರಳುಗಳ ತುದಿಯಲ್ಲಿ ಚಕ್ರವಿದೆ. ಇದು, ಇವರ ಮೇಲೆ ಶ್ರೀವಿಷ್ಣುವಿನ ದೈವಿ ಕಟಾಕ್ಷವಿರುವುದರ ಲಕ್ಷಣವಾಗಿದೆ; ಆದ್ದರಿಂದಲೇ ಇವರ ಕಾರ್ಯವು ಅವತಾರಿ ಕಾರ್ಯವಾಗಿದೆ. (ಜನಸಾಮಾನ್ಯರ ಕೈಯಲ್ಲಿ ಒಂದು ದೈವಿ ಚಿಹ್ನೆ ಇರುತ್ತದೆ ಅಥವಾ ಬಹುತೇಕವಾಗಿ ಇರುವುದೇ ಇಲ್ಲ. - (ಸದ್ಗುರು) ಸೌ. ಅಂಜಲಿ ಗಾಡಗೀಳ) ಇವರ ಪೂರ್ಣ ಜೀವನವು ಸನಾತನ ಧರ್ಮರಾಜ್ಯದ ಸಂಕಲ್ಪವನ್ನು ಪೂರ್ಣಗೊಳಿಸುವುದಕ್ಕಾಗಿಯೇ ಮೀಸಲಾಗಿದೆ ಮತ್ತು ಅವರು ಸಾಧಕರಿಂದಲೂ ಅಂತಹ ಸಾಧನೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ. (ಹೀಗೆಯೇ ಇದೆ. - (ಸದ್ಗುರು) ಸೌ. ಅಂಜಲಿ ಗಾಡಗೀಳ) ಇವರ ಜಾತಕದಲ್ಲಿ ಶುಕ್ರನು ಹತ್ತನೇ ಸ್ಥಾನದಲ್ಲಿರುವುದರಿಂದ ಇಡೀ ಜಗತ್ತಿನಲ್ಲಿ ಇವರ ಆಶ್ರಮಗಳಾಗುವವು ಹಾಗೇ ಇವರ ಕೀರ್ತಿಯೂ ಇಡೀ ವಿಶ್ವದಲ್ಲಿ ಹರಡುವುದು. ಇವರ ದೇಹತ್ಯಾಗಕ್ಕೂ ಮೊದಲೇ ಹಿಂದೂ ರಾಷ್ಟ್ರವು (ಸನಾತನ ಧರ್ಮರಾಜ್ಯವು) ಬರುವುದು, ಎಂಬಂತಹ ಯೋಗಗಳು ಇವರ ಜಾತಕದಲ್ಲಿಯೂ, ಹಸ್ತರೇಖೆಗಳಲ್ಲಿಯೂ ಇವೆ.
೨. ಸಪ್ತರ್ಷಿ ನಾಡಿವಾಚಕರಾದ ಪೂ. ಡಾ. ಓಂ ಉಲಗನಾಥನ್
ಇವರು ಅನೇಕ ಸಲ ಹೀಗೆಂದಿದ್ದಾರೆ, ಮಹರ್ಷಿಗಳು ಪ.ಪೂ. ಡಾಕ್ಟರರ ಸನಾತನ ಧರ್ಮರಾಜ್ಯದ ಸ್ಥಾಪನೆಯ ಕಾರ್ಯದ ಬಗ್ಗೆ ಎಷ್ಟು ಬರೆದಿಟ್ಟಿದ್ದಾರೆಂದರೆ ಅದೆಲ್ಲವನ್ನೂ ಓದುವುದು ನಮಗೆ ಈ ಜನ್ಮದಲ್ಲಂತೂ ಸಾಧ್ಯವಿಲ್ಲ; ಏಕೆಂದರೆ ಈಗ ನನಗೆ ೬೬ ವರ್ಷ ವಯಸ್ಸಾಗಿದೆ. ಮಹರ್ಷಿ ಗಳು ಎಷ್ಟು ಹೇಳುತ್ತಾರೆ ಅಷ್ಟನ್ನೇ ಆರಿಸಿಕೊಂಡು ಓದಬೇಕಾಗಿದೆ ಹಾಗೂ ಅದರಂತೆ ಕಾರ್ಯ ಮಾಡಬೇಕಾಗಿದೆ.
೨ ಅ. ಪ.ಪೂ. ಡಾಕ್ಟರರ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯಕ್ಕೆ ಸಂಬಂಧಪಟ್ಟಂತೆ ಮಹರ್ಷಿಗಳು ನಾಡಿಶಾಸ್ತ್ರದಲ್ಲಿ ಬಹಳಷ್ಟು ಬರೆದಿದ್ದಾರೆ, ಆದ್ದರಿಂದ ನಾಡಿವಾಚನ ಮಾಡುತ್ತಿರುವಾಗ ಕೆಲವೊಮ್ಮೆ ಮಹರ್ಷಿಗಳು ‘ನೀವು ನನ್ನ ಬಳಿ ಇಷ್ಟು ತಡವಾಗಿ ಏಕೆ ಬಂದಿದ್ದೀರಿ’ ? ಎಂದು ನನಗೆ ಕೇಳುವುದು.
ಈ ಸಂದರ್ಭದಲ್ಲಿ ಮಹರ್ಷಿಗಳು ಆಗಾಗ ಹೇಳುತ್ತಾರೆ, ‘ನೀವು ನಮ್ಮ ಬಳಿ ಬರಲು ಬಹಳ ತಡ ಮಾಡಿದಿರಿ’. ನಂತರ ಹೀಗೂ ಎನ್ನುತ್ತಾರೆ, ‘ಇಲ್ಲ, ನೀವು ಸರಿಯಾದ ಸಮಯಕ್ಕೇ ನನ್ನ ಬಳಿ ಬಂದಿದ್ದೀರಿ’. ಈ ಬಗ್ಗೆ ಪ.ಪೂ. ಡಾಕ್ಟರರು ಮಹರ್ಷಿಗಳಲ್ಲಿ, ‘ನಾವು ನಿಮ್ಮ ಬಳಿ ಬರಲು ತಡವಾಗಲು ಕಾರಣವೇನು ?’ ಎಂದು ಪ್ರಶ್ನೆ ಕೇಳಿದ್ದರು. ಆಗ ಪೂ. ಡಾ. ಓಂ ಉಲಗನಾಥನ್ ಇವರು, ‘ಪ.ಪೂ. ಡಾಕ್ಟರರ ಆಧ್ಯಾತ್ಮಿಕ ಕಾರ್ಯವು ನಿಯೋಜನಾಬದ್ಧವಾಗಿರುವುದರಿಂದ ಅವರಿಂದ ಹೀಗಾಗಲು ಸಾಧ್ಯವಿಲ್ಲ. ಮಹರ್ಷಿಗಳು ಕೆಲವೊಮ್ಮೆ ಸರ್ವೇಸಾಮಾನ್ಯ ಮನುಷ್ಯರೊಂದಿಗೆ ಮಾತನಾಡುವಾಗ ಇಂತಹ ವಾಕ್ಯಗಳನ್ನು ತಮಾಷೆಗೆಂದು ನುಡಿಯುತ್ತಾರೆ. ಇದು ಅವುಗಳಲ್ಲಿನ ಒಂದು ವಾಕ್ಯವಾಗಿದೆ’ ಎಂದರು. ಆದರೆ ಮುಂದೆ ಅವರು ಹೀಗೂ ನುಡಿದರು, ನಾಡಿವಾಚನ ಮಾಡುತ್ತಿರುವಾಗ ಮಧ್ಯದಲ್ಲಿಯೇ ಯಾವಾಗಲಾದರೂ ಇದಕ್ಕೆ ಉತ್ತರ ಬಂದರೆ ಮಹರ್ಷಿಗಳು ಅದನ್ನು ಖಂಡಿತ ಹೇಳುವರು. ಸದ್ಯ ಇಷ್ಟೇ.
೨ ಆ. ಮಹರ್ಷಿಗಳ ಆಜ್ಞೆಯಂತೆ ಪ್ರವಾಸದ ಅಂತರ್ಗತ ದೇವತಾ ದರ್ಶನಕ್ಕಾಗಿ ಹಾಗೂ ಧರ್ಮಕಲ್ಯಾಣಕ್ಕೆ ಸಂಬಂಧಿಸಿದ ಹಲವಾರು ಕಾರಣಕ್ಕಾಗಿ ಪೃಥ್ವಿಯ ಮೇಲೆ ಸಂಚರಿಸುವುದರಿಂದಲೇ ಪುಣ್ಯಸಂಚಯ ವಾಗಿ ಹಿಂದೂ ರಾಷ್ಟ್ರವು ಬರಲಿದೆ ಎಂದು ಮಹರ್ಷಿಗಳು ಹೇಳುವುದು : ಪ.ಪೂ. ಡಾಕ್ಟರರು ಸನಾತನ ಧರ್ಮರಾಜ್ಯದ ಸ್ಥಾಪನೆಯ ಕಾರ್ಯವನ್ನು ಕೈಗೊಂಡಂತೆ, ಮಹರ್ಷಿಗಳು ನಮಗೆ ವಿವಿಧೆಡೆಗೆ ಹೋಗಿ ದೇವರ ದರ್ಶನವನ್ನು ಪಡೆಯಲು ಹೇಳುತ್ತಾರೆ ಹಾಗೂ ಸನಾತನದ ಮೇಲೆ ಬರುವ ಸಂಕಟಗಳಿಗೆ ಆಗಾಗ ಪರಿಹಾರಗಳನ್ನೂ ಸೂಚಿಸುತ್ತಾರೆ. ಮಹರ್ಷಿಗಳು ಹೇಳುತ್ತಾರೆ, ಹೀಗೆ ಪರಿಹಾರಗಳನ್ನು ಮಾಡುತ್ತಾ ಹಾಗೂ ಪ್ರಯಾಣದಲ್ಲಿ ದೇವತೆಗಳ ದರ್ಶನ ಪಡೆಯುತ್ತಾ ಧರ್ಮಕಲ್ಯಾಣಕ್ಕಾಗಿ ಅವಶ್ಯಕವಾಗಿರುವ ಪುಣ್ಯಸಂಚಯವಾಗುವುದರಿಂದ ಇಡೀ ಪೃಥ್ವಿಯ ಶುದ್ಧಿಯಾಗಿ ಸನಾತನ ಧರ್ಮರಾಜ್ಯವು ಬರಲಿದೆ.
೨ ಇ. ಪ.ಪೂ. ಡಾಕ್ಟರರ ಸಂಪೂರ್ಣ ಜೀವನಕಾರ್ಯ ಅಂದರೆ, ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಸ್ಥಾಪನೆಯ ಸಂದರ್ಭದಲ್ಲಿ ಇಡೀ ಪೃಥ್ವಿಯ ಮೇಲೆ ಘಟಿಸುವ ದೈವಿ ಹಾಗೂ ಐತಿಹಾಸಿಕ ಆಗುಹೋಗು ಗಳ ಸಂಪೂರ್ಣ ಸರಪಳಿಯೇ ಆಗಿರುವುದು : ಮಹರ್ಷಿಗಳು ಆಗಾಗ ಮಾಡುತ್ತಿರುವ ನಾಡಿವಾಚನದಿಂದ ಗಮನಕ್ಕೆ ಬರುವ ಸಂಗತಿಯೇನೆಂದರೆ, ಪ.ಪೂ. ಡಾಕ್ಟರರ ಸಂಪೂರ್ಣ ಜೀವನಕಾರ್ಯವೇ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಸ್ಥಾಪನೆಯ ಸಂದರ್ಭದಲ್ಲಿ ಇಡೀ ಪೃಥ್ವಿಯ ಮೇಲೆ ನಡೆಯುವ ದೈವಿ ಹಾಗೂ ಐತಿಹಾಸಿಕ ಆಗುಹೋಗುಗಳ ಸಂಪೂರ್ಣ ಸರಪಳಿಯೇ ಆಗಿದೆ. ಪ.ಪೂ. ಡಾಕ್ಟರರ ಜೀವನಕಾಲ ಹಾಗೂ ಹಿಂದೂ ರಾಷ್ಟ್ರ ಸ್ಥಾಪನೆಯ ಕಾಲವು ಬೇರೆಯಾಗಿಲ್ಲ, ಅವು ಒಂದೇ ಆಗಿವೆ.
೨ ಈ. ಪ.ಪೂ. ಡಾಕ್ಟರರ ದೇಹವಿದ್ದರೆ ಮಾತ್ರ ಹಿಂದೂ ರಾಷ್ಟ್ರವು ಬರಲು ಸಾಧ್ಯ. ಅವರ ದೇಹ ಮತ್ತು ಹಿಂದೂ ರಾಷ್ಟ್ರ ಬೇರೆಬೇರೆಯಾಗಿಲ್ಲ, ಎಂದೂ ಪೂ. ಡಾ. ಓಂ ಉಲಗನಾಥನ್ ಇವರು ಹೇಳಿದರು. (ಪ.ಪೂ. ನಾನಾ ಕಾಳೆ, ಯೋಗತಜ್ಞರಾದ ದಾದಾಜಿ ವೈಶಂಪಾಯನರು, ಪ. ಪೂ. ರಾಮಭಾವುಸ್ವಾಮಿ ಇವರಂತಹ ಹಲವಾರು ಸಂತರೂ ಹೀಗೆಯೇ ಹೇಳಿದ್ದಾರೆ. - (ಸದ್ಗುರು) ಸೌ. ಅಂಜಲಿ ಗಾಡಗೀಳ)
೨ ಉ. ಆದ್ದರಿಂದಲೇ ಹೀಗೆ ಹೇಳಬೇಕೆನಿಸುತ್ತದೆ, ಸಂಪೂರ್ಣ ನಾಡಿಶಾಸ್ತ್ರವೆಂದರೆ ಪ.ಪೂ. ಡಾಕ್ಟರರು ಕೈಗೊಂಡಿರುವ ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ) ಸ್ಥಾಪನೆಯ ಕಾರ್ಯಕಾಲದ ಪುರಾಣವೇ ಆಗಿದೆ.
ಪ್ರಾರ್ಥನೆ !
ಹಿಂದೂ ರಾಷ್ಟ್ರ ಸ್ಥಾಪನೆಯ ಈ ಪುರಾಣವನ್ನು ಆಲಿಸುವ ಹಾಗೂ ಅದನ್ನು ಅನುಭವಿಸುವ ಮಹದ್ಭಾಗ್ಯವು ಸಾಧಕರಾದ ನಮಗೆ ಒದಗಿಸಿ ಕೊಟ್ಟದ್ದಕ್ಕಾಗಿ ಪ.ಪೂ. ಡಾಕ್ಟರ್ ಹಾಗೂ ಮಹರ್ಷಿಗಳ ಚರಣಗಳಲ್ಲಿ ಕೋಟಿ ಕೋಟಿ ನಮಸ್ಕಾರಗಳು !
-(ಸದ್ಗುರು) ಸೌ. ಅಂಜಲಿ ಗಾಡಗೀಳ, ನಂದ್ಯಾಲ, ಆಂಧ್ರಪ್ರದೇಶ

No comments:

Post a Comment

ಈ ಮಾಹಿತಿಯನ್ನು ಇತರರೊಂದಿಗೆ ಹಂಚಿ !
ಇಬ್ಬರು ಭವಿಷ್ಯಕಾರರು ಹಿಂದೂ ರಾಷ್ಟ್ರ (ಸನಾತನ ಧರ್ಮರಾಜ್ಯ)ದ ಸ್ಥಾಪನೆಗೆ ಸಂಬಂಧಪಟ್ಟಂತೆ ಹೇಳಿರುವ ಮಾಹಿತಿ